ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಆಮದು ರದ್ದುಪಡಿಸಿದ ಬ್ರೆಜಿಲ್

|
Google Oneindia Kannada News

ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ಆಮದನ್ನು ಬ್ರೆಜಿಲ್ ರದ್ದುಪಡಿಸಿದೆ. ಭಾರತ್‌ ಬಯೊಟೆಕ್‌ನ ಕೋವಿಡ್-19 ಲಸಿಕೆ 'ಕೋವ್ಯಾಕ್ಸಿನ್‌'ಗೆ ತುರ್ತು ಬಳಕೆ ಅನುಮೋದನೆ ತಿರಸ್ಕರಿಸಿದ ಬೆನ್ನಲ್ಲೇ ಬ್ರೆಜಿಲ್ ಸರ್ಕಾರ ಲಸಿಕೆ ಆಮದನ್ನು ಕೂಡ ರದ್ದುಗೊಳಿಸಿದೆ.

ಬ್ರೆಜಿಲ್‌ನ ಪ್ರೆಸಿಸಾ ಮೆಡಿಸಿಮೆಂಟೋಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ ಎಲ್ಎಲ್‌ಸಿ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಜುಲೈ 23ರಂದು ಬ್ರೆಜಿಲ್‌ ಸರ್ಕಾರಕ್ಕೆ ತಿಳಿಸಿತ್ತು.

ಭಾರತದ ಕೋವ್ಯಾಕ್ಸಿನ್‌ ಉತ್ತಮ ಲಸಿಕೆ; ಶೀಘ್ರ WHO ಅನುಮೋದನೆಭಾರತದ ಕೋವ್ಯಾಕ್ಸಿನ್‌ ಉತ್ತಮ ಲಸಿಕೆ; ಶೀಘ್ರ WHO ಅನುಮೋದನೆ

ಬ್ರೆಜಿಲ್‌ನಲ್ಲಿ ಕೋವ್ಯಾಕ್ಸಿನ್‌ ಪರಿಚಯಿಸುವ ಉದ್ದೇಶದಿಂದ ಭಾರತ್‌ ಬಯೋಟೆಕ್‌ ಈ ಎರಡೂ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಭಾರತ್ ಬಯೋಟೆಕ್ ತನ್ನ ನಿರ್ಧಾರ ಪ್ರಕಟಿಸಿದ ಬಳಿಕ ಬ್ರೆಜಿಲ್‌ನ ರಾಷ್ಟ್ರೀಯ ಆರೋಗ್ಯ ನಿಗಾ ಸಂಸ್ಥೆಯು 'ಕೋವ್ಯಾಕ್ಸಿನ್‌' ಆಮದು ಮಾಡಿಕೊಳ್ಳುವುದನ್ನು ರದ್ದುಪಡಿಸುವುದಾಗಿ ತಿಳಿಸಿದೆ.

After Suspending EUA Request Brazil Now Shelves Import Authorisation Of Covaxin

ಈ ಬೆಳವಣಿಗೆ ಭಾರತ್ ಬಯೋಟೆಕೆ ಸಂಸ್ಥೆಗೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ ಎಂದು ಹೇಳಲಾಗುತ್ತಿದೆ. ಎರಡು ಕೋಟಿ ಡೋಸ್‌ 'ಕೋವ್ಯಾಕ್ಸಿನ್‌' ಪೂರೈಕೆಗೆ ಸಂಬಂಧಿಸಿದಂತೆ ಬ್ರೆಜಿಲ್‌ ಸರ್ಕಾರದ ಜತೆ ಮಾಡಿಕೊಳ್ಳಲಾದ ಒಪ್ಪಂದವು ವಿವಾದಕ್ಕೀಡಾಗಿತ್ತು. ಈ ಬಗ್ಗೆ ಬ್ರೆಜಿಲ್‌ನಲ್ಲಿ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ.

ಮೂಲಗಳ ಪ್ರಕಾರ ಸುಮಾರು 40 ಲಕ್ಷ ಡೋಸ್‌ ಕೋವ್ಯಾಕ್ಸಿನ್ ಲಸಿಕೆಗಳನ್ನು ಆಮದು ಮಾಡಿಕೊಳ್ಳುವ ನಿರ್ಧಾರವನ್ನು ಬ್ರೆಜಿಲ್‌ ರದ್ದುಗೊಳಿಸಿದ್ದು, ಕೋವ್ಯಾಕ್ಸಿನ್‌ ನ ಕ್ಲಿನಿಕಲ್ ಅಧ್ಯಯನವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಬ್ರೆಜಿಲ್‌ ಈ ಕ್ರಮಕೈಗೊಂಡಿದೆ.

English summary
After suspending the proposed clinical trials of Bharat Bioetch's COVID-19 vaccine Covaxin and a request for Emergency Use Authorisation, Brazil now has suspended its decision to import four million doses of the jab into that country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X