ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆನ್ಮಾರ್ಕ್, ಇಟಲಿಯಲ್ಲಿ ಆಸ್ಟ್ರಾಜೆನಿಕಾ ಕೊರೊನಾ ಲಸಿಕೆ ವಿತರಣೆ ಸ್ಥಗಿತ!

|
Google Oneindia Kannada News

ನವದೆಹಲಿ, ಮಾರ್ಚ್.11: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗೆ ನೀಡಿದ ಆಸ್ಟ್ರಾಜೆನಿಕಾ ಲಸಿಕೆಯಿಂದ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಕೊವಿಡ್-19 ಲಸಿಕೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಡೆನ್ಮಾರ್ಕ್ ತಿಳಿಸಿದೆ.

ಕೊರೊನಾವೈರಸ್ ಸೋಂಕಿತರಲ್ಲಿ ಲಸಿಕೆ ನೀಡಿದ ನಂತರದಲ್ಲಿ ರಕ್ತ ಹೆಪ್ಪುಗಟ್ಟುವುದು ಸೇರಿದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಡೆನ್ಮಾರ್ಕ್ ಆರೋಗ್ಯ ಪ್ರಾಧಿಕಾರವು ಸ್ಪಷ್ಟಪಡಿಸಿದೆ.

ಕೊರೊನಾ ಅಂಟೀತು ಎಚ್ಚರ: ಮಹಾರಾಷ್ಟ್ರದಿಂದ ಎದುರಾಗುತ್ತಾ ಗಂಡಾಂತರ!? ಕೊರೊನಾ ಅಂಟೀತು ಎಚ್ಚರ: ಮಹಾರಾಷ್ಟ್ರದಿಂದ ಎದುರಾಗುತ್ತಾ ಗಂಡಾಂತರ!?

ಆಸ್ಟ್ರಾಜೆನಿಕಾ ಲಸಿಕೆಗೂ ಮತ್ತು ರಕ್ತ ಕಣಗಳ ಹೆಪ್ಪುಗಟ್ಟುವಿಕೆಯ ಸಮಸ್ಯೆಗೂ ಒಂದಕ್ಕೊಂದು ಸಂಬಂಧವಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಹಿಂದೆ ಕೊವಿಡ್ ಲಸಿಕೆ ಸ್ವೀಕರಿಸಿದ 49 ವರ್ಷದ ವೈದ್ಯಕೀಯ ಸಿಬ್ಬಂದಿಯೊಬ್ಬರು "ತೀವ್ರ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಗಳಿಂದ" ಸಾವನ್ನಪ್ಪಿದ್ದರು. ತದನಂತರ ಆಸ್ಟ್ರಾಜೆನೆಕಾ ಲಸಿಕೆ ಬಳಕೆಯನ್ನು ಸ್ಥಗಿತಗೊಳಿಸಿದ್ದಾಗಿ ಆಸ್ಟ್ರಿಯಾ ಸೋಮವಾರ ಪ್ರಕಟಿಸಿತ್ತು.

After Some Patients Found Blood Clots, Denmark Suspend The Use Of AstraZenecas

ನಾಲ್ಕು ರಾಷ್ಟ್ರಗಳಲ್ಲಿ ಲಸಿಕೆ ವಿತರಣೆ ಸ್ಥಗಿತ:

ಆಸ್ಟ್ರಾಜೆನಿಕಾ ಲಸಿಕೆಯನ್ನು ಯುರೋಪಿಯನ್ ಖಂಡದ 17 ರಾಷ್ಟ್ರಗಳಿಗೆ ಕಳುಹಿಸಲಾಗಿತ್ತು. ಈ ಪೈಕಿ ನಾಲ್ಕು ಯುರೋಪಿಯನ್ ರಾಷ್ಟ್ರಗಳಾದ ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ ಮತ್ತು ಲಕ್ಸೆಂಬರ್ಗ್ ನಲ್ಲಿ ಕೊರೊನಾವೈರಸ್ ಲಸಿಕೆಗಳ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಮಾರ್ಚ್ 9 ರ ಹೊತ್ತಿಗೆ, ಯುರೋಪಿಯನ್ ಆರ್ಥಿಕ ಪ್ರದೇಶದಲ್ಲಿ ಮೂರು ದಶಲಕ್ಷಕ್ಕೂ ಹೆಚ್ಚು ಜನರಲ್ಲಿ ಲಸಿಕೆ ಹಾಕಿದವರಲ್ಲಿ 22 ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳು ವರದಿಯಾಗಿವೆ ಎಂದು ಇಎಂಎ ತಿಳಿಸಿದೆ. ಈ ಹಿನ್ನೆಲೆ ಡೆನ್ಮಾರ್ಕ್ ಕೂಡಾ ಆಸ್ತ್ರಾಜೆನಿಕಾ ಲಸಿಕೆಯ ಪೂರೈಕೆಯನ್ನು ಸ್ಥಗಿತಗೊಳಿಸಿದೆ. "ನಾವು ಅಸ್ಟ್ರಾಜೆನಿಕಾ ಲಸಿಕೆಯ ಬಳಕೆಯನ್ನು ಕೊನೆಗೊಳಿಸಿಲ್ಲ, ಅದರ ಬಳಕೆಗೆ ಕೊಂಚ ವಿರಾಮ ಕೊಟ್ಟಿದ್ದೇವೆ" ಎಂದು ಡ್ಯಾನಿಶ್ ಆರೋಗ್ಯ ಪ್ರಾಧಿಕಾರದ ನಿರ್ದೇಶಕ ಸೊರೆನ್ ಬ್ರೋಸ್ಟ್ರಾಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಟಲಿಯಲ್ಲೂ ಆಸ್ಟ್ರಾಜೆನಿಕಾ ಲಸಿಕೆ ವಿತರಣೆ ಸ್ಥಗಿತ:

ಯುರೋಪಿನ ಬೇರೆ ರಾಷ್ಟ್ರಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳಿಂದ ಸುದ್ದಿಯಾಗಿರುವ ಅಸ್ಟ್ರಾಜೆನೆಕಾ / ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೊರೊನಾವೈರಸ್ ಲಸಿಕೆಯನ್ನು ನಿಷೇಧಿಸುವುದಾಗಿ ತಿಳಿದು ಬಂದಿದೆ. ಇದರ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಇಟಲಿಯಲ್ಲೂ ಈ ಕೊರೊನಾವೈರಸ್ ಲಸಿಕೆಯ ವಿತರಣೆಗೆ ನಿರ್ಬಂಧ ವಿಧಿಸಲಾಗಿದೆ.

English summary
After Some Patients Found Blood Clots, Denmark Suspend The Use Of AstraZeneca's Covid-19 Vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X