ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ರಾಷ್ಟ್ರ ಎರಡು ಸರ್ಕಾರ: ತಾಲಿಬಾನ್ ಜೊತೆಗೆ ಸರ್ಕಾರ ರಚನೆಯಲ್ಲೂ ಎನ್ಆರ್ಎಫ್ ಜಿದ್ದು!

|
Google Oneindia Kannada News

ಕಾಬೂಲ್, ಸಪ್ಟೆಂಬರ್ 8: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಘೋಷಣೆ ನಂತರವೂ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಜೊತೆಗಿನ ಸಂಘರ್ಷ ಮುಂದುವರಿದಿದೆ. ಇನ್ನೊಂದು ವಾರದಲ್ಲೇ ರೆಸಿಸ್ಟೆನ್ಸ್ ಫ್ರಂಟ್ ತನ್ನದೇ ಆದ ಸಮಾಂತರ ಸರ್ಕಾರವನ್ನು ಘೋಷಿಸುವ ಸುಳಿವು ನೀಡಿದೆ.

ತಾಲಿಬಾನ್ ಸರ್ಕಾರವನ್ನು ಕಾನೂನುಬಾಹಿರ ಎಂದು ಕರೆದಿರುವ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್(ಎನ್ಆರ್ಎಫ್) ಇನ್ನೊಂದು ವಾರದಲ್ಲಿ ತಾಲಿಬಾನಿಗಳಿಗೆ ಸಮಾನಾಂತರವಾದ ಸರ್ಕಾರವನ್ನು ಘೋಷಿಸುವ ಸಾಧ್ಯತೆಯಿದೆ.

ಭಾರತದಲ್ಲಿ ಕಳವಳ ಸೃಷ್ಟಿಸಿರುವುದು ಏಕೆ ಆ ತಾಲಿಬಾನ್ ಸರ್ಕಾರ!? ಭಾರತದಲ್ಲಿ ಕಳವಳ ಸೃಷ್ಟಿಸಿರುವುದು ಏಕೆ ಆ ತಾಲಿಬಾನ್ ಸರ್ಕಾರ!?

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸ್ವಾಧೀನವನ್ನು ವಿರೋಧಿಸಿರುವ ಪಂಜ್‌ಶಿರ್ ಪ್ರಾಂತ್ಯದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಸಹ-ಸಂಸ್ಥಾಪಕ ಅಹ್ಮದ್ ಮಸೂದ್, ಜನರ ಮತಗಳ ಆಧಾರದ ಮೇಲೆ ರೂಪುಗೊಂಡ ಪ್ರಜಾಪ್ರಭುತ್ವ ಮತ್ತು ಕಾನೂನುಬದ್ಧ ಸರ್ಕಾರವನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ತಾಲಿಬಾನ್‌ನ ಕಾನೂನುಬಾಹಿರ ಸರ್ಕಾರದ ಆಡಳಿತವು ವೈರತ್ವ ಗುಂಪಿನ ಸ್ಪಷ್ಟ ಸಂದೇಶ ಸಾರುತ್ತದೆ. ಅಫ್ಘಾನಿಸ್ತಾನದ ಪ್ರದೇಶ ಮತ್ತು ಪ್ರಪಂಚದ ಸ್ಥಿರತೆ ಹಾಗೂ ಭದ್ರತೆಗೆ ಬೆದರಿಕೆಯೊಡ್ಡುವಂತಿದೆ ಎಂದು ನ್ಯಾಷನಲ್ ರೆಸಿಸ್ಟನ್ಸ್ ಫ್ರಂಟ್ ಹೇಳಿರುವುದಾಗಿ ಖಾಮ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಲಿಬಾನ್ ಸರ್ಕಾರದ ವಿರುದ್ಧ ಸಿಡಿದೇಳಲು ಕರೆ

ತಾಲಿಬಾನ್ ಸರ್ಕಾರದ ವಿರುದ್ಧ ಸಿಡಿದೇಳಲು ಕರೆ

ಅಫ್ಘಾನಿಸ್ತಾನದಲ್ಲಿ ರಚನೆ ಆಗಿರುವ ತಾಲಿಬಾನ್ ಸರ್ಕಾರದ ವಿರುದ್ಧ ದೇಶದ ಜನರು ಸಿಡಿದೇಳಬೇಕು ಎಂದು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಮುಖಂಡ ಅಹ್ಮದ್ ಮಸೂದ್ ವಿಡಿಯೋ ಸಂದೇಶದ ಮೂಲಕ ಕರೆ ನೀಡಿದ್ದರು. ಈ ವಿಡಿಯೋ ಸಂದೇಶದಲ್ಲಿ ವಿಶ್ವಸಂಸ್ಥೆ, ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗ, ಯುರೋಪಿಯನ್ ಒಕ್ಕೂಟ, ಯುರೋಪಿಯನ್ ಒಕ್ಕೂಟದ ಮಾನವಹಕ್ಕುಗಳ ಆಯೋಗ, ಸಾರ್ಕ್, ಶಾಂಘೈ, ಎಸ್‌ಎಆರ್‌ಸಿ, ಇಸಿಒ ಮತ್ತು ಒಐಸಿಗಳಂತಹ ಹಲವಾರು ಜಾಗತಿಕ ಏಜೆನ್ಸಿಗಳು ತಾಲಿಬಾನ್‌ನೊಂದಿಗೆ ಸಹಕರಿಸದಂತೆ ಅವರು ಕೋರಿದ್ದಾರೆ.

ಪಂಜ್ ಶೀರ್ ಪ್ರಾಂತ್ಯ ವಶಕ್ಕೆ ಪಡೆದ ಬಗ್ಗೆ ತಾಲಿಬಾನ್ ಘೋಷಣೆ

ಪಂಜ್ ಶೀರ್ ಪ್ರಾಂತ್ಯ ವಶಕ್ಕೆ ಪಡೆದ ಬಗ್ಗೆ ತಾಲಿಬಾನ್ ಘೋಷಣೆ

ತಾಲಿಬಾನ್ ಸಂಘಟನೆಯು ಪಂಜ್ ಶೀರ್ ಪ್ರಾಂತ್ಯವನ್ನು ಸಹ ಸಂಪೂರ್ಣ ಹತೋಟಿಗೆ ತೆಗೆದುಕೊಂಡಿರುವುದಾಗಿ ಘೋಷಿಸಿದೆ. ಕಾಬೂಲ್ ನಗರದಿಂದ ಉತ್ತರದಲ್ಲಿರುವ ಪಂಜ್ ಶೀರ್ ಪ್ರಾಂತ್ಯವನ್ನು ತಾಲಿಬಾನ್ ವಿರೋಧಿ ಬಣವು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಪಂಜ್ ಶೀರ್ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ತಾಲಿಬಾನ್ ಸಾವಿರಾರು ಭಯೋತ್ಪಾದಕರನ್ನು ಕಳುಹಿಸಿ ಕೊಟ್ಟಿದೆ. ಪಂಜ್ ಶೀರ್ ಪ್ರದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತಿದ್ದು, ಇಡೀ ದೇಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ತಂತ್ರ ರೂಪಿಸಲಾಗುತ್ತಿದೆ.

ಕಳೆದ 1996 ರಿಂದ 2001ರ ಅವಧಿಯಲ್ಲಿ ಸರ್ಕಾರ ರಚಿಸಿ ಆಡಳಿತ ನಡೆಸಿದ ತಾಲಿಬಾನ್, ಪಂಜ್ ಶೀರ್ ಪ್ರಾಂತ್ಯವನ್ನು ಮಾತ್ರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇತ್ತೀಚಿಗೆ ಯುಎಸ್ ಸೇನೆಯು ಅಫ್ಘಾನಿಸ್ತಾನದಿಂದ ವಾಪಸ್ ಆದ ಬೆನ್ನಲ್ಲೇ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ ತಾಲಿಬಾನ್ ನಿಯಂತ್ರಣ ಹೊಂದಿದೆ. ಅದಾಗ್ಯೂ, ಪಂಜ್ ಶೀರ್ ಪ್ರಾಂತ್ಯದಲ್ಲಿ ಮಾತ್ರ ತಾಲಿಬಾನ್ ಸಂಘಟನೆ ವಿರುದ್ಧ ನ್ಯಾಷನಲ್ ರೆಸಿಸ್ಟನ್ಸ್ ಫ್ರೆಂಟ್ ಆಫ್ ಅಫ್ಘಾನಿಸ್ತಾನ ಪ್ರಾಬಲ್ಯವನ್ನು ಸಾಧಿಸುತ್ತಲೇ ಬಂದಿದೆ.

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಿಸಿರುವ ತಾಲಿಬಾನ್

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಿಸಿರುವ ತಾಲಿಬಾನ್

ಅಫ್ಘಾನಿಸ್ತಾನದ ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು 25 ದಿನಗಳೊಳಗೆ ಹೊಸ ಸರ್ಕಾರ ಘೋಷಣೆ ಆಗಿದೆ. ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ 23 ದಿನಗಳ ಹಿಂದೆಯಷ್ಟೇ ಹಿಡಿತ ಸಾಧಿಸಿದ ತಾಲಿಬಾನ್ ಸಂಘಟನೆ ಹೊಸ ಸರ್ಕಾರವನ್ನು ಘೋಷಿಸಿದೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದ ನಾಯಕತ್ವವನ್ನು ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೆಗಲಿಗೆ ವಹಿಸಲಾಗಿದೆ. ತಾಲಿಬಾನ್ ಮತ್ತು ಹಕ್ಕಾನಿ ನಡುವಿನ ಭಿನ್ನಾಭಿಪ್ರಾಯಗಳ ನಡುವೆ ಮುಲ್ಲಾ ಹಸನ್ ಅಖುಂದಾರನ್ನು ಆಯ್ಕೆ ಮಾಡಲಾಗಿದೆ. ತಾಲಿಬಾನ್ ಸಂಘಟನೆ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನವನ್ನು ನೀಡಲಾಗಿದೆ. ಅಬ್ದುಲ್ ಬರಾದರ್ ಮೊದಲ ಉಪ ಪ್ರಧಾನಿಯಾಗಿದ್ದು, ಮಾವ್ಲವಿ ಹನ್ನಾಫಿ ಎರಡನೇ ಉಪ ಪ್ರಧಾನಿ ಆಗಿದ್ದಾರೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದಲ್ಲಿ 33 ಸಚಿವರಿಗೆ ಸ್ಥಾನ ನೀಡಲಾಗಿದೆ.

ಅಫ್ಘಾನ್ ಸರ್ಕಾರದಲ್ಲಿ ಹಕ್ಕಾನಿ ನಾಯಕನಿಗೂ ಸಚಿವಗಿರಿ

ಅಫ್ಘಾನ್ ಸರ್ಕಾರದಲ್ಲಿ ಹಕ್ಕಾನಿ ನಾಯಕನಿಗೂ ಸಚಿವಗಿರಿ

ಸೋವಿಯತ್ ವಿರೋಧಿ ಜಿಹಾದ್‌ನ ಪ್ರಸಿದ್ಧ ಕಮಾಂಡರ್ ಪುತ್ರನಾಗಿ ತಾಲಿಬಾನ್‌ನ ಉಪ ನಾಯಕ ಮತ್ತು ಶಕ್ತಿಯುತ ಹಕ್ಕಾನಿ ಜಾಲದ ಮುಖ್ಯಸ್ಥರಾಗಿ ಸಿರಾಜುದ್ದೀನ್ ಹಕ್ಕಾನಿ ಪ್ರಬಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರನ್ನು ಆಂತರಿಕ ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ. ಹಕ್ಕಾನಿ ಜಾಲವು ಯುಎಸ್ ನಿಯೋಜಿತ ಭಯೋತ್ಪಾದಕ ಗುಂಪಾಗಿದ್ದು, ಇದನ್ನು ಅಫ್ಘಾನಿಸ್ತಾನದಲ್ಲಿ ಅತ್ಯಂತ ಅಪಾಯಕಾರಿ ಭಯೋತ್ಪಾದಕ ಗುಂಪು ಎಂದು ಪರಿಗಣಿಸಲಾಗುತ್ತದೆ. ಆತ್ಮಾಹುತಿ ಬಾಂಬರ್‌ಗಳ ಬಳಕೆಯಲ್ಲಿ ಈ ಜಾಲವು ಅತ್ಯಂತ ಕುಖ್ಯಾತಿಯನ್ನು ಪಡೆದಿದೆ. ಕಳೆದ ಕೆಲವು ವರ್ಷಗಳಲ್ಲಿ ಕಾಬೂಲ್‌ನಲ್ಲಿ ನಡೆದ ಭೀಕರ ದಾಳಿಗಳಲ್ಲಿ ಈ ಜಾಲದ ಕೈವಾಡವಿರುವ ಶಂಕೆಯಿದೆ.

ತಮ್ಮ ಸ್ವಾತಂತ್ರ್ಯ, ಹೋರಾಟದ ಚಾಣಾಕ್ಷತೆ ಮತ್ತು ಜಾಣತನದ ವ್ಯಾಪಾರ ವ್ಯವಹಾರಗಳಿಗೆ ಹೆಸರುವಾಸಿಯಾಗಿರುವ ಹಕ್ಕಾನಿಗಳು ಮುಖ್ಯವಾಗಿ ಪೂರ್ವ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದಾರೆ ಮತ್ತು ತಾಲಿಬಾನ್ ನಾಯಕತ್ವ ಮಂಡಳಿಯ ಮೇಲೆ ಗಣನೀಯ ಹಿಡಿತ ಹೊಂದಿದ್ದಾರೆ.

English summary
Afghanistan’s Taliban Rule Illegitimate; Resistance Front Likely To Announce Parallel Govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X