ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ಸರ್ಕಾರವನ್ನು ಪ್ರತಿನಿಧಿಸುವ ಅವಕಾಶಕ್ಕಾಗಿ ಶಿಯಾ ಡಿಮ್ಯಾಂಡ್

|
Google Oneindia Kannada News

ಕಾಬೂಲ್, ಸಪ್ಟೆಂಬರ್ 14: ಅಫ್ಘಾನಿಸ್ತಾನದಲ್ಲಿ ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಪತನವಾಗಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ದೇಶದಲ್ಲಿ ಬಹುಸಂಖ್ಯಾತರಲ್ಲಿ ಗುರುತಿಸಿಕೊಂಡಿರುವ ಶಿಯಾ ಸಮುದಾಯದ ನಾಯಕರನ್ನು ತಾಲಿಬಾನ್ ಸರ್ಕಾರದಲ್ಲಿ ಸೇರಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ ರನ್ನು ಶಿಯಾ ಸಮುದಾಯವನ್ನು ಪ್ರತಿನಿಧಿಸುವ ಸದಸ್ಯರೊಬ್ಬರು ಭಾನುವಾರ ಭೇಟಿ ಮಾಡಿದರು. ಶಾಂತಿಯುತ ರೀತಿಯಲ್ಲಿ ಅಧಿಕಾರ ಹಸ್ತಾಂತರ ಸಹಕಾರ ಸಮಿತಿ ಸದಸ್ಯರಾದ ಕರ್ಜಾಯಿ ಜೊತೆಗೆ ಶಿಯಾ ನಾಯಕರು ಈವರೆಗೂ ಎರಡು ಬಾರಿ ಸಭೆ ನಡೆಸಿದ್ದಾರೆ.

ಉಪಗ್ರಹದ ಚಿತ್ರ: ಪಾಕ್ ಗಡಿಯಲ್ಲಿ ನಿಂತ ಸಾವಿರಾರು ಅಫ್ಘನ್ನರು! ಉಪಗ್ರಹದ ಚಿತ್ರ: ಪಾಕ್ ಗಡಿಯಲ್ಲಿ ನಿಂತ ಸಾವಿರಾರು ಅಫ್ಘನ್ನರು!

ಕಳೆದ ಸೆಪ್ಟೆಂಬರ್ 9 ರಂದು, ಕರ್ಜಾಯಿ ಅವರು ಅಫ್ಘಾನಿಸ್ತಾನದ ಶಿಯಾ ಉಲೇಮಾ ಕೌನ್ಸಿಲ್‌ನೊಂದಿಗೆ ಸಮಾಲೋಚನೆ ನಡೆಸಿದ್ದು, ದೇಶದಲ್ಲಿ ಶಾಶ್ವತವಾದ ಶಾಂತಿ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಧಾರ್ಮಿಕ ಅಲ್ಪಸಂಖ್ಯಾತರ ಪ್ರತಿನಿಧಿಗಳು ತಮ್ಮ ಹಕ್ಕುಗಳನ್ನು ಮತ್ತು ರಾಜ್ಯ ಆಡಳಿತದಲ್ಲಿ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವಂತೆ ಕರ್ಜಾಯಿ ಅವರನ್ನು ಕೇಳಿದ್ದರು. ಈ ಹಿಂದೆ ಮಾಜಿ ಅಧ್ಯಕ್ಷರು ಅಫ್ಘಾನಿಸ್ತಾನದ ಆಡಳಿತದಲ್ಲಿ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬ ಅಫ್ಘಾನ್ ಪ್ರಜೆಯೂ ಹಕ್ಕನ್ನು ಹೊಂದಿದ್ದಾರೆ. ತಾಲಿಬಾನ್‌ಗಳು ತಮ್ಮ ಸರ್ಕಾರದಲ್ಲಿ ಅದನ್ನು ಪರಿಗಣಿಸುವಂತೆ ಕರೆ ನೀಡಿದ್ದರು.

ಹೊಸ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೂ ಸ್ಥಾನ ನೀಡಲು ಕರೆ

ಹೊಸ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೂ ಸ್ಥಾನ ನೀಡಲು ಕರೆ

ಅಫ್ಘಾನಿಸ್ತಾನದ ಜನಸಂಖ್ಯೆಯಲ್ಲಿ ಶಿಯಾಗಳು ಶೇ.10ಕ್ಕಿಂತ ಹೆಚ್ಚಾಗಿದ್ದು, ಕೇಂದ್ರ ಮತ್ತು ಉತ್ತರದ ಭಾಗದಲ್ಲಿ ವಾಸವಿರುವ ಹಜಾರಾಸ್ ಅನ್ನು ಪ್ರತಿನಿಧಿಸುತ್ತಾರೆ. ಹಜಾರಾಸ್ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಇರಾನ್, ತಾಲಿಬಾನ್ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೂ ಅವಕಾಶ ನೀಡುವಂತೆ ಕರೆ ನೀಡಿದೆ. ಆದರೆ ಹಜಾರಾಸ್ ಮತ್ತೊಮ್ಮೆ ತಾಲಿಬಾನ್ ಕೆಂಗಣ್ಣಿಗೆ ಗುರಿಯಾದಂತೆ ಗೋಚರಿಸುತ್ತಿದೆ. ಇತ್ತೀಚಿಗೆ ಪ್ರಕಟವಾದ ವರದಿ ಪ್ರಕಾರ, ಮುಂದಾರಕ್ತ ಪ್ರದೇಶದಲ್ಲಿ ನಡೆದ 9 ಮಂದಿ ಹಜಾರಾಸ್ ಕೊಲೆಯ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿದೆ. ಆರು ಮಂದಿಯನ್ನು ಹೊಡೆದು ಕೊಲ್ಲಲಾಗಿದ್ದು, ಮೂವರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ.

ಪಾಕ್ ಕಡೆ ಹಜಾರಾಸ್ ಪಲಾಯನಕ್ಕೆ ಪ್ರೇರಣೆ

ಪಾಕ್ ಕಡೆ ಹಜಾರಾಸ್ ಪಲಾಯನಕ್ಕೆ ಪ್ರೇರಣೆ

ತಾಲಿಬಾನ್ ಸಂಘಟನೆ ನಡೆಸುತ್ತಿರುವ ಉಗ್ರ ದಾಳಿಗಳು ಗಡಿಯಲ್ಲಿ ಹಜಾರಾಸ್ ಸಮುದಾಯದ ಜನರು ಪಲಾಯನ ಮಾಡುವುದಕ್ಕೆ ಪ್ರೇರೇಪಣೆ ನೀಡುತ್ತಿದೆ. ತಾಲಿಬಾನ್ ಸರ್ಕಾರಕ್ಕೆ ಬೆದರಿದ 10,000ಕ್ಕೂ ಹೆಚ್ಚು ಹಜಾರಾಸ್ ಮಂದಿಯು ಪಾಕಿಸ್ತಾನ ಬಲೂಚಿಸ್ತಾನದ ಕ್ವೆಟ್ಟಾಕ್ಕೆ ತೆರಳಿದ್ದಾರೆ. ಅಲ್ಲಿನ ಮಸೀದಿ, ಮದುವೆ ಮತ್ತು ಸಭಾಂಗಣ ಸೇರಿದಂತೆ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ ಎಂದು ವರದಿಗಳಿಂದ ಗೊತ್ತಾಗಿದೆ.

ಅಫ್ಘಾನ್ ಸರ್ಕಾರದಲ್ಲಿ ಹಜಾರಾಸ್ ಸಮುದಾಯಕ್ಕೆ ಸಮಾನತೆ

ಅಫ್ಘಾನ್ ಸರ್ಕಾರದಲ್ಲಿ ಹಜಾರಾಸ್ ಸಮುದಾಯಕ್ಕೆ ಸಮಾನತೆ

ಯುನೈಟೆಡ್ ಸ್ಟೇಟ್ಸ್ ನೇತೃತ್ವದ ಪಡೆಗಳು 2001ರಲ್ಲಿ ತಾಲಿಬಾನ್ ಅನ್ನು ಅಧಿಕಾರದಿಂದ ಹೊರಹಾಕಿದ ನಂತರ 2003ರಲ್ಲಿ ಅಳವಡಿಸಿಕೊಂಡ ಅಫ್ಘಾನಿಸ್ತಾನದ ಹೊಸ ಸಂವಿಧಾನದ ಅಡಿಯಲ್ಲಿ ಹಜಾರರಿಗೆ ಇತರ ಸಮುದಾಯಗಳೊಂದಿಗೆ ಸಮಾನತೆ ನೀಡಲಾಯಿತು. ಇದಕ್ಕೂ ಮುನ್ನ 1998 ರಲ್ಲಿ ಮಜರ್-ಇ-ಷರೀಫ್‌ನಲ್ಲಿ ತಾಲಿಬಾನ್‌ನಿಂದ ಹಲವಾರು ಹಜಾರಗಳನ್ನು ಗಲ್ಲಿಗೇರಿಸಲಾಯಿತು. 2000 ಮತ್ತು 2001ರಲ್ಲಿ ಅಫ್ಘಾನಿಸ್ತಾನದ ಮಧ್ಯ ಬಾಮಿಯನ್ ಪ್ರಾಂತ್ಯದಲ್ಲಿಯೂ ಅವರನ್ನು ಗಲ್ಲಿಗೇರಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ಐಸಿಸ್ ಹಜಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಅನುಷ್ಠಾನಗೊಳಿಸಿದ ತಾಲಿಬಾನ್

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಅನುಷ್ಠಾನಗೊಳಿಸಿದ ತಾಲಿಬಾನ್

ಅಫ್ಘಾನಿಸ್ತಾನದ ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು 25 ದಿನಗಳೊಳಗೆ ಹೊಸ ಸರ್ಕಾರ ಘೋಷಣೆ ಆಗಿದೆ. ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ 23 ದಿನಗಳ ಹಿಂದೆಯಷ್ಟೇ ಹಿಡಿತ ಸಾಧಿಸಿದ ತಾಲಿಬಾನ್ ಸಂಘಟನೆ ಹೊಸ ಸರ್ಕಾರವನ್ನು ಘೋಷಿಸಿದೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದ ನಾಯಕತ್ವವನ್ನು ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೆಗಲಿಗೆ ವಹಿಸಲಾಗಿದೆ. ತಾಲಿಬಾನ್ ಮತ್ತು ಹಕ್ಕಾನಿ ನಡುವಿನ ಭಿನ್ನಾಭಿಪ್ರಾಯಗಳ ನಡುವೆ ಮುಲ್ಲಾ ಹಸನ್ ಅಖುಂದಾರನ್ನು ಆಯ್ಕೆ ಮಾಡಲಾಗಿದೆ. ತಾಲಿಬಾನ್ ಸಂಘಟನೆ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನವನ್ನು ನೀಡಲಾಗಿದೆ. ಅಬ್ದುಲ್ ಬರಾದಾರ್ ಮೊದಲ ಉಪ ಪ್ರಧಾನಿಯಾಗಿದ್ದು, ಮಾವ್ಲವಿ ಹನ್ನಾಫಿ ಎರಡನೇ ಉಪ ಪ್ರಧಾನಿ ಆಗಿದ್ದಾರೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದಲ್ಲಿ 33 ಸಚಿವರಿಗೆ ಸ್ಥಾನ ನೀಡಲಾಗಿದೆ. ಈ 33 ಸಚಿವರಲ್ಲಿ 17 ಮಂದಿ ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿ ಗುರುತಿಸಿಕೊಂಡವರು ಎಂದು ಗೊತ್ತಾಗಿದೆ.

English summary
Afghanistan New Govt: Shia Leaders demand representation in new cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X