• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಫ್ಘಾನಿಸ್ತಾನ ಬಾಂಬ್ ಸ್ಫೋಟದಲ್ಲಿ 33 ಸಾವು, 41 ಮಂದಿಗೆ ಗಾಯ

|
Google Oneindia Kannada News

ಕಾಬೂಲ್, ಏಪ್ರಿಲ್ 23: ಉತ್ತರ ಅಫ್ಘಾನಿಸ್ತಾನದ ಮಸೀದಿ ಮತ್ತು ಧಾರ್ಮಿಕ ಶಾಲೆಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಧಾರ್ಮಿಕ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ 33 ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಂದುಜ್ ಪ್ರಾಂತ್ಯದ ಇಮಾಮ್ ಸಾಹೇಬ್ ಪಟ್ಟಣದಲ್ಲಿ ನಡೆದ ವಿಧ್ವಂಸಕ ಬಾಂಬ್ ಸ್ಫೋಟದ ಸುದ್ದಿಯನ್ನು ಜಬಿಹುಲ್ಲಾ ಮುಜಾಹಿದ್ ಟ್ವೀಟ್ ಮಾಡಿದ್ದಾರೆ. ಬಾಂಬ್ ಸ್ಫೋಟದಲ್ಲಿ 43ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇದರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳೇ ಆಗಿದ್ದಾರೆ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಿಂದ 30 ಮಂದಿ ಸಾವುಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಿಂದ 30 ಮಂದಿ ಸಾವು

ಶುಕ್ರವಾರ ನಡೆದ ಬಾಂಬ್ ಸ್ಫೋಟದ ಹೊಣೆಯನ್ನೂ ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ಆದರೆ ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆಯು ಒಂದು ದಿನದ ಹಿಂದೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳ ಬಗ್ಗೆ ಹೇಳಿಕೊಂಡಿದೆ. ಉತ್ತರದ ಮಜಾರ್-ಎ-ಶರೀಫ್‌ನಲ್ಲಿನ ಶಿಯಾ ಮಸೀದಿಯ ಮೇಲೆ ನಡೆದ ದಾಳಿಯು ಅತ್ಯಂತ ಕೆಟ್ಟದಾಗಿದೆ, ಇದರಿಂದ ಕನಿಷ್ಠ 12 ಶಿಯಾ ಮುಸ್ಲಿಂ ಆರಾಧಕರ ಹತ್ಯೆಯಾಗಿದ್ದು, ಹೆಚ್ಚಿನ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ.

   ಅಂಪೈರ್ ನೋ ಬಾಲ್ ಕೊಟ್ಟಿದ್ರೆ ಸಾಕಿತ್ತು ಕಥೆನೇ ಬೇರೆಯಾಗ್ತಿತ್ತು ಆದ್ರೆ! | Oneindia Kannada

   ಮದರಸಾ ಕಾಂಪೌಂಡ್‌ನಲ್ಲಿ ಸ್ಫೋಟ:
   ಕುಂದುಜ್ ಪ್ರಾಂತೀಯ ಪೊಲೀಸ್ ವಕ್ತಾರರು ಇಮಾಮ್ ಸಾಹೇಬ್‌ನಲ್ಲಿರುವ ಮಸೀದಿ ಮತ್ತು ಮದರಸಾ ಕಾಂಪೌಂಡ್‌ನಲ್ಲಿ ಇಬ್ಬರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಮುಜಾಹಿದ್ ನಂತರ ಹೆಚ್ಚಿನ ಸಾವು-ನೋವುಗಳ ಸಂಖ್ಯೆಯನ್ನು ಟ್ವೀಟ್ ಮಾಡಿ "ನಾವು ಈ ಅಪರಾಧವನ್ನು ಖಂಡಿಸುತ್ತೇವೆ ಹಾಗೂ ಮೃತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
   ಅಫ್ಘಾನಿಸ್ತಾನದಲ್ಲಿ ಇತ್ತೀಚಿಗೆ ಮಾರಣಾಂತಿಕ ಸರಣಿ ದಾಳಿಗಳನ್ನು ನಡೆಸಲಾಗುತ್ತಿದೆ. ಕಳೆದ ಆಗಸ್ಟ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ, ತಾಲಿಬಾನ್ ಖೊರಾಸಾನ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಎಂದು ಕರೆಯಲ್ಪಡುವ ಉನ್ನತ ಇಸ್ಲಾಮಿಕ್ ಸ್ಟೇಟ್ ಅಂಗ-ಸಂಸ್ಥೆಯೊಂದಿಗೆ ಹೋರಾಡುತ್ತಿದೆ. ಅಫ್ಘಾನಿಸ್ತಾನದ ಧಾರ್ಮಿಕವಾಗಿ ಚಾಲಿತ ಸರ್ಕಾರಕ್ಕೆ ಅಪರಿಮಿತ ಭದ್ರತಾ ಸವಾಲಾಗಿದೆ ಎಂದು ಸಾಬೀತಾಗಿದೆ.
   ಕಳೆದ ನವೆಂಬರ್‌ನಲ್ಲಿ ತಾಲಿಬಾನ್‌ನ ಗುಪ್ತಚರ ಘಟಕವು ಪೂರ್ವ ನಂಗರ್‌ಹಾರ್ ಪ್ರಾಂತ್ಯದಲ್ಲಿ ಶಂಕಿತ IS-K ಅಡಗು ತಾಣಗಳ ಮೇಲೆ ವ್ಯಾಪಕ ದಾಳಿ ನಡೆಸಿತು. ಮಜಾರ್-ಎ-ಷರೀಫ್‌ನ ಸಾಯಿ ಡೋಕೆನ್ ಮಸೀದಿಯನ್ನು ಧ್ವಂಸಗೊಳಿಸಿದ ಸ್ಫೋಟಕ ಸಾಧನವನ್ನು ಹಲವು ಪೂಜಾ ಸಾಧನಗಳ ಚೀಲದಲ್ಲಿ ಮರೆಮಾಚಿ ಇರಿಸಲಾಗಿತ್ತು ಎಂದು ಐಎಸ್-ಕೆ ಹೇಳಿದೆ.

   English summary
   Afghanistan Mosque Blast: At Least 33 Dead, 41 People Injured.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X