ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಫ್ರಿಕಾ ರಾಷ್ಟ್ರಗಳಿಗೂ ಆಪತ್ತು? ಹಸಿವು, ಬಡತನದ ನಡುವೆ ಇದೆಂತಹ ಶಿಕ್ಷೆ..?

|
Google Oneindia Kannada News

ಕೊರೊನಾ, ಕೊರೊನಾ, ಕೊರೊನಾ. ಬಹುಶಃ ಪಾತಾಳ ಸೇರಿದರೂ 'ಕೊರೊನಾ' ಪದವೇ ಕಿವಿಗೆ ಬೀಳುವ ಸಾಧ್ಯತೆ ಹೆಚ್ಚಾಗಿದೆ ಈಗಿನ ಸಂದರ್ಭದಲ್ಲಿ. ಅಷ್ಟರಮಟ್ಟಿಗೆ ಇಡೀ ಜಗತ್ತನ್ನು, ಇಂಚಿಂಚಾಗಿ ನರಳಿಸುತ್ತಿದೆ ಈ ಮಹಾಮಾರಿ. ಈಗಾಗಲೇ ಭಾರತ 2ನೇ ಅಲೆಯ ಅಬ್ಬರಕ್ಕೆ ಸಿಲುಕಿ ನರಳಿ, ನಲುಗಿ ಹೋಗಿದೆ. ಈ ಹೊತ್ತಲ್ಲೇ ಆಫ್ರಿಕಾ ಖಂಡದ ರಾಷ್ಟ್ರಗಳಲ್ಲಿ ನಡುಕ ಶುರುವಾಗಿದೆ.

ಏಕೆಂದರೆ ತಜ್ಞರ ಪ್ರಕಾರ ಆಫ್ರಿಕಾ ರಾಷ್ಟ್ರಗಳಲ್ಲಿ ಕೆಲವೇ ತಿಂಗಳಲ್ಲಿ ಕೊರೊನಾ 2ನೇ ಅಲೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ. ದುರಾದೃಷ್ಟ ಎಂಬಂತೆ ಇದು ನಡೆದಿದ್ದೇ ಆದರೆ ಮುಂದಿನ ದಿನಗಳು ಕರಾಳ ರೂಪ ಪಡೆಯಲಿವೆ. ಭಾರತಕ್ಕಿಂತ ಭೀಕರ ಪರಿಸ್ಥಿತಿ ಆಫ್ರಿಕಾ ರಾಷ್ಟ್ರಗಳಿಗೆ ಎದುರಾಗುವುದು ಪಕ್ಕಾ ಎಂಬುದು ತಜ್ಞರ ಎಚ್ಚರಿಕೆ.

ವ್ಯಾಕ್ಸಿನ್ ಸಮರ್ಪಕವಾಗಿ ತಲುಪದೆ, ಅಲ್ಲಿನ ಆರೋಗ್ಯ ವ್ಯವಸ್ಥೆ ಹಳ್ಳ ಹಿಡಿದಿದೆ. ಇಷ್ಟೆಲ್ಲಾ ಸಂಕಷ್ಟಗಳ ನಡುವೆ 2ನೇ ಅಲೆ ಆಫ್ರಿಕಾ ಖಂಡಕ್ಕೆ ಅಪ್ಪಳಿಸಿದರೆ ಬೀದಿಗಳಲ್ಲಿ ಶವಗಳೇ ಕಾಣುವ ಸ್ಥಿತಿ ಎದುರಾಗಬಹುದು. ಮೊದಲನೇ ಅಲೆಯಲ್ಲಿ 47 ಲಕ್ಷ ಕೊರೊನಾ ಸೋಂಕಿತರು ಪತ್ತೆ ಆಗಿದ್ದಾರೆ. ಹಾಗೇ ಈವರೆಗೂ 1 ಲಕ್ಷ 25 ಸಾವಿರದ ಆಫ್ರಿಕನ್ನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಯಾರಿಗೆ ಬಂತು ಸ್ವಾತಂತ್ರ್ಯ..?

ಯಾರಿಗೆ ಬಂತು ಸ್ವಾತಂತ್ರ್ಯ..?

ಆಫ್ರಿಕಾ ಖಂಡದ ಬಹುಪಾಲು ರಾಷ್ಟ್ರಗಳನ್ನು ಆಳಿದ್ದವರು ಯುರೋಪಿಯನ್ನರು. ಹಾಗೇ ಅವರಿಗೆ ಸ್ವಾತಂತ್ರ್ಯ ಕೊಟ್ಟು ಹೊರಟು ಹೋಗಿ ಹಲವು ದಶಕಗಳೇ ಕಳೆದಿವೆ. ಇಷ್ಟು ಸಮಯ ಕಳೆದರೂ ಅಲ್ಲಿನ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಆಫ್ರಿಕಾ ಖಂಡದ ಬಡತನ ಹಾಗೂ ಅಲ್ಲಿನ ಪರಿಸ್ಥಿತಿ ಕೇಳಿದರೆ ಸಾಕು ಬೆಚ್ಚಿಬೀಳುವ ಜನರಿದ್ದಾರೆ.

ಎಲ್ಲವೂ ಇದ್ದು ಏನು ಇಲ್ಲ

ಎಲ್ಲವೂ ಇದ್ದು ಏನು ಇಲ್ಲ

ಆಫ್ರಿಕಾದಲ್ಲಿ ಎಲ್ಲವೂ ಇದೆ, ನೈಸರ್ಗಿಕ ಸಂಪತ್ತು, ಮಾನವ ಸಂಪನ್ಮೂಲ. ಹೀಗೆ ಅಭಿವೃದ್ಧಿಗೆ ಬೇಕಾದ ಎಲ್ಲಾ ವಸ್ತುಗಳನ್ನೂ ಕಾಣಬಹುದು. ಆದರೆ ಅಲ್ಲಿನ ರಾಜಕೀಯ ಗಬ್ಬೆದ್ದು ಹೋಗಿದ್ದು ಅರಾಜಕತೆ ಪರಿಣಾಮ ಆಫ್ರಿಕಾ ಜನ ನರಕ ಕಾಣುತ್ತಿದ್ದಾರೆ. ಇನ್ನು ಆರೋಗ್ಯ ವ್ಯವಸ್ಥೆಯಂತೂ ದೇವರಿಗೆ ಪ್ರೀತಿ. ಸಾಮಾನ್ಯ ರೋಗಕ್ಕೇ ಅಲ್ಲಿ ಔಷಧಗಳು ಸಿಗುತ್ತಿಲ್ಲ. ಇನ್ನು 2ನೇ ಅಲೆ ವಕ್ಕರಿಸಿದರೆ ಪರಿಸ್ಥಿತಿ ಭಯಾನಕ ಸ್ವರೂಪ ಪಡೆಯೋದು ಪಕ್ಕಾ.

ರಸ್ತೆ ಇಲ್ಲ, ಆಸ್ಪತ್ರೆ ಕಾಣಲ್ಲ..!

ರಸ್ತೆ ಇಲ್ಲ, ಆಸ್ಪತ್ರೆ ಕಾಣಲ್ಲ..!

ಮಧ್ಯ ಆಫ್ರಿಕಾದಲ್ಲಿ ಬಡತನ ಮಿತಿ ಮೀರಿದೆ. ತುತ್ತು ಅನ್ನ ಸಿಕ್ಕವನೇ ಶ್ರೀಮಂತ ಎಂಬಂಥ ಸ್ಥಿತಿ ಇದೆ. ಇದು ಸಾಲದು ಎಂಬಂತೆ ಕೊರೊನಾ ಬೇರೆ ಬಂದಪ್ಪಳಿಸಿ ಜನರನ್ನು ಬೆಚ್ಚಿಬೀಳಿಸಿದೆ. ಅಲ್ಲಿನ ರಾಜಕಾರಣಿಗಳಿಗೆ ಬುದ್ಧಿ ಬರಲು ಸಾಧ್ಯವೇ ಇಲ್ಲ. ಮೂಲ ಸೌಕರ್ಯ ಎಂಬುದಕ್ಕೆ ಅರ್ಥವೇ ಗೊತ್ತಿಲ್ಲ. ಆಫ್ರಿಕಾದ ಬಹುಪಾಲು ಹಳ್ಳಿ, ನಗರದ ಜನರು ರಸ್ತೆಗಳನ್ನೇ ಕಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಹೋಗಲು ಹತ್ತಾರು ದಿನಗಳ ಕಾಲ ಪ್ರಯಾಣಿಸಬೇಕು. ಈಗ ಹೇಳಿ ಅಕಸ್ಮಾತ್ ಆಫ್ರಿಕಾ ಖಂಡಕ್ಕೆ ಕೊರೊನಾ 2ನೇ ಅಲೆ ಅಪ್ಪಳಿಸಿದರೆ, ಸೋಂಕು ಉಲ್ಬಣಿಸಿದರೆ ಪರಿಸ್ಥಿತಿ ಹೇಗಿರಬೇಡ.

ವಿಶ್ವಸಂಸ್ಥೆಗೂ ಆತಂಕ ಕಾಡುತ್ತಿದೆ

ವಿಶ್ವಸಂಸ್ಥೆಗೂ ಆತಂಕ ಕಾಡುತ್ತಿದೆ

ಆಫ್ರಿಕಾ ಖಂಡದ ಬಗ್ಗೆ ಒಂದಿಷ್ಟು ಪ್ರೀತಿ ಇರುವುದು ವಿಶ್ವಸಂಸ್ಥೆಗೆ ಮಾತ್ರ. ಈ ಹಿಂದೆ ಬಡತನ ನಿರ್ಮೂಲನೆ, ಪೊಲಿಯೋ ನಿರ್ಮೂಲನೆ ಹಾಗೂ ಮತ್ತಿತರ ಸಾಂಕ್ರಾಮಿಕ ಪಿಡುಗು ವಕ್ಕರಿಸಿದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ನೆರವು ಸಿಕ್ಕಿದೆ. ಈಗಲೂ ಕೂಡ ಅಲ್ಲಿನ ಜನರು ಕೊರೊನಾ ಲಸಿಕೆ ಸಿಗುವ ನಿರೀಕ್ಷೆ ಹೊತ್ತು, ತಮ್ಮ ಪಾಲಿನ ದೊಡ್ಡಣ್ಣ ವಿಶ್ವಸಂಸ್ಥೆ ಕಡೆ ದೃಷ್ಟಿ ನೆಟ್ಟಿದ್ದಾರೆ. ಆದರೆ ಈ ಬಾರಿಯೂ ಸಹಾಯ ಸಿಗುತ್ತಾ ಅಥವಾ 2ನೇ ಅಲೆಯ ರೂಪದಲ್ಲಿ ಕೊರೊನಾ ಶಾಕ್ ಕೊಡುತ್ತಾ ಕಾದು ನೋಡಬೇಕಿದೆ.

English summary
African countries have feared about Corona 2nd wave after slowdown of vaccine supply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X