ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರ್ವ ಲಡಾಖ್ ಗಡಿಯಿಂದ ಚೀನಾ ಟ್ಯಾಂಕ್ ವಾಪಸ್!

|
Google Oneindia Kannada News

ನವದೆಹಲಿ, ನವೆಂಬರ್.12: ಭಾರತ-ಚೀನಾ ಗಡಿ ಪ್ರದೇಶದ ಪೂರ್ವ ಲಡಾಖ್ ಭಾಗದಿಂದ ಆರು ತಿಂಗಳ ಬಳಿಕ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಬಗ್ಗೆ ಸುಳಿವು ನೀಡಿದೆ. ಮೂರು ಹಂತಗಳಲ್ಲಿ ಸೇನೆ ವಾಪಸ್ ಕರೆಸಿಕೊಳ್ಳುವುದಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಭಾರತ ಮತ್ತು ಚೀನಾ ಕಮಾಂಡರ್ ಹಂತದಲ್ಲಿ ನಡೆದ 8 ಸುತ್ತಿನ ಮಾತುಕತೆಯಲ್ಲಿ ಸೇನೆ ವಾಪಸ್ ಕರೆಸಿಕೊಳ್ಳುವ ಬಗ್ಗೆ ಹಾಗೂ ಗಡಿಯಲ್ಲಿ ಸೇನಾ ಚಟುವಟಿಕೆ ನಿಷ್ಕ್ರಿಯಗೊಳಿಸುವ ಕುರಿತು ಪ್ರಸ್ತಾಪಿಸಲಾಗಿತ್ತು. ಇತ್ತೀಚಿಗೆ ನಡೆದ 8ನೇ ಸುತ್ತಿನ ಕಮಾಂಡರ್ ಹಂತದ ಚರ್ಚೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ ಎದುರಾಳಿ ಪ್ರದೇಶದಲ್ಲಿರುವ ಯುದ್ಧದ ಟ್ಯಾಂಕ್ ಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಪ್ರಸ್ತಾಪಿಸಲಾಗಿದೆ.

ಭಾರತ-ಚೀನಾ ಗಡಿ ಸಂಘರ್ಷಕ್ಕೆ ಅಂತ್ಯ ಹಾಡಲು ಹೊಸ ಪ್ರಸ್ತಾಪಭಾರತ-ಚೀನಾ ಗಡಿ ಸಂಘರ್ಷಕ್ಕೆ ಅಂತ್ಯ ಹಾಡಲು ಹೊಸ ಪ್ರಸ್ತಾಪ

ಈ ಪ್ರಸ್ತಾಪಕ್ಕೆ ಅಂತಿಮ ಅನುಮೋದನೆ ಬೀಜಿಂಗ್ ಮತ್ತು ದೆಹಲಿಯಿಂದ ಎದುರು ನೋಡುತ್ತಿವೆ. ಇದರ ಮಧ್ಯೆ ಚೀನಾದ ಅಧಿಕಾರಿಗಳು ತಮ್ಮ ಟ್ಯಾಂಕ್ ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಉತ್ತಮ ಮಾರ್ಗಕ್ಕಾಗಿ ಹುಡುಕಾಟ ನಡೆಸಿವೆ. ಭಾರತವು ಈಗಾಗಲೇ ಪರ್ವತ ಶ್ರೇಣಿಗಳ ಮಾರ್ಗದಲ್ಲಿ ಟ್ಯಾಂಕ್ ಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಮೂಲಕ ಚೀನಾವನ್ನು ಅಚ್ಚರಿಗೊಳ್ಳುವಂತೆ ಮಾಡಿದೆ. ಆದರೆ ಒಮ್ಮೆ ಈ ಸ್ಥಾನದಿಂದ ಟ್ಯಾಂಕ್ ಗಳನ್ನು ಹಿಂದಕ್ಕೆ ತೆಗೆದುಕೊಂಡರೆ ಮತ್ತೆ ಅಲ್ಲಿ ಅವುಗಳನ್ನು ಪುನಃ ತೆಗೆದುಕೊಂಡು ಹೋಗುವುದು ಕಷ್ಟಸಾಧ್ಯವಾಗುತ್ತದೆ ಎಂದು ಭಾರತೀಯ ಸೇನಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

After PLAs Will To Pull Back, India-China Turn Tank Guns Away In Eastern Ladakh

ಉಭಯ ರಾಷ್ಟ್ರಗಳ ನಡುವಿನ ಎರಡನೇ ಪ್ರಸ್ತಾಪವೇನು?

ಭಾರತೀಯ ಸೇನೆಯು ಫಿಂಗರ್ 8ರವರೆಗೂ ಗಸ್ತು ತಿರುಗುವುದಕ್ಕೆ ಅನುಮತಿ ನೀಡುವ ಬಗ್ಗೆ ಎರಡನೇ ಪ್ರಸ್ತಾಪವನ್ನು ಇಡಲಾಗಿದೆ. ಮೊದಲ ಬಾರಿಗೆ ಪ್ಯಾಂಗಾಂಗ್ ತ್ಸೋ ಉತ್ತರ ಮತ್ತು ದಕ್ಷಿಣ ಪ್ರದೇಶದಲ್ಲಿ ಏಕಕಾಲಕ್ಕೆ ಸೇನಾ ಚಟುವಟಿಕೆ ನಿಷ್ಕ್ರಿಯಗೊಳಿಸುವುದಕ್ಕೆ ಚೀನಾ ಒಪ್ಪಿಗೆ ಸೂಚಿಸಿದೆ. ಈ ಮೊದಲು ಪ್ಯಾಂಗಾಂಗ್ ತ್ಸೋ ಗಡಿಯುದ್ದಕ್ಕೂ ನಿಯೋಜಿಸಿರುವ ಭಾರತೀಯ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಮೊದಲು ಚೀನಾ ಒತ್ತಾಯಿಸುತ್ತಿತ್ತು. ಆದರೆ ಏಕಕಾಲದಲ್ಲೇ ಉಭಯ ಸೇನೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಭಾರತವು ಹೇಳಿತ್ತು. ಫಿಂಗರ್ 4 ಮೇಲೆ ಉಭಯ ರಾಷ್ಟ್ರಗಳು ದೃಷ್ಟಿ ನೆಟ್ಟಿದ್ದು, ಗಾಲ್ವಾನ್ ಘರ್ಷಣೆ ಬಳಿಕ ಫಿಂಗರ್ 8ರವರೆಗೂ ಗಸ್ತು ತಿರುಗುವುದಕ್ಕೆ ಅನುಮತಿ ನಿರಾಕರಿಸಲಾಗಿತ್ತು.

ಭಾರತ ಮತ್ತು ಚೀನಾ ಗಡಿ ಉದ್ವಿಗ್ನತೆ ಕಾರಣವೇನು?

ಫಿಂಗರ್ 8 ರಿಂದ 4ರ ನಡುವಿನ ಸುಮಾರು ಎಂಟು ಕಿಮೀ ಪ್ರದೇಶವನ್ನು ಚೀನಾ ಪ್ರವೇಶಿಸಿದ್ದು, ತನ್ನ ಟ್ಯಾಂಕ್ ‌ಗಳನ್ನು ಮತ್ತು ಬಂಕರ್ ಗಳನ್ನು ನಿರ್ಮಿಸಿತ್ತು. ಭಾರತ ಯಥಾಸ್ಥಿತಿ ಕಾಯ್ದುಕೊಂಡಿರುವ ಕ್ರಮಕ್ಕೆ ತದ್ವಿರುದ್ಧವಾಗ ಕ್ರಮವಾಗಿದ್ದು, ಯಥಾಸ್ಥಿತಿಯ ಸ್ಪಷ್ಟ ಉಲ್ಲಂಘನೆಯಾಗಿತ್ತು. ಉಭಯ ರಾಷ್ಟ್ರಗಳ ಪಡೆಗಳು ಫಿಂಗರ್ 4 ಮತ್ತು ಫಿಂಗರ್ 8ರ ನಡುವೆ ಗಸ್ತು ತಿರುಗುತ್ತಿದ್ದು, ಮುಖಾಮುಖಿಯಾದ ಸಂದರ್ಭದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗುತ್ತಿತ್ತು.

English summary
After PLA's 'Will To Pull Back', India-China Turn Tank Guns Away In Eastern Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X