ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇನ್ನು ಕೆಲವೇ ಗಂಟೆಯಲ್ಲಿ ಅಫ್ಘಾನ್‌ನಿಂದ ಸ್ಥಳಾಂತರ ನಿಲ್ಲಿಸುತ್ತೇವೆ' ಎಂದ ಬ್ರಿಟನ್‌

|
Google Oneindia Kannada News

ಬ್ರಿಟನ್‌, ಆಗಸ್ಟ್‌ 27: ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರ ಮಾಡುವ ಕಾರ್ಯವನ್ನು ಇನ್ನು ಕೆಲವೇ ಗಂಟೆಗಳಲ್ಲಿ ಕೊನೆಗೊಳಿಸಲು ನಾವು ಚಿಂತನೆ ನಡೆಸಿದ್ದೇವೆ ಎಂದು ಬ್ರಿಟನ್‌ ಶುಕ್ರವಾರ ಹೇಳಿದೆ. ಇಸ್ಲಾಮಿಕ್‌ ಸ್ಟೇಟ್‌ನ ಆತ್ಮಾಹುತಿ ಬಾಂಬ್‌ಕೋರ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ 13 ಯುಎಸ್‌ನ ಯೋಧರು ಸೇರಿದಂತೆ ನೂರಾರು ಮಂದಿಯ ಸಾವಿಗೆ ಕಾರಣವಾದ ಬೆನ್ನಲ್ಲೇ ಬ್ರಿಟನ್‌ನಿಂದ ಈ ಹೇಳಿಕೆಯು ಹೊರ ಬಂದಿದೆ.

ಅಫ್ಘಾನ್‌ನ ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಮ್ಮ ಜನರನ್ನು ಸ್ಥಳಾಂತರ ಮಾಡುವ ಕಾರ್ಯವು ಕೊನೆಯ ಹಂತ ತಲುಪಿದೆ ಎಂದು ಬ್ರಿಟನ್‌ನ ರಕ್ಷಣಾ ಸಚಿವ ಬೆನ್ ವ್ಯಾಲೇಸ್ ಹೇಳಿದ್ದಾರೆ. ಹಾಗೆಯೇ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೂಡಾ ತಿಳಿಸಿದ್ದಾರೆ.

'ಆ. 31 ರ ಬಳಿಕವೂ ಅಫ್ಘಾನಿಗಳು ದೇಶ ತೊರೆಯಲು ತಾಲಿಬಾನ್‌ ಸಮ್ಮತಿ': ಜರ್ಮನಿ ರಾಯಭಾರಿ'ಆ. 31 ರ ಬಳಿಕವೂ ಅಫ್ಘಾನಿಗಳು ದೇಶ ತೊರೆಯಲು ತಾಲಿಬಾನ್‌ ಸಮ್ಮತಿ': ಜರ್ಮನಿ ರಾಯಭಾರಿ

ತಾಲಿಬಾನ್‌ ದಾಳಿಗೆ ಒಳಗಾಗಿರುವ ಅಫ್ಘಾನಿಸ್ತಾನದಿಂದ ತಮ್ಮ ದೇಶಕ್ಕೆ ಸೇರಿದ ಎಲ್ಲಾ ಜನರನ್ನು ಸ್ಥಳಾಂತರಿಸಲು ಸಾಧ್ಯವಾಗಿಲ್ಲ ಎಂಬ ಬಗ್ಗೆ ಬ್ರಿಟನ್‌ನ ರಕ್ಷಣಾ ಸಚಿವ ಬೆನ್ ವ್ಯಾಲೇಸ್ ಬೇಸರ ಕೂಡಾ ವ್ಯಕ್ತಪಡಿಸಿದ್ದಾರೆ. "ಅಫ್ಘಾನಿಸ್ತಾನದಿಂದ ಎಲ್ಲರನ್ನೂ ಈ ರಕ್ಷಣೆ ಕಾರ್ಯಾಚರಣೆ ಸಂದರ್ಭದಲ್ಲಿ ಸ್ಥಳಾಂತರ ಮಾಡಲು ಸಾಧ್ಯವಾಗಿಲ್ಲ ಎಂಬ ಹಿನ್ನೆಲೆ ವಿಷಾದ ವ್ಯಕ್ತಪಡಿಸುತ್ತೇನೆ," ಎಂದು ಬ್ರಿಟನ್‌ನ ರಕ್ಷಣಾ ಸಚಿವರು ಹೇಳಿದ್ದಾರೆ.

Afghanistan evacuations to end in a matter of hours says Britain

"ನಾವು ನಮ್ಮೊಂದಿಗೆ ಕರೆ ತಂದ ಜನರಿಗೆ ಸೌಲಭ್ಯ ಒದಗಿಸುತ್ತೇವೆ. ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ. ಈ ಒಂದು ಸಾವಿರಕ್ಕೂ ಅಧಿಕ ಮಂದಿಯಲ್ಲಿ ನಾವು ಸಾಧ್ಯವಾದರೆ ಕೆಲವು ಮಂದಿಯನ್ನು ಕರೆತರುತ್ತೇವೆ. ಆದರೆ ಒಟ್ಟಾಗಿ ಪ್ರಮುಖ ಕಾರ್ಯಾಚರಣೆ ಇಲ್ಲಿಗೆ ಸ್ಥಗಿತವಾಗಿದೆ. ನಮಗೆ ಇನ್ನು ಕೆಲವೇ ಗಂಟೆಗಳು ಇದೆ," ಎಂದು ಮಾಧ್ಯಮವೊಂದಕ್ಕೆ ಬ್ರಿಟನ್‌ನ ರಕ್ಷಣಾ ಸಚಿವ ಬೆನ್ ವ್ಯಾಲೇಸ್ ತಿಳಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ "ಗುರುವಾರ ಅಫ್ಘಾನಿಸ್ತಾನದ ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಂಟಾದ ಆತ್ಮಾಹುತಿ ಬಾಂಬ್‌ ದಾಳಿಯು ನಾವು ಈ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲು ಕಾರಣವಲ್ಲ. ನಮ್ಮ ರಕ್ಷಣೆ ಕಾರ್ಯದ ವೇಳಾಪಟ್ಟಿಗೆ ಈ ಆತ್ಮಾಹುತಿ ಬಾಂಬ್‌ ದಾಳಿ ಕಾರಣವಲ್ಲ. ಅಫ್ಘಾನಿಸ್ತಾನದಿಂದ ಜನರನ್ನು ರಕ್ಷಿಸುವ ಕಾರ್ಯಾಚರಣೆಯು ಕೊನೆಯಾಗುತ್ತಿದ್ದಂತೆ ಬಾಂಬ್‌ ದಾಳಿಯಂತಹ ಬೆದರಿಕೆಗಳನ್ನು ಇನ್ನಷ್ಟು ಅಧಿಕವಾಗಬಹುದು," ಎಂದು ಅಭಿಪ್ರಾಯಿಸಿದ್ದಾರೆ.

ಅಫ್ಘಾನ್‌ದಿಂದ ಎಲ್ಲರನ್ನು ರಕ್ಷಿಸಲಾಗದು ಎಂದ ಸ್ಪೇನ್‌ಅಫ್ಘಾನ್‌ದಿಂದ ಎಲ್ಲರನ್ನು ರಕ್ಷಿಸಲಾಗದು ಎಂದ ಸ್ಪೇನ್‌

ತಾಲಿಬಾನ್‌ ದಾಳಿಗೆ ಒಳಗಾಗಿರುವ ಅಫ್ಘಾನಿಸ್ತಾನದಿಂದ ಬ್ರಿಟನ್‌ ಈವರೆಗೂ ಸುಮಾರು 13,700 ಗೂ ಅಧಿಕ ತಮ್ಮ ದೇಶದ ಪ್ರಜೆಗಳನ್ನು ಹಾಗೂ ಅಫ್ಘಾನಿಸ್ತಾನಿಗಳನ್ನು ರಕ್ಷಣೆ ಮಾಡಿದೆ ಎಂದು ಕೂಡಾ ಈ ಸಂದರ್ಭದಲ್ಲಿ ಬ್ರಿಟನ್‌ ರಕ್ಷಣಾ ಸಚಿವ ಬೆನ್ ವ್ಯಾಲೇಸ್ ಮಾಹಿತಿ ನೀಡಿದ್ದಾರೆ. ಇನ್ನು ಆಗಸ್ಟ್‌ 15 ಆರಂಭವಾದ ಕಾರ್ಯಾಚರಣೆಯಿಂದ ಈವರೆಗೆ ಇಷ್ಟು ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಫ್ಘಾನಿಸ್ತಾನದಿಂದ ವಿದೇಶದವರು ತಮ್ಮ ಪ್ರಜೆಗಳ ಸ್ಥಳಾಂತರ ಕಾರ್ಯಾಚರಣೆಯು ಆಗಸ್ಟ್‌ 31 ರಂದು ಕೊನೆಯಾಗಲಿದೆ. ಆದರೆ ಈ ನಡುವೆ ತಾಲಿಬಾನ್ ಬಿಕ್ಕಟ್ಟಿನ ಕುರಿತು ಚರ್ಚೆಗೆ ಜಿ 7 ದೇಶಗಳು ಸಭೆ ನಡೆಸಿದ್ದು, ಮುಖಂಡರು ಗಡುವು ವಿಸ್ತರಿಸಲು ಕೋರುವ ಚಿಂತನೆ ನಡೆಸಿದ್ದರು. ಈ ಬೆನ್ನಲ್ಲೇ ತಾಲಿಬಾನ್‌ ಮಾತ್ರ ಗಡುವು ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಎಲ್ಲಾ ವಿದೇಶಿಯರು ಆಗಸ್ಟ್‌ 31 ರೊಳಗೆ ದೇಶ ತೊರೆಯಬೇಕು. ದೇಶ ತೊರೆಯಲು ನೀಡಲಾದ 31ರ ಗಡುವನ್ನು ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಮತ್ತೊಮ್ಮೆ ಘೋಷಣೆ ಮಾಡಿತು.

ಆ ಬಳಿಕ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ನಾವು ಆಗಸ್ಟ್‌ 31 ರವರೆಗೆ ಮಾತ್ರ ಈ ರಕ್ಷಣಾ ಕಾರ್ಯ ನಡೆಸಲು ಸಾಧ್ಯ. ಆ ಬಳಿಕ ಗಡುವನ್ನು ವಿಸ್ತರಣೆ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದರು. ಏತನ್ಮಧ್ಯೆ ಅಮೆರಿಕಕ್ಕೆ ಕಾಬೂಲ್‌ ವಿಮಾನ ನಿಲ್ದಾಣದ ಉಸ್ತುವಾರಿ ಇಲ್ಲದ ಸಂದರ್ಭದಲ್ಲಿಯೂ ಅಂದರೆ ಆಗಸ್ಟ್‌ 31 ರ ಬಳಿಕವೂ ಸರಿಯಾದ ದಾಖಲೆಗಳನ್ನು ಹೊಂದಿರುವ ಅಫ್ಘಾನಿಸ್ತಾನಿಗಳಿಗೆ ದೇಶವನ್ನು ತೊರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ತಾಲಿಬಾನ್‌ನ ಸಂಧಾನಕಾರರು ಭರವಸೆ ನೀಡಿದ್ದಾರೆ ಎಂದು ಜರ್ಮನಿ ಹೇಳಿದೆ.

ಈ ಬಗ್ಗೆ ಟ್ಟಿಟ್ಟರ್‌ ಮೂಲಕ ಮಾಹಿತಿ ನೀಡಿರುವ ಜರ್ಮನಿಯ ರಾಯಭಾರಿ ಮಾರ್ಕಸ್ ಪೊಟ್ಜೆಲ್, "ನಾನು ತಾಲಿಬಾನ್‌ನ ಉಪ ಮುಖ್ಯ ಸಂಧಾನಕಾರ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್‌ ಜೊತೆ ಮಾತನಾಡಿದೆ. ಸರಿಯಾದ ದಾಖಲೆಗಳನ್ನು ಹೊಂದಿರುವ ಅಫ್ಘಾನಿಸ್ತಾನಿಗಳಿಗೆ ಆಗಸ್ಟ್‌ 31 ರ ಬಳಿಕವೂ ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್‌ ಭರವಸೆ ನೀಡಿದ್ದಾರೆ," ಎಂದು ತಿಳಿಸಿದ್ದಾರೆ. ಇನ್ನು ಇದಕ್ಕೂ ಮುನ್ನವೇ ಸ್ಪೇನ್‌ ತಮ್ಮ ದೇಶದ ಎಲ್ಲರನ್ನೂ ಸ್ಥಳಾಂತರ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.

(ಒನ್‌ ಇಂಡಿಯಾ ಸುದ್ದಿ)

English summary
Britain said it plans to complete its evacuations out of Afghanistan "in a matter of hours" on Friday after an Islamic State suicide bomber killed several people at Kabul airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X