• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯರಿಗೆ ಧನ್ಯವಾದ ತಿಳಿಸಿದ ಅಫ್ಘಾನಿಸ್ತಾನ ಅಧ್ಯಕ್ಷ

|

ಕಾಬುಲ್, ಏಪ್ರಿಲ್ 20: ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಟ್ವಿಟ್ಟರ್ ಖಾತೆಯ ಮೂಲಕ ಭಾರತೀಯರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಭಾರತ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಟ್ಟಿದ್ದು ಥ್ಯಾಂಕು ಎಂದಿದ್ದಾರೆ.

ರಾಜ್ಯದಲ್ಲಿ ಕೊರೊನಾ ತಡೆಯಲು HCQ ಮಾತ್ರೆ ನೀಡುವಂತೆ ICMR ಸೂಚನೆ

''ನನ್ನ ಸ್ನೇಹಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಾಗೂ ಭಾರತದ ಜನರಿಗೆ ಧನ್ಯವಾದ. 5 ಲಕ್ಷ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು 1 ಲಕ್ಷ ಪ್ಯಾರಸಿಟಮಾಲ್ ಮಾತ್ರೆಗಳನ್ನು, 75000 ಮೆಟ್ರಿಕ್ ಟನ್ ಗೋಧಿ, ಅದರ 1 ನೇ ಸರಕು (5,000) ಅಫಘಾನ್ ಜನರನ್ನು ತಲುಪಿದೆ.'' ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

''ಲಭ್ಯತೆ ಹೆಚ್ಚಾದಂತೆ ಔಷಧಿಗಳು ಮತ್ತು ಉಪಕರಣಗಳು ಸೇರಿದಂತೆ ಹೆಚ್ಚಿನ ವಸ್ತುಗಳನ್ನು ಪೂರೈಸುವ ಭಾರತದ ಬದ್ಧತೆಗೆ ಧನ್ಯವಾದಗಳು. ಕೋವಿಡ್ 19ರ ಕಷ್ಟದ ಸಮಯದಲ್ಲಿ, ಮಿತ್ರರಾಷ್ಟ್ರಗಳು ಮತ್ತು ಸ್ನೇಹಿತರ ನಡುವಿನ ನಿಕಟ ಸಹಕಾರವು ಈ ಭೀತಿಯ ವಿರುದ್ಧ ಹೋರಾಡಲು ಮತ್ತು ನಮ್ಮ ಜನರನ್ನು ಉಳಿಸಲು, ನಮ್ಮನ್ನು ಉತ್ತಮಗೊಳಿಸುತ್ತದೆ.'' ಎಂದು ಟ್ವೀಟ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ತಲುಪಿದೆ ಎಂದು ಮೋದಿ ಹಾಗೂ ಭಾರತೀಯರಿಗೆ ಧನ್ಯವಾದ ತಿಳಿಸಿದ್ದರು. ಈಗ ಅಫ್ಘಾನಿಸ್ತಾನದ ಅಧ್ಯಕ್ಷ ಕೂಡ ಭಾರತವನ್ನು ಹೊಗಳಿದ್ದಾರೆ.

English summary
Afghanistan president Ashraf Ghani thanked Narendra Modi for providing 500K tablets of hydroxychloroquine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X