ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪುಟ್ನಿಕ್ V ಕೊರೊನಾ ಲಸಿಕೆ ಪಡೆದು 2 ತಿಂಗಳುಗಳ ಕಾಲ ಮದ್ಯಪಾನ ಮಾಡದಂತೆ ಎಚ್ಚರಿಕೆ

|
Google Oneindia Kannada News

ಮಾಸ್ಕೋ, ಡಿಸೆಂಬರ್ 10: ರಷ್ಯಾದ ಸ್ಪುಟ್ನಿಕ್ V ಕೊರೊನಾ ಲಸಿಕೆ ಪಡೆದ ಬಳಿಕ ಎರಡು ತಿಂಗಳುಗಳ ಕಾಲ ಮದ್ಯಪಾನ ಮಾಡುವಂತಿಲ್ಲ ಎಂದು ರಷ್ಯಾದ ತಜ್ಞರು ತಿಳಿಸಿದ್ದಾರೆ.

ರಷ್ಯಾದ ಉಪ ಪ್ರಧಾನಿ ಟಟಿಯಾನಾ ಗೋಲಿಕೋವಾ ಮಾತನಾಡಿ, ಸ್ಪುಟ್ನಿಕ್ V ಕೊರೊನಾ ಲಸಿಕೆ ಡೋಸ್ ಪಡೆದ ಬಳಿಕ 42 ದಿನಗಳ ಕಾಲ ತುಂಬಾ ಎಚ್ಚರಿಕೆಯಿಂದರಬೇಕು ಎಂದು ಹೇಳಿದ್ದಾರೆ.

ಜೆನ್ನೋವಾ ಕೊರೊನಾ ಲಸಿಕೆ ಮಾನವನ ಮೇಲೆ ಪ್ರಯೋಗಕ್ಕೆ ಷರತ್ತುಬದ್ಧ ಅನುಮತಿಜೆನ್ನೋವಾ ಕೊರೊನಾ ಲಸಿಕೆ ಮಾನವನ ಮೇಲೆ ಪ್ರಯೋಗಕ್ಕೆ ಷರತ್ತುಬದ್ಧ ಅನುಮತಿ

ಹಾಗೆಯೇ ಜನಸಂದಣಿ ಇರುವ ಪ್ರದೇಶಗಳಿಗೆ ಹೋಗುವುದು ಕಡಿಮೆ ಮಾಡುವಂತೆ ಸೂಚಿಸಲಾಗಿದೆ, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಸ್ಯಾನಿಟೈಸರ್ ಬಳಕೆ, ಹಾಗೆಯೇ ಮದ್ಯಪಾನ ಮಾಡಬೇಡಿ ಎಂದು ತಿಳಿಸಿದೆ.

After Sputnik V Covid Vaccine Shot No Drink Alcohol For 2 Months

ಮೊದಲ ಲಸಿಕೆ ಪಡೆದ ಬಳಿಕ 42 ದಿನಗಳ ಕಾಲ ಕಡ್ಡಾಯವಾಗಿ ಮದ್ಯಪಾನವನ್ನು ಬಿಡಬೇಕು. ಹಾಗೆಯೇ ಲಸಿಕೆ ಪಡೆಯುವ 2 ವಾರಗಳ ಮೊದಲೇ ಮದ್ಯಪಾನ ಬಿಟ್ಟಿರಬೇಕು ಎಂದು ಸೂಚಿಸಿದ್ದಾರೆ.

ಒಂದೊಮ್ಮೆ ಮದ್ಯಪಾನ ಮಾಡಿದರೆ ದೇಹದಲ್ಲಿ ಆಯಾಸವಿರುತ್ತದೆ.ನೀವು ಆರೋಗ್ಯವಾಗಿರಬೇಕು ಎಂದರೆ ಮದ್ಯಪಾನ ಮಾಡಬಾರದು.ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ, ಇಡೀ ವಿಶ್ವದಲ್ಲೇ ಅತಿ ಹೆಚ್ಚು ಮದ್ಯಪಾನ ಮಾಡುವ ದೇಶಗಳ ಪೈಕಿ ರಷ್ಯಾ ನಾಲ್ಕನೇ ಸ್ಥಾನದಲ್ಲಿದೆ.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

ಹಾಗೆಯೇ ಕೊರೊನಾ ಲಸಿಕೆಯನ್ನು ನೋಂದಣಿ ಮಾಡಿಸಿದ ಮೊದಲ ದೇಶ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಆಗಸ್ಟ್ ನಲ್ಲಿಯೇ ಸ್ಪುಟ್ನಿಕ್ V ಲಸಿಕೆಯನ್ನು ರಷ್ಯಾ ನೋಂದಣಿ ಮಾಡಿತ್ತು.

ರಷ್ಯಾದಲ್ಲಿ 2.5 ಮಿಲಿಯನ್ ಮಂದಿಗೆ ಕೊರೊನಾ ಸೋಂಕು ತಗುಲಿದೆ. 44,220 ಮಂದಿ ಮೃತಪಟ್ಟಿದ್ದಾರೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

Recommended Video

ಕರ್ನಾಟಕ: ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಡಿ.31ಕ್ಕೆ ನಿವೃತ್ತಿ: ರವಿಕುಮಾರ್ ನೇಮಕ ಸಾಧ್ಯತೆ | Oneindia Kannada

English summary
Russian officials have advised citizens to avoid drinking alcohol for two months after getting the Sputnik V vaccine shot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X