ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ತಾಲಿಬಾನ್ ಉಗ್ರರಿಗೆ ಬೆದರಿ ವಿಮಾನ ಹತ್ತೋದು ಹೀಗಾ!?

|
Google Oneindia Kannada News

ಕಾಬೂಲ್, ಆಗಸ್ಟ್ 16: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ಹಿಡಿತ ಸಾಧಿಸಿಕೊಂಡಿರುವ ತಾಲಿಬಾನ್ ತನ್ನು ರೌದ್ರಾವತಾರ ತೋರುವುದಕ್ಕೆ ಶುರುವಿಟ್ಟುಕೊಂಡಿದೆ. ಉಗ್ರರ ಪಾಶದಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯಾಣಿಕರು ಸಾಗರೋಪಾದಿಯಲ್ಲಿ ದೇಶ ತೊರೆಯಲು ನಿಂತಿದ್ದಾರೆ.

Recommended Video

ತಾಲಿಬಾನಿಗಳ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಜನ | Oneindia Kannada

ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ವಿಮಾನಗಳನ್ನು ಏರುವುದಕ್ಕೆ ಮುಗಿ ಬೀಳುತ್ತಿರುವ ದೃಶ್ಯ, ಇಂದು ಅಫ್ಘಾನಿಸ್ತಾನದಲ್ಲಿ ಸೃಷ್ಟಿಯಾಗಿರುವ ಸನ್ನಿವೇಶಕ್ಕೆ ಹಿಡಿದ ಕೈಗನ್ನಡಿ ಆಗಿದೆ.

ತಾಲಿಬಾನ್ ಪಾರುಪತ್ಯ: ಅಫ್ಘಾನ್ ಗದ್ದುಗೆ ಬಿಟ್ಟು ಇಳಿದ ಅಧ್ಯಕ್ಷ ಅಶ್ರಫ್ ಘನಿ! ತಾಲಿಬಾನ್ ಪಾರುಪತ್ಯ: ಅಫ್ಘಾನ್ ಗದ್ದುಗೆ ಬಿಟ್ಟು ಇಳಿದ ಅಧ್ಯಕ್ಷ ಅಶ್ರಫ್ ಘನಿ!

ಅಫ್ಘಾನಿಸ್ತಾನದಿಂದ ಹೊರಟು ನಿಂತ ಸಾವಿರಾರು ಪ್ರಯಾಣಿಕರ ಮೇಲೆ ತಾಲಿಬಾನ್ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿದ್ದು, ಗುಂಡಿನ ದಾಳಿಯಲ್ಲಿ ಮೂವರಿಗಿಂತ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಏರುವುದಕ್ಕೆ ಪ್ರಯಾಣಿಕರು ಯಾವ ರೀತಿ ಮುಗಿ ಬೀಳುತ್ತಿದ್ದಾರೆ ಎನ್ನುವುದನ್ನು ಸಾರಿ ಹೇಳುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೊಂದು ದಿಕ್ಕಿನಲ್ಲಿ ಅಫ್ಘಾನಿಸ್ತಾನದಿಂದ ತನ್ನ ಪ್ರಜೆಗಳನ್ನು ಕರೆಸಿಕೊಳ್ಳುವುದಕ್ಕೆ ಅಮೆರಿಕಾ ವಿಶೇಷ ವ್ಯವಸ್ಥೆ ಕಲ್ಪಿಸಿದೆ. ಈ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ಕಾಬೂಲ್‌ನಲ್ಲಿ ವಿಮಾನ ಏರುವುದಕ್ಕೆ ಪ್ರಯಾಣಿಕರ ಪೈಪೋಟಿ

ತಾಲಿಬಾನ್ ಉಗ್ರರಿಗೆ ಅಫ್ಘಾನಿಸ್ತಾನದಲ್ಲಿ ಸಾರ್ವಜನಿಕರು ಎಷ್ಟರ ಮಟ್ಟಿಗೆ ಹೆದರಿ ಹೈರಾಣಾಗಿದ್ದಾರೆ ಎನ್ನುವುದಕ್ಕೆ ರಾಜಧಾನಿ ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೇ ಸಾಕ್ಷಿಯಾಗಿತ್ತು. ಅಫ್ಘಾನಿಸ್ತಾನದಿಂದ ಬೇರೆ ರಾಷ್ಟ್ರಗಳಿಗೆ ಹಾರುವ ಕೆಲವೇ ಕೆಲವು ವಿಮಾನಗಳಲ್ಲಿ ದೇಶ ತೊರೆಯುವುದಕ್ಕಾಗಿ ಜನರು ಮುಗಿ ಬಿದ್ದರು. ವಿಮಾನ ಏರುವುದಕ್ಕೆ ಜನರು ಹರಸಾಹಸ ಪಡುತ್ತಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸಾಕಷ್ಟು ವೈರಲ್ ಆಗುತ್ತಿದೆ.

ದೇಶದಿಂದಲೇ ಪಲಾಯನ ಮಾಡಿರುವ ಅಧ್ಯಕ್ಷ ಅಶ್ರಫ್ ಘನಿ

ತಾಲಿಬಾನ್ ಉಗ್ರರು ಕಾಬೂಲ್ ಮೇಲೆ ಹಿಡಿತ ಸಾಧಿಸುತ್ತಿದ್ದಂತೆ ಗದ್ದುಗೆಯನ್ನು ತೊರೆದ ಅಧ್ಯಕ್ಷ ಅಶ್ರಫ್ ಘನಿ ರಾಜಧಾನಿಯಿಂದ ಕಾಲ್ಕಿತ್ತಿದ್ದಾರೆ. ಮೂಲಗಳ ಪ್ರಕಾರ, ಅವರು ದೇಶದಿಂದಲೇ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯ ತಿಳಿಯುದ್ದಂತೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದರು. ವಿದೇಶಗಳಿಗೆ ಹಾರುವ ವಿಮಾನಗಳನ್ನು ಏರುವುದಕ್ಕೆ ಮುಗಿ ಬಿದ್ದರು.

ಯುಎಸ್ ಪ್ರಜೆಗಳನ್ನು ಕರೆದೊಯ್ಯಲು ಸೇನಾ ಪಡೆ

ಯುಎಸ್ ಪ್ರಜೆಗಳನ್ನು ಕರೆದೊಯ್ಯಲು ಸೇನಾ ಪಡೆ

ಅಫ್ಘಾನಿಸ್ತಾನದಲ್ಲಿ ವಾಸವಿದ್ದ ಅಮೆರಿಕಾದ ಪ್ರಜೆಗಳು ಮತ್ತು ಅವರ ಸಂಬಂಧಿಕರು ಹಾಗೂ ಸ್ನೇಹಿತರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ನಿಟ್ಟಿನಲ್ಲಿ ಯುಎಸ್ ಕ್ರಮ ತೆಗೆದುಕೊಂಡಿದೆ. ಅಮೆರಿಕಾದಿಂದ 6,000 ಸೇನಾ ಪಡೆಯನ್ನು ಕಾಬೂಲ್ ವಿಮಾನ ನಿಲ್ದಾಣಕ್ಕೆ ಕಳುಹಿಸಿ ಕೊಡಲಾಗಿದೆ. ಯುಎಸ್ ಮಿಲಿಟರಿ ಕಾಬೂಲ್ ವಿಮಾನ ನಿಲ್ದಾಣದ ಪರಿಧಿಯನ್ನು ಭದ್ರಪಡಿಸಿದ್ದು, ಇದರಿಂದ ಫ್ರಾನ್ಸ್‌ನಂತಹ ಕೆಲವು ದೇಶಗಳ ದೂತಾವಾಸ ಸಿಬ್ಬಂದಿಗೂ ಸಹಾಯವಾಗಲಿದೆ.

ಅಮೆರಿಕನ್ ಪ್ರಜೆಗಳನ್ನು ಮುಟ್ಟಿದ್ರೆ ಹುಷಾರ್ ಎಂದಿದ್ದ ಬೈಡನ್

ಅಮೆರಿಕನ್ ಪ್ರಜೆಗಳನ್ನು ಮುಟ್ಟಿದ್ರೆ ಹುಷಾರ್ ಎಂದಿದ್ದ ಬೈಡನ್

ತಾಲಿಬಾನ್ ಮುಷ್ಠಿಗೆ ಸಿಲುಕಿರುವ ಪ್ರದೇಶಗಳಿಂದ ಅಮೆರಿಕಾದ ಅಧಿಕಾರಿಗಳು ಮತ್ತು ಪ್ರಜೆಗಳನ್ನು ಸ್ಥಳಾಂತರಿಸಲು ಜೋ ಬೈಡನ್ ತೀರ್ಮಾನಿಸಿದ್ದಾರೆ. ಈ ಸ್ಥಳಾಂತರ ಪ್ರಕ್ರಿಯೆ ವೇಳೆ ಅಡ್ಡಿಪಡಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ತಾಲಿಬಾನ್ ಸಂಘಟನೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಫ್ಘಾನಿಸ್ತಾನದ ಜೊತೆಗೆ ಮಾಡಿಕೊಂಡ 20 ವರ್ಷಗಳ ಒಪ್ಪಂದ ಅಂತ್ಯಗೊಂಡ ಹಿನ್ನೆಲೆ ಆ ದೇಶದಲ್ಲಿರುವ ತಮ್ಮವರನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. "ಸ್ಥಳಾಂತರ ಪ್ರಕ್ರಿಯೆ ನಡೆಸುವುದಕ್ಕೆ 3,000 ದಿಂದ ಸುಮಾರು 5,000 ಭದ್ರಾತ ಸಿಬ್ಬಂದಿಯನ್ನು ರವಾನಿಸಲಾಗಿದೆ. ಅಲ್ಲಿ ಯುಎಸ್ ಸೇನಾ ಕಾರ್ಯಾಚರಣೆಗೆ ಯಾವುದೇ ರೀತಿಯ ಅಡ್ಡಿ-ಆತಂಕಗಳು ಎದುರಾದಲ್ಲಿ ಯುಎಸ್ ಸೇನಾ ಪಡೆಗಳಿಂದ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ, ಎಂದು ತಾಲಿಬಾನ್ ಸಂಘಟನೆಗೆ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದರು.

ಅಫ್ಘಾನ್ ಮೂಲಕ ವಿಮಾನ ಹಾರಾಟಕ್ಕೆ ನಿರ್ಬಂಧಿಸಿದ ದೇಶಗಳು

ಅಫ್ಘಾನ್ ಮೂಲಕ ವಿಮಾನ ಹಾರಾಟಕ್ಕೆ ನಿರ್ಬಂಧಿಸಿದ ದೇಶಗಳು

ಭಾನುವಾರ ಕಾಬೂಲ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿರುವ ಹಿನ್ನೆಲೆ ಈ ಮಾರ್ಗದಲ್ಲಿ ನಾಗರಿಕ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅಸೋಸಿಯೇಷನ್ ತಿಳಿಸಿದ. ಇದರ ಹೊರತಾಗಿ ಇನ್ನು ಮುಂದೆ ಯುನೈಟೆಡ್ ಏರ್ ಲೈನ್ಸ್, ಬ್ರಿಟೀಷ್ ಏರ್ ವೇಸ್ ಮತ್ತು ವರ್ಜಿನ್ ಅಟ್ಲಾಂಟಿಕ್ ವಿಮಾನಗಳ ಮಾರ್ಗ ಬದಲಾವಣೆಗೆ ಚಿಂತಿಸಲಾಗುತ್ತಿದೆ. ಅಫ್ಘಾನ್ ಮೇಲೆ ಹಾರುತ್ತಿದ್ದ ವಿಮಾನಗಳ ಮಾರ್ಗ ಬದಲಾವಣೆಗೆ ನಿರ್ಧರಿಸಲಾಗುತ್ತಿದೆ.

English summary
Afghanistan-Taliban Crisis: Three killed in gunfire at Kabul airport after Hundreds Jostle To Board Plane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X