ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ 'ಬುಬೊನಿಕ್ ಪ್ಲೇಗ್' ಮತ್ತೊಂದು ಮಾರಣಾಂತಿಕ ರೋಗ ಪತ್ತೆ

|
Google Oneindia Kannada News

ಬೀಜಿಂಗ್, ಜುಲೈ 6: ಕೊರೊನಾ ಉಗಮ ಸ್ಥಾನವಾದ ಚೀನಾದಲ್ಲಿ ಕೊರೊನಾ,ಹ್ಯಾಂಟ್ ವೈರಸ್ ಬಳಿಕ ಇದೀಗ ಬುಬೊನಿಕ್ ವೈರಸ್ ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ.

ಮಂಗೋಲಿಯಾ ಸ್ವಾಯತ್ತ ಪ್ರದೇಶದ ಬಾಯನ್ನೂರ್ ಎಂಬಲ್ಲಿ ಶಂಕಿತ ಬುಬೊನಿಕ್ ಪ್ರಕರಣ ವರದಿಯಾಗಿದ್ದು, ಪ್ಲೇಗ್ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ನಿಯಂತ್ರಣದ ಕುರಿತು ಮಾಹಿತಿ ರವಾನಿಸಲಾಗಿದೆ.

ಕೊರೊನಾ ಕಥೆಯೇ ಮುಗಿದಿಲ್ಲ, ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರಸ್ ಪತ್ತೆಕೊರೊನಾ ಕಥೆಯೇ ಮುಗಿದಿಲ್ಲ, ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರಸ್ ಪತ್ತೆ

ಇದನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ವರ್ಷದ ಅಂತ್ಯದವರೆಗೆ ಅಲರ್ಟ್ ಘೋಷಿಸಲಾಗಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

After COVID19, China Reports Suspected Bubonic Plague Case

Recommended Video

Bubonic Plague Says Hello China:ಚೀನಾದಲ್ಲಿ 'ಬುಬೊನಿಕ್ ಪ್ಲೇಗ್' ಮಾರಣಾಂತಿಕ ರೋಗ ಪತ್ತೆ| Oneindia Kannada

ಜುಲೈ 1 ರಿಂದ ಪಶ್ಚಿಮ ಮಂಗೋಲಿಯಾದ ಕೋವ್ಡ್ ಪ್ರದೇಶದಲ್ಲಿ 27 ವರ್ಷದ ವ್ಯಕ್ತಿ ಮತ್ತು ಆತನ 17 ವರ್ಷದ ಸಹೋದರನಿಗೆ ಸೋಂಕು ತಗುಲಿರುವ ಪ್ರಕರಣ ಪತ್ತೆಯಾಗಿದೆ.

ಬುಬೊನಿಕ್ ರೋಗವು ಮಾರಣಾಂತಿಕವಾಗಿದ್ದು, ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಸೋಂಕು ತಗುಲಿ 24 ಗಂಟೆಯ ಒಳಗೆ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ. ಬುಬೊನಿಕ್ ಪ್ಲೇಗ್ ಮಾರ್ಮೊಟ್‌ಗಳಂತಹ ಕಾಡು ಅಳಿಲುಗಳ ಮೇಲೆ ಇರುವ ಚಿಗಟಗಳಿಂದ ಹರಡುವ ಕಾಯಿಲೆಯಾಗಿದೆ.

ಬಾಯನ್ನೂರ್ ನಗರದಲ್ಲಿ ಬುಬೊನಿಕ್ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಜನರು ಜಾಗೃತರಾಗಬೇಕು, ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೇಳಲಾಗಿದೆ. ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ತೆರಳಬೇಕು ಎಂದು ತಿಳಿಸಲಾಗಿದೆ.

English summary
A city in northern China has sounded an alert after a suspected case of bubonic plague was reported, according to official media here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X