ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ತೆರವಿನ ಬಳಿಕ ಚೀನಾದಲ್ಲಿ ಎರಡನೇ ಹಂತದ ಕೊರೊನಾ!

|
Google Oneindia Kannada News

ವುಹಾನ್, ಏಪ್ರಿಲ್ 10: 76 ದಿನಗಳ ಬಳಿಕ ಚೀನಾ ವುಹಾನ್‌ನಲ್ಲಿ ಲಾಕ್‌ ಡೌನ್‌ ತೆರವು ಮಾಡಲಾಗಿತ್ತು. ಕೊರೊನಾ ಹುಟ್ಟೂರು ಕೊರೊನಾ ಮುಕ್ತ ಆಯಿತೆಂದು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ, ಕೊರೊನಾ ಚೀನಾವನ್ನು ಬಿಟ್ಟು ಹೋಗುವ ಹಾಗೆ ಕಾಣುತ್ತಿಲ್ಲ.

Recommended Video

ದಾವಣಗೆರೆಯಲ್ಲಿ ಬೀದಿಗಿಳಿದು ಅಂಗಡಿ ಬಂದ್ ಮಾಡಿಸಿದ ಜಿಲ್ಲಾಧಿಕಾರಿಗಳು | Quarantine | Davanagere | Police

ವುಹಾನ್‌ನಲ್ಲಿ ಮೊದಲ ಬಾರಿಗೆ ಕಂಡು ಬಂದ ಕೊರೊನಾ ವೈರಸ್‌ ನಂತರ ಇಡೀ ವಿಶ್ವಕ್ಕೆ ಹಬ್ಬಿದೆ. ಪ್ರಪಂಚದ ಹಲವು ರಾಷ್ಟ್ರಗಳು ಕೊರೊನಾ ವಿರುದ್ಧ ಹೋರಾಟ ಮಾಡಿವೆ. ಸತತ ಎರಡುವರೆ ತಿಂಗಳ ಲಾಕ್‌ಡೌನ್ ನಂತರ ಕೊರೊನಾ ಯುದ್ಧದಲ್ಲಿ ಗೆದ್ದೆ ಎಂದುಕೊಂಡ ವುಹಾನ್‌ ಲಾಕ್‌ಡೌನ್ ತೆರವು ಮಾಡಿತ್ತು. ಆದರೆ, ಇದೇ ಈಗ ಕಂಟಕವಾದಂತಿದೆ.

76 ದಿನಗಳ ಬಳಿಕ ಚೀನಾದ ವುಹಾನ್‌ನಲ್ಲಿ ಲಾಕ್‌ಡೌನ್‌ ತೆರವು76 ದಿನಗಳ ಬಳಿಕ ಚೀನಾದ ವುಹಾನ್‌ನಲ್ಲಿ ಲಾಕ್‌ಡೌನ್‌ ತೆರವು

ವುಹಾನ್‌ನಲ್ಲಿ ಕೊರೊನಾ ಪಾಸಿಟಿವ್ ಕೇಸ್‌ಗಳು ಸೊನ್ನೆಗೆ ಇಳಿಕೆ ಆಗಿದ್ದವು. ಹೀಗಾಗಿ, ಸಾರ್ವಜನಿಕ ಸಂಚಾರ, ಮೆಟ್ರೋ ಪ್ರಯಾಣ, ಮಾಲ್‌ಗಳು ಪುನರಾರಂಭ ಮಾಡಿ ಸಹಜ ಸ್ಥಿತಿಗೆ ವುಹಾನ್‌ ಮರಳಿತ್ತು. ಆದರೆ, ಲಾಕ್‌ಡೌನ್ ಓಪನ್ ಆದ ಕೆಲವೇ ದಿನಗಳಲ್ಲಿ ಹುಬೈನಲ್ಲಿ ಮತ್ತೆ ಪಾಸಿಟಿವ್ ಪ್ರಕರಣಗಳು ಶುರುವಾಗಿವೆ. ಚೀನಾದಲ್ಲಿ ಕೇಸ್‌ಗಳು ಹೆಚ್ಚಾಗುತ್ತಿದೆ. ಇದನ್ನು ಎರಡನೇ ಹಂತದ ಕೊರೊನಾ ಹರಡುವಿಕೆ ಎಂದೇ ಕರೆಯಲಾಗುತ್ತಿದೆ.

ಹುಬೈನಲ್ಲಿ ಕೊರೊನಾ

ಹುಬೈನಲ್ಲಿ ಕೊರೊನಾ

ಕೊರೊನಾ ವೈರಸ್‌ ಮೊದಲು ಹುಟ್ಟಿಕೊಂಡಿದ್ದು, ವುಹಾನ್‌ನಲ್ಲಿ. ವುಹಾನ್‌, ಹುಬೈನ ರಾಜಧಾನಿಯಾಗಿದೆ. ಹುಬೈ ಹಾಗೂ ವುಹಾನ್‌ನಲ್ಲಿ ಜನವರಿಯಿಂದ ಲಾಕ್‌ಡೌನ್ ಇತ್ತು. ಆದರೆ, ಕಳೆದ ಬುಧವಾರ ವುಹಾನ್‌ನಲ್ಲಿ ಕೊರೊನಾ ಪ್ರಕರಣಗಳು ಇಲ್ಲ ಎಂದು ಲಾಕ್‌ಡೌನ್ ತೆರವು ಗೊಳಿಸಲಾಗಿದೆ. ಆದರೆ, ಇದು ಹುಬೈ ಮೇಲೆ ಪರಿಣಾಮ ಬೀರಿದೆ. ಲಾಕ್‌ಡೌನ್ ತೆರವಿನ ಬಳಿಕ ಅಲ್ಲಿ ಮೊದಲ ಹೊಸ ಮೂರು ಕೇಸ್ 21 ದಿನಗಳಲ್ಲಿ ಹುಟ್ಟಿಕೊಂಡಿದೆ.

ಹುಬೈ ಹಾಟ್ ಸ್ಪಾಟ್

ಹುಬೈ ಹಾಟ್ ಸ್ಪಾಟ್

ಚೀನಾದಲ್ಲಿ ಹುಬೈ ಕೊರೊನಾ ವೈರಸ್‌ಗೆ ಹಾಟ್ ಸ್ಪಾಟ್ ಆಗಿದೆ ಎಂಬಂತೆ ಕಾಣುತ್ತಿದೆ. ಮೊದಲು ಮೂರು ಪಾಸಿಟಿವ್ ಕೇಸ್‌ಗಳು ಇಲ್ಲಿ ಕಂಡುಬಂದಿದ್ದವು. ಆದರೆ, ಆ ನಂತರ 62 ಕೇಸ್‌ಗಳು ಆದವು. ಆ ಬಳಿಕ ವೈರಸ್ ವೇಗವಾಗಿ ಹೆಚ್ಚಾಗಿದೆ. ಗುರುವಾರದ ವೇಳೆಗೆ ಹುಬೈನಲ್ಲಿ ಕೊರೊನಾ ವೈರಸ್‌ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಬರೋಬ್ಬರಿ 67803ಕ್ಕೆ ಏರಿಕೆ ಕಂಡಿದೆ. ವುಹಾನ್‌ನಲ್ಲಿ ಕಡಿಮೆ ಆಗಿದ್ದರೂ, ಹುಬೈನಲ್ಲಿ ಕೊರೊನಾ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ.

ಚೀನಾ ವಿಚಾರದಲ್ಲಿ WHO ವಿರುದ್ಧ ತಿರುಗಿಬಿದ್ದ ಡೊನಾಲ್ಡ್ ಟ್ರಂಪ್ಚೀನಾ ವಿಚಾರದಲ್ಲಿ WHO ವಿರುದ್ಧ ತಿರುಗಿಬಿದ್ದ ಡೊನಾಲ್ಡ್ ಟ್ರಂಪ್

ಚೀನಾದಲ್ಲಿ 81 ಸಾವಿರ ಜನರಿಗೆ ಕೊರೊನಾ

ಚೀನಾದಲ್ಲಿ 81 ಸಾವಿರ ಜನರಿಗೆ ಕೊರೊನಾ

ಚೀನಾದಲ್ಲಿ ಸದ್ಯ 81 ಸಾವಿರ ಜನರಿಗೆ ಕೊರೊನಾ ಪಾಸಿಟಿವ್ ಇದೆ ಎಂದು ರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದರಲ್ಲಿ ಬಹುಪಾಲು ಜನರು ಹುಬೈನವರಾಗಿದ್ದಾರೆ. ಹುಬೈನಲ್ಲಿ ವಾಸ ಮಾಡುವ 67803 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಕಂಡು ಬಂದಿದೆ. ಉಳಿದಂತೆ, ಹೆನಾನ್, ಗುವಾಂಗ್ ಡಾಂಗ್, ಜಿಜಿಯಾಂಗ್, ಹುನಾನ್ ನಗರಗಳಲ್ಲಿ ಪಾಸಿಟಿವ್ ಕೇಸ್‌ಗಳು ಸಾವಿರ ದಾಟಿದೆ.

ವುಹಾನ್ ಬಿಟ್ಟು ಹೋದ 10000 ಜನರು

ವುಹಾನ್ ಬಿಟ್ಟು ಹೋದ 10000 ಜನರು

ವುಹಾನ್‌ನಲ್ಲಿ 50 ಸಾವಿರ ಜನರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. 2500 ಜನರು ಮರಣ ಹೊಂದಿದ್ದರು. ಹೀಗಾಗಿ ವುಹಾನ್ ನಗರವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿತ್ತು. ಜನವರಿಯಿಂದ ಇದ್ದ ಲಾಕ್‌ಡೌನ್ ಏಪ್ರಿಲ್ 8ಕ್ಕೆ ಅಂತ್ಯವಾಗಿತ್ತು. ಲಾಕ್‌ಡೌನ್ ಓಪನ್ ಆದಾಗ ವುಹಾನ್‌ ನಗರ ಬಿಟ್ಟು 10000 ಜನರು ಬೇರೆ ಬೇರೆ ಕಡೆ ಹೋದರು. ಇದೇ ವೈರಸ್‌ ಹಬ್ಬಲು ಕಾರಣ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ.

English summary
Coronavirus In China: After lockdown ends in wuhan coronavirus cases rise in hubei. Now 67803 positive cases in Hubei.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X