ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರ ರಾಕ್ಷಸರ ಜೊತೆ ಮತ್ತೆ ಸಂಧಾನ..! ವರ್ಕೌಟ್ ಆಗುತ್ತಾ ಅಮೆರಿಕದ ತಂತ್ರ..?

|
Google Oneindia Kannada News

ಅವರು ಅಕ್ಷರಶಃ ನರ ರಾಕ್ಷಸರು, ಕರುಣೆ ಇಲ್ಲದವರು, ಮನುಷ್ಯರ ರಕ್ತ ಹೀರುವ ಪಿಶಾಚಿಗಳು. ಅಂದಹಾಗೆ ನಾವು ಹೇಳುತ್ತಿರುವುದು ತಾಲಿಬಾನಿ ಉಗ್ರರ ವಿಕೃತಿಯ ಬಗ್ಗೆ. ಆದರೆ ಇಂತಹ ಉಗ್ರರನ್ನು ಹೊಡೆದುರುಳಿಸಿ, ಶಾಂತಿ ಸ್ಥಾಪನೆ ಮಾಡಲಾಗದ ಅಫ್ಘಾನಿಸ್ತಾನದ ಸರ್ಕಾರ ಶಾಂತಿ ಮಂತ್ರ ಜಪಿಸುತ್ತಿದೆ. 2020ರ ಸೆಪ್ಟೆಂಬರ್ ತಿಂಗಳಲ್ಲಿ ತಾಲಿಬಾನಿ ನಾಯಕರು ಹಾಗೂ ಅಫ್ಘಾನಿಸ್ತಾನ ಸರ್ಕಾರದ ಮಧ್ಯೆ ಮಾತುಕತೆ ಆರಂಭವಾಗಿತ್ತು.

ಈ ಹಿನ್ನೆಲೆಯಲ್ಲಿ ಖತಾರ್ ರಾಜಧಾನಿ ದೋಹಾ ಮಾತುಕತೆಗೆ ವೇದಿಕೆ ಒದಗಿಸಿತ್ತು. ಆದರೆ ಮಾತುಕತೆ ಆರಂಭ ಆದ ಕೆಲವೇ ದಿನಗಳಲ್ಲಿ ತಾಲಿಬಾನ್ ಗ್ಯಾಂಗ್ ತನ್ನ ಅಟ್ಟಹಾಸ ಮುಂದುವರಿಸಿತ್ತು. ಪೊಲೀಸರ ಮೇಲೆ ಪದೇ ಪದೆ ದಾಳಿಗಳೂ ನಡೆದಿದ್ದವು. ಇನ್ನು ಜನರ ಜೀವ ತೆಗೆದಿದ್ದು ಇವರಿಗೆಲ್ಲಾ ಲೆಕ್ಕಕ್ಕೇ ಇರಲಿಲ್ಲ. ಅದರ ಜೊತೆಗೆ ಅಮೆರಿಕದಲ್ಲಿ ಕೂಡ ನಾಯಕತ್ವ ಬದಲಾವಣೆ ಆಗಿತ್ತು. ಹೀಗಾಗಿ ತಾಲಿಬಾನಿ ನಾಯಕರು ಹಾಗೂ ಅಫ್ಘಾನ್ ಸರ್ಕಾರದ ನಡುವೆ ಶಾಂತಿ ಮಾತುಕತೆ ನಿಂತಿತ್ತು. ಆದರೆ ಈಗ ಮತ್ತೆ ಮಾತುಕತೆ ಪುನಾರಂಭಗೊಂಡಿದೆ.

 ಉಗ್ರರಿಗೆ ಟ್ರಂಪ್ ನೀತಿ ಪಾಠ..!

ಉಗ್ರರಿಗೆ ಟ್ರಂಪ್ ನೀತಿ ಪಾಠ..!

ತಾಲಿಬಾನಿ ಉಗ್ರರನ್ನು ಅಫ್ಘಾನಿಸ್ತಾನ ಸರ್ಕಾರದ ಜೊತೆ ರಾಜಿ ಮಾಡಿಸಲು ಸ್ವತಃ ಟ್ರಂಪ್ ಅಖಾಡಕ್ಕೆ ಪ್ರವೇಶ ಮಾಡಿದ್ದರು. ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಉಗ್ರರು ಹಾಗೂ ಅಫ್ಘಾನ್ ಸರ್ಕಾರದ ಮಧ್ಯೆ ಶಾಂತಿ ಒಪ್ಪಂದ ಮಾಡಿಸಲು ಒತ್ತಡ ಹೇರಿದ್ದರು. ಈ ಕಾರಣಕ್ಕೆ ಸೆಪ್ಟೆಂಬರ್‌ನಲ್ಲಿ ಮಾತುಕತೆ ಆರಂಭವಾಗಿತ್ತು. ಆದರೆ ನಂತರ ನಡೆದ ರಾಜಕೀಯ ಏರುಪೇರುಗಳು ಸ್ವತಃ ಟ್ರಂಪ್ ಅವರನ್ನೇ ಅಧಿಕಾರದಿಂದ ಓಡಿಸಿಬಿಟ್ಟಿದೆ. ಹೀಗಾಗಿ ಮಾತುಕತೆ ಅರ್ಧಕ್ಕೆ ನಿಂತಿತ್ತು. ಆದರೆ ಇದೀಗ ಬೈಡನ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಎಲ್ಲವೂ ಸುಸ್ತಿಯಲ್ಲಿರುವ ಹಿನ್ನೆಲೆಯಲ್ಲಿ ಉಗ್ರರ ಜೊತೆ ಮತ್ತೆ ಚರ್ಚೆ ಆರಂಭಿಸಿದೆ ಅಫ್ಘಾನಿಸ್ತಾನ ಸರ್ಕಾರ.

ಇದರಿಂದ ಅಮೆರಿಕ ಲಾಭ ಪಡೆಯುತ್ತಾ..?

ಇದರಿಂದ ಅಮೆರಿಕ ಲಾಭ ಪಡೆಯುತ್ತಾ..?

ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ನೆಪದಲ್ಲಿ ಬಂದು ಸೇರಿದ್ದ ಅಮೆರಿಕ ಪಡೆಗಳು ಈಗ ತವರಿಗೆ ಮರಳಬೇಕಿದೆ. ಅಮೆರಿಕ ಕೂಡ ಆರ್ಥಿಕವಾಗಿ ತೀರಾ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಹೀಗಾಗಿ ಅಫ್ಘಾನಿಸ್ತಾನದಲ್ಲಿರುವ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಈಗಾಗಲೇ ನೂರಾರು ಬೆಟಾಲಿಯನ್‌ಗಳನ್ನು ಟ್ರಂಪ್ ಮರಳಿ ತಮ್ಮ ದೇಶಕ್ಕೆ ಕರೆಸಿಕೊಂಡಿದ್ದಾರೆ. ಆದರೆ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿದೆ. ಹಾಗಂತ ದಿಢೀರ್ ಅಫ್ಘಾನಿಸ್ತಾನದಿಂದ ಅಷ್ಟೂ ಸೈನಿಕರನ್ನು ವಾಪಸ್ ಕರೆಯಲು ಆಗುವುದಿಲ್ಲ. ಹೀಗೆ ಮಾಡಿದರೆ ಮತ್ತೆ ತಾಲಿಬಾನಿ ಉಗ್ರರು ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ. ಈ ಕಾರಣಕ್ಕೆ ಅಮೆರಿಕ ತಾಲಿಬಾನಿ ಉಗ್ರರು ಮತ್ತು ಅಫ್ಘಾನಿಸ್ತಾನ ಸರ್ಕಾರದ ಜೊತೆ ಸಂಧಾನಕ್ಕೆ ಬ್ರೋಕರ್ ರೀತಿ ಮಧ್ಯಸ್ಥಿಕೆ ವಹಿಸಿದೆ. ಈ ಮೂಲಕ ತನ್ನ ಬೇಳೆಯನ್ನೂ ಬೇಯಿಸಿಕೊಳ್ಳುತ್ತಿದೆ.

 ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದರು..!

ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದರು..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅದೆಷ್ಟು ಕ್ರೂರವಾಗಿ ವರ್ತಿಸುತ್ತಿದೆ ಎಂದರೆ, ಅಲ್ಲಿನ ಪ್ರಧಾನಿ, ಅಧ್ಯಕ್ಷರು, ಉಪಾಧ್ಯಕ್ಷರಿಗೇ ಸರಿಯಾದ ಭದ್ರತೆ ಸಿಗುತ್ತಿಲ್ಲ. ಕೆಲವು ತಿಂಗಳ ಹಿಂದೆ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ಪಾರ್ಲಿಮೆಂಟ್ ಮೇಲೆ ದಾಳಿಗೆ ಮುಂದಾಗಿದ್ದರು. ಅದೃಷ್ಟವಶಾತ್ ಸೂಸೈಡ್ ಬಾಂಬರ್ ಅಫ್ಘಾನ್ ಸಂಸತ್ ಭವನದಿಂದ ದೂರದಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ್ದ. ಇದರಿಂದ ಜನಪ್ರತಿನಿಧಿಗಳ ಜೀವ ಉಳಿದಿತ್ತು. ಆದರೆ ಅಂದಿನ ಸ್ಫೋಟದ ತೀವ್ರತೆಗೆ ಅಫ್ಘಾನಿಸ್ತಾನದ ಪಾರ್ಲಿಮೆಂಟ್ ಕಟ್ಟಡವೇ ನಡುಗಿ ಹೋಗಿತ್ತು. ಗೋಡೆಗಳು ಬಿರುಕುಬಿಡುವಷ್ಟು ತೀವ್ರತೆ ಆ ಸ್ಫೋಟಕ್ಕೆ ಇತ್ತು.

ಶಾಂತಿ ನೆಲೆಸಿದರೆ ಪಾಕಿಸ್ತಾನಕ್ಕೆ ಗುನ್ನಾ..!

ಶಾಂತಿ ನೆಲೆಸಿದರೆ ಪಾಕಿಸ್ತಾನಕ್ಕೆ ಗುನ್ನಾ..!

ಅಮೆರಿಕ ಒಂದೇ ಏಟಿಗೆ 2 ಹಕ್ಕಿಗಳಿಗೆ ಗುರಿ ಇಟ್ಟಿದೆ. ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಿದರೆ ತನ್ನ ಸೇನೆಯನ್ನು ಆರಾಮಾಗಿ ವಾಪಸ್ ಕರೆಸಿಕೊಳ್ಳಬಹುದು. ಮತ್ತೊಂದ್ಕಡೆ ಪಾಕಿಸ್ತಾನ ಅಮೆರಿಕದ ಹಿಡಿತದಲ್ಲಿ ಇಲ್ಲ. ಹೀಗಾಗಿ ಪಾಕಿಸ್ತಾನ ಪಕ್ಕದಲ್ಲೇ ತಾನು ಭದ್ರವಾಗಿ ತಳವೂರಬಹುದು ಎಂಬುದು ಕಿಲಾಡಿ ಅಮೆರಿಕ ಲೆಕ್ಕಾಚಾರ. ಅದೇನೆ ಇರಲಿ ದಶಕಗಳ ಕಾಲ ನೆಮ್ಮದಿಯನ್ನೇ ಕಾಣದ 3 ತಲೆಮಾರುಗಳು ಈಗಲಾದ್ರೂ ಅಫ್ಘಾನಿಸ್ತಾನದಲ್ಲಿ ನೆಮ್ಮದಿ ಹಾಗೂ ಶಾಂತಿಯುತ ವಾತಾವರಣದಲ್ಲಿ ಬದುಕುವಂತಾಗಲಿ. ಆದರೆ ಮಾತುಕತೆ ಬಳಿಕ ತಾಲಿಬಾನಿಗಳು ಏನು ಮಾಡುತ್ತಾರೆ ಎಂಬುದೇ ಅಫ್ಘಾನಿಸ್ತಾನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

English summary
Afghanistan governments peace talks with Taliban leaders restarts in Qatar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X