ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರೇ ಎಚ್ಚರ: ಈ ದೇಶದಲ್ಲಿ ನೀವು 72 ಕೀ.ಮೀಗಿಂತ ದೂರ ಒಂಟಿಯಾಗಿ ಪ್ರಯಾಣಿಸುವಂತಿಲ್ಲ!

|
Google Oneindia Kannada News

ಕಾಬೂಲ್, ಡಿಸೆಂಬರ್ 27: ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿರುವ ತಾಲಿಬಾನಿಗಳು ಮಹಿಳೆಯರ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸುತ್ತಿದ್ದಾರೆ. ಆಪ್ತ ಬಂಧು ಅಥವಾ ಪುರುಷ ಸಂಬಂಧಿಯ ಹೊರತಾಗಿ ಮಹಿಳೆಯರು ಯಾವುದೇ ಕಾರಣಕ್ಕೂ ದೂರದ ರಸ್ತೆ ಪ್ರವಾಸ ಮಾಡುವಂತಿಲ್ಲ ಎಂದು ಹೊಸ ನಿಯಮಗಳನ್ನು ಜಾರಿಗೊಳಿಸಿದ್ದಾರೆ.

ಹಿಜಾಬ್ ಧರಿಸದ ಮಹಿಳೆಯರ ಪ್ರಯಾಣಕ್ಕೆ ವಾಹನ ಮಾಲೀಕರು ಅನುಮತಿಸುವಂತಿಲ್ಲ ಎಂದು ತಾಲಿಬಾನ್ ಸರ್ಕಾರದ ಸದ್ಗುಣ ಪ್ರಚಾರ ಮತ್ತು ಅನೀತಿ ನಿಯಂತ್ರಣ ಸಚಿವಾಲಯವು ಹೊಸ ಮಾರ್ಗಸೂಚಿಯಲ್ಲಿ ಕಟ್ಟಪ್ಪಣೆ ಹೊರಡಿಸಿದೆ.

ಕಳೆದ ಆಗಸ್ಟ್ 15ರಂದು ಅಧಿಕಾರಕ್ಕೆ ಏರಿದ ತಾಲಿಬಾನ್ ಸರ್ಕಾರವು ಮಹಿಳೆಯರ ಮೇಲೆ ಹಲವು ನಿರ್ಬಂಧಗಳನ್ನು ಹೇರುತ್ತಾ ಬಂದಿದೆ. ಈ ಮೊದಲು ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಉದ್ಯೋಗಕ್ಕೆ ಹೋಗುವುದನ್ನು ನಿರ್ಬಂಧಿಸಲಾಗಿದ್ದು, ತದನಂತರದಲ್ಲಿ ಹೈಸ್ಕೂಲ್ ನಂತರದಲ್ಲಿ ಮಹಿಳೆಯರಿಗೆ ಹೆಚ್ಚಿನ ಶಿಕ್ಷಣಕ್ಕೆ ತಡೆ ನೀಡಲಾಯಿತು. ಇದರ ಬೆನ್ನಲ್ಲೇ ಈಗ ಮಹಿಳೆಯರ ದೂರದ ಪ್ರವಾಸಕ್ಕೂ ನಿಯಂತ್ರಣ ವಿಧಿಸಲು ತಾಲಿಬಾನ್ ಸರ್ಕಾರ ಮುಂದಾಗಿದೆ.

72 ಕಿ.ಮೀಗಿಂತ ಹೆಚ್ಚು ದೂರ ಕ್ರಮಿಸುವಂತಿಲ್ಲ ಮಹಿಳೆ!

72 ಕಿ.ಮೀಗಿಂತ ಹೆಚ್ಚು ದೂರ ಕ್ರಮಿಸುವಂತಿಲ್ಲ ಮಹಿಳೆ!

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಒಂಟಿಯಾಗಿ ದೂರದ ಊರಿಗೆ ಪ್ರಯಾಣ ಮಾಡುವಂತಿಲ್ಲ. ಕುಟುಂಬದ ಒಬ್ಬ ಪುರುಷ ಸದಸ್ಯರ ಹೊರತಾಗಿ ಮಹಿಳೆಯರು ರಸ್ತೆ ಪ್ರಯಾಣದಿಂದ ದೂರ ಇರಬೇಕು. ಒಂಟಿಯಾಗಿ ಮಹಿಳೆಯರು 72 ಕಿ.ಮೀಟರ್ ವ್ಯಾಪ್ತಿಯಲ್ಲಿ ಪ್ರಯಾಣಿಸುವುದಕ್ಕೆ ಅನುಮತಿಯಿದೆ. ಆದರೆ 72 ಕಿಲೋ ಮೀಟರ್ ಗಿಂತ ದೂರದ ಊರಿಗೆ ಹೋಗಬೇಕಾಗಿದ್ದಲ್ಲಿ, ಅಂಥ ಸಂದರ್ಭದಲ್ಲಿ ಕುಟುಂಬದ ಒಬ್ಬ ಪುರುಷ ಸದಸ್ಯರು ಜೊತೆಗೆ ಇರುವುದನ್ನು ಕಡ್ಡಾಯಗೊಳಿಸಲಾಗಿದೆ," ಎಂದು ಸಚಿವಾಲಯದ ವಕ್ತಾರ ಸಾದಿಕ್ ಆಕಿಫ್ ಮುಹಾಜಿರ್ ಹೇಳಿದ್ದಾರೆ.

ಮಹಿಳೆಯರಿಗೆ ಹಿಜಾಬ್ ಅತ್ಯಗತ್ಯ ಎಂದ ಮುಹಾಜಿರ್

ಮಹಿಳೆಯರಿಗೆ ಹಿಜಾಬ್ ಅತ್ಯಗತ್ಯ ಎಂದ ಮುಹಾಜಿರ್

ದೂರದ ಊರಿಗೆ ಪ್ರಯಾಣಿಸುವ ಮಹಿಳೆಯರಿಗೆ ಇಸ್ಲಾಮಿಕ್ ಶಿರಸ್ತ್ರಾಣವಾದ ಹಿಜಾಬ್ ಕೂಡ ಅಗತ್ಯವಾಗಿರುತ್ತದೆ ಎಂದು ಮುಹಾಜಿರ್ ತಿಳಿಸಿದ್ದಾರೆ. ಹಿಜಾಬ್‌ನ ತಾಲಿಬಾನ್‌ನ ವ್ಯಾಖ್ಯಾನವಾಗಿದ್ದು; ಇದು ಕೂದಲಿನ ಹೊದಿಕೆಯಿಂದ ಮುಖದ ಮುಸುಕು ಅಥವಾ ಪೂರ್ಣ-ದೇಹದ ಹೊದಿಕೆಯವರೆಗೆ ಇರುತ್ತದೆ. ಹೆಚ್ಚಿನ ಅಫ್ಘಾನ್ ಮಹಿಳೆಯರು ಈಗಾಗಲೇ ಈ ಶಿರಸ್ತ್ರಾಣವನ್ನು ಧರಿಸುತ್ತಿದ್ದಾರೆ.

ವಾಹನಗಳಲ್ಲಿ ಹಾಡುಗಳನ್ನು ಹಾಕುವಂತಿಲ್ಲ ಎಂಬ ಆದೇಶ

ವಾಹನಗಳಲ್ಲಿ ಹಾಡುಗಳನ್ನು ಹಾಕುವಂತಿಲ್ಲ ಎಂಬ ಆದೇಶ

ಅಫ್ಘಾನಿಸ್ತಾನ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಮಾರ್ಗಸೂಚಿ ಪ್ರಕಾರ, ದೇಶದ ಸಾರ್ವಜನಿಕವಾಗಿ ವಾಹನಗಳಲ್ಲಿ ಹಾಡುಗಳನ್ನು ಹಾಕುವಂತಿಲ್ಲ ಎಂದು ಹೇಳಲಾಗಿದೆ. ಕಳೆದ ವಾರವಷ್ಟೇ ಟಿವಿ ಚಾನೆಲ್ ಗಳಲ್ಲಿ ನಾಟಕಗಳನ್ನು ಪ್ರದರ್ಶಿಸುವುದು, ಸೋಪ್ ಜಾಹೀರಾತುಗಳಲ್ಲಿ ಮಹಿಳೆಯರನ್ನು ಬಳಸಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಸುದ್ದಿ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರೂ ಸಹ ಶಿರೋವಸ್ತ್ರವನ್ನು ಧರಿಸವುದು ಕಡ್ಡಾಯ ಎಂದು ತಾಲಿಬಾನ್ ಸರ್ಕಾರ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೊಳಿಸಿತ್ತು.

"ಅಫ್ಘಾನ್ ಸರ್ಕಾರದಿಂದ ಮಹಿಳೆಯರಿಗೆ ದಿಗ್ಬಂಧನ"

"ಈ ಹೊಸ ಆದೇಶವು ಮೂಲಭೂತವಾಗಿ ಮಹಿಳೆಯರನ್ನು ಕೈದಿಗಳನ್ನಾಗಿ ಮಾಡುವ ದಿಕ್ಕಿನಲ್ಲಿ ಸಾಗಿದೆ. ಇದರಿಂದ ಮಹಿಳೆಯರು ಮುಕ್ತವಾಗಿ ಚಲಿಸಲು, ಇನ್ನೊಂದು ನಗರಕ್ಕೆ ಪ್ರಯಾಣಿಸಲು, ವ್ಯಾಪಾರ ಮಾಡಲು, (ಅಥವಾ) ಅವರು ಮನೆಯಲ್ಲಿ ಹಿಂಸೆಯನ್ನು ಎದುರಿಸುತ್ತಿದ್ದರೆ ಪಲಾಯನ ಮಾಡಲು ಸಾಧ್ಯವಾಗುವ ಅವಕಾಶಗಳನ್ನು ಮುಚ್ಚುತ್ತದೆ," ಎಂದು ಮಹಿಳಾ ಹಕ್ಕುಗಳ ಸಹಾಯಕ ನಿರ್ದೇಶಕ ಹೀದರ್ ಬಾರ್ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ತಾಲಿಬಾನ್ ತಮ್ಮ ಸರ್ವೋಚ್ಚ ನಾಯಕನ ಹೆಸರಿನಲ್ಲಿ ಮಹಿಳಾ ಹಕ್ಕುಗಳನ್ನು ಜಾರಿಗೊಳಿಸಲು ಸರ್ಕಾರಕ್ಕೆ ಸೂಚಿಸುವ ಆದೇಶವನ್ನು ಹೊರಡಿಸಿತು, ಆದರೆ ಅದರಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ.

ಅಫ್ಘಾನಿಸ್ತಾನದಲ್ಲಿ ಷರಿಯಾ ಕಾನೂನಿನ ನೆರಳು

ಅಫ್ಘಾನಿಸ್ತಾನದಲ್ಲಿ ಷರಿಯಾ ಕಾನೂನಿನ ನೆರಳು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಈ ಹಿಂದೆ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಇದೇ ಷರಿಯಾ ಕಾನೂನುಗಳನ್ನು ಪಾಲನೆ ಮಾಡಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಸಾರ್ವಜನಿಕರ ಮರಣ ದಂಡನೆ, ಕೋಲುಗಳಿಂದ ಬಲವಾಗಿ ಹೊಡೆಯುವುದು, ಕೈ-ಕಾಲುಗಳನ್ನು ಛಿದ್ರಗೊಳಿಸುವುದು, ಹೀಗೆ ಒಂದಕ್ಕಿಂತ ಒಂದು ಶಿಕ್ಷೆಯ ವಿಧಾನ ಘೋರವಾಗಿತ್ತು. ಜನರನ್ನು ತಿದ್ದುವುದಕ್ಕಾಗಿ ಇರುವ ಇಸ್ಲಾಮಿಕ್ ಕಾನೂನುಗಳನ್ನು ಉಲ್ಲಂಘಿಸಿ ಅತಿರೇಕದ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಚಿಕ್ಕದಾಗಿ ಗಡ್ಡ ಬಿಟ್ಟ ಪುರುಷರಿಗೆ ಶಿಕ್ಷೆ ನೀಡುವುದು ಒಂದು ವಿಧಾನವಾಗಿತ್ತು. ಆದರೆ ಮಹಿಳೆಯರಿಗೆ ತೀರಾ ಮುಜುಗರ ಉಂಟು ಮಾಡುವಂತಾ ಶಿಕ್ಷೆಗಳನ್ನು ಈ ಕಾನೂನುಗಳಡಿಯಲ್ಲಿ ನೀಡಲಾಗುತ್ತಿತ್ತು. ಮಹಿಳೆಯರು ಧರಿಸುವ ಬಟ್ಟೆಯಿಂದ ಹಿಡಿದು ನಡವಳಿಕೆವರೆಗೂ ಪ್ರತಿಯೊಂದಕ್ಕೂ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದವರಿಗೆ ಸಾರ್ವಜನಿಕವಾಗಿ ಹಿಂಸೆ ನೀಡಲಾಗುತ್ತಿತ್ತು.

ಈ ಹಿಂದೆ 1990ರ ದಶಕದಲ್ಲಿ ತಾಲಿಬಾನ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸಲಾಯಿತು. ಅವರು ಮುಖವನ್ನು ಮುಚ್ಚುವ ಬುರ್ಖಾ ಉಡುಪನ್ನು ಧರಿಸುವಂತೆ ಒತ್ತಾಯಿಸಲಾಯಿತು, ಕೇವಲ ಪುರುಷ ಚಾಪೆರೋನ್‌ನೊಂದಿಗೆ ಮನೆಯಿಂದ ಹೊರಹೋಗಲು ಮತ್ತು ಕೆಲಸ ಮತ್ತು ಶಿಕ್ಷಣದಿಂದ ನಿಷೇಧಿಸಲಾಯಿತು. ಈ ಚಳಿಗಾಲದಲ್ಲಿ ಅಫ್ಘಾನಿಸ್ತಾನವು "ಹಸಿವಿನ ನೋವನ್ನು ತೀವ್ರವಾಗಿ ಎದುರಿಸಲಿದೆ ಎಂದು ಯುಎನ್ ಎಚ್ಚರಿಸಿದೆ, 22 ಮಿಲಿಯನ್ ನಾಗರಿಕರು "ತೀವ್ರ" ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಅಂದಾಜಿಸಿದೆ.

English summary
The Taliban says Afghan women cannot go on long-distance road trips unless accompanied by a close male relative. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X