ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ಬಿಕ್ಕಟ್ಟಿನ ಮಧ್ಯೆ ಉಜ್ಬೇಕಿಸ್ತಾನದಲ್ಲಿ ಅಫ್ಘಾನ್ ಸೇನಾ ಜೆಟ್ ಅಪಘಾತ

|
Google Oneindia Kannada News

ಕಾಬೂಲ್, ಆಗಸ್ಟ್ 16: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರಿದಿದ್ದು, ಇನ್ನೊಂದು ಕಡೆಯಲ್ಲಿ ಅಫ್ಘಾನ್ ಸೇನಾ ವಿಮಾನವು ಉಜ್ಬೇಕಿಸ್ತಾನ್ ಬಳಿ ಅಪಘಾತಕ್ಕೀಡಾಗಿದೆ ಎಂದು ಉಜ್ಬೇಕ್ ಸುದ್ದಿ ಸಂಸ್ಥೆಯು ಸೋಮವಾರ ವರದಿ ಮಾಡಿದೆ. ಸೇನಾ ವಿಮಾನದ ಅಪಘಾತಕ್ಕೀಡಾದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಲಾಗುತ್ತಿದೆ.

Recommended Video

ಹೆಲಿಕಾಪ್ಟರ್ ತುಂಬಾ ಹಣ ತುಂಬಿಕೊಂಡು ಅಫ್ಘಾನಿಸ್ತಾನದಿಂದ ಓಡಿಹೋದ ಅಶ್ರಫ್ ಘನಿ! | Oneindia Kannada

ಕಳೆದ ಆಗಸ್ಟ್ 15ರ ಭಾನುವಾರ ಮೊದಲು ಕಾಬೂಲ್ ಹೊರವಲಯಕ್ಕೆ ತಾಲಿಬಾನ್ ಉಗ್ರರು ಲಗ್ಗೆ ಇಟ್ಟರು. ಅಫ್ಘಾನ್ ಸರ್ಕಾರಕ್ಕೆ ಅಲ್ಲಿಂದಲೇ ಸಂದೇಶ ರವಾನಿಸಿದ ತಾಲಿಬಾನ್ ಶಾಂತಿಯುತ ರೀತಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವಂತೆ ಎಚ್ಚರಿಕೆ ನೀಡಿತು. ಕಾಬೂಲ್ ನಗರದಲ್ಲಿ ಪ್ರವೇಶಿಸಿದ ತಾಲಿಬಾನ್ ಸಂಪೂರ್ಣವಾಗ ಸ್ವಾಧೀನಪಡಿಸಿಕೊಂಡಿದೆ.

Video: ತಾಲಿಬಾನ್ ಉಗ್ರರಿಗೆ ಬೆದರಿ ವಿಮಾನ ಹತ್ತೋದು ಹೀಗಾ!?Video: ತಾಲಿಬಾನ್ ಉಗ್ರರಿಗೆ ಬೆದರಿ ವಿಮಾನ ಹತ್ತೋದು ಹೀಗಾ!?

"ಅಫ್ಘಾನಿಸ್ತಾನದಿಂದ ಹಾರಿದ ಸೇನಾ ವಿಮಾನವು ಭಾನುವಾರ ಉಜ್ಬೇಕಿಸ್ತಾನ್ ದಕ್ಷಿಣದ ಸರ್ಕ್ಸೊಂದಾರ್ಯೋ ಪ್ರಾಂತ್ರದಲ್ಲಿ ಅಪಘಾತಕ್ಕೀಡಾಗಿದೆ" ಎಂದು ಗೆಜೆಟಾ.ಯುಜೆಡ್ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ಅಫ್ಘಾನ್ ಸೇನಾ ಸಮವಸ್ತ್ರವನ್ನು ಧರಿಸಿದ ವ್ಯಕ್ತಿಯೊಬ್ಬರು ವಿಮಾನ ಪತನದ ಸ್ಥಳದಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.

Afghanistan Army Jet Crashes in Uzbekistan amid Crisis with Taliban : Report

ಇಬ್ಬರು ಅಫ್ಘಾನ್ ಸೇನಾ ಯೋಧರು ಆಸ್ಪತ್ರೆಗೆ ದಾಖಲು:

ಅಫ್ಘಾನಿಸ್ತಾನ ವಿಮಾನ ಅಪಘಾತಕ್ಕೀಡಾಗಿದ ಸ್ಥಳದಲ್ಲಿ ಅಫ್ಘಾನ್ ಸೇನಾ ಸಮವಸ್ತ್ರವನ್ನು ಧರಿಸಿದ ಇಬ್ಬರು ಪತ್ತೆಯಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಷ್ಯಾದ ಟಿಎಎಸ್ಎಸ್ ಸುದ್ದಿ ಸಂಸ್ಥೆಯು ಅಫ್ಘಾನಿಸ್ತಾನ ಸೇನಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಉಜ್ಬೇಕಿಸ್ತಾನ್ ರಕ್ಷಣಾ ಸಚಿವಾಲಯವನ್ನು ಪ್ರಶ್ನೆ ಮಾಡಲಾಯಿತು. ಆದರೆ ಘಟನೆಗೆ ಸಂಬಂಧಿಸಿದಂತೆ ಸಚಿವಾಲಯವು ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.

ಒಂದೇ ವಾರದಲ್ಲಿ ಅಫ್ಘಾನ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್:

ಅಫ್ಘಾನಿಸ್ತಾನದ ಕೆಲವು ಪ್ರದೇಶಗಳಲ್ಲಿ ಯುಎಸ್ ವಾಯುಸೇನೆ ಬೆಂಬಲದ ಹೊರತಾಗಿಯೂ ತಾಲಿಬಾನ್ ಶಕ್ತಿಶಾಲಿ ಆಗುತ್ತಿದೆ. ಯುಎಸ್ ಸೇನಾ ಪಡೆಯನ್ನು ಹಿಂತೆಗೆದುಕೊಂಡ ಒಂದು ವಾರದಲ್ಲೇ ಇಡೀ ದೇಶದ ಚಿತ್ರಣವೇ ಬದಲಾಗಿ ಹೋಗಿದೆ. ಅಫ್ಘಾನಿಸ್ತಾನ ಸರ್ಕಾರ ಮತ್ತು ಸೇನೆಯನ್ನು ಆಕ್ರಮಿಸಿಕೊಂಡ ತಾಲಿಬಾನ್ ದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಒಂದೇ ವಾರದಲ್ಲಿ ದೇಶದ ಪ್ರಮುಖ ಪ್ರದೇಶಗಳ ಮೇಲೆ ತಾಲಿಬಾನ್ ಆಕ್ರಮಿಸಿಕೊಂಡಿದೆ. ಕೆಲವು ಪ್ರದೇಶಗಳಲ್ಲಿ ಸೇನೆಯನ್ನು ಸೋಲಿಸಿದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಸಂಘಟನೆಗೆ ಸಹಕಾರ ನೀಡಿದ ಸರ್ಕಾರದ ಭದ್ರತಾ ಪಡೆಗಳನ್ನು ಅಲ್ಲಿಂದ ಹಿಂತಿರುಗಿ ಕಳುಹಿಸಲಾಗಿದೆ. ಆದರೆ ತಾಲಿಬಾನ್ ಬಂಡುಕೋರರಿಗೆ ಬೆದರಿ ವಾಪಸ್ಸಾದ ಅಫ್ಘಾನ್ ಸೇನೆ ಮತ್ತು ಯೋಧರ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಶತಕೋಟಿಗಳನ್ನು ಖರ್ಚು ಮಾಡಿ ಅಮೆರಿಕಾದ ಸೇನೆಗಳಿಂದ ಅಫ್ಘಾನ್ ಅದೆಂಥಾ ತರಬೇತಿಗಳನ್ನು ಪಡೆದುಕೊಂಡಿದೆ ಎಂಬು ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.

English summary
Afghanistan Army Jet Crashes in Uzbekistan amid Crisis with Taliban : Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X