ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ಪಾರುಪತ್ಯ: ಅಫ್ಘಾನ್ ಗದ್ದುಗೆ ಬಿಟ್ಟು ಇಳಿದ ಅಧ್ಯಕ್ಷ ಅಶ್ರಫ್ ಘನಿ!

|
Google Oneindia Kannada News

ಕಾಬೂಲ್, ಆಗಸ್ಟ್ 15: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಪ್ರವೇಶಿಸಿದ ಬೆನ್ನಲ್ಲೇ ಯುನೈಟೆಡ್ ಸ್ಟೇಟ್ಸ್(ಯುಎಸ್) ಆಫ್ ಅಮೆರಿಕಾ ತಮ್ಮ ರಾಯಭಾರಿ ಕಚೇರಿಯ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ಕರೆಸಿಕೊಂಡಿದೆ. ಎಲ್ಲ ಅಧಿಕಾರವನ್ನು ಸ್ಥಳೀಯ ಆಡಳಿತಕ್ಕೆ ವಹಿಸಲಾಗಿದೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.

Recommended Video

ಅಫ್ಘಾನಿಸ್ತಾನದಲ್ಲಿ ಇನ್ಮುಂದೆ ತಾಲಿಬಾನ್ ಆಡಳಿತ | Oneindia Kannada

"ತಾಲಿಬಾನ್ ಬಂಡುಕೋರರು ಎಲ್ಲ ದಿಕ್ಕಿನಿಂದಲೂ ರಾಜಧಾನಿಯನ್ನು ಪ್ರವೇಶಿಸುತ್ತಿವೆ ಎಂದಿರುವ ಸಚಿವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಈ ನಡುವೆ ಯಾವುದೇ ರೀತಿ ಸಂಘರ್ಷ ನಡೆದಿರುವ ಬಗ್ಗೆ ವರದಿಯಾಗಿದೆ." "ಕಾಬೂಲ್‌ನಲ್ಲಿ ಶಾಂತಿಯುತ ಶರಣಾಗತಿ ಕುರಿತು ಸರ್ಕಾರದೊಂದಿಗೆ ಸಮಾಲೋಚನೆ ನಡೆಸುತ್ತಿದೆ," ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.

ನಿಮ್ ಸಹವಾಸವೇ ಬೇಡ; ಅಫ್ಘಾನ್ ಮತ್ತು ಭಾರತದ ಭವಿಷ್ಯ ಹೀಗಿರುತ್ತಾ!? ನಿಮ್ ಸಹವಾಸವೇ ಬೇಡ; ಅಫ್ಘಾನ್ ಮತ್ತು ಭಾರತದ ಭವಿಷ್ಯ ಹೀಗಿರುತ್ತಾ!?

"ಶಾಂತಿಯುತ ಮತ್ತು ತೃಪ್ತಿದಾಯಕ ರೀತಿಯಲ್ಲಿ ಅಧಿಕಾರದ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಕಾಬೂಲ್‌ನ ಎಲ್ಲಾ ಪ್ರವೇಶದ್ವಾರಗಳಲ್ಲೂ ತಾಲಿಬಾನ್ ಉಗ್ರರು ಸಶಸ್ತ್ರರಾಗಿ ನಿಂತಿರುತ್ತಾರೆ," ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 11 ದಾಳಿಯ ನಂತರ 20 ವರ್ಷಗಳ ಹಿಂದೆ ಅಮೆರಿಕದಿಂದ ಕಾಬೂಲ್‌ನಿಂದ ಹೊರಹಾಕಲ್ಪಟ್ಟ ತಾಲಿಬಾನ್‌ಗಳು ಇದೀಗ ಮತ್ತೆ ರಾಜಧಾನಿಯ ಪ್ರವೇಶಿಸಿ ಹಿಡಿತ ಸಾಧಿಸಲು ಮುಂದಾಗಿದ್ದಾರೆ.

ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ

ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ

ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅಧ್ಯಕ್ಷ ಅಶ್ರಫ್ ಘನಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಶನಿವಾರವಷ್ಟೇ ದೇಶದಲ್ಲಿ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಸ್ಥಳೀಯ ಮುಖಂಡರು ಮತ್ತು ಜಾಗತಿಕ ಮಿತ್ರಪಕ್ಷಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದರು. ಆದರೆ ಇದೀಗ ಅದೇ ಅಶ್ರಫ್ ಘನಿ ಅಧಿಕಾರದಿಂದ ಕೆಳಗಿಳಿದಿದ್ದು, ತಾಲಿಬಾನ್ ಬಂಡುಕೋರರಿಗೆ ಗದ್ದುಗೆ ಬಿಟ್ಟುಕೊಟ್ಟಿದ್ದಾರೆ ಎಂದು ವರದಿಯಾಗಿದೆ.

"ಸಾಂಪ್ರದಾಯಿಕವಾಗಿ ಅಧಿಕಾರವನ್ನು ಹಸ್ತಾಂತರಿಸಲಾಗುವುದು ಎಂದು ಸರ್ಕಾರದ ಆಂತರಿಕ ಸಚಿವ ಅಬ್ದುಲ್ ಸತ್ತರ್ ಮಿರ್ಜಾಕಾವಾಲ್ ಟ್ವೀಟ್ ಮಾಡಿದ್ದಾರೆ ಎಂದು ಟೋಲೋ ಸುದ್ದಿ ಸಂಸ್ಥೆ ವರದಿ ಮಾಡಿದೆ. "ನಗರದ ಮೇಲೆ ಯಾವುದೇ ರೀತಿಯಾದ ದಾಳಿಗಳು ನಡೆದಿಲ್ಲ, ಶಾಂತಿಯುತ ರೀತಿಯಲ್ಲೇ ಅಧಿಕಾರ ವರ್ಗಾವಣೆಗೆ ಒಪ್ಪಿಕೊಳ್ಳಲಾಗಿದೆ," ಎಂದಿದ್ದಾರೆ.

ಅಫ್ಘಾನ್ ರಾಜಧಾನಿಯ ಪರಿಸ್ಥಿತಿ ವಿವರಿಸಿ ಟ್ವೀಟ್

ಅಫ್ಘಾನ್ ರಾಜಧಾನಿಯ ಪರಿಸ್ಥಿತಿ ವಿವರಿಸಿ ಟ್ವೀಟ್

ಅಫ್ಘಾನಿಸ್ತಾನದಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿಯ ಬಗ್ಗೆ ಅಧ್ಯಕ್ಷೀಯ ಅರಮನೆ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಕಾಬೂಲ್ ಸುತ್ತಮುತ್ತಲಿನ ಹಲವು ಕಡೆಗಳಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ, ಆದರೆ ಭದ್ರತಾ ಪಡೆಗಳು ಅಂತರಾಷ್ಟ್ರೀಯ ಪಾಲುದಾರರೊಂದಿಗೆ ಸಮನ್ವಯದಿಂದ ನಗರದ ಮೇಲೆ ನಿಯಂತ್ರಣ ಹೊಂದಿದೆ ಎಂದು ಟ್ವೀಟ್ ಮೂಲಕ ಹೇಳಲಾಗಿದೆ. ಕಾಬೂಲ್‌ನಲ್ಲಿ ಕೆಲವು ಜನರು ಮನೆ ತಲುಪುವ ಆತುರದಲ್ಲಿದ್ದರೆ, ಇನ್ನು ಕೆಲವರು ವಿಮಾನ ನಿಲ್ದಾಣಕ್ಕೆ ತೆರಳುವ ವೇಗದಲ್ಲಿದ್ದರು. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾಬೂಲ್ ರಸ್ತೆಗಳಲ್ಲಿ ವಾಹನ ದಟ್ಟಣೆ ಮತ್ತು ಜನದಟ್ಟಣೆ ಹೆಚ್ಚಾಗಿತ್ತು. ಬಹುಪಾಲು ಜನರು ಕಾರುಗಳಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರೆ, ಇನ್ನು ಕೆಲವು ಏರ್ ಪೋರ್ಟ್ ತೆಲುಪುವ ಅವಸರದಲ್ಲಿ ನಡೆದುಕೊಂಡೇ ಹೋಗುತ್ತಿದ್ದರು," ಎಂದು ಕಾಬೂಲ್ ನಿವಾಸಿಗಳು ತಿಳಿಸಿದ್ದಾರೆ ಎಂದು ರಾಯಟರ್ಸ್ ವರದಿ ಮಾಡಿದೆ.

ಒಂದೇ ವಾರದಲ್ಲಿ ಅಫ್ಘಾನ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್

ಒಂದೇ ವಾರದಲ್ಲಿ ಅಫ್ಘಾನ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್

ಅಫ್ಘಾನಿಸ್ತಾನದ ಕೆಲವು ಪ್ರದೇಶಗಳಲ್ಲಿ ಯುಎಸ್ ವಾಯುಸೇನೆ ಬೆಂಬಲದ ಹೊರತಾಗಿಯೂ ತಾಲಿಬಾನ್ ಶಕ್ತಿಶಾಲಿ ಆಗುತ್ತಿದೆ. ಯುಎಸ್ ಸೇನಾ ಪಡೆಯನ್ನು ಹಿಂತೆಗೆದುಕೊಂಡ ಒಂದು ವಾರದಲ್ಲೇ ಇಡೀ ದೇಶದ ಚಿತ್ರಣವೇ ಬದಲಾಗಿ ಹೋಗಿದೆ. ಅಫ್ಘಾನಿಸ್ತಾನ ಸರ್ಕಾರ ಮತ್ತು ಸೇನೆಯನ್ನು ಆಕ್ರಮಿಸಿಕೊಂಡ ತಾಲಿಬಾನ್ ದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಒಂದೇ ವಾರದಲ್ಲಿ ದೇಶದ ಪ್ರಮುಖ ಪ್ರದೇಶಗಳ ಮೇಲೆ ತಾಲಿಬಾನ್ ಆಕ್ರಮಿಸಿಕೊಂಡಿದೆ. ಕೆಲವು ಪ್ರದೇಶಗಳಲ್ಲಿ ಸೇನೆಯನ್ನು ಸೋಲಿಸಿದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಸಂಘಟನೆಗೆ ಸಹಕಾರ ನೀಡಿದ ಸರ್ಕಾರದ ಭದ್ರತಾ ಪಡೆಗಳನ್ನು ಅಲ್ಲಿಂದ ಹಿಂತಿರುಗಿ ಕಳುಹಿಸಲಾಗಿದೆ. ಆದರೆ ತಾಲಿಬಾನ್ ಬಂಡುಕೋರರಿಗೆ ಬೆದರಿ ವಾಪಸ್ಸಾದ ಅಫ್ಘಾನ್ ಸೇನೆ ಮತ್ತು ಯೋಧರ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಶತಕೋಟಿಗಳನ್ನು ಖರ್ಚು ಮಾಡಿ ಅಮೆರಿಕಾದ ಸೇನೆಗಳಿಂದ ಅಫ್ಘಾನ್ ಅದೆಂಥಾ ತರಬೇತಿಗಳನ್ನು ಪಡೆದುಕೊಂಡಿದೆ ಎಂಬು ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.

ಅಫ್ಘಾನ್ ರಾಜಧಾನಿ ಮೇಲೆ ತಾಲಿಬಾನ್ ನಿಯಂತ್ರಣ

ಅಫ್ಘಾನ್ ರಾಜಧಾನಿ ಮೇಲೆ ತಾಲಿಬಾನ್ ನಿಯಂತ್ರಣ

ಭಾನುವಾರ ತಾಲಿಬಾನ್ ಸಂಘಟನೆಯ ಹೋರಾಟಗಾರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಹೊರವಲಯವನ್ನು ಪ್ರವೇಶಿಸಿದರು. ನಾವು ಬಲವಂತವಾಗಿ ನಗರವನ್ನು ವಶಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ ನಂತರ "ಶಾಂತಿಯುತ ವರ್ಗಾವಣೆ"ಗಾಗಿ ಕಾಯುತ್ತಿದ್ದೇವೆ ಎಂದು ತಾಲಿಬಾನ್ ಹೇಳಿದೆ. ಇದರ ಮಧ್ಯೆ ಯುಎಸ್ ರಾಯಭಾರ ಕಚೇರಿಯಲ್ಲಿ ಹೆಲಿಕಾಪ್ಟರ್‌ಗಳು ಬಂದಿಳಿಯುತ್ತಿದ್ದಂತೆ ಅನಿಶ್ಚಿತತೆಯ ಭೀತಿಯಲ್ಲಿ ಸರ್ಕಾರಿ ಕಚೇರಿಗಳಿಂದ ಸಿಬ್ಬಂದಿಯು ಓಡಿ ಹೋಗಿದ್ದಾರೆ.

ಈ ಮಧ್ಯೆ "ನಾವು ಕಾಬೂಲ್ ನಗರದ ಅಧಿಕಾರವನ್ನು ಶಾಂತಿಯುತವಾಗಿ ವರ್ಗಾಯಿಸುವ ನಿರೀಕ್ಷೆಯಲ್ಲಿದ್ದೇವೆ," ಎಂದು ತಾಲಿಬಾನ್ ವಕ್ತಾರ ಸುಶೈಲ್ ಶಾಹೀನ್ ಹೇಳಿದ್ದಾರೆ. ಕ್ವಾತಾರ್ ಪ್ರದೇಶದಲ್ಲಿ ಜಾಗತಿಕ ಸುದ್ದಿ ಸಂಸ್ಥೆ ಅಲ್-ಜಜಿರಾಗೆ ಅವರು ಪ್ರತಿಕ್ರಿಯೆ ನೀಡಿದ್ದು, ಶಾಂತಿಯುತ ಅಧಿಕಾರ ವರ್ಗಾವಣೆಗೆ ಸಂಬಂಧಿಸಿದಂತೆ ಅಫ್ಘಾನಿಸ್ತಾನ ಸರ್ಕಾರ, ಸೇನೆ ಮತ್ತು ತಾಲಿಬಾನ್ ನಡುವಿನ ಶಾಂತಿ ಮಾತುಕತೆ ಬಗ್ಗೆ ತಿಳಿಸಲು ನಿರಾಕರಿಸಿದ್ದಾರೆ. "ಯಾರೊಬ್ಬರ ಜೀವನ, ಆಸ್ತಿ ಮತ್ತು ಘನತೆಗೆ ಹಾನಿಯಾಗುವುದಿಲ್ಲ ಮತ್ತು ಕಾಬೂಲ್ ನಾಗರಿಕರ ಜೀವಕ್ಕೆ ಅಪಾಯವಿಲ್ಲ" ಎಂದು ತಾಲಿಬಾನ್ ತನ್ನ ಹಿಂದಿನ ಹೇಳಿಕೆಯಲ್ಲಿ ತಿಳಿಸಿತ್ತು.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಗೆ ಅಮೆರಿಕಾ ಎಚ್ಚರಿಕೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಗೆ ಅಮೆರಿಕಾ ಎಚ್ಚರಿಕೆ

ತಾಲಿಬಾನ್ ಮುಷ್ಠಿಗೆ ಸಿಲುಕಿರುವ ಪ್ರದೇಶಗಳಿಂದ ಅಮೆರಿಕಾದ ಅಧಿಕಾರಿಗಳು ಮತ್ತು ಪ್ರಜೆಗಳನ್ನು ಸ್ಥಳಾಂತರಿಸಲು ಜೋ ಬೈಡನ್ ತೀರ್ಮಾನಿಸಿದ್ದಾರೆ. ಈ ಸ್ಥಳಾಂತರ ಪ್ರಕ್ರಿಯೆ ವೇಳೆ ಅಡ್ಡಿಪಡಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ತಾಲಿಬಾನ್ ಸಂಘಟನೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಫ್ಘಾನಿಸ್ತಾನದ ಜೊತೆಗೆ ಮಾಡಿಕೊಂಡ 20 ವರ್ಷಗಳ ಒಪ್ಪಂದ ಅಂತ್ಯಗೊಂಡ ಹಿನ್ನೆಲೆ ಆ ದೇಶದಲ್ಲಿರುವ ತಮ್ಮವರನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. "ಸ್ಥಳಾಂತರ ಪ್ರಕ್ರಿಯೆ ನಡೆಸುವುದಕ್ಕೆ 3,000 ದಿಂದ ಸುಮಾರು 5,000 ಭದ್ರಾತ ಸಿಬ್ಬಂದಿಯನ್ನು ರವಾನಿಸಲಾಗಿದೆ. ಅಲ್ಲಿ ಯುಎಸ್ ಸೇನಾ ಕಾರ್ಯಾಚರಣೆಗೆ ಯಾವುದೇ ರೀತಿಯ ಅಡ್ಡಿ-ಆತಂಕಗಳು ಎದುರಾದಲ್ಲಿ ಯುಎಸ್ ಸೇನಾ ಪಡೆಗಳಿಂದ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ, ಎಂದು ತಾಲಿಬಾನ್ ಸಂಘಟನೆಗೆ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.

English summary
Afghan President Ashraf Ghani To Step Down from Power, After Taliban Enter Kabul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X