ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನ; ಪೊಲೀಸ್ ಅಧಿಕಾರಿಯಾದ ಮಹಿಳೆ ಕಣ್ಣು ಕಿತ್ತ ದುಷ್ಕರ್ಮಿಗಳು

|
Google Oneindia Kannada News

ಕಾಬುಲ್, ನವೆಂಬರ್ 10: ಪೊಲೀಸ್ ಅಧಿಕಾರಿಯಾಗಿ ಈಚೆಗಷ್ಟೇ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದ 33 ವರ್ಷದ ಮಹಿಳೆ ಮೇಲೆ ದಾಳಿ ನಡೆಸಿ ಗುಂಡು ಹಾರಿಸಿ, ಆಕೆಯನ್ನು ಅಂಧೆಯನ್ನಾಗಿ ಮಾಡಿರುವ ಘಟನೆ ಕಾಬುಲ್ ನಲ್ಲಿ ನಡೆದಿದೆ.

ಖತೇರಾ ಎಂಬ ಮಹಿಳೆ ಮೂರು ತಿಂಗಳ ಹಿಂದೆ ಅಫ್ಘಾನಿಸ್ತಾನದ ಪೊಲೀಸ್ ಠಾಣೆಯ ಅಪರಾಧ ವಿಭಾಗದಲ್ಲಿ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಈಚೆಗೆ ತಮ್ಮ ಕೆಲಸ ಮುಗಿಸಿ ವಾಪಸ್ ಬರುವಾಗ ಬೈಕ್ ನಲ್ಲಿ ಬಂದ ಮೂರು ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಆಕೆಯ ಮೇಲೆ ಗುಂಡು ಹಾರಿಸಿ, ಕಣ್ಣಿಗೆ ಚೂರಿಯಿಂದ ಇರಿದಿದ್ದಾರೆ. ಇದರಿಂದ ಖತೇರಾ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ.

ತಾಲಿಬಾನ್ ಉಗ್ರರಿಂದ ಅಫ್ಘಾನಿಸ್ತಾನದಲ್ಲಿ ದಾಳಿ: ಮೂವರು ಸಾವುತಾಲಿಬಾನ್ ಉಗ್ರರಿಂದ ಅಫ್ಘಾನಿಸ್ತಾನದಲ್ಲಿ ದಾಳಿ: ಮೂವರು ಸಾವು

ಈ ಘಟನೆಯ ಹೊಣೆಯನ್ನು ಸ್ಥಳೀಯ ಆಡಳಿತ ಮಂಡಳಿ ತಾಲಿಬಾನ್ ಉಗ್ರಗಾಮಿ ಸಂಘಟನೆ ಮೇಲೆ ಹೊರಿಸಿದೆ. ಆದರೆ ಇದನ್ನು ನಿರಾಕರಿಸಿರುವ ಸಂಘಟನೆ, ಈ ದಾಳಿಕೋರರು ಆ ಮಹಿಳೆಯ ತಂದೆ ಕಡೆಯವರೇ ಆಗಿದ್ದಾರೆ. ಮನೆಯಿಂದ ಹೊರಗೆ ಹೋಗಿ ದುಡಿಯುವುದನ್ನು ಆಕೆಯ ತಂದೆ ವಿರೋಧಿಸಿದ್ದರು. ಅವರೇ ಈ ಕೃತ್ಯಕ್ಕೆ ಕಾರಣ ಎಂದಿದೆ.

Afghan Woman Blinded For Getting Job As Police Officer

ಆದರೆ, "ಕಾರಣ ಏನಾದರೂ ಇರಬಹುದು. ಇವರು ನನ್ನ ಕಣ್ಣನ್ನಷ್ಟೇ ಅಲ್ಲ, ನನ್ನ ಜೀವಮಾನದ ಕನಸುಗಳನ್ನೂ, ನಾನು ಏನನ್ನು ಸಾಧಿಸಬೇಕು ಎಂದುಕೊಂಡು ಹೋರಾಟ ಮಾಡಿದ್ದೆನೋ, ಆ ಶ್ರಮವನ್ನೂ ಕಸಿದುಕೊಂಡಿದ್ದಾರೆ. ನನ್ನ ಕಾಲಿನ ಮೇಲೆ ನಾನು ನಿಂತುಕೊಳ್ಳಬೇಕು ಎಂದು ಕನಸು ಕಂಡಿದ್ದೆ. ಆದರೆ ಕೆಲಸಕ್ಕೆ ಸೇರಿ, ಸೇವೆ ಸಲ್ಲಿಸುತ್ತಿದ್ದ ಕೆಲವೇ ತಿಂಗಳಲ್ಲಿ ಹೀಗೆ ಆಗಿರುವುದು ದುಃಖವಾಗಿದೆ" ಎಂದು ಖತೇರಾ ಹೇಳಿಕೊಂಡಿದ್ದಾರೆ.

ಈ ನಡುವೆ ಈ ಕೃತ್ಯದ ಕುರಿತು ಮಾನವ ಹಕ್ಕುಗಳ ಕಾರ್ಯಕರ್ತರೊಬ್ಬರು ಪ್ರತಿಕ್ರಿಯಿಸಿದ್ದು, "ಮಹಿಳೆಯರು ಉದ್ಯೋಗಕ್ಕೆ ಹೋಗುವುದನ್ನು ತಡೆಯಲು ಈ ರೀತಿ ದಾಳಿ ನಡೆಸಲಾಗಿದೆ. ಅದರಲ್ಲೂ ಸಾರ್ವಜನಿಕ ವಲಯದಲ್ಲಿ ಮಹಿಳೆ ಕಾಣಿಸಿಕೊಳ್ಳುವುದರ ವಿರುದ್ಧ ಹೀಗೆ ಮಾಡುತ್ತಿದ್ದಾರೆ. ಖತೇರಾ ಈಗ ಕೇಳಿಬಂದಿರುವ ಒಂದು ಹೆಸರು ಅಷ್ಟೆ. ಈ ಪ್ರಕರಣದಲ್ಲಿ, ಖತೇರಾ ಪೊಲೀಸ್ ಅಧಿಕಾರಿಯಾಗಿದ್ದು ತಾಲಿಬಾನ್ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ.

ಈ ನಡುವೆ, "ನಾನು ಚೇತರಿಸಿಕೊಂಡಿದ್ದೇ ಆದರೆ ಮತ್ತೆ ಪೊಲೀಸ್ ಆಗಿ ಬರುತ್ತೇನೆ ಎಂದು ಖತೇರಾ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

English summary
33 year old woman lost her eyes in attack by three men in afghanistan,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X