ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ತಾಲಿಬಾನ್‌ನ ಸದಸ್ಯ ಶೇಖ್ ರಹೀಮುಲ್ಲಾ ಹಕ್ಕಾನಿ ಹತ್ಯೆ

|
Google Oneindia Kannada News

ಕಾಬೂಲ್, ಆಗಸ್ಟ್ 11: ಕಾಬೂಲ್‌ನ ಮದ್ರಸಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್‌ನ ಹಿರಿಯ ಸದಸ್ಯ ಶೇಖ್ ರಹೀಮುಲ್ಲಾ ಹಕ್ಕಾನಿ ಹತ್ಯೆಯಾಗಿದೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿದೆ.

ಈ ಕುರಿತು ತಾಲಿಬಾನ್ ಸರ್ಕಾರದ ಉಪ ವಕ್ತಾರ ಬಿಲಾಲ್ ಕರಿಮಿ ಟ್ವೀಟ್ ಮಾಡಿದ್ದು, ಶೇಖ್ ರಹೀಮುಲ್ಲಾ ಹಕ್ಕಾನಿ ಹತ್ಯೆ ಆಗಿರುವುದನ್ನು ಖಚಿತಪಡಿಸಿದ್ದಾರೆ. "ದೇಶದ ಶ್ರೇಷ್ಠ ಶೈಕ್ಷಣಿಕ ವ್ಯಕ್ತಿ ಶೇಖ್ ರಹೀಮುಲ್ಲಾ ಹಕ್ಕಾನಿ ಶತ್ರುಗಳ ಕ್ರೂರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ," ಎಂದು ಕರಿಮಿ ಹೇಳಿದ್ದಾರೆ.

ಕಳೆದ ಅಕ್ಟೋಬರ್ 2020ರಲ್ಲಿ, ಶೇಖ್ ರಹೀಮುಲ್ಲಾ ಅವರು ಪೇಶಾವರದಲ್ಲಿ ಆತ್ಮಹತ್ಯಾ ದಾಳಿಯಲ್ಲಿ ಬದುಕುಳಿದಿದ್ದರು. 'ಹದೀಸ್ ಸಾಹಿತ್ಯ'ದ ವಿದ್ವಾಂಸ ಎಂದು ಹೇಳಲಾದ ಹಕ್ಕಾನಿ, ಪಾಕಿಸ್ತಾನದ ಸ್ವಾಬಿ ಮತ್ತು ಅಕೋರಾ ಖಟ್ಟಕ್‌ನಲ್ಲಿರುವ ದೇವಬಂದಿ ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಪಡೆದಿದ್ದರು.

Afghan Taliban top leader Sheikh Rahimullah Haqqani killed in suicide explosion in Kabul

ತಾಲಿಬಾನ್ ಮಿಲಿಟರಿ ಆಯೋಗದ ಸದಸ್ಯರಾಗಿದ್ದ ಹಕ್ಕಾನಿ: ಶೇಖ್ ರಹೀಮುಲ್ಲಾ ಹಕ್ಕಾನಿ ನಂಗರ್‌ಹಾರ್ ಪ್ರಾಂತ್ಯದಲ್ಲಿ ತಾಲಿಬಾನ್ ಮಿಲಿಟರಿ ಆಯೋಗದ ಸದಸ್ಯರಾಗಿದ್ದರು. ಅಫ್ಘಾನಿಸ್ತಾನದಲ್ಲಿ US ಮಿಲಿಟರಿ ಪಡೆಗಳು ಹಕ್ಕಾನಿ ಸೇರಿದಂತೆ ಅನೇಕರನ್ನು ಬಾಗ್ರಾಮ್ ಜೈಲಿನಲ್ಲಿ ಬಂಧಿಸಲ್ಪಟ್ಟಿದ್ದರು.

English summary
Afghan Taliban top leader Sheikh Rahimullah Haqqani killed in suicide explosion in Kabul. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X