• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಫ್ರಿಕಾ ಬಿಟ್ಟು ತೊಲಗಿದ ಡೆಡ್ಲಿ ಪೋಲಿಯೋ ವೈರಸ್..!

|

ದಶಕಗಳ ಕಾಲ ಪೋಲಿಯೋ ಕೂಪದಲ್ಲಿ ನರಳಾಡಿದ್ದ ಆಫ್ರಿಕಾ ಖಂಡ ಮಹಾಮಾರಿಯ ವಿರುದ್ಧ ಗೆದ್ದುಬೀಗಿದೆ. 20 ಲಕ್ಷ ಮಕ್ಕಳನ್ನು ಪಾರ್ಶ್ವವಾಯು ರೋಗಕ್ಕೆ ತುತ್ತು ಮಾಡಿದ್ದ ಡೆಡ್ಲಿ ಪೋಲಿಯೋ ವೈರಸ್ ಕಡೆಗೂ ಆಫ್ರಿಕಾ ಖಂಡ ಬಿಟ್ಟು ತೊಲಗಿದೆ. ಈ ಗೆಲುವಿನ ಶ್ರೇಯಸ್ಸು ನೆಲ್ಸನ್ ಮಂಡೇಲಾ ಅವರಿಗೂ ಸಲ್ಲಬೇಕಿದೆ.

2 ದಶಕದ ಹಿಂದೆ ನೆಲ್ಸನ್ ಮಂಡೇಲಾ ಪೋಲಿಯೋ ತೊಲಗಿಸಲು ಕೈಗೊಂಡಿದ್ದ ಕ್ರಮಗಳೇ ಇಂದು ಆಫ್ರಿಕಾ ಖಂಡಕ್ಕೆ ಡೆಡ್ಲಿ ಪೋಲಿಯೋದಿಂದ ರಿಲೀಫ್ ಕೊಟ್ಟಿದೆ. ಆದರೂ ಭೂಮಿ ಮೇಲೆ ಪೋಲಿಯೋ ವೈರಸ್ ಇನ್ನೂ ಜೀವಂತವಾಗಿದೆ. ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ದೇಶಗಳನ್ನು ಈಗಲೂ ಪೋಲಿಯೋ ಕಾಡುತ್ತಿದೆ.

ಕೊವಿಡ್19ನಿಂದ ಬಚಾವಾದ 114ರ ವೃದ್ಧ, ಚಿಕಿತ್ಸೆ ರಹಸ್ಯವೇನು?

ಆಫ್ರಿಕಾ ಖಂಡದ 47 ರಾಷ್ಟ್ರಗಳ ಪೈಕಿ ಕಳೆದ 4 ವರ್ಷಗಳಿಂದ ಎಲ್ಲಿಯೂ ಪೋಲಿಯೋ ಅಟ್ಯಾಕ್ ಆಗಿಲ್ಲ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಆಫ್ರಿಕಾದಿಂದ ಪೋಲಿಯೋ ತೊಲಗಿರುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. 2016ರ ಆಗಸ್ಟ್ ತಿಂಗಳಲ್ಲಿ ಆಫ್ರಿಕಾದ ನೈಜೀರಿಯಾದಲ್ಲಿ ಕೊನೆಯಬಾರಿಗೆ ಪೋಲಿಯೋ ವೈರಸ್ ಪ್ರಕರಣ ಪತ್ತೆಯಾಗಿತ್ತು.

ಅದನ್ನು ಹೊರತುಪಡಿಸಿದರೆ, ಅಲ್ಲಿಂದ ಇಲ್ಲಿಯವರೆಗೂ ಪೋಲಿಯೋ ಕೇಸುಗಳು ಕಂಡುಬಂದಿಲ್ಲ. ಹೀಗಾಗಿಯೇ ಆಫ್ರಿಕಾ ಪೋಲಿಯೋ ಮುಕ್ತ ಎಂಬ ಹೆಗ್ಗಳಿಕೆ ಪಡೆದಿದೆ. ಇನ್ನು ಆಫ್ರಿಕಾ ರಾಷ್ಟ್ರಗಳ ಈ ಸಾಧನೆಗೆ ವಿಶ್ವದಾದ್ಯಂತ ಅಭಿನಂದನೆ ವ್ಯಕ್ತವಾಗಿದ್ದು, ಈ ಸಾಧನೆಯ ಹಿಂದಿರುವ ಆರೋಗ್ಯ ಕಾರ್ಯಕರ್ತರಿಗೆ ಶಹಬ್ಬಾಸ್ ಹೇಳಲೇಬೇಕಿದೆ.

ಉಗ್ರರ ಭಯ, ದಾರಿಯೇ ಇಲ್ಲದ ಊರುಗಳು..!

ಉಗ್ರರ ಭಯ, ದಾರಿಯೇ ಇಲ್ಲದ ಊರುಗಳು..!

ಆಫ್ರಿಕಾ 2 ದಶಕಗಳ ಹಿಂದೆ ಪೋಲಿಯೋ ಸೋಂಕಿನಿಂದ ತತ್ತರಿಸಿತ್ತು. ಆ ಹೊತ್ತಲ್ಲಿ ಸೋಂಕಿತರಿಗೆ ಸರಿಯಾಗಿ ಲಸಿಕೆ ಕೂಡ ಸಿಗುತ್ತಿರಲಿಲ್ಲ. ಆದರೆ ನೆಲ್ಸನ್ ಮಂಡೇಲಾ ಅವರ ದೂರದೃಷ್ಟಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಶ್ರಮದಿಂದ ಆಫ್ರಿಕಾದಲ್ಲಿ ಲಸಿಕೆ ಉತ್ಪಾದನೆ ಪ್ರಮಾಣ ಹೆಚ್ಚು ಮಾಡಲಾಗಿತ್ತು. ಇನ್ನು ಉತ್ಪಾದನೆಯಾದ ಲಸಿಕೆಗಳನ್ನು ಸೂಕ್ತವಾಗಿ ಜನರಿಗೆ ತಲುಪಿಸಲು ಹರಸಾಹಸ ನಡೆದಿತ್ತು.

ಆಫ್ರಿಕಾ ಖಂಡದ ಕೆಲ ರಾಷ್ಟ್ರಗಳಲ್ಲಿ ಉಗ್ರವಾದ ಇನ್ನೂ ಬೇರುಬಿಟ್ಟಿದೆ. ಅದರಲ್ಲೂ ನೈಜೀರಿಯಾದಲ್ಲಿ ಬೋಕೋ ಹರಾಂ ಉಗ್ರರ ಉಪಟಳ ಭಾರಿ ಪ್ರಮಾಣದಲ್ಲಿದೆ. ಇಂತಹ ಸಂದಿಗ್ಧವಾದ ಪರಿಸ್ಥಿತಿಯಲ್ಲೂ ಲಸಿಕೆ ತಲುಪಿಸಿದವರು ಆರೋಗ್ಯ ಕಾರ್ಯಕರ್ತರು. ಬೋಕೋ ಹರಾಮಿಗಳ ಭಯದ ಜೊತೆಯಲ್ಲೇ ಅದೆಷ್ಟೋ ಜಾಗಗಳಿಗೆ ಸರಿಯಾದ ಸಾರಿಗೆ ವ್ಯವಸ್ಥೆಯೇ ಇರಲಿಲ್ಲ. ಇದನ್ನೆಲ್ಲಾ ಮೆಟ್ಟಿನಿಂತು ಲಸಿಕೆ ತಲುಪಿಸಿದ ಕೀರ್ತಿ ಆಫ್ರಿಕಾದ ಆರೋಗ್ಯ ಕಾರ್ಯಕರ್ತರಿಗೆ ಸಲ್ಲಬೇಕಿದೆ. ಇವರ ಈ ಪ್ರಯತ್ನವೇ ಇಂದಿನ ಸಾಧನೆಗೆ ಕಾರಣ.

ಆಫ್ರಿಕಾದಲ್ಲಿ ಹಬ್ಬಿವೆ ಹಲವು ಸೋಂಕುಗಳು..!

ಆಫ್ರಿಕಾದಲ್ಲಿ ಹಬ್ಬಿವೆ ಹಲವು ಸೋಂಕುಗಳು..!

ಮಾನವನ ಉಗಮ ಸ್ಥಾನ ಎಂದೇ ಕರೆಯುವ ಆಫ್ರಿಕಾ ಖಂಡ, ಹಲವಾರು ವೈರಸ್ಗಳನ್ನೂ ತನ್ನೊಡಲಲ್ಲಿ ಬೆಳೆಸಿದೆ. ಜಗತ್ತನ್ನು ಇಂದಿಗೂ ಕಾಡುತ್ತಿರುವ ಮಹಾಮಾರಿ ಏಡ್ಸ್ ಪತ್ತೆಯಾಗಿದ್ದು ಕೂಡ ಆಫ್ರಿಕಾದಲ್ಲೇ. ಹಾಗೇ ಇತ್ತೀಚೇಗಷ್ಟೇ ಎಬೋಲಾ ಎಂಬ ಸೋಂಕು ಕೂಡ ಆಫ್ರಿಕಾದಲ್ಲಿ ಜನ್ಮತಾಳಿ ಭಯ ಹುಟ್ಟಿಸಿತ್ತು. ಇಂದಿಗೂ ಆಫ್ರಿಕಾ ಎಬೋಲಾ ಮುಕ್ತವಾಗಿಲ್ಲ. ಎಬೋಲಾ ಸೋಂಕು ಆಫ್ರಿಕಾ ಖಂಡವನ್ನು ಇಂದಿಗೂ ಬಾಧಿಸುತ್ತಿದೆ. ಅಲ್ಲದೆ ಜಗತ್ತಿನಲ್ಲೇ ಅತಿಹೆಚ್ಚು ಏಡ್ಸ್ ಸೋಂಕಿತರು ಇರುವುದು ಆಫ್ರಿಕಾ ಖಂಡದಲ್ಲೇ. ಹೀಗೆ ಮಾನವ ಜನ್ಮತಾಳಿದ ಜಾಗದಲ್ಲೇ ಹತ್ತಾರು ವೈರಸುಗಳು ಕೂಡ ಉಗಮಿಸಿವೆ. ಅದರಲ್ಲಿ ಇನ್ನೂ ಹಲವು ವೈರಸ್ಗಳು ಈಗಲೂ ಜಗತ್ತನ್ನು ಕಾಡುತ್ತಿರುವುದು ಆತಂಕದ ಸಂಗತಿ.

ವಿಶ್ವ ಪೋಲಿಯೋ ದಿನ: ಭಾರತ ಇನ್ನೂ ಪೋಲಿಯೋ ಪೀಡಿತ ದೇಶಗಳ ಪಟ್ಟಿಯಲ್ಲಿದೆ

ಪೋಲಿಯೋ ಮತ್ತೆ ಬರೋದಿಲ್ವಾ..?

ಪೋಲಿಯೋ ಮತ್ತೆ ಬರೋದಿಲ್ವಾ..?

ಈಗತಾನೆ ಪೋಲಿಯೋ ಮುಕ್ತವಾಗಿರುವ ಆಫ್ರಿಕಾ ಖಂಡದ ರಾಷ್ಟ್ರಗಳು ಮೈಮರೆತು ಕೂರುವಂತಿಲ್ಲ. ಏಕೆಂದರೆ ಡೆಡ್ಲಿ ಪೋಲಿಯೋ ವೈರಸ್ ಮತ್ತೆ ಆಫ್ರಿಕಾ ಖಂಡವನ್ನು ಆವರಿಸಿಬಿಡುವ ಸಾಧ್ಯತೆ ಇದೆ. 2001ರಲ್ಲಿ ಅಂಗೋಲಾ ಕೂಡ ಪೋಲಿಯೋ ಮುಕ್ತವಾಗಿತ್ತು. ಆದರೆ 2005ರ ನಂತರ ಅಂದರೆ 4 ವರ್ಷಗಳ ಬಳಿಕ ಅಂಗೋಲಾದಲ್ಲಿ ಮತ್ತೊಮ್ಮೆ ಪೋಲಿಯೋ ಪತ್ತೆಯಾಗಿತ್ತು. ಹೊರ ದೇಶದಿಂದ ಅಂಗೋಲಾ ರಾಷ್ಟ್ರಕ್ಕೆ ಮತ್ತೆ ಪೋಲಿಯೋ ಎಂಟ್ರಿ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ, ಈ ಎರಡೂ ರಾಷ್ಟ್ರಗಳಲ್ಲೂ ಪೋಲಿಯೋ ವೈರಸ್ ಇನ್ನೂ ಜೀವಂತವಾಗಿದೆ. ಹೀಗಾಗಿ ಆಫ್ರಿಕಾ ಖಂಡಕ್ಕೆ ಪೋಲಿಯೋ ರೀ ಎಂಟ್ರಿ ಕೊಟ್ಟರೂ ಕೊಡಬಹುದು.

ಲಸಿಕೆ ಒಂದೇ ಮದ್ದು..!

ಲಸಿಕೆ ಒಂದೇ ಮದ್ದು..!

ಇನ್ನು ಪೋಲಿಯೋ ಬಾರದಂತೆ ತಡೆಯಲು ಆಫ್ರಿಕಾ ಖಂಡದ ರಾಷ್ಟ್ರಗಳು ತನ್ನ ಪ್ರಜೆಗಳಿಗೆ ಸರಿಯಾಗಿ ಲಸಿಕೆಯನ್ನು ಪೂರೈಸಬೇಕಿದೆ. ಜನರಲ್ಲಿ ಪೋಲಿಯೋ ವಿರುದ್ಧದ ಇಮ್ಯೂನ್ ಪವರ್ ಹೆಚ್ಚು ಮಾಡಬೇಕಿದೆ. ಹೀಗೆ ಇಮ್ಯೂನ್ ಪವರ್ ಹೆಚ್ಚಾದರೆ, ಆಫ್ರಿಕಾ ಖಂಡಕ್ಕೆ ಇನ್ನೊಮ್ಮೆ ಪೋಲಿಯೋ ಎಂಟ್ರಿ ಕೊಡುವುದಿಲ್ಲ ಎಂದು ಧೈರ್ಯವಾಗಿ ಹೇಳಬಹುದು. ಆದರೆ ಈಗ ಮತ್ತೆ ಎಚ್ಚರ ತಪ್ಪಿದರೆ, ಆಫ್ರಿಕಾ ಮತ್ತೊಮ್ಮೆ ಪೋಲಿಯೋ ಬಿರುಗಾಳಿ ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಈ ಎಚ್ಚರಿಕೆಯನ್ನ ವಿಶ್ವ ಆರೋಗ್ಯ ಸಂಸ್ಥೆ ಕೂಡ ಆಫ್ರಿಕಾದ ರಾಷ್ಟ್ರಗಳಿಗೆ ನೀಡಿದೆ.

ಆಫ್ರಿಕಾದಲ್ಲಿ ನಿಗೂಢ ರೀತಿಯಲ್ಲಿ 350 ಆನೆಗಳ ಮರಣ!

English summary
In a historic public health achievement, the 47 nations of the World Health Organization's Africa region were certified to be free of wild poliovirus. The declaration comes four years after the continent reported its last case of wild poliovirus, in Nigeria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X