ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಅನ್ನಕ್ಕಾಗಿ ಹಾಹಾಕಾರ; ಹಸಿವಿನಲ್ಲಿ ಅರ್ಧ ಜನರು

|
Google Oneindia Kannada News

ಕಾಬೂಲ್, ಮೇ 11: ತಾಲಿಬಾನ್ ಆಡಳಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ದಾಖಲೆ ಮಟ್ಟದಲ್ಲಿ ಹಸಿವು ಇದೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯೊಂದು ಹೇಳಿದೆ. ಅಫ್ಘಾನಿಸ್ತಾನ ಜನಸಂಖ್ಯೆಯ ಅರ್ಧಭಾಗದಷ್ಟು ಜನರು ತೀರಾ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಯೋಜನೆ (United Nations WFP- World Food Programme) ಸಂಸ್ಥೆಯ ವರದಿ ಹೇಳುತ್ತಿದೆ.

ಅಫ್ಘಾನಿಸ್ತಾನದಲ್ಲಿ ಅರ್ಧದಷ್ಟು ಜನರು ತೀರಾ ಹಸಿವಿನಿಂದ ಬಳಲುತ್ತಿದ್ದಾರೆ. ಬರ ಪರಿಸ್ಥಿತಿ ನಿರೀಕ್ಷೆ ಮೀರಿ ದೀರ್ಘವಾಗಿದೆ. ಆರ್ಥಿಕ ಬಿಕ್ಕಟ್ಟು ಚಿಂತಾಜನಕ ಸ್ಥಿತಿಯಲ್ಲಿದೆ. ಇದು ಅಫ್ಘಾನಿಸ್ತಾನದ ಕೋಟ್ಯಂತರ ಜನರ ಜೀವನವನ್ನು ನರಕವಾಗಿಸುತ್ತಿದೆ ಎಂಬಂತಹ ಆತಂಕಕಾರಿ ಸಂಗತಿಯನ್ನು ವಿಶ್ವಸಂಸ್ಥೆಯ ಡಬ್ಲ್ಯೂಎಫ್‌ಪಿ ತಿಳಿಸಿದೆ.

ಅಫ್ಘಾನಿಸ್ತಾನ: ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ಕಡ್ಡಾಯ!ಅಫ್ಘಾನಿಸ್ತಾನ: ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ಕಡ್ಡಾಯ!

"2022ರ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಸಲಾದ ಅಧ್ಯಯನವೊಂದರ ಪ್ರಕಾರ 1.97 ಕೋಟಿ ಜನರು (ಇದು ಅಫ್ಘಾನಿಸ್ತಾನ ಜನಸಂಖ್ಯೆಯ ಬಹುತೇಕ ಅರ್ಧಭಾಗ) ಭಾರೀ ಹಸಿವೆಯ ಪರಿಸ್ಥಿತಿ ಎದುರಿಸುತ್ತಿದ್ದಾರೆ" ಎಂದು ಹೇಳಲಾಗಿದೆ.

Nearly Half Population of Afghanistan in Acute Hunger, Says UN WFP

ವಿಶ್ವಸಂಸ್ಥೆಯ ವಿವಿಧ ಅಂಗಸಂಸ್ಥೆಗಳದ ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ), ವಿಶ್ವ ಆರೋಗ್ಯ ಯೋಜನೆ (UN WFP) ಹಾಗು ಇತರ ಹಲವು ಎನ್‌ಜಿಒಗಳು ಒಳಗೊಂಡಂತೆ ಆಹಾರ ಭದ್ರತೆ ಮತ್ತು ಕೃಷಿ ಸಮೂಹ (Food Security and Agriculture Cluster) ದಿಂದ ಈ ಅಧ್ಯಯನ ನಡೆದಿರುವುದು ತಿಳಿದುಬಂದಿದೆ.

"ಕೆಲವೆಡೆಯಿಂದ ಬಂದ ನೆರವಿನಿಂದಾಗಿ ಚಳಿಗಾಲ ಸಂದರ್ಭದಲ್ಲಿ ದೊಡ್ಡ ಬಿಕ್ಕಟ್ಟು ತಪ್ಪಿದೆ. ಆದರೂ ದೇಶಾದ್ಯಂತ ಜನರು ಹಸಿವಿನಿಂದ ಬಳಲುವ ಪರಿಸ್ಥಿತಿ ಮಾತ್ತ ತಪ್ಪಲಿಲ್ಲ" ಎಂದು ಟೋಲೊ ನ್ಯೂಸ್ ವರದಿ ಮಾಡಿದೆ.

ಅಫ್ಘಾನಿಸ್ತಾನ ಬಾಂಬ್ ಸ್ಫೋಟದಲ್ಲಿ 33 ಸಾವು, 41 ಮಂದಿಗೆ ಗಾಯಅಫ್ಘಾನಿಸ್ತಾನ ಬಾಂಬ್ ಸ್ಫೋಟದಲ್ಲಿ 33 ಸಾವು, 41 ಮಂದಿಗೆ ಗಾಯ

ಈ ವರ್ಷದ ಜೂನ್‌ನಿಂದ ನವೆಂಬರ್‌ವರೆಗಿನ ಅವಧಿ ಅಫ್ಘಾನಿಸ್ತಾನ ಪಾಲಿಗೆ ತುಸು ಆಶಾದಾಯಕವಾಗಿದೆಯಂತೆ. ಇಲ್ಲಿನ ಆಹಾರ ಭದ್ರತೆ ಪರಿಸ್ಥಿತಿ ಸ್ವಲ್ಪ ಸುಧಾರಿಸಲಿದ್ದು, ತೀರಾ ಹಸಿವೆಯಿಂದ ಬಳಲುವ ಜನರ ಸಂಖ್ಯೆಯಲ್ಲಿ 8 ಲಕ್ಷ ಕಡಿಮೆ ಆಗಲಿದೆಯಂತೆ. ಅಂದರೆ, ಈ ಅವಧಿಯಲ್ಲಿ 1.89 ಕೋಟಿ ಜನರು ಹಸಿವೆಯಿಂದ ಬಳಲಬಹುದು ಎಂಬ ಅಂದಾಜು ಮಾಡಲಾಗಿದೆ.

Nearly Half Population of Afghanistan in Acute Hunger, Says UN WFP

ಜಾಗತಿಕವಾಗಿಯೂ ಆಹಾರ ಅಭದ್ರತೆ:
ಯುಎನ್ ವಿಶ್ವ ಆಹಾರ ಯೋಜನೆ ಸಂಸ್ಥೆ ಪ್ರಕಾರ ವಿಶ್ವಾದ್ಯಂತ 53 ದೇಶಗಳ 19.3 ಕೋಟಿ ಜನರು ಅತೀವ ಆಹಾರ ಭದ್ರತೆ ಎದುರಿಸುತ್ತಿದ್ದಾರೆ. ಇದು 2021ರ ಅಂಕಿ ಅಂಶ. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹಸಿವೆಯಿಂದ ಬಳಲುತ್ತಿರುವ ಸಂಖ್ಯೆಯಲ್ಲಿ ಶೇ. 25ರಷ್ಟು ಹೆಚ್ಚಳವಾಗಿದೆ. ಇದು ರಷ್ಯಾ-ಉಕ್ರೇನ್ ಯುದ್ಧಕ್ಕಿಂತ ಮುಂಚೆ ಇದ್ದ ಪರಿಸ್ಥಿತಿ. ಈಗ ಯುದ್ಧದಿಂದ ಬಡತನ ಮತ್ತು ಹಸಿವೆ ಪ್ರಮಾಣ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ.

ಅತೀವ ಬಡತನ ಎಂದರೆ?
ಒಬ್ಬ ವ್ಯಕ್ತಿಗೆ ಆತನ ದೇಹಕ್ಕೆ ಅಗತ್ಯ ಇರುವಷ್ಟು ಆಹಾರ ಸಿಗದೇ ಹೋದರೆ ಅದನ್ನು ಅತೀವ ಆಹಾರ ಅಭದ್ರತೆ ಎಂದು ಪರಿಗಣಿಸಲಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Nearly 2 crore people in Afghanistan are in acute hunger, says United Nations World Food Programme Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X