ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್ ಮಸೀದಿ ಮೇಲೆ ಬಾಂಬ್ ದಾಳಿ, ಅನೇಕ ಮಂದಿ ಸಾವು

|
Google Oneindia Kannada News

ಕಾಬೂಲ್, ಆಗಸ್ಟ್ 18: ಇಲ್ಲಿನ ಮಸೀದಿಯೊಂದರ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಬಾಂಬ್ ಸ್ಫೋಟದಿಂದ ಸುಮಾರು 21 ಮಂದಿ ಮೃತಪಟ್ಟಿರುವ ವರದಿ ಬಂದಿದೆ. ಸುಮಾರು 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ತಾಲಿಬಾನ್ ಗುಪ್ತಚರ ಅಧಿಕಾರಿಯೊಬ್ಬರು ರಾಯಿಟರ್ಸ್ ಸುದ್ದಿ ಸಂಸ್ಥೆ ಜೊತೆ ಮಾತನಾಡಿ, 35 ಜನರು ಗಾಯಗೊಂಡಿದ್ದಾರೆ ಅಥವಾ ಸಾವನ್ನಪ್ಪಿದ್ದಾರೆ ಎಂದು ಹೇಳಿದರು, ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

ಕಾಬೂಲ್‌ನ ಖೈರ್ ಖಾನಾ ಪ್ರದೇಶದಲ್ಲಿ ಬುಧವಾರದ ಸಂಜೆ ನಮಾಜ್ ವೇಳೆ ಸಂಭವಿಸಿದ ಸ್ಫೋಟದಲ್ಲಿ ಮಸೀದಿಯ ಇಮಾಮ್ ಕೂಡಾ ಮೃತಪಟ್ಟಿರುವುದು ಖಚಿತವಾಗಿದೆ.

File photo: Afghanistan has been hit by regular attacks since the Taliban seized power last year

ಕಾಬೂಲ್‌ನ ತುರ್ತು ಆಸ್ಪತ್ರೆಯಲ್ಲಿ ಏಳು ವರ್ಷದ ಮಗು ಸೇರಿದಂತೆ 27 ಮಂದಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಎಂದು ಅಧಿಕೃತ ವರದಿ ಬಂದಿದೆ. ಘಟನೆಯ ಹೊಣೆಯನ್ನು ಇಲ್ಲಿ ತನಕ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ.

ಆಗಸ್ಟ್ 6ರಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಮಸೀದಿಯೊಂದರ ಬಳಿ ಬಾಂಬ್ ಸ್ಫೋಟದಿಂದ 8 ಮಂದಿ ಮೃತಪಟ್ಟು, 18 ಮಂದಿ ಗಾಯಗೊಂಡಿದ್ದರು. ಇದಾದ 15 ದಿನಗಳಲ್ಲೇ ಮತ್ತೊಮ್ಮೆ ಬಾಂಬ್ ಸ್ಫೋಟದ ಸದ್ದು ಕೇಳಿಸಿದೆ.

ಆಗಸ್ಟ್ 2021 ರಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ದೇಶವು ನಿಯಮಿತ ದಾಳಿಗಳಿಂದ ಬಳಲುತ್ತಿದೆ, ಅನೇಕರು "ಇಸ್ಲಾಮಿಕ್ ಸ್ಟೇಟ್" ಗುಂಪಿನಿಂದ ಹೆಚ್ಚಿನ ದಾಳಿ ಸಂಭವಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ, ನಾಗರಿಕರ ಭದ್ರತೆಯನ್ನು ಪುನಃಸ್ಥಾಪಿಸುವ ಭರವಸೆಯನ್ನು ನೀಡಿದ್ದ ತಾಲಿಬಾನ್ ವಿಫಲವಾಗಿದೆ. (Reuters, dpa)

English summary
Police in Afghanistan said there were multiple casualties following a blast at a Kabul mosque. The apparent attack happened during evening prayers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X