ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬ್ ದಾಳಿಯಲ್ಲಿ ಅಫ್ಘಾನ್ ಉಪಾಧ್ಯಕ್ಷ ಜಸ್ಟ್ ಮಿಸ್..!

|
Google Oneindia Kannada News

ಕಾಬೂಲ್, ಸೆ.9: ಅಫ್ಘಾನಿಸ್ತಾನ ರಾಜಧಾನಿಯಲ್ಲಿ ಉಗ್ರರು ಮತ್ತೆ ನೆತ್ತರು ಹರಿಸಿದ್ದಾರೆ. ಅಫ್ಘಾನ್‌ ಉಪಾಧ್ಯಕ್ಷರನ್ನೇ ಟಾರ್ಗೆಟ್ ಮಾಡಿ ನಡೆಸಿರುವ ಬಾಂಬ್ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರ ಪರಿಸ್ಥಿತಿ ಚಿಂತಾಜನಕವಾಗಿದೆ.

ಘಟನೆಯಲ್ಲಿ ಅಫ್ಘಾನ್‌ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕೆಲ ತಿಂಗಳ ಹಿಂದೆ ಅಫ್ಘಾನಿಸ್ತಾನ ಪಾರ್ಲಿಮೆಂಟ್ ಅನ್ನೇ ಟಾರ್ಗೆಟ್ ಮಾಡಿ ಉಗ್ರರು ಸೂಸೈಡ್ ಬಾಂಬ್ ದಾಳಿ ನಡೆಸಿದ್ದರು. ಇದೀಗ ಉಪಾಧ್ಯಕ್ಷರನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿದ್ದಾರೆ. ಆದರೆ ಈವರೆಗೂ ಯಾವುದೇ ಉಗ್ರ ಸಂಘಟನೆ ಘಟನೆಯ ಹೊಣೆ ಹೊತ್ತುಕೊಂಡಿಲ್ಲ.

ಘಟನೆಯ ಭೀಕರತೆಗೆ ಸಾಕ್ಷಿ ಎಂಬಂತೆ ಬಾಂಬ್ ಸ್ಫೋಟಗೊಂಡಿರುವ ಜಾಗದ ನೂರಾರು ಮೀಟರ್ ಸುತ್ತ ಎಲ್ಲವೂ ಛಿದ್ರ ಛಿದ್ರವಾಗಿದೆ. ಸ್ಫೋಟದ ಸದ್ದು ಕೇಳುತ್ತಲೇ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ತಕ್ಷಣ ಅಫ್ಘಾನ್‌ ಉಪಾಧ್ಯಕ್ಷರ ಬೆಂಗಾವಲು ವಾಹನಗಳು ರಕ್ಷಣೆಗೆ ದಾವಿಸಿದ್ದು, ಅಮ್ರುಲ್ಲಾ ಸಲೇಹ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಯಿತು. ಘಟನೆಯಲ್ಲಿ ಮೃತಪಟ್ಟ ಕೆಲವರ ದೇಹಗಳಂತೂ ಛಿದ್ರ ಛಿದ್ರವಾಗಿದ್ದವು.

ಅಫ್ಘಾನ್‌ ಜನರಿಗೆ ನೆಮ್ಮದಿಯೇ ಇಲ್ಲ

ಅಫ್ಘಾನ್‌ ಜನರಿಗೆ ನೆಮ್ಮದಿಯೇ ಇಲ್ಲ

ಬ್ರಿಟಿಷರಿಂದ ಅಫ್ಘಾನ್‌ 1919ರಲ್ಲೇ ಸ್ವಾತಂತ್ರ್ಯ ಪಡೆದಿದೆ. ಇದು ಭಾರತಕ್ಕಿಂತಲೂ ಮೊದಲು. ಆದರೂ ಅಲ್ಲಿ ಶಾಂತಿ ನೆಲೆಸಿಲ್ಲ. ಸದ್ಯದಮಟ್ಟಿಗೆ ಅಫ್ಘಾನ್‌ ಸ್ಥಿತಿ ಹೇಗಿದೆ ಎಂದರೆ, ಧೈರ್ಯವಾಗಿ ಎಲ್ಲೂ ಹೊರಗೆ ಹೋಗಲು ಸಾಧ್ಯವಿಲ್ಲ. ಯಾವ ಕ್ಷಣದಲ್ಲಿ ಉಗ್ರಪಡೆ ಗುಂಡಿನ ಮಳೆಗರೆಯುತ್ತೋ, ಬಾಂಬ್ ಹಾಕುತ್ತೋ ಎಂಬ ಭಯ ಕಾಡುತ್ತಿರುತ್ತದೆ. ಅಫ್ಘಾನ್‌ನಲ್ಲಿ ದಿನಕ್ಕೆ ಒಂದಾದರೂ ಹಿಂಸೆ ನಡೆಸದಿದ್ದರೆ ತಾಲಿಬಾನ್ ಉಗ್ರರಿಗೆ ನಿದ್ದೆಯೇ ಬರೋದಿಲ್ಲ. ಈಗಾಗಲೇ ಲಕ್ಷಾಂತರ ಜನರು ತಾಲಿಬಾನಿಗಳ ದಾಳಿಗೆ ಬಲಿಯಾಗಿದ್ದಾರೆ. ಉಗ್ರರ ಉಪಟಳಕ್ಕೆ ಬ್ರೇಕ್ ಹಾಕಲು ಅಶ್ರಫ್ ಘನಿ ಸರ್ಕಾರ ಪರದಾಡುತ್ತಿದೆ. ಇಷ್ಟೆಲ್ಲದರ ಮಧ್ಯೆ ಉಪಾಧ್ಯಕ್ಷರನ್ನೇ ಟಾರ್ಗೆಟ್ ಮಾಡಿ ದಾಳಿ ನಡೆದಿರುವುದು ಆತಂಕ ತೀವ್ರಗೊಳಿಸಿದೆ. ಸಹಜವಾಗಿಯೇ ಈ ದಾಳಿಯ ಹುನ್ನಾರದ ಹಿಂದೆ ತಾಲಿಬಾನಿ ಉಗ್ರರು ಇದ್ದಾರೆ ಎಂಬ ಗುಮಾನಿ ಮೂಡಿದೆ.

100ಕ್ಕೂ ಹೆಚ್ಚು ಉಗ್ರರು ರಿಲೀಸ್..!

100ಕ್ಕೂ ಹೆಚ್ಚು ಉಗ್ರರು ರಿಲೀಸ್..!

ತಾಲಿಬಾನ್ ಜೊತೆ ಅಫ್ಘಾನ್‌ ಸಂಘರ್ಷ ಇಂದು, ನಿನ್ನೆಯದಲ್ಲ. ಹಲವು ದಶಕಗಳಿಂದಲೂ ಉಗ್ರರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದೇ ಅಫ್ಘಾನಿಸ್ತಾನ ನಲುಗಿಹೋಗಿದೆ. ಅಫ್ಘಾನ್‌ನಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ತಾಲಿಬಾನ್ ಎದುರು ಮಂಡಿಯೂರುವ ಸ್ಥಿತಿ ಇದೆ. ಈಗಿನ ಅಧ್ಯಕ್ಷ ಅಶ್ರಫ್ ಘನಿ ಅವಕಾಶ ಸಿಕ್ಕಾಗಲೆಲ್ಲಾ ತಾಲಿಬಾನ್ ಜೊತೆ ಚರ್ಚೆಗೆ ಮುಂದಾಗುತ್ತಿದ್ದಾರೆ. ಆದರೆ ಯಾವುದೂ ಸರಿಹೋಗಿಲ್ಲ.

ಜೈಲಿನಿಂದ ಬಿಡುಗಡೆಗೊಂಡ ಉಗ್ರರ ಉಪಟಳ

ಜೈಲಿನಿಂದ ಬಿಡುಗಡೆಗೊಂಡ ಉಗ್ರರ ಉಪಟಳ

ಕಳೆದ ತಿಂಗಳು 100ಕ್ಕೂ ಹೆಚ್ಚು ತಾಲಿಬಾನಿ ಉಗ್ರರನ್ನು ಇದೇ ಅಶ್ರಫ್ ಘನಿ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿ ಕಳುಹಿಸಿತ್ತು. ಉಗ್ರರನ್ನು ರಿಲೀಸ್ ಮಾಡಿದ ನಂತರ ತಾಲಿಬಾನ್ ಮತ್ತೆ ತನ್ನ ಬುದ್ಧಿ ತೋರಿಸಿತ್ತು. ಅಶ್ರಫ್ ಘನಿ ಅಧ್ಯಕ್ಷ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದ ತಾಲಿಬಾನಿ ನಾಯಕರು, ಮತ್ತೊಮ್ಮೆ ಅಫ್ಘಾನ್‌ನಲ್ಲಿ ರಕ್ತದೋಕುಳಿ ಹರಿಸಿದ್ದರು. ಬಳಿಕ ಐವರು ತಾಲಿಬಾನಿಗಳನ್ನು ಅಫ್ಘಾನ್‌ ಭದ್ರತಾ ಪಡೆ ಹೊಡೆದುರುಳಿಸಿತ್ತು. ಈ ಘಟನೆ ಮಾಸುವ ಮುನ್ನವೇ ಉಗ್ರರು ಮತ್ತೊಮ್ಮೆ ನೆತ್ತರು ಹರಿಸಿದ್ದಾರೆ.

ಟ್ರಂಪ್ ಸಂಧಾನವೂ ವಿಫಲವಾಗಿತ್ತು..!

ಟ್ರಂಪ್ ಸಂಧಾನವೂ ವಿಫಲವಾಗಿತ್ತು..!

ತಾಲಿಬಾನಿ ನಾಯಕರ ಜೊತೆ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ಚರ್ಚೆ ನಡೆಸಲು ಮುಂದಾಗಿದ್ದರು. ಅಲ್ಲದೆ ತಾಲಿಬಾನಿಗಳು ಒಳ್ಳೆಯವರು ಎಂದು ಟ್ರಂಪ್ ಹೇಳಿದ್ದರು. ಆದರೆ ಅಫ್ಘಾನ್‌ ಸರ್ಕಾರದ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಉಗ್ರರ ಜೊತೆ ಮಾತುಕತೆ ನಡೆಸಿದ್ದಕ್ಕೆ ಅಮೆರಿಕದ ವಿರುದ್ಧ ಅಶ್ರಫ್ ಘನಿ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಇದೆಲ್ಲಾ ನಡೆದು ಕೆಲವೇ ದಿನಗಳು ಕಳೆಯುವ ಒಳಗಾಗಿ ಅಮೆರಿಕದ ಸೈನಿಕರನ್ನೇ ತಾಲಿಬಾನ್ ಉಗ್ರರು ಕೊಂದು ಹಾಕಿದ್ದರು. ಈ ದಾಳಿ ನಂತರ ಅಮೆರಿಕ ಹಾಗೂ ತಾಲಿಬಾನ್ ನಡುವಿನ ಮಾತುಕತೆಯೇ ಮುರಿದುಬಿದ್ದಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲೇ ಅಫ್ಘಾನ್‌ನಲ್ಲಿ ಮತ್ತೆ ತಾಲಿಬಾನಿಗಳು ಬಾಲ ಬಿಚ್ಚಿದ್ದಾರೆ.

English summary
Afghanistan's vice president Amrullah Saleh sustained minor injuries when his convoy was targeted in Kabul in an explosion that killed at least 10 people and wounded a 15 more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X