• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಫ್ಘಾನಿಸ್ತಾನದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಬಾಂಬ್ ಸ್ಫೋಟ

|
Google Oneindia Kannada News

ಕಾಬೂಲ್, ಏಪ್ರಿಲ್ 21: ಅಫ್ಘಾನಿಸ್ತಾನದ ಮಸೀದಿಯಲ್ಲಿ ಮತ್ತೊಮ್ಮೆ ಬಾಂಬ್ ಸ್ಫೋಟ ಸಂಭವಿಸಿದೆ. ಕಳೆದ ಮೂರು ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಶಿಯಾ ಗುರಿಯ ಮೇಲೆ ನಡೆದ ಎರಡನೇ ದಾಳಿ ಸಂಭವಿಸಿದೆ. ಅಫ್ಘಾನಿಸ್ತಾನದಲ್ಲಿ ಹತ್ತಾರು ಜನರು ಸಾವನ್ನಪ್ಪಿದ್ದಾರೆ. ಪವಿತ್ರ ರಂಜಾನ್ ಮಾಸದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಮಸೀದಿಯ ಮೇಲೆ ಬಾಂಬ್ ಸ್ಫೋಟ ಸಂಭವಿಸಿದೆ.

ಉತ್ತರ ಅಫ್ಘಾನಿಸ್ತಾನದ ಮಜಾರ್-ಇ-ಷರೀಫ್ ನಗರದ ಮಸೀದಿಯೊಂದರಲ್ಲಿ ಸಂಭವಿಸಿದ ಸ್ಫೋಟದಿಂದ 12ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

"ಪ್ರಾಥಮಿಕ ವರದಿಗಳು ಕನಿಷ್ಠ 25 ಸಾವುನೋವುಗಳನ್ನು ದೃಢಪಡಿಸುತ್ತವೆ" ಎಂದು ಬಾಲ್ಖ್ ಪ್ರಾಂತ್ಯದ ತಾಲಿಬಾನ್ ನಡೆಸುತ್ತಿರುವ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಮುಖ್ಯಸ್ಥ ಜಬಿಹುಲ್ಲಾ ನೂರಾನಿ AFP ಸುದ್ದಿ ಸಂಸ್ಥೆಗೆ ತಿಳಿಸಿದರು.

ಸಾಯಿ ಡೋಕೆನ್ ಮಸೀದಿಯಲ್ಲಿ ಸ್ಫೋಟ ಸಂಭವಿಸಿದ ನಂತರ ಮಜಾರ್-ಇ-ಶರೀಫ್‌ನ ಮುಖ್ಯ ಆಸ್ಪತ್ರೆಯ ಮುಖ್ಯಸ್ಥ ಡಾ. ಘವ್ಸುದ್ದೀನ್ ಅನ್ವಾರಿ, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು 40 ಮಂದಿ ಗಾಯಗೊಂಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು.

ಮುಸ್ಲಿಮರ ಪವಿತ್ರ ತಿಂಗಳ ರಂಜಾನ್‌ನಲ್ಲಿ ಆರಾಧಕರು ಮಂಡಿಯೂರಿ ಪ್ರಾರ್ಥನೆ ಮಾಡುತ್ತಿದ್ದಾಗ ದಾಳಿ ನಡೆದಿದೆ.

ರಾಜಧಾನಿ ಕಾಬೂಲ್‌ನ ಶಿಯಾ-ಬಹುಸಂಖ್ಯಾತ ಪ್ರದೇಶಗಳಲ್ಲಿನ ಶೈಕ್ಷಣಿಕ ಸೌಲಭ್ಯಗಳ ಮೇಲೆ ಹಲವಾರು ಸ್ಫೋಟಗಳು ಸಂಭವಿಸಿದ ಎರಡು ದಿನಗಳ ನಂತರ ಕನಿಷ್ಠ ಆರು ಜನರು ಸಾವನ್ನಪ್ಪಿದ್ದು, ಹೆಚ್ಚಾಗಿ ಮಕ್ಕಳು ಮೃತಪಟ್ಟಿದ್ದಾರೆ.

ಎರಡು ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದ್ರೆ, ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಖೊರಾಸಾನ್ ಪ್ರಾಂತ್ಯದ ಸಂಘಟನೆ ಐಎಸ್- ಕೆ ಇದೇ ರೀತಿ ಸ್ಫೋಟಗಳ ಹೊಣೆ ಹೊತ್ತುಕೊಂಡಿತ್ತು. (Reuters, AFP)

English summary
Dozens have been killed or injured in Afghanistan in the second attack on a Shiite target in Afghanistan in three days. A bomb blast hit the mosque as worshipers were praying during the holy month of Ramadan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X