ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ಬೆಲೆ ಇಳಿಕೆ; ಭಾರತ ಹೊಗಳಿದ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಮೇ 22: ಭಾರತ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿದ ತಕ್ಷಣ ಪಾಕಿಸ್ತಾನದಲ್ಲಿ ರಾಜಕೀಯ ಪಕ್ಷಗಳಲ್ಲಿಆರೋಪ ಪ್ರತ್ಯಾರೋಪಗಳು ಆರಂಭವಾಗಿವೆ. ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾರತವನ್ನು ಹೊಗಳಿದ್ದಾರೆ.

ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಶನಿವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 9.5 ರೂ. ಮತ್ತು ಡೀಸೆಲ್ ಲೀಟರ್‌ಗೆ 7 ರೂ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಮೋದಿ ಸರ್ಕಾರದ ಕುರಿತು ಇಮ್ರಾನ್ ಖಾನ್ ಹೊಗಳಿದರು.

ಅಮೆರಿಕದ ಒತ್ತಡದ ನಡುವೆಯೂ ರಷ್ಯಾದಿಂದ ಸಬ್ಸಿಡಿ ತೈಲ ಖರೀದಿಸುತ್ತಿರುವ ಭಾರತವನ್ನು ಇಮ್ರಾನ್ ಖಾನ್ ಮತ್ತೊಮ್ಮೆ ಹೊಗಳಿದ್ದಾರೆ. "ಸ್ವತಂತ್ರ ವಿದೇಶಾಂಗ ನೀತಿಯ ಸಹಾಯದಿಂದ ಇದನ್ನು ಸಾಧಿಸಲು ತಮ್ಮ ಸರ್ಕಾರವು ಕೆಲಸ ಮಾಡುತ್ತಿದೆ" ಎಂದು ಹೇಳಿದರು.

After Modi Govt Slashes Fuel Rates Imran Khan Praises India For Not Giving In To US Pressure

ಪಾಕಿಸ್ತಾನ ಮುಸ್ಲಿಂ ಲೀಗ್ (ಎನ್) ನೇತೃತ್ವದ ಸರ್ಕಾರವನ್ನು ಟೀಕಿಸಿದ ಇಮ್ರಾನ್ ಖಾನ್, "ತಲೆಯಿಲ್ಲದ ಕೋಳಿಯಂತಹ ಆರ್ಥಿಕತೆ" ಎಂದು ವಾಗ್ದಾಳಿ ನಡೆಸಿದರು. "ದೇಶದ ಆಡಳಿತ ಬದಲಾವಣೆ ಬಯಸಿದವರು ಈಗ ದೇಶದ ಆರ್ಥಿಕತೆಯು ತಲೆಬುರುಡೆಯಿಲ್ಲದ ಕೋಳಿಯಂತೆ ಓಡುತ್ತಿರುವಾಗ ಏನು ಹೇಳುತ್ತಾರೆ?" ಎಂದು ಪ್ರಶ್ನಿಸಿದರು.

"ನಮ್ಮ ಸರ್ಕಾರ ಪಾಕಿಸ್ತಾನದ ಹಿತಾಸಕ್ತಿಗೆ ಆದ್ಯತೆ ನೀಡಿತ್ತು. ಆದರೆ ದುರದೃಷ್ಟವಶಾತ್ ಸ್ಥಳೀಯ ಮೀರ್ ಜಾಫರ್‌ಗಳು ಮತ್ತು ಮೀರ್ ಸಾದಿಕ್‌ಗಳು ಆಡಳಿತ ಬದಲಾವಣೆಗೆ ಒತ್ತಾಯಿಸುವ ಬಾಹ್ಯ ಒತ್ತಡಕ್ಕೆ ಮಣಿದಿದ್ದಾರೆ" ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

"ಕ್ವಾಡ್‌ನ ಭಾಗವಾಗಿದ್ದರೂ ಭಾರತವು ಅಮೆರಿಕ ಒತ್ತಡದಿಂದ ದೂರವಿತ್ತು. ರಷ್ಯಾದ ತೈಲವನ್ನು ರಿಯಾಯಿತಿಯಲ್ಲಿ ಖರೀದಿಸಿತು. ಸ್ವತಂತ್ರ ವಿದೇಶಾಂಗ ನೀತಿಯ ಸಹಾಯದಿಂದ ನಮ್ಮ ಸರ್ಕಾರವು ಸಾಧಿಸಲು ಆಗದ ಕೆಲವನ್ನು ಭಾರತ ಮಾಡಿದೆ" ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದರು.

After Modi Govt Slashes Fuel Rates Imran Khan Praises India For Not Giving In To US Pressure

ರಷ್ಯಾ ಉಕ್ರೇನ್ ಮೇಲಿನ ಆಕ್ರಮಣದ ನಂತರ ಪಾಶ್ಚಿಮಾತ್ಯ ದೇಶಗಳು ಮಾಸ್ಕೋದ ಮೇಲೆ ತೀವ್ರ ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ರಾಯಿಟರ್ಸ್ ವರದಿಯ ಪ್ರಕಾರ ಹಣದುಬ್ಬರದ ವಿರುದ್ಧ ಹೋರಾಡಲು ಭಾರತವು ರಷ್ಯಾದಿಂದ ಸಬ್ಸಿಡಿ ತೈಲ ಖರೀದಿಯನ್ನು ಹೆಚ್ಚಿಸಿತು, ಏಪ್ರಿಲ್‌ನಲ್ಲಿ ದೇಶದ ಕಚ್ಚಾ ತೈಲ ಆಮದುಗಳನ್ನು ಮೂರೂವರೆ ವರ್ಷಗಳ ಗರಿಷ್ಠ ಮಟ್ಟಕ್ಕೆ ತಳ್ಳಿತು ಎಂದಿದೆ.

English summary
Pakistan former prime minister Imran Khan praised India and slammed the Pakistan government for running around like a headless chicken with the economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X