ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಆಮದು ನಿರ್ಬಂಧ; ಹಂದಿ ಮಾಂಸ ಸೇವನೆಗೆ ಬೆದರಿತಾ ಚೀನಾ?

|
Google Oneindia Kannada News

ಬೀಜಿಂಗ್, ಮೇ.29: ಹಾವು-ಚೇಳು, ಮಾಂಸ ಸೇವನೆಗೆ ಹೆಸರುವಾಸಿಯಾಗಿದ್ದ ಚೀನಿಯರು ಕೊರೊನಾ ವೈರಸ್ ನಿಂದ ಪಾಠ ಕಲಿತಂತೆ ಕಾಣುತ್ತಿದೆ. ವುಹಾನ್ ನಲ್ಲಿರುವ ಮಾಂಸ ಮಾರಾಟದ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಇದರ ನಡುವೆ ಚೀನಾ ಸರ್ಕಾರ ಮತ್ತೊಂದು ತೀರ್ಮಾನಕ್ಕೆ ಬಂದಿದೆ.

Recommended Video

ಜನಗಳಿಗೆ ಮೋಸ ಮಾಡುತ್ತಿರೊ ನಾಯಕರಿಗೆ ಶಿಕ್ಷೆ ಆಗಬೇಕು | Oneindia Kannada

ಭಾರತದಿಂದ ಹಂದಿ ಮತ್ತು ಕಾಡು ಹಂದಿ ಮಾಂಸವನ್ನು ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಲಾಗುವುದು ಎಂದು ಚೀನಾದ ಪಶು ಸಂಗೋಪನಾ ಅಧಿಕಾರಿಗಳು ತಿಳಿಸಿದ್ದಾರೆ. ಹಂದಿಗಳಿಂದಲೇ ಹರಡುವ ಆಫ್ರಿಕನ್ ಶೀತಜ್ವರ ಹರಡುತ್ತಿದೆ. ಈ ಹಿನ್ನೆಲೆ ಸೋಂಕು ಹರಡುವಿಕೆಯಿಂದ ತಪ್ಪಿಸಿಕೊಳ್ಳಲು ಹಂದಿ ಮಾಂಸ ಆಮದು ಮತ್ತು ಸೇವನೆಗೆ ಕಡಿವಾಣ ಹಾಕಲು ಕೃಷಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯ ಹಾಗೂ ಚೀನಾದ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಾವಲಿ, ಪ್ಯಾಂಗೋಲಿನ್ ಮಾಂಸ ಸೇವಿಸುವಂತಿಲ್ಲ: ಕಡೆಗೂ ಮಹತ್ವದ ಆದೇಶ ಹೊರಡಿಸಿದ ವುಹಾನ್ಬಾವಲಿ, ಪ್ಯಾಂಗೋಲಿನ್ ಮಾಂಸ ಸೇವಿಸುವಂತಿಲ್ಲ: ಕಡೆಗೂ ಮಹತ್ವದ ಆದೇಶ ಹೊರಡಿಸಿದ ವುಹಾನ್

ಚೀನಾದ ಗಡಿ ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ ಭಾರತವು ಇತ್ತೀಚಿಗೆ ಅಕ್ರಮವಾಗಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದಾಗಿನಿಂದ ಹಂದಿ ಮಾಂಸ ಮತ್ತು ಕಾಡು ಹಂದಿ ಮಾಂಸ ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಆಫ್ರಿಕಲ್ ಜ್ವರಕ್ಕೆ ಬಲಿಯಾದ ಅಸ್ಸಾಂ ಹಂದಿಗಳು

ಆಫ್ರಿಕಲ್ ಜ್ವರಕ್ಕೆ ಬಲಿಯಾದ ಅಸ್ಸಾಂ ಹಂದಿಗಳು

ಕಳೆದ ತಿಂಗಳು ಅಸ್ಸಾಂನಲ್ಲಿ ಸಾಕಾಣಿಕೆ ಮಾಡಿದ್ದ ಹಂದಿಗಳಲ್ಲಿ ಆಫ್ರಿಕನ್ ಜ್ವರ ಕಾಣಿಸಿಕೊಂಡಿದೆ. ಚೀನಾದಲ್ಲಿ ಈ ಆಫ್ರಿಕನ್ ಜ್ವರಕ್ಕೆ ಈಗಾಗಲೇ ಕಡಿವಾಣ ಹಾಕಲಾಗಿದೆ. ಕಳೆದ ಒಂದು ವರ್ಷಗಳಲ್ಲಿ ಯಾವುದೇ ರೀತಿಯ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ಇದೀಗ ಭಾರತದಿಂದ ಹಂದಿ ಮತ್ತು ಹಂದಿ ಮಾಂಸ ಆಮದು ಮಾಡಿಕೊಂಡಲ್ಲಿ ಸೋಂಕು ಹರಡುವಿಕೆ ಅಪಾಯ ಹೆಚ್ಚಾಗಿದೆ ಎಂದು ಚೀನಾದ ಕೃಷಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಆಫ್ರಿಕನ್ ಜ್ವರ ಚೀನಾದ ಪಾಲಿಗೆ ಹೊಸ ವೈರಸ್ ಏನಲ್ಲ!

ಆಫ್ರಿಕನ್ ಜ್ವರ ಚೀನಾದ ಪಾಲಿಗೆ ಹೊಸ ವೈರಸ್ ಏನಲ್ಲ!

ಹಂದಿ ಮಾಂಸ ಆಮದು ವಹಿವಾಟು ಮೊದಲಿನ ಸ್ಥಿತಿಗೆ ಬರುವುದುಕ್ಕೆ ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. 2018ರ ಆಗಸ್ಟ್ ನಲ್ಲಿ ಮೊದಲ ಬಾರಿಗೆ ಚೀನಾದಲ್ಲಿ ಆಫ್ರಿಕನ್ ಜ್ವರ ಕಾಣಿಸಿಕೊಂಡಿತು. ಪೂರ್ವ ಚೀನಾದ ಲಿಯಾನಿಂಗ್ ಪ್ರದೇಶದಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು.

ಅಸ್ಸಾಂಗೆ ಚೀನಾದಿಂದಲೇ ಆಫ್ರಿಕನ್ ಜ್ವರ ಲಗ್ಗೆ

ಅಸ್ಸಾಂಗೆ ಚೀನಾದಿಂದಲೇ ಆಫ್ರಿಕನ್ ಜ್ವರ ಲಗ್ಗೆ

ನೊವೆಲ್ ಕೊರೊನಾ ವೈರಸ್ ಚೀನಾದಿಂದ ವಿಶ್ವಕ್ಕೆ ವ್ಯಾಪಿಸಿದ್ದು ಗೊತ್ತಿದೆ. ಅದೇ ರೀತಿ ಆಫ್ರಿಕನ್ ಹಂದಿಜ್ವರ ಕೂಡಾ ಚೀನಾದಿಂದಲೇ ಅಸ್ಸಾಂಗೆ ಲಗ್ಗೆ ಇಟ್ಟಿದೆ. ಈ ಹಿಂದೆ 2018 ರಿಂದ 2020ರ ಅವಧಿಯಲ್ಲಿ ಚೀನಾದಲ್ಲಿ ವ್ಯಾಪಾರಿ ದೃಷ್ಟಿಯಿಂದ ಸಾಕಿದ್ದ ಶೇ.60ರಷ್ಟು ಹಂದಿಗಳು ಆಫ್ರಿಕನ್ ಹಂದಿಜ್ವರದಿಂದಲೇ ಪ್ರಾಣ ಬಿಟ್ಟಿದ್ದವು ಎಂದು ಹೇಳಲಾಗುತ್ತಿದೆ. ಅಸ್ಸಾಂನಲ್ಲಿ ಕಾಣಿಸಿಕೊಂಡ ಆಫ್ರಿನ್ ಹಂದಿಜ್ವರಕ್ಕೆ ಹಂದಿಗಳು ಪ್ರಾಣ ಬಿಡುತ್ತಿವೆ. ಕಳೆದ ಫೆಬ್ರವರಿಯಿಂದ ಈವರೆಗೂ ರಾಜ್ಯದಲ್ಲಿ 2,800 ಹಂದಿಗಳು ಮಾರಕ ಜ್ವರಕ್ಕೆ ಬಲಿಯಾಗಿವೆ. ಇನ್ನು ಎಲ್ಲ ಹಂದಿಗಳನ್ನು ವ್ಯಾಪಾರಿ ಉದ್ದೇಶದಿಂದ ಸಾಕಾಣಿಕೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಅಸ್ಸಾಂನಲ್ಲಿ ಆಫ್ರಿಕನ್ ಜ್ವರಕ್ಕೆ ಸಾವಿರಾರು ಹಂದಿ ಬಲಿ

ಅಸ್ಸಾಂನಲ್ಲಿ ಆಫ್ರಿಕನ್ ಜ್ವರಕ್ಕೆ ಸಾವಿರಾರು ಹಂದಿ ಬಲಿ

ವಿಶ್ವದಲ್ಲೇ ಮೊದಲು ಆಫ್ರಿಕನ್ ಹಂದಿಜ್ವರವು 1921ರಲ್ಲಿ ಕೀನ್ಯಾದ ಎಥಿಯೋಪಿಯಾದಲ್ಲಿ ಕಾಣಿಸಿಕೊಂಡಿತು. ಆದರೆ ಅಂದು ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಆಗಲಿ, ಸ್ವತಃ ಕೀನ್ಯಾದಲ್ಲೇ ಆದರೂ ಅಷ್ಟಾಗಿ ಸೋಂಕು ಮಾರಕ ಪರಿಣಾಮವನ್ನು ಬೀರಲಿಲ್ಲ. ಆದರೆ ಇತ್ತೀಚಿಗೆ ಅಸ್ಸಾಂನಲ್ಲಿ ಕಾಣಿಸಿಕೊಂಡ ಡೇಂಜರಸ್ ಸೋಂಕಿನಿಂದ ಸಾವಿರಾರು ಹಂದಿಗಳು ಪ್ರಾಣ ಬಿಟ್ಟಿವೆ. 2019ರಲ್ಲಿ ರಾಷ್ಟ್ರೀಯ ಪ್ರಾಣ ಸಂರಕ್ಷಣಾ ಸಂಸ್ಥೆಯು ನೀಡಿರುವ ಅಂಕಿ-ಅಂಶಗಳ ಪ್ರಕಾರ ಅಸ್ಸಾಂನಲ್ಲಿ ಹಂದಿಗಳ ಸಂಖ್ಯೆಯು 21 ಲಕ್ಷದಿಂದ 30 ಲಕ್ಷಕ್ಕೆ ಏರಿಕೆಯಾಗಿತ್ತು.

English summary
African Swine Fever Fear: China Ban Pork Import From India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X