ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಹಸಿದ ಹೊಟ್ಟೆಗೆ ಒಂದೇ ಹೊತ್ತಿನ ಹಿಟ್ಟು; ತಾಲಿಬಾನ್ ವಿರುದ್ಧ ಹಸಿದವರ ಸಿಟ್ಟು!

|
Google Oneindia Kannada News

ಕಾಬೂಲ್, ನವೆಂಬರ್ 24: "ನಾನು ಮತ್ತು ನನ್ನ ಪತಿ ಹೇಗೋ ಹಸಿವನ್ನು ಸಹಿಸಿಕೊಳ್ಳುತ್ತೇವೆ. ಆದರೆ ಹೊಟ್ಟೆ ಹಸಿವಿನಿಂದ ಅಳುತ್ತಿರುವ ಪುಟ್ಟ ಮಕ್ಕಳನ್ನು ಸಂಬಾಳಿಸುವುದು ಕಷ್ಟವಾಗುತ್ತಿದೆ. ಪುಟ್ಟ ಮಕ್ಕಳು ಹಸಿವು ತಾಳಲಾರದೇ ಕಣ್ಣೀರು ಹಾಕುತ್ತಿವೆ," ಎಂದು 35 ವರ್ಷದ ಜರ್ಗುನಾ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ರಚನೆಯಾದ 100 ದಿನಗಳಲ್ಲಿ ಪರಿಸ್ಥಿತಿ ಈ ಮಟ್ಟಿಗೆ ಹದಗೆಟ್ಟು ಹೋಗಿದೆ.

"ನಾವು ಕೇವಲ ಸಂಜೆ ಊಟ ಮಾಡುತ್ತೇವೆ. ಕೆಲವೊಮ್ಮೆ ನಮಗೆ ಅದೂ ಸಿಗುವುದಿಲ್ಲ. ನಾವು ಏನನ್ನೂ ತಿನ್ನದೆ ಮಲಗುತ್ತೇವೆ. ಬೆಳಗ್ಗೆ ಎದ್ದು ಕೇವಲ ಚಹಾವನ್ನು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ," ಎಂದು ಜರ್ಗುನಾ ಇಂಡಿಪೆಂಡೆಂಟ್ ಯುಕೆಗೆ ತಿಳಿಸಿದ್ದಾರೆ.

ಅಫ್ಘಾನ್: ನಟಿಯರು, ವರದಿಗಾರ್ತಿಯರಿಗೆ ತಾಲಿಬಾನ್ ಅಫ್ಘಾನ್: ನಟಿಯರು, ವರದಿಗಾರ್ತಿಯರಿಗೆ ತಾಲಿಬಾನ್ "ಧಾರ್ಮಿಕ ಮಾರ್ಗಸೂಚಿ"

"ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾದ ದಿನದಿಂದ ಈವರೆಗೂ ತುತ್ತು ಅನ್ನಕ್ಕೂ ಪರಿತಪಿಸುವಂತಾ ಸ್ಥಿತಿ ನಿರ್ಮಾಣವಾಗಿದೆ," ಎಂಬುದು ನೊಂದ ಮಹಿಳೆಯ ನೋವಿನ ನುಡಿಯಾಗಿದೆ. 100 ದಿನಗಳಲ್ಲಿ ತಾಲಿಬಾನ್ ಸರ್ಕಾರದ ಆಡಳಿತ ವೈಖರಿ ಮತ್ತು ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಇದೊಂದು ಸನ್ನಿವೇಶ ಸಾಕ್ಷೀಕರಿಸುತ್ತದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಅಫ್ಘಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿ

ಅಫ್ಘಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿ

ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿತು. ಇನ್ನೊಂದು ದಿಕ್ಕಿನಲ್ಲಿ ಯುಎಸ್ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸುತ್ತಿದ್ದಂತೆ ತಾಲಿಬಾನ್ ಅಲರ್ಟ್ ಆಯಿತು. ಮೊದಲಿಗೆ ದೇಶದ ಒಂದೊಂದೇ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನಿಗಳು ಕಳೆದ ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡರು. ಎರಡು ದಶಕಗಳ ಕಾಲ ನಡೆದ ಯುದ್ಧವನ್ನು ಕೊನೆಗೊಳಿಸಿದ ಯುನೈಟೆಡ್ ಸ್ಟೇಟ್ಸ್ ತನ್ನ ಸೇನೆಯನ್ನು ಹಿಂತೆಗೆದುಕೊಂಡಾಗಿನಿಂದ ಅಫ್ಘಾನಿಸ್ತಾನವು ಗಂಭೀರವಾದ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಹಸಿವಿನ ನೋವಿನಿಂದ ನರಳುತ್ತಿರುವ ಪುಟ್ಟ ಮಕ್ಕಳ ಕಥೆ

ಹಸಿವಿನ ನೋವಿನಿಂದ ನರಳುತ್ತಿರುವ ಪುಟ್ಟ ಮಕ್ಕಳ ಕಥೆ

ಅಫ್ಘಾನಿಸ್ತಾನದಲ್ಲಿ ಸೃಷ್ಟಿಯಾಗಿರುವ ಹಸಿವಿನ ಬಿಕ್ಕಟ್ಟಿನಿಂದಾಗಿ ತಮ್ಮ ಎಂಟು ವರ್ಷದ ಮಗ ನರಳುವಂತಾ ಸ್ಥಿತಿ ನಿರ್ಮಾಣವಾಗಿದೆ. "ನಮ್ಮಲ್ಲಿ ಬ್ರೆಡ್ ಮತ್ತು ಕೆಲವೊಮ್ಮೆ ಅನ್ನ ಇರುತ್ತ, ಆದರೆ ಮಾಂಸ ಮತ್ತು ಹಣ್ಣು ಎಂದಿಗೂ ಸಿಗುವುದಿಲ್ಲ. ಇಲ್ಲ. ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ಮೊದಲಿಗಿಂತ ಕಡಿಮೆ ಆಹಾರವಿದ್ದು, ಚಿಂತೆಗೀಡು ಮಾಡಿದೆ. ಇಂಥ ಪರಿಸ್ಥಿತಿಯ ನಡುವೆ ಕೆಲವೊಮ್ಮೆ ಊಟಕ್ಕ ಆಹಾರವಿಲ್ಲದೇ ಹಸಿದ ಹೊಟ್ಟೆಯಲ್ಲೇ ಮಲಗುತ್ತೇವೆ," ಎಂದು ಜರ್ಗುನಾ ತಮ್ಮ ನೋವು ತೋಡಿಕೊಂಡಿದ್ದಾರೆ.

ಹಸಿದ ಹೊಟ್ಟೆಗೆ ಒಂದೇ ಹೊತ್ತಿನ ಹಿಟ್ಟು

ಹಸಿದ ಹೊಟ್ಟೆಗೆ ಒಂದೇ ಹೊತ್ತಿನ ಹಿಟ್ಟು

"ಮನೆಯವರು ಈಗ ಹಸಿ ಹಿಟ್ಟು ತಿನ್ನಲು ಆರಂಭಿಸಿದ್ದಾರೆ. ನಮ್ಮ ಪರಿಸ್ಥಿತಿ ಚೆನ್ನಾಗಿಲ್ಲ, ಸ್ವಲ್ಪ ದಿನಗಳ ಹಿಂದೆ ನಮಗೆ ಹಿಟ್ಟು ಸಿಕ್ಕಿದ್ದು, ಅದನ್ನೇ ತಿನ್ನಲು ಪ್ರಾರಂಭಿಸಿದೆವು. ಎಲ್ಲವೂ ದುಬಾರಿಯಾಗಿದೆ, ಇನ್ನು ಮುಂದೆ ನಾವು ಹಿಟ್ಟು ಮತ್ತು ಎಣ್ಣೆಯನ್ನು ಖರೀದಿಸಲು ಸಾಧ್ಯವಿಲ್ಲ, ಏಕೆಂದರೆ ಬೆಲೆ ಅಷ್ಟೊಂದು ಹೆಚ್ಚಾಗಿದೆ. 15 ವರ್ಷದೊಳಗಿನ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರಿಗೂ ದಿನಕ್ಕೆ ಒಂದೇ ಹೊತ್ತಿನ ಊಟ ಸಿಗುವ ಪರಿಸ್ಥಿತಿಯಿದೆ. ದೇಶದಲ್ಲಿ ಅಷ್ಟರ ಮಟ್ಟಿಗೆ ಆಹಾರದ ಬಿಕ್ಕಟ್ಟು ಸೃಷ್ಟಿಯಾಗಿದೆ," ಎಂದು ಜರ್ಗುನಾ ಹೇಳಿದ್ದಾರೆ.

ಅಫ್ಘಾನಿಸ್ತಾನದ ಪರಿಸ್ಥಿತಿ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಕೆ

ಅಫ್ಘಾನಿಸ್ತಾನದ ಪರಿಸ್ಥಿತಿ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಕೆ

ತಾಲಿಬಾನ್ ಸರ್ಕಾರ ರಚನೆಯಾದ ನಂತರದಲ್ಲಿ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ದೇಶವನ್ನು ಕುಸಿತದ ಅಂಚಿನಿಂದ ಮೇಲೆತ್ತುವುದಕ್ಕೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇಲ್ಲದೇ ಹೋದಲ್ಲಿ ಮಕ್ಕಳು ಸೇರಿದಂತೆ ಲಕ್ಷಾಂತರ ಆಫ್ಘನ್ನರು ಹಸಿವಿನಿಂದ ಸಾಯಬಹುದು ಎಂದು ವಿಶ್ವಸಂಸ್ಥೆ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು.

ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯೂಎಫ್‌ಪಿ) ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬೀಸ್ಲಿ ಅವರು, ಅಫ್ಘಾನಿಸ್ತಾನದ 39 ದಶಲಕ್ಷ ಜನಸಂಖ್ಯೆಯಲ್ಲಿ ಅರ್ಥಕ್ಕಿಂತ ಹೆಚ್ಚು ಜನರಿಗೆ ಆಹಾರ ಭದ್ರತೆಯಿಲ್ಲ ಎಂದಿದ್ದಾರೆ. ಅಫ್ಘಾನಿಸ್ತಾನದಲ್ಲಿ 22.8 ದಶಲಕ್ಷ ಜನರು ತೀವ್ರ ಆಹಾರದ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಕೇವಲ ಎರಡು ತಿಂಗಳ ಹಿಂದೆ 14 ದಶಲಕ್ಷ ಜನರು ಆಹಾರವಿಲ್ಲದೇ ನರಳುವ ಸ್ಥಿತಿಗೆ ತಲುಪಿದ್ದಾರೆ," ಎಂದು ತಿಳಿಸಿದ್ದಾರೆ.

ಅಫ್ಘಾನಿಸ್ತಾನ ಮತ್ತು ಆಹಾರದ ಬಿಕ್ಕಟ್ಟು

ಅಫ್ಘಾನಿಸ್ತಾನ ಮತ್ತು ಆಹಾರದ ಬಿಕ್ಕಟ್ಟು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ರಚಿಸುವುದಕ್ಕೂ ಮೊದಲಿನಿಂದಲೇ ಆಹಾರ ಬಿಕ್ಕಟ್ಟಿನ ಸಮಸ್ಯೆಯಿತ್ತು. ಹವಾಮಾನ ಬದಲಾವಣೆಯಿಂದ ಉಲ್ಬಣಗೊಂಡ ಆಹಾರ ಬಿಕ್ಕಟ್ಟು ಹೊಸ ಸರ್ಕಾರ ರಚನೆಯ ನಂತರದಲ್ಲಿ ಮತ್ತಷ್ಟು ಭೀಕರ ಹಂತಕ್ಕೆ ತಲುಪಿದೆ. ಅನೇಕ ಆಫ್ಘನ್ನರು ಆಹಾರವನ್ನು ಖರೀದಿಸಲು ಆಸ್ತಿಯನ್ನು ಮಾರಾಟ ಮಾಡುತ್ತಿದ್ದಾರೆ. ತಾಲಿಬಾನ್‌ಗೆ ಪೌರಕಾರ್ಮಿಕರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ನಗರ ಸಮುದಾಯಗಳು ಮೊದಲ ಬಾರಿಗೆ ಗ್ರಾಮೀಣ ಪ್ರದೇಶಗಳಿಗೆ ಹೋಲುವ ಮಟ್ಟದಲ್ಲಿ ಆಹಾರ ಅಭದ್ರತೆಯನ್ನು ಎದುರಿಸುತ್ತಿವೆ.

English summary
Afghanistan Hunger Crisis : Afghans are battling the worst winters under Taliban rule. With food scarcity and collapsed healthcare, several are struggling. And, this is only expected to worsen. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X