ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್ ಸರ್ಕಾರ ರಚನೆ: ಯಾವ ಯಾವ ರಾಷ್ಟ್ರಗಳಿಗೆ ತಾಲಿಬಾನ್ ಆಹ್ವಾನ?

|
Google Oneindia Kannada News

ಕಾಬೂಲ್, ಸಪ್ಟೆಂಬರ್ 6: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ ಕಠಿಣ ಪೈಪೋಟಿ ನೀಡುತ್ತಿರುವ ಪಂಜ್ ಶೀರ್ ಪ್ರಾಂತ್ಯವನ್ನು ವಶಕ್ಕೆ ಪಡೆದುಕೊಂಡ ಬೆನ್ನಲ್ಲೇ ಹೊಸ ಸರ್ಕಾರ ರಚಿಸಲಾಗುವುದು ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಪ್ರಕ್ರಿಯೆಯು ಬಹುತೇಕ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಈಗಾಗಲೇ ತಾಲಿಬಾನ್ ಸಂಘಟನೆಯಿಂದ ಚೀನಾ, ರಷ್ಯಾ, ಟರ್ಕಿ, ಕ್ವಾತಾರ, ಪಾಕಿಸ್ತಾನ ಮತ್ತು ಇರಾಕ್ ರಾಷ್ಟ್ರಗಳಿಗೆ ಅಹ್ವಾನ ನೀಡಲಾಗಿದೆ.

ಅಫ್ಘಾನಿಸ್ತಾನ ಸರ್ಕಾರ ರಚನೆ ಮತ್ತಷ್ಟು ವಿಳಂಬ, ಕಾರಣವೇನು?ಅಫ್ಘಾನಿಸ್ತಾನ ಸರ್ಕಾರ ರಚನೆ ಮತ್ತಷ್ಟು ವಿಳಂಬ, ಕಾರಣವೇನು?

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸುವ ಬಗ್ಗೆ ಸೋಮವಾರ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಕಾಬೂಲ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಯುದ್ಧ ಅಂತ್ಯಗೊಂಡಿದ್ದು, ಸ್ಥಿರ ಸರ್ಕಾರ ರಚಿಸುವ ಭರವಸೆಯಿದೆ ಎಂದರು. ಅಲ್ಲದೇ ಯಾರಾದರೂ ಆಯುಧಗಳನ್ನು ಮತ್ತೆ ತಮ್ಮ ಕೈಗಳಲ್ಲಿ ಹಿಡಿದರೆ ಅಂಥವರು ಜನವಿರೋಧಿ ಮತ್ತು ದೇಶವಿರೋಧಿಗಳಾಗುತ್ತಾರೆ," ಎಂದು ಹೇಳಿದರು.

ಅಫ್ಘಾನ್ ಕಟ್ಟಲು ಆಕ್ರಮಣಕಾರರಿಂದ ಸಾಧ್ಯವಿಲ್ಲ

ಅಫ್ಘಾನ್ ಕಟ್ಟಲು ಆಕ್ರಮಣಕಾರರಿಂದ ಸಾಧ್ಯವಿಲ್ಲ

"ಆಫ್ಘಾನಿಸ್ತಾನದ ಪ್ರಜೆಗಳು ಮೊದಲಿಗೆ ತಿಳಿದುಕೊಳ್ಳಬೇಕಾದ ಅಂಶವೆಂದರೆ ಆಕ್ರಮಣಕಾರರು ಯಾವುದೇ ಕಾರಣಕ್ಕೂ ನಮ್ಮ ದೇಶವನ್ನು ಕಟ್ಟುವುದಕ್ಕೆ ಸಾಧ್ಯವಿಲ್ಲ. ನಮ್ಮ ದೇಶದ ಪುನರ್ ನಿರ್ಮಾಣವು ನಮ್ಮ ಜವಾಬ್ದಾರಿ ಆಗಿರುತ್ತದೆ. ನಮ್ಮಿಂದ ಹಾಗೂ ನಮ್ಮ ಜನರಿಂದಲೇ ಆ ಕಾರ್ಯ ಆಗಬೇಕಿದೆ," ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.

ಕಾಬೂಲ್ ಏರ್ ಪೋರ್ಟ್ ಪುನಾರಂಭಿಸುವ ಕಾರ್ಯ

ಕಾಬೂಲ್ ಏರ್ ಪೋರ್ಟ್ ಪುನಾರಂಭಿಸುವ ಕಾರ್ಯ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರದಲ್ಲಿ ಇರುವ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪುನಾರಂಭ ಕಾರ್ಯ ನಡೆಸಲಾಗುತ್ತಿದೆ. ಕ್ವಾತಾರ, ಟರ್ಕಿ ಮತ್ತು ಯುನೈಟೆಡ್ ಅರಬ್ ಎಮಿರೈಟ್ಸ್ ರಾಷ್ಟ್ರಗಳಿಂದ ಈ ಕಾರ್ಯಾಚರಣೆಗಾಗಿಯೇ ತಾಂತ್ರಿಕ ತಜ್ಞರು ಆಗಮಿಸಿದ್ದಾರೆ ಎಂದು ಗೊತ್ತಾಗಿದೆ. ಇದಕ್ಕೂ ಮೊದಲು ಟರ್ಕಿಯೊಂದಿಗೆ ತಾಂತ್ರಿಕ ಬೆಂಬಲ ಪಡೆದುಕೊಂಡು ಕಾಬೂಲ್ ವಿಮಾನ ನಿಲ್ದಾಣವನ್ನು ಪುನಾರಂಭಿಸಲಾಗುವುದು. ಮಾನವೀಯ ನೆರವು ಹಾಗೂ ಹೆಚ್ಚಿನ ಜನರ ಸ್ಥಳಾಂತರಕ್ಕೆ ಸಹಕರಿಸಲಾಗುವುದು ಎಂದು ಕ್ವಾತಾರ್ ವಿದೇಶಾಂಗ ವ್ಯವಹಾರಗಳ ಸಚಿವ ಶೇರ್ ಮೊಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅಲ್ ಥನಿ ಸಹ ಹೇಳಿದ್ದರು.

ಪಂಜ್ ಶೀರ್ ಪ್ರಾಂತ್ಯ ವಶಕ್ಕೆ ಪಡೆದ ಬಗ್ಗೆ ತಾಲಿಬಾನ್ ಘೋಷಣೆ

ಪಂಜ್ ಶೀರ್ ಪ್ರಾಂತ್ಯ ವಶಕ್ಕೆ ಪಡೆದ ಬಗ್ಗೆ ತಾಲಿಬಾನ್ ಘೋಷಣೆ

ತಾಲಿಬಾನ್ ಸಂಘಟನೆಯು ಪಂಜ್ ಶೀರ್ ಪ್ರಾಂತ್ಯವನ್ನು ಸಹ ಸಂಪೂರ್ಣ ಹತೋಟಿಗೆ ತೆಗೆದುಕೊಂಡಿರುವುದಾಗಿ ಘೋಷಿಸಿದೆ. ಕಾಬೂಲ್ ನಗರದಿಂದ ಉತ್ತರದಲ್ಲಿರುವ ಪಂಜ್ ಶೀರ್ ಪ್ರಾಂತ್ಯವನ್ನು ತಾಲಿಬಾನ್ ವಿರೋಧಿ ಬಣವು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಪಂಜ್ ಶೀರ್ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ತಾಲಿಬಾನ್ ಸಾವಿರಾರು ಭಯೋತ್ಪಾದಕರನ್ನು ಕಳುಹಿಸಿ ಕೊಟ್ಟಿದೆ. ಪಂಜ್ ಶೀರ್ ಪ್ರದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತಿದ್ದು, ಇಡೀ ದೇಶದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ತಂತ್ರ ರೂಪಿಸಲಾಗುತ್ತಿದೆ.

ಕಳೆದ 1996 ರಿಂದ 2001ರ ಅವಧಿಯಲ್ಲಿ ಸರ್ಕಾರ ರಚಿಸಿ ಆಡಳಿತ ನಡೆಸಿದ ತಾಲಿಬಾನ್, ಪಂಜ್ ಶೀರ್ ಪ್ರಾಂತ್ಯವನ್ನು ಮಾತ್ರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇತ್ತೀಚಿಗೆ ಯುಎಸ್ ಸೇನೆಯು ಅಫ್ಘಾನಿಸ್ತಾನದಿಂದ ವಾಪಸ್ ಆದ ಬೆನ್ನಲ್ಲೇ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ ತಾಲಿಬಾನ್ ನಿಯಂತ್ರಣ ಹೊಂದಿದೆ. ಅದಾಗ್ಯೂ, ಪಂಜ್ ಶೀರ್ ಪ್ರಾಂತ್ಯದಲ್ಲಿ ಮಾತ್ರ ತಾಲಿಬಾನ್ ಸಂಘಟನೆ ವಿರುದ್ಧ ನ್ಯಾಷನಲ್ ರೆಸಿಸ್ಟನ್ಸ್ ಫ್ರೆಂಟ್ ಆಫ್ ಅಫ್ಘಾನಿಸ್ತಾನ ಪ್ರಾಬಲ್ಯವನ್ನು ಸಾಧಿಸುತ್ತಲೇ ಬಂದಿದೆ.

ಎನ್‌ಆರ್‌ಎಫ್‌ ಮತ್ತು ತಾಲಿಬಾನ್ ನಡುವೆ ಕದನ

ಎನ್‌ಆರ್‌ಎಫ್‌ ಮತ್ತು ತಾಲಿಬಾನ್ ನಡುವೆ ಕದನ

ತಾಲಿಬಾನ್‌ ಮತ್ತು ನ್ಯಾಷನಲ್‌ ರೆಸಿಸ್ಟೆನ್ಸ್ ಫ್ರಂಟ್ ಆಫ್‌ ಅಫ್ಘಾನಿಸ್ತಾನದ ನಡುವಿನ ಸಂಘರ್ಷದ ಬಗ್ಗೆ ಎನ್‌ಆರ್‌ಎಫ್‌ನ ವಕ್ತಾರ ಫಾಹಿಮ್‌ ದಸ್ತಿ ಹೇಳಿಕೆ ನೀಡಿದ್ದರು. "ಇಂದು ಬೆಳಿಗ್ಗೆಯಿಂದೀಚೆಗೆ ಪಂಜ್ ಶೀರ್‌ನ ವಿವಿಧ ಜಿಲ್ಲೆಗಳಲ್ಲಿ 600 ಕ್ಕೂ ಅಧಿಕ ಮಂದಿ ತಾಲಿಬಾನ್‌ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಹಾಗೆಯೇ ಸಾವಿರಕ್ಕೂ ಅಧಿಕ ತಾಲಿಬಾನ್‌ ಭಯೋತ್ಪಾದಕರನ್ನು ಬಂಧನ ಮಾಡಲಾಗಿದೆ ಅಥವಾ ಅವರಾಗಿಯೇ ಶರಣಾಗಿದ್ದಾರೆ," ಎಂದು ತಿಳಿಸಿದ್ದರು. ಹಾಗೆಯೇ ತಾಲಿಬಾನ್‌ಗೆ ಅಫ್ಘಾನಿಸ್ತಾನದ ಇತರೆ ಪ್ರಾಂತ್ಯಗಳಿಂದ ಸಲಕರಣೆಗಳನ್ನು ಪಡೆಯುವಲ್ಲಿ ಸಮಸ್ಯೆ ಉಂಟಾಗಿದೆ ಎಂದು ಕೂಡಾ ಎನ್‌ ಆರ್‌ ಎಫ್‌ನ ವಕ್ತಾರರು ಹೇಳಿದ್ದರು.

English summary
Afghanistan Govt formation: Taliban Invite Pakistan, Turkey, Qatar, Russia, China and Iran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X