ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥೈಲ್ಯಾಂಡ್‌ ಗುಹೆಯಿಂದ ವಾಪಸಾದ ವೀರ ಮಕ್ಕಳು ಈಗ ಹೇಗಿದ್ದಾರೆ ನೋಡಿ

By Nayana
|
Google Oneindia Kannada News

ಬೆಂಗಳೂರು, ಜು.14: ಥೈಲ್ಯಾಂಡ್‌ನ ಗುಹೆಯೊಂದರಲ್ಲಿ ಎರಡು ವಾರಗಳಿಂದ ಸಿಲುಕಿದ್ದ ಕೋಚ್‌ ಸೇರಿ 13 ಮಂದಿಯನ್ನು ರಕ್ಷಿಸಲಾಗಿದೆ. ಆದರೆ ಅವರೆಲ್ಲ ಈಗ ಹೇಗಿದ್ದಾರೆ ಎನ್ನುವುದನ್ನು ಈ ಚಿತ್ರದ ಮೂಲಕ
ನೋಡಬಹುದಾಗಿದೆ.

ಫುಟ್ಬಾಲ್ ತಂಡವೊಂದರ 11-16 ವಯಸ್ಸಿನ ಬಾಲಕರು ಮತ್ತು ಅವರ 25 ವರ್ಷದ ಕೋಚ್ ಪ್ರವಾಸಕ್ಕೆಂದು ತೆರಳಿದ್ದಾಗ ಇಲ್ಲಿನ ಬೃಹತ್ ಗುಹೆಯೊಳಗೆ ತೆರಳಿದ್ದರು. ಆದರೆ, ವಿಪರೀತ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಅವರು ಸಿಲುಕಿದ್ದರು. ನೀರಿನ ಮಟ್ಟ ಅಪಾಯಕಾರಿ ಪ್ರಮಾಣದಲ್ಲಿ ಇರುವುದರಿಂದ ಅವರನ್ನು ಅಲ್ಲಿಂದ ಹೊರಕ್ಕೆ ಕರೆತರಲು ಸಾಕಷ್ಟು ಹರಸಾಹಸಪಟ್ಟಿದ್ದರು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

ಇನ್ನು ವೆಸ್ಟ್‌ಲ್ಯಾಂಡ್‌ನಲ್ಲೊಂದು ಮಣ್ಣಿನ ಹಬ್ಬ ಅದು ಹೇಗಿದೆ ಅಂತೀರಾ ಮುಂದೆ ಓದಿ, ಮಕ್ಕಳಿಗೆ ಮಣ್ಣೆಂದರೆ ಸಾಕು ಅದೇನೋ ಪ್ರೀತಿ ಅದರೊಂದಿಗೇ ಸ್ನೇಹ ಮಾಡಿಕೊಂಡು ಒಬ್ಬೊಬ್ಬರೆ ಮಾತನಾಡುತ್ತಾ ಆಟವಾಡುತ್ತಾ ಕುಳಿತುಬಿಡುತ್ತಾರೆ.

ಮಕ್ಕಳು ನಡೆಯಬೇಕು ಎಂದೇನೂ ಇಲ್ಲ ಅಂಬೆಗಾಲಿನಲ್ಲಿಯೇ ತೆವಳುತ್ತಾ ಹೋಗಿ ಕೂರುವುದು ಮಣ್ಣಿನಲ್ಲಿಯೇ, ರಸ್ತೆಯಲ್ಲಿ ನಡೆಯುವ ಹಾಗಿಲ್ಲ, ಅಮ್ಮನ ಕೈಗಳಿಂದ ತನ್ನ ಕೈ ಕಳಚಿಕೊಂಡು ಓಡುವುದು ಮಣ್ಣಿನಲ್ಲಿ ಆಟವಾಡಲು ಈ ಮಕ್ಕಳ ಮಣ್ಣಿನಾಟ ನೋಡಿದ್ರೆ ಎಲ್ಲರಿಗೂ ತಮ್ಮ ಬಾಲ್ಯ ನೆನಪಾಗುತ್ತದೆ.

ಕೆಸರು ಆಟ, ಕೆಸರು ಓಟ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ದೇಶ ವಿದೇಶದಲ್ಲೂ ಚಾಲ್ತಿಯಲ್ಲಿದೆ, ವೆಸ್ಟ್‌ಲ್ಯಾಂಡ್‌ನಲ್ಲಿ ಪ್ರತಿ ವರ್ಷ ಹೀಗೊಂದು ಹಬ್ಬವನ್ನು ಆಚರಿಸಲಾಗುತ್ತದೆ ಅದಕ್ಕೆ ಮಡ್‌ ಡೇ ಅಂತಾ ಹೇಳ್ತಾರೆ. ಮಕ್ಕಳು ಮಣ್ಣಿನಲ್ಲಿ ಎಷ್ಟು ಆಡ್ತಾರೆ ಜತೆಗೆ ಎಷ್ಟು ಮಣ್ಣನ್ನು ಮೈಗೆಲ್ಲಾ ಹಚ್ಚಿಕೊಳ್ತಾರೆ ಎನ್ನೋದೆ ಆ ದಿನದ ವಿಶೇಷ. ಅದರಲ್ಲಿ ಸ್ಪರ್ಧೆ ಕೂಡ ನಡೆಯುತ್ತೆ, ಬಹುಮಾನ ಕೂಡ ಕೊಡ್ತಾರೆ.

ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ ಬಾಲಕರನ್ನು ರಕ್ಷಿಸಿದ್ದು ಹೇಗೆ? ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ ಬಾಲಕರನ್ನು ರಕ್ಷಿಸಿದ್ದು ಹೇಗೆ?

ಕೆಸರಿನಿಂದ ತುಂಬಿದ ಪೂಲ್‌ ಒಂದನ್ನು ನಿರ್ಮಿಸಿ ಅದರೊಳಗೆ ಮಕ್ಕಳನ್ನು ಬಿಡ್ತಾರೆ, ಈ ಆಟದಲ್ಲಿ ಮೂರು ವರ್ಷದ ಚಾರ್ಲ್ಸ್‌ ಡೇವಿಸ್ಕಿಬಾ ಹಾಗೂ ಮಾಲಿ ಕೋಫಾಲ್‌ ವಿಜೇತರಾಗಿ ಈ ವರ್ಷದ ಮಣ್ಣಿನ ರಾಜ, ರಾಣಿಯಾಗಿದ್ದಾರೆ. ನಂತರ ಅಲ್ಲಿಯ ಅಗ್ನಿಶಾಮಕ ಸಿಬ್ಬಂದಿಗಳು ಮಕ್ಕಳಿಗೆ ನೀರು ಸಿಂಪಡಿಸಿ ಅವರ ಮೈಲ್ಲಿರುವ ಮಣ್ಣನ್ನು ತೆಗೆಯಲು ಸಹಾಯ ಮಾಡಿದ್ದಾರೆ.

ಥೈಲ್ಯಾಂಡ್‌ ಗುಹೆಯಲ್ಲಿ ಸಿಲುಕಿದ್ದ ಮಕ್ಕಳು ಇವರೇ

ಥೈಲ್ಯಾಂಡ್‌ ಗುಹೆಯಲ್ಲಿ ಸಿಲುಕಿದ್ದ ಮಕ್ಕಳು ಇವರೇ

17 ದಿನಗಳ ನಿರಂತರ ಕಾರ್ಯಾಚರಣೆ ಮೂಲಕ ಥೈಲ್ಯಾಂಡ್ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಹೆಯಲ್ಲಿ ಒಟ್ಟು 19 ಮಂದಿ ಡೈವರ್ (ಮುಳುಗು ತಜ್ಞರು) ಹೋಗಿದ್ದು, ಹಂತ ಹಂತವಾಗಿ 12 ಜನ ಮಕ್ಕಳು ಹಾಗೂ ಒಬ್ಬ ಕೋಚ್ ಅನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.ಈ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೆಸ್ಟ್‌ಲ್ಯಾಂಡ್‌ನಲ್ಲೊಂದು ಮಣ್ಣಿನ ಹಬ್ಬ, ಮಕ್ಕಳ ನಲಿದಾಟ

ವೆಸ್ಟ್‌ಲ್ಯಾಂಡ್‌ನಲ್ಲೊಂದು ಮಣ್ಣಿನ ಹಬ್ಬ, ಮಕ್ಕಳ ನಲಿದಾಟ

ವೆಸ್ಟ್ ಲ್ಯಾಂಡ್‌ನ ನನ್ಕಿನ್‌ ಮಿಲ್ಸ್‌ ಪಾರ್ಕ್‌ನಲ್ಲಿ ಪ್ರತಿ ವರ್ಷ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ. ಅದು ಮಕ್ಕಳಿಗಾಗಿಯೇ ಹಮ್ಮಿಕೊಳ್ಳಲಾಗುತ್ತದೆ, ಮಣ್ಣಿನಲ್ಲಿ ಯಾರು ಹೆಚ್ಚು ಆಟವಾಡ್ತಾರೋ ಅಂತವರಿಗೆ ಬಹುಮಾನವನ್ನು ಕೂಡ ನೀಡಲಾಗುತ್ತದೆ, ಈ ದಿನದಲ್ಲಿ ಚಾರ್ಲ್ಸ್‌ ಡೆವಿಸ್ಕಿಬಾ, ಹಾಗೂ ಮಾಲಿ ಕೋಫಲ್‌ ಮಡ್‌ ಡೇ ರಾಜ ರಾಣಿಯಾದರು.

ಭಾರತ-ರಷ್ಯಾ ವಿದೇಶಿ ವಿನಿಮಯದಲ್ಲಿ ಭಾರತದ ಫ್ಲ್ಯಾಗ್‌ನೊಂದಿಗೆ ಮೆಕ್ಸಿಕೊ ಮಹಿಳೆ

ಭಾರತ-ರಷ್ಯಾ ವಿದೇಶಿ ವಿನಿಮಯದಲ್ಲಿ ಭಾರತದ ಫ್ಲ್ಯಾಗ್‌ನೊಂದಿಗೆ ಮೆಕ್ಸಿಕೊ ಮಹಿಳೆ

ರಷ್ಯಾ ಹಾಗೂ ಭಾರತ ವಿದೇಶಿ ವಿನಿಮಯ ಕಾರ್ಯಕ್ರಮದಲ್ಲಿ ಮೆಕ್ಸಿಕೊ ಮಹಿಳೆಯೊಬ್ಬಳು ರಷ್ಯಾ ಮತ್ತು ಭಾರತದ ಫ್ಲ್ಯಾಗ್ನೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜಗನ್ನಾಥ ದೇವಾಲಯಕ್ಕೆ ಭೇಟಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜಗನ್ನಾಥ ದೇವಾಲಯಕ್ಕೆ ಭೇಟಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಹಮದಾಬಾದ್‌ನಲ್ಲಿರುವ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಜಗನ್ನಾಥ ದೇವರ 141ನೇ ರಥಯಾತ್ರೆಯಲ್ಲಿ ಪಾಲ್ಗೊಂಡರು.

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ತಂದುಕೊಟ್ಟ ಹಿಮಾ ದಾಸ್‌

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ತಂದುಕೊಟ್ಟ ಹಿಮಾ ದಾಸ್‌

ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಮೊದಲ ಚಿನ್ನದ ಪದಕ ಗೆದ್ದ ಹಿಮಾ ದಾಸ್ ಇತಿಹಾಸ ಸೃಷ್ಟಿಸಿದ್ದಾರೆ. ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. 18 ನೇ ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.

English summary
After a week stranded in caves of Thailand thirteen children including coach have came back safely. Now what are they doing? How is their life? Here is the story about.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X