ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಕ್ಕೆ ಸಡ್ಡು ಹೊಡೆಯುವಂತೆ ಚೀನಾ ಬಳಿಯೂ 'ಬಾಂಬ್ ಗಳ ಮಹಾತಾಯಿ'

|
Google Oneindia Kannada News

ಬೀಜಿಂಗ್ (ಚೀನಾ), ಜನವರಿ 4: ಚೀನಾದಿಂದ ಮತ್ತೊಂದು ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಅಮೆರಿಕದ ಬಳಿಯಿರುವ 'ಬಾಂಬ್ ಗಳ ಮಹಾತಾಯಿ' ಎನಿಸಿಕೊಂಡ ಶಕ್ತಿಶಾಲಿ ಸ್ಫೋಟಕಕ್ಕೆ ಉತ್ತರ ಎಂಬಂತೆ ಚೀನಾ ಕೂಡ ಅಂಥದ್ದೇ ಪ್ರಬಲ ಬಾಂಬ್ ಅಭಿವೃದ್ಧಿ ಪಡಿಸಿದೆ. ಆದರೆ ಇದು ಅಣ್ವಸ್ತ್ರ ಅಲ್ಲ ಎಂದು ಅಲ್ಲಿನ ಅಧಿಕೃತ ಮಾಧ್ಯಮ ಖಾತ್ರಿ ಪಡಿಸಿದೆ.

ಚೀನಾದ ರಕ್ಷಣಾ ಕಾರ್ಖಾನೆಯ ದೈತ್ಯ ನಾರ್ನಿಕೋ ಇದೇ ಮೊದಲ ಬಾರಿಗೆ ಏರಿಯಲ್ ಬಾಂಬ್ ಅನ್ನು ಪ್ರದರ್ಶಿಸಿದೆ. ಇದು ಚೀನಾದ ಅತಿ ದೊಡ್ಡ ಅಣ್ವಸ್ತ್ರ ಅಲ್ಲದ ಬಾಂಬ್ ಎಂದು ಸರಕಾರಿ ಸುದ್ದಿ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಇದರ ವಿಧ್ವಂಸಕ ತಾಕತ್ತನ್ನು ಆಧರಿಸಿ ಹೇಳುವುದಾದರೆ, ಎಲ್ಲ ಬಾಂಬ್ ಗಳ ಮಹಾತಾಯಿ ಎನ್ನಲಾಗುತ್ತಿದೆ. ಅಣ್ವಸ್ತ್ರದ ನಂತರ ಭೀಕರ ಪರಿಣಾಮ ಬೀರಬಲ್ಲ ಬಾಂಬ್ ಇದು.

ಬಾಂಬ್ ಗಳ ಮಹಾತಾಯಿ ಅಂದರೆ ಏನು? ವಿವರಗಳು ಬಾಂಬ್ ಗಳ ಮಹಾತಾಯಿ ಅಂದರೆ ಏನು? ವಿವರಗಳು

ಡಿಸೆಂಬರ್ ತಿಂಗಳ ಕೊನೆಯಲ್ಲಿ ನಡೆಸಿದ ಪ್ರಯೋಗಾರ್ಥ ಪರೀಕ್ಷೆಯ ವಿಡಿಯೋ ಮಾಡಲಾಗಿದ್ದು, ಅದನ್ನು NORNICO (ಚೀನಾ ನಾರ್ಥ್ ಇಂಡಸ್ಟ್ರೀಸ್ ಗ್ರೂಪ್ ಕಾರ್ಪೊರೇಷನ್ ಲಿಮಿಟೆಡ್) ತನ್ನ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಬಾಂಬ್ ನ ಧ್ವಂಸ ಮಾಡುವ ಶಕ್ತಿಯನ್ನು ಪ್ರದರ್ಶಿಸಲಾಗಿದೆ ಎಂದು ಸರಕಾರಿ ಮಾಧ್ಯಮ ಕ್ಸಿನುವಾ ವರದಿ ಮಾಡಿದೆ.

2017ರಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕ ಬಳಸಿತ್ತು

2017ರಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕ ಬಳಸಿತ್ತು

2017ರಲ್ಲಿ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದ ವೇಳೆ ಅಮೆರಿಕ ಸೈನ್ಯವು GBU-43/B ಮಾಸಿವ್ ಅರ್ಡನನ್ಸ್ ಏರ್ ಬ್ಲಾಸ್ಟ್ (MOAB) ಅಸ್ತ್ರವನ್ನು, ಸಾಮಾನ್ಯವಾಗಿ ಕರೆಯುವಂತೆ 'ಬಾಂಬ್ ಗಳ ಮಹಾತಾಯಿ'ಯನ್ನು ಶಂಕಿತ ಐಎಸ್ ಐಎಸ್ ಉಗ್ರಗಾಮಿಗಳ ಮೇಲೆ ಬಳಸಿತ್ತು.

ಐದರಿಂದ ಆರು ಮೀಟರ್ ಉದ್ದದ ಬಾಂಬ್

ಐದರಿಂದ ಆರು ಮೀಟರ್ ಉದ್ದದ ಬಾಂಬ್

ಹಲವು ಟನ್ ತೂಕದ ಈ ಬಾಂಬ್ ಗೆ ಚೀನಾ ಕೂಡ ಅದೇ ಹೆಸರು ಇಡಲಿದೆ. ಚೀನಾ ನಿರ್ಮಿಸಿರುವ ಈ ಬಾಂಬ್ ಅಮೆರಿಕದ ಬಳಿ ಇರುವುದಕ್ಕಿಂದ ಚಿಕ್ಕದು ಹಾಗೂ ಹಗುರವಾದದ್ದು ಆಗಿರುತ್ತದೆ. ವಿಡಿಯೋ ಆಧಾರದ ಮೇಲೆ ಹೇಳಬೇಕು ಅಂದರೆ, ಈ ಬಾಂಬ್ ಐದರಿಂದ ಆರು ಮೀಟರ್ ಉದ್ದವಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಬಾಂಬ್ ದಾಳಿಯಲ್ಲಿ 90 ಐಎಸ್ಐಎಸ್ ಉಗ್ರರು ಹತ: ಅಮೆರಿಕ ಬಾಂಬ್ ದಾಳಿಯಲ್ಲಿ 90 ಐಎಸ್ಐಎಸ್ ಉಗ್ರರು ಹತ: ಅಮೆರಿಕ

ದೊಡ್ಡ ಪ್ರಮಾಣದ ಕಾಡು, ಬೆಟ್ಟ-ಗುಡ್ಡ ನಾಶಕ್ಕೂ ಬಳಬಹುದು

ದೊಡ್ಡ ಪ್ರಮಾಣದ ಕಾಡು, ಬೆಟ್ಟ-ಗುಡ್ಡ ನಾಶಕ್ಕೂ ಬಳಬಹುದು

ಈ ಬಾಂಬ್ ಸ್ಫೋಟದಿಂದ ಬಹಳ ಸುಲಭವಾಗಿ ನೆಲದ ಮೇಲಿನ ಕಟ್ಟಡ, ರಕ್ಷಣಾ ತಾಣ ಸೇರಿದಂತೆ ಹಲವು ನೆಲೆಗಳು ಧ್ವಂಸವಾಗಿ ಬಿಡುತ್ತವೆ. ಒಂದು ವೇಳೆ ಸೈನ್ಯದ ಅನುಕೂಲಕ್ಕಾಗಿ ಭೂ ಭಾಗದ ಆಗತ್ಯವಿದ್ದು, ಅಲ್ಲಿ ದೊಡ್ಡ ಪ್ರಮಾಣದ ಕಾಡು, ಬೆಟ್ಟ-ಗುಡ್ಡಗಳು ಇದ್ದಲ್ಲಿ ಅವುಗಳನ್ನು ಸಂಪೂರ್ಣವಾಗಿ ಇಲ್ಲದಂತೆ ಈ ಬಾಂಬ್ ನಿಂದ ಮಾಡಬಹುದು.

ರಷ್ಯಾದ ಬಳಿಯೂ ಇಂಥದ್ದೇ ಬಾಂಬ್ ವೊಂದಿದೆ

ರಷ್ಯಾದ ಬಳಿಯೂ ಇಂಥದ್ದೇ ಬಾಂಬ್ ವೊಂದಿದೆ

ಅಮೆರಿಕದ ಬಳಿ ಇರುವ ಬಾಂಬ್ ಅನ್ನು ಸಾಗಿಸುವುದಕ್ಕೆ ದೊಡ್ಡ ವಿಮಾನ ಬೇಕಾಗುತ್ತದೆ. ಆದರೆ ಚೀನಾದ ಬಾಂಬ್ ಅನ್ನು ಬಾಂಬರ್ ನಲ್ಲೇ ಸಾಗಿಸಬಹುದು. ಮಾಮೂಲಿ ವಿಮಾನಕ್ಕಿಂತ ಬಾಂಬರ್ ಗಳ ಗುರಿ ಕರಾರುವಾಕ್ ಆಗಿರುತ್ತವೆ. ಆದ್ದರಿಂದ ಚೀನಾದ ಬಾಂಬ್ ತಯಾರಕರು ಅದಕ್ಕೆ ತಕ್ಕಂತೆಯೇ ರೂಪಿಸಿದ್ದಾರೆ. ಇನ್ನು ಅಮೆರಿಕದ ಬಳಿ ಇರುವ ಬಾಂಬ್ ಗೆ ಸರಿಸಮವಾಗಿ ರಷ್ಯಾ ಕೂಡ 'ಎಲ್ಲ ಬಾಂಬ್ ಗಳ ಪಿತಾಮಹ'ವನ್ನೇ ರೂಪಿಸಿದೆ. ಅದು ವಿಪರೀತ ದೊಡ್ಡದು, ಅದರ ಪರಿಣಾಮ ಮತ್ತೂ ಭೀಕರವಾಗಿರುತ್ತದೆ. ಬಾಂಬ್ ಥರ್ಮೋಬೇರಿಕ್ ಆಗಿದೆ. ಆದರೆ ಈಗ ಚೀನಾವು ವಿಡಿಯೋದಲ್ಲಿ ತೋರಿಸಿರುವುದು ಥರ್ಮೋಬೇರಿಕ್ ಅಲ್ಲ ಎಂದು ನಾರ್ನಿಕೊ ಹೇಳಿದೆ.

English summary
China has developed a massive bomb, said to be the country's answer to the US-built 'Mother of All Bombs', the most powerful non-nuclear weapon, official media reported on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X