ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನವನ್ನು ಹೊರಗಿನಿಂದ ನಿಯಂತ್ರಿಸಲು ಸಾಧ್ಯವಿಲ್ಲ; ಪಾಕ್ ಪ್ರಧಾನಿ

|
Google Oneindia Kannada News

ಇಸ್ಲಾಮಾಬಾದ್, ಸೆಪ್ಟೆಂಬರ್ 17: 'ಅಫ್ಘಾನಿಸ್ತಾನವನ್ನು ಹೊರಗಿನಿಂದ ನಿಯಂತ್ರಣ ಮಾಡಲು ಸಾಧ್ಯವಿಲ್ಲ' ಎಂದಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಯುದ್ಧಪೀಡಿತ ಅಫ್ಘಾನಿಸ್ತಾನಕ್ಕೆ ತಮ್ಮ ಬೆಂಬಲ ಮುಂದುವರೆಸುವುದಾಗಿ ತಿಳಿಸಿದ್ದಾರೆ.

ಶಾಂಘೈ ಕೋಪರೇಷನ್ ಆರ್ಗನೈಸೇಷನ್ ಕೌನ್ಸಿಲ್ ಆಫ್ ಹೆಡ್ಸ್‌ ಆಫ್ ಸ್ಟೇಟ್ (SCO-CHS) ಉದ್ದೇಶಿಸಿ ಮಾತನಾಡಿದ ಅವರು, ತಾಲಿಬಾನ್ ಆಡಳಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಮಾನವೀಯ ನೆಲೆಯಲ್ಲಿ ತಕ್ಷಣವೇ ಅಂತರರಾಷ್ಟ್ರೀಯ ನೆರವನ್ನು ನೀಡಬೇಕು ಎಂಬುದನ್ನು ಒತ್ತಿ ಹೇಳಿದರು.

ಅಫ್ಘಾನ್ ಬಿಕ್ಕಟ್ಟು; ತುರ್ತಾಗಿ ಒಪ್ಪಂದಕ್ಕೆ ಬರಲೇಬೇಕಿದೆ ಎಂದ ಯುಎನ್ ನಿರಾಶ್ರಿತ ಸಂಸ್ಥೆಅಫ್ಘಾನ್ ಬಿಕ್ಕಟ್ಟು; ತುರ್ತಾಗಿ ಒಪ್ಪಂದಕ್ಕೆ ಬರಲೇಬೇಕಿದೆ ಎಂದ ಯುಎನ್ ನಿರಾಶ್ರಿತ ಸಂಸ್ಥೆ

'ಅಫ್ಘಾನ್ ಸರ್ಕಾರ ಪ್ರಾಥಮಿಕವಾಗಿ ವಿದೇಶಿ ನೆರವನ್ನು ಬಯಸುತ್ತಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು' ಎಂದು ಹೇಳಿದ್ದಾರೆ. ಇದರೊಂದಿಗೆ, ತಾಲಿಬಾನ್ ಕೂಡ ತಾವು ನೀಡಿದ ಭರವಸೆಗಳನ್ನು ಪೂರೈಸಬೇಕು ಎಂದು ಸಲಹೆ ನೀಡಿದ್ದಾರೆ.

 Afghanistan Cant Be Controlled From Outside Says Pakistan PM

'ಅಫ್ಘಾನಿಸ್ತಾನದಲ್ಲಿ ಸ್ಥಿರತೆ ಹಾಗೂ ಶಾಂತಿ ಕಾಪಾಡುವತ್ತ ಪಾಕಿಸ್ತಾನ ಮಹತ್ವದ ಆಸಕ್ತಿ ಹೊಂದಿದೆ. ಇದೇ ಕಾರಣಕ್ಕೆ ಅಫ್ಘಾನಿಸ್ತಾನಕ್ಕೆ ತನ್ನ ಬೆಂಬಲವನ್ನು ಮುಂದುವರೆಸಲಿದೆ' ಎಂದ ಅವರು, 'ಅಫ್ಘಾನಿಸ್ತಾನವನ್ನು ಹೊರಗಿನಿಂದ ನಿಯಂತ್ರಣ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಎಂಟು ಸದಸ್ಯತ್ವದ SCO ಸಮ್ಮೇಳನದಲ್ಲಿ ಚೀನಾ, ರಷ್ಯಾ, ಕಜಕಿಸ್ತಾನ, ಕಿರ್ಜಿಸ್ತಾನ್, ತಜಿಕಿಸ್ತಾನ, ಉಜ್ಬೇಕಿಸ್ತಾನ, ಭಾರತ ಹಾಗೂ ಪಾಕಿಸ್ತಾನವಿದ್ದು, ಅಫ್ಘಾನಿಸ್ತಾನದ ಸ್ಥಿತಿಗತಿ ಕುರಿತು ಚರ್ಚೆ ನಡೆಸಿವೆ.

ಇನ್ನೂ ಹೆಚ್ಚಿನ ಅಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡಲು ಸಾಧ್ಯವಿಲ್ಲ: ಪಾಕಿಸ್ತಾನಇನ್ನೂ ಹೆಚ್ಚಿನ ಅಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡಲು ಸಾಧ್ಯವಿಲ್ಲ: ಪಾಕಿಸ್ತಾನ

ಗುರುವಾರವಷ್ಟೇ, ಇನ್ನೂ ಹೆಚ್ಚಿನ ಅಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಹೇಳಿಕೆ ನೀಡಿದೆ.

 Afghanistan Cant Be Controlled From Outside Says Pakistan PM

ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಯೂಸುಫ್, ಇನ್ನು ಮುಂದೆ ಅಫ್ಘನ್ ವಲಸಿಗರಿಗೆ ತಮ್ಮ ದೇಶ ನೆಲೆ ಒದಗಿಸಲು ಆಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

'ಅಫ್ಘಾನಿಸ್ತಾನ ಜನತೆಯ ಸಹಾಯಕ್ಕೆ ಅಂತರರಾಷ್ಟ್ರೀಯ ಸಮುದಾಯ ಮುಂದೆ ಬರಬೇಕು. ಅಫ್ಘಾನ್ ಜನರನ್ನು ಕೈಬಿಡಬಾರದು. ಉಗ್ರಗಾಮಿಗಳು ಅಲ್ಲಿನ ಪರಿಸ್ಥಿತಿ ಲಾಭ ಪಡೆಯಲು ಹೊಂಚು ಹಾಕಿದ್ದಾರೆ. ಅದಕ್ಕೆ ಅಂತರರಾಷ್ಟ್ರೀಯ ಸಮುದಾಯ ಅವಕಾಶ ಕೊಡಬಾರದು' ಎಂದಿದ್ದಾರೆ.

ಪಾಕಿಸ್ತಾನವನ್ನು ಪ್ರವೇಶಿಸಲು ಅಫ್ಘಾನಿಸ್ತಾನದ 4 ಸಾವಿರ ಜನರಿಗೆ ವೀಸಾ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕೃತವಾಗಿ ಪಾಕಿಸ್ತಾನ ಮಂಜೂರು ಮಾಡಿದೆ. ಹಲವು ರೀತಿಗಳಲ್ಲಿ ಅಫ್ಘಾನಿಸ್ತಾನಕ್ಕೆ ನೆರವು ನೀಡುವುದಾಗಿ ಹೇಳಿದೆ.

20 ವರ್ಷಗಳ ನಂತರ ತಾಲಿಬಾನ್ ಇದೇ ಆಗಸ್ಟ್‌ 15ರಂದು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ. ತನ್ನದೇ ನೂತನ ಸರ್ಕಾರ ರಚನೆ ಮಾಡಿದೆ. ಆದರೆ ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದ ತಾಲಿಬಾನ್, ಈಚೆಗೆ ತಾಲಿಬಾನ್ ನಾಯಕರನ್ನು ಒಳಗೊಂಡ ಮಧ್ಯಂತರ ಸರ್ಕಾರ ಘೋಷಣೆ ಮಾಡಿದೆ. ಸೂಕ್ತ ಸರ್ಕಾರ ರಚನೆ ಮಾಡುವವರೆಗೂ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡುವುದಿಲ್ಲ ಎಂದು ಹಲವು ದೇಶಗಳು ಸಂದೇಶ ರವಾನಿಸಿವೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡ ತಿಂಗಳ ನಂತರ ಇದೀಗ ದೇಶದಲ್ಲಿ ಒಂದೊಂದೇ ಸಮಸ್ಯೆಗಳು ಎದುರಾಗುತ್ತಿವೆ.

ತನ್ನ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟುಗಳಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡದೇ ಎಚ್ಚೆತ್ತುಕೊಳ್ಳದೇ ಇದ್ದರೆ ದೇಶ ಬಡತನ ರೇಖೆಗಿಂತ ಕೆಳಗೆ ಇಳಿಯುವ ಅಪಾಯದಲ್ಲಿದೆ ಎಂದು ಯುಎನ್‌ಡಿಪಿ ಕೂಡ ಎಚ್ಚರಿಕೆ ನೀಡಿದೆ.

English summary
Afghanistan can't be 'controlled from outside says pak PM Imran khan at SCO Summit
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X