ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ನಮ್ಮನ್ನು ಮದುವೆಯಾಗಿ ನಿಮ್ಮ ದೇಶಕ್ಕೆ ಕರೆದೊಯ್ಯಿರಿ"; ಅಫ್ಘನ್ ಮಹಿಳೆಯರ ಸ್ಥಿತಿ!

|
Google Oneindia Kannada News

ಕಾಬೂಲ್, ಸಪ್ಟೆಂಬರ್ 3: ತಾಲಿಬಾನ್ ಸಂಘಟನೆ ಗದ್ದುಗೆ ಹಿಡಿದಿರುವ ಅಫ್ಘಾನಿಸ್ತಾನ ಮಹಿಳೆಯರ ಪಾಲಿನ ನರಕ ಎಂದೇ ಬಿಂಬಿಸಲಾಗುತ್ತಿದೆ. ತಾಲಿಬಾನ್ ಆಡಳಿತದಲ್ಲಿ ಕ್ಷಣಕ್ಷಣ ನರಕ ಅನುಭವಿಸುವ ಬದಲಿಗೆ ದೇಶವನ್ನೇ ತೊರೆದು ಹೋಗಲು ಅಫ್ಘನ್ ಮಹಿಳೆಯರು ಇದೀಗ ಮದುವೆ ಮಂತ್ರ ಜಪಿಸುತ್ತಿದ್ದಾರೆ.

ಕಾಬೂಲ್ ನಗರ ವಿಮಾನ ನಿಲ್ದಾಣ ಎದುರಿನಲ್ಲೇ ವಿದೇಶಿಗರಿಗೆ ತಮ್ಮನ್ನು ಮದುವೆಯಾಗುವಂತೆ ದುಂಬಾಲು ಬೀಳುತ್ತಿದ್ದಾರೆ. ಯುಎಸ್ ಸೇರಿದಂತೆ ವಿದೇಶಿಗರನ್ನು ಮದುವೆಯಾಗುವ ಮೂಲಕ ಸ್ಥಳಾಂತರದ ಹಕ್ಕು ಗಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.

ಯುನೈಟೆಡ್ ಅರಬ್ ಎಮಿರೈಟ್ಸ್ ಸ್ಥಳಾಂತರ ಕಾರ್ಯಾಚರಣೆ ನಡೆಸುತ್ತಿರುವ ಕೇಂದ್ರದ ಬಳಿ ಇಂಥದೊಂದು ಪ್ರಕ್ರಿಯೆ ನಡೆಯುತ್ತಿದೆ. ವಿದೇಶಗಳಿಗೆ ಸ್ಥಳಾಂತರಗೊಳ್ಳುವುದಕ್ಕೆ ಅರ್ಹರಾಗಿರುವ ಪುರುಷರ ಎದುರಿನಲ್ಲಿ "ನಮ್ಮ ಮಗಳನ್ನು ಮದುವೆಯಾಗಿ, ಇಲ್ಲವೇ ಸ್ಥಳಾಂತರ ಪ್ರಕ್ರಿಯೆ ಮುಗಿಯುವವರೆಗೂ ನಮ್ಮ ಮಗಳಿಗೆ ಗಂಡನಾಗಿರಿ, ದಯವಿಟ್ಟು ಅಫ್ಘಾನಿಸ್ತಾನದಿಂದ ತೊರೆದು ಹೋಗಲು ನೆರವು ನೀಡಿ," ಎಂದು ಕುಟುಂಬ ಸದಸ್ಯರು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.

ತಾಲಿಬಾನಿಗಳಿಂದ ರಕ್ಷಿಸಲು ಮುಳ್ಳಿನ ತಂತಿ ಮೇಲೆ ಮಕ್ಕಳನ್ನು ಎಸೆದ ತಾಯಂದಿರು! ತಾಲಿಬಾನಿಗಳಿಂದ ರಕ್ಷಿಸಲು ಮುಳ್ಳಿನ ತಂತಿ ಮೇಲೆ ಮಕ್ಕಳನ್ನು ಎಸೆದ ತಾಯಂದಿರು!

ಅಫ್ಘಾನಿಸ್ತಾನದಲ್ಲಿ ಈ ಹಿಂದೆ ತಾಲಿಬಾನ್ ಸರ್ಕಾರದ ಅವಧಿಯಲ್ಲಿ ತೆಗೆದುಕೊಂಡ ಆಘಾತಕಾರಿ ಕ್ರಮಗಳು ಸಂಪೂರ್ಣ ಹತಾಶೆಯ ಚಿತ್ರವನ್ನು ತೋರಿಸುತ್ತಿವೆ. ಮಹಿಳೆಯರಲ್ಲಿ ವಿಶೇಷವಾಗಿ ತಾಲಿಬಾನ್‌ಗಳ ಬಗ್ಗೆ ಭಯವಿದೆ. ತಾಲಿಬಾನ್ ಆಡಳಿತದ ಮತ್ತು ಕಾನೂನುಗಳ ಬಗ್ಗೆ ಮಹಿಳೆಯರಲ್ಲಿ ಆತಂಕವೇಕೆ, ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಸನ್ನಿವೇಶಗಳು ಹೇಗಿವೆ ಎಂಬುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

ಅಫ್ಘಾನಿಸ್ತಾನದಿಂದ ಮಾನವ ಕಳ್ಳಸಾಗಾಣಿಕೆಯ ಎಚ್ಚರಿಕೆ

ಅಫ್ಘಾನಿಸ್ತಾನದಿಂದ ಮಾನವ ಕಳ್ಳಸಾಗಾಣಿಕೆಯ ಎಚ್ಚರಿಕೆ

ಅಫ್ಘಾನಿಸ್ತಾನದಲ್ಲಿ ಮಾನವ ಕಳ್ಳ ಸಾಗಾಣಿಕೆಯ ಅಪಾಯವನ್ನು ಎದುರಿಸುತ್ತಿರುವ ಮಹಿಳೆಯರನ್ನು ಗುರುತಿಸುವಲ್ಲಿ ಯುನೈಟೆಡ್ ಅರಬ್ ಎಮಿರೈಟ್ಸ್ ಗೆ ಯುಎಸ್ ರಾಜತಾಂತ್ರಿಕ ಅಧಿಕಾರಿಗಳು ಸಹಾಯ ಮಾಡುವ ನಿರೀಕ್ಷೆಯಿದೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಮತ್ತು ಹೋಮ್ ಲ್ಯಾಂಡ್ ಸೆಕ್ಯುರಿಟಿ ಮತ್ತು ರಕ್ಷಣಾ ಇಲಾಖೆಯೊಂದಿಗೆ ಸಮನ್ವಯಗೊಳಿಸುವ ಬಗ್ಗೆ ವರದಿಯಲ್ಲಿ ಹೇಳಲಾಗಿದೆ.

ತಾಲಿಬಾನ್ ನೆಲದಲ್ಲಿ ಮಹಿಳೆಯರಿಗೆ ಸುರಕ್ಷತೆಯ ಭೀತಿ

ತಾಲಿಬಾನ್ ನೆಲದಲ್ಲಿ ಮಹಿಳೆಯರಿಗೆ ಸುರಕ್ಷತೆಯ ಭೀತಿ

ಅಫ್ಘಾನಿಸ್ತಾನದಲ್ಲಿ ಈಗಾಗಲೇ ಹಲವು ಮಹಿಳೆಯರು ತಮ್ಮ ಕಚೇರಿಗೆ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ದೂರಿದ್ದಾರೆ. ತಮ್ಮ ಸುರಕ್ಷತೆಯ ಬಗ್ಗೆ ಆತಂಕಗೊಂಡ ಕೆಲವು ಮಹಿಳಾ ಪತ್ರಕರ್ತರು ಬೇರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಅಫ್ಘಾನಿಸ್ತಾನದ ಬಾಲಕಿಯರ ಶಿಕ್ಷಣ ಹಕ್ಕುಗಳ ಕಾರ್ಯಕರ್ತೆ ಪಸ್ತಾನಾ ದುರಾನಿ ತಾಲಿಬಾನ್ ಭರವಸೆಗಳ ಬಗ್ಗೆ ಜಾಗರೂಕರಾಗಿರಿ ಎಂದಿದ್ದಾರೆ. ಮಾತುಕತೆ ನಡೆಸುತ್ತೇನೆ ಎಂದವರು ಈಗ ಅದನ್ನು ಮರೆತಿದ್ದಾರೆ. ಬಾಲಕಿಯರ ಶಿಕ್ಷಣಕ್ಕೆ ಅವಕಾಶ ನೀಡಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

"ಅವರು ಪಠ್ಯಕ್ರಮವನ್ನು ಸೀಮಿತಗೊಳಿಸಿದರೆ, ನಾನು (ಆನ್) ಆನ್‌ಲೈನ್ ಲೈಬ್ರರಿಗೆ ಹೆಚ್ಚಿನ ಪುಸ್ತಕಗಳನ್ನು ಅಪ್‌ಲೋಡ್ ಮಾಡುತ್ತೇನೆ. ಅವರು ಇಂಟರ್‌ನೆಟ್ ಅನ್ನು ಮಿತಿಗೊಳಿಸಿದರೆ, ನಾನು ಮನೆಗಳಿಗೆ ಪುಸ್ತಕಗಳನ್ನು ಕಳುಹಿಸುತ್ತೇನೆ. ಅವರು ಶಿಕ್ಷಕರನ್ನು ಮಿತಿಗೊಳಿಸಿದರೆ ನಾನು ಭೂಗತ ಶಾಲೆಯನ್ನು ಆರಂಭಿಸುತ್ತೇನೆ, ಅವರ ಸಮಸ್ಯೆಗಳಿಗೆ ನಾನು ಉತ್ತರವನ್ನು ಹೊಂದಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಇರಲು ಮಹಿಳೆಯರಿಗೆ ಭಯವೇಕೆ?

ಅಫ್ಘಾನಿಸ್ತಾನದಲ್ಲಿ ಇರಲು ಮಹಿಳೆಯರಿಗೆ ಭಯವೇಕೆ?

ಅಫ್ಘಾನಿಸ್ತಾನದ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸಿ ನೋಡಲಾಗುತ್ತಿದೆ. ಹೊಸ ಸರ್ಕಾರದಲ್ಲಿ ಮಹಿಳೆಯರಿಗೂ ವಿಶೇಷ ಪಾತ್ರವನ್ನು ನೀಡಬೇಕು ಎಂಬ ಬಗ್ಗೆ ತಾಲಿಬಾನ್ ಯೋಜಿಸುವುದಿಲ್ಲ. ದೇಶಾದ್ಯಂತ ಪ್ರಮುಖ ಮಹಿಳೆಯರು ತಮ್ಮ ಸುರಕ್ಷತೆ ಭಯದಲ್ಲೇ ಹೆದರಿ ಕುಳಿತುಕೊಂಡಿದ್ದಾರೆ.

ತಾಲಿಬಾನ್ 1996 ರಿಂದ 2001 ರವರೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ ಸಂದರ್ಭದಲ್ಲಿ ಅವರು ಕಠಿಣ ಷರಿಯಾ ಅಥವಾ ಇಸ್ಲಾಮಿಕ್ ಕಾನೂನನ್ನು ಕಟ್ಟುನಿಟ್ಟಾಗಿ ಇನ್ನು ಕೆಲವೊಮ್ಮೆ ಕ್ರೂರವಾಗಿ ಜಾರಿಗೊಳಿಸಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಮಹಿಳೆಯರು ಕೆಲಸಕ್ಕೆ ಹೋಗುವಂತಿಲ್ಲ ಹಾಗೂ ಹುಡುಗಿಯರಿಗೆ ಶಾಲಾ-ಕಾಲೇಜುಗಳಿಗೆ ಹಾಜರಾಗುವುದಕ್ಕೆ ಯಾವುದೇ ರೀತಿ ಅನುಮತಿ ಇರುವುದಿಲ್ಲ. ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕು. ಒಬ್ಬ ಪುರುಷ ಸಂಬಂಧಿಯ ಜೊತೆಗಿರಬೇಕು. ಈ ನಿಯಮ ಉಲ್ಲಂಘಿಸಿದರೆ ತಾಲಿಬಾನ್ ಧಾರ್ಮಿಕ ಪೊಲೀಸರಿಂದ ಅವಮಾನ ಮತ್ತು ಸಾರ್ವಜನಿಕವಾಗಿ ಏಟು ನೀಡಲಾಗುತ್ತದೆ.

ಅಸಲಿಗೆ ಷರಿಯಾ ಕಾನೂನು ಎಂದರೇನು?

ಅಸಲಿಗೆ ಷರಿಯಾ ಕಾನೂನು ಎಂದರೇನು?

ಷರಿಯಾ ಕಾನೂನು ಎಂಬುದರ ಅರ್ಥ? ಇಸ್ಲಾಮಿಕ್ ಕಾನೂನುಗಳಿಗೆ ಸಮಾನಾರ್ಥವಾಗಿ ಈ ಷರಿಯಾ ಕಾನೂನುಗಳನ್ನು ಗುರುತಿಸಲಾಗುತ್ತದೆ. ಷರಿಯಾ ನಿಜವಾಗಿಯೂ ಲಿಖಿತ ನಿಯಮಗಳ ಸಂಹಿತೆಯಲ್ಲ, ಬದಲಾಗಿ ಹಲವು ಮೂಲಗಳಿಂದ ಪಡೆದ ನಿಯಮಗಳ ಒಂದು ಅಂಗವಾಗಿದೆ. ಅವುಗಳ ಪೈಕಿ ಪ್ರಮುಖವಾಗಿರುವುದೇ ಕುರಾನ್. ಇದರ ಹೊರತಾಗಿ ಇಸ್ಲಾಂನ ಪವಿತ್ರ ಗ್ರಂಥಗಳು, ಹಾಗೂ ಹದೀಸ್ ಎಂದು ಕರೆಯಲ್ಪಡುವ ಪ್ರವಾದಿ ಮೊಹಮ್ಮದ್ ಅವರ ಜೀವನ, ಬೋಧನೆಗಳು ಮತ್ತು ಅಭ್ಯಾಸಗಳನ್ನು ಸಾರಿ ಹೇಳುವ ಸಾಕ್ಷ್ಯಚಿತ್ರಗಳಿವೆ. ಅರೇಬಿಕ್ 'ಷರಿಯಾ' ಕಟ್ಟುನಿಟ್ಟಾದ ಕಾನೂನು ಸಂಹಿತೆಗಿಂತ ಅನುಸರಿಸಬೇಕಾದ ಮಾರ್ಗಗಳನ್ನು ಸೂಚಿಸುತ್ತದೆ. ಇದು ಧರ್ಮವನ್ನು ಹೇಗೆ ಪಾಲಿಸುವುದು, ನಡವಳಿಕೆ ಮತ್ತು ನಿಯಮಗಳ ಜೊತೆಗೆ ಕಾನೂನು ವಿಷಯಗಳನ್ನೂ ಒಳಗೊಂಡಿರುತ್ತದೆ. ಇದರ ಹೊರತಾಗಿ ಷರಿಯಾ ಕಾನೂನುಗಳು ಹೇಗೆ ರೂಪಗೊಂಡವು ಎಂಬುದನ್ನು ನಿರ್ಧರಿಸುವುದಕ್ಕೆ ಇನ್ನೂ ಎರಡು ಅಂಶಗಳಿವೆ. "ಒಂದು ವಿಶ್ಲೇಷಣೆ ಆಧಾರಿತ 'ಕಿಯಾಸ್' ಆದರೆ, ಎರಡು ನ್ಯಾಯಸಮ್ಮತವಾದ 'ಇಜ್ಮಾ' ಆಗಿದೆ.

Recommended Video

ಸಿಎಂ ಬೊಮ್ಮಾಯಿಯನ್ನ ಹಾಡಿಹೊಗಳಿದ ಅಮಿತ್ ಶಾ | Oneindia Kannada

English summary
Afghan women forced to get married outside the Kabul airport in order to evacuate to the US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X