ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಭಾರ ಕಚೇರಿ ದಾಳಿ; ಮೋದಿ ಟ್ವೀಟ್, ದೂರವಾಣಿ ಕರೆ

By Srinath
|
Google Oneindia Kannada News

ನವದೆಹಲಿ, ಮೇ 23: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಅಫಘಾನಿಸ್ತಾನದಲ್ಲಿನ ಭಾರತದ ರಾಯಭಾರಿ ಅಮರ್ ಸಿನ್ಹಾ ಅವರಿಗೆ ದೂರವಾಣಿ ಕರೆ ಮಾಡಿ, ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. 'ದಾಳಿಯಿಂದ ಧೃತಿಗೆಡದಂತೆ' ಸಿನ್ಹಾ ಅವರಲ್ಲಿ ಮೋದಿ ಧೈರ್ಯ ತುಂಬಿದ್ದಾರೆ. ಟ್ವೀಟ್ ಮಾಡಿ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಬೆಳಗಿನ ಸುದ್ದಿ: ಇತ್ತ ನರೇಂದ್ರ ಮೋದಿ ಅವರು ತಾವು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಮಾರಂಭಕ್ಕೆ ನೆರೆಹೊರೆ ರಾಷ್ಟ್ರಗಳ ನಾಯಕರನ್ನು ಆಹ್ವಾನ ನೀಡಿ, ಸ್ನೇಹದ ಹಸ್ತ ಚಾಚಿರುವ ಸಮಯದಲ್ಲೇ ಅತ್ತ ಅಫಘಾನಿಸ್ತಾನದಲ್ಲಿ ಭಯೋತ್ಫಾದಕರು ಕುಕೃತ್ಯವೆಸಗಿದ್ದಾರೆ.

Afghan Indian consulate office attacked by muslim gunmen staff safe

ಅಫಘಾನಿಸ್ತಾನದ ಪಶ್ಚಿಮ ಪ್ರಾಂತ್ಯವಾದ ಹೆರಾತ್ ನಲ್ಲಿರುವ ಭಾರತದ ರಾಯಭಾರ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಮಷಿನ್ ಗನ್ ಮತ್ತು ರಾಕೆಟ್ ಗ್ರೆನೇಡುಗಳನ್ನು ಹೊಂದಿದ್ದ ಉಗ್ರರು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.

ತಾಜಾ ವರದಿಗಳ ಪ್ರಕಾರ ಭಾರತದ ರಾಯಭಾರ ಕಚೇರಿಯ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದು, ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ. ರಾಯಭಾರ ಕಚೇರಿಯ ಸಮೀಪದ ಮನೆಯ ಬಳಿ ನಿಂತು ಆರು ಮಂದಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ರಾಯಭಾರ ಕಚೇರಿಯ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿ, ನಾಲ್ವರನ್ನು ಹೊಡೆದುರುಳಿಸಿದ್ದಾರೆ. ಆದರೆ ಮತ್ತಿಬ್ಬರು ದಾಳಿಯನ್ನು ಮುಂದುವರಿಸಿದ್ದಾರೆ.

ಯಾವುದೇ ಸಂಘಟನೆಗಳು ಕುಕೃತ್ಯಕ್ಕೆ ಹೊಣೆ ಹೊತ್ತಿಲ್ಲ. ಯುದ್ಧಪೀಡಿತ ಆಪ್ಘಾನ್ ದೇಶದಲ್ಲಿ ತಳವೂರಿರುವ ವಿದೇಶಿ ಸೇನಾಪಡೆಗಳು ಇದೇ ವರ್ಷಾಂತ್ಯ ಕಾಲ್ತೆಗೆಯಲಿವೆ. ಈ ಮಧ್ಯೆ, ವಿದೇಶಿ ರಾಯಭಾರ ಕಚೇರಿಗಳನ್ನು ಗುರಿಯಾಗಿಸಿಕೊಂಡು ಮುಸ್ಲಿಂ ಬಂಡುಕೋರರು (ತಾಲಿಬಾನಿಗಳು) ಆಗಾಗ್ಗೆ ಇಂತಹ ದಾಳಿಗಳನ್ನು ನಡೆಸುತ್ತಿದ್ದಾರೆ.

ಪ್ರತೀಕಾರ: ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಫಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳಲು ಹಮೀದ್ ಅವರು ಒಲವು ತೋರಿರುವ ಹಿನ್ನೆಲೆಯಲ್ಲಿ ಉಗ್ರರು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದ್ದು, ಎಲ್ಲಾ ಭಾರತೀಯ ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ. ಘಟನೆ ಸಂಬಂಧ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಪಾಕ್ ಖಂಡನೆ: ಇದೇ ವೇಳೆ, ಅಫಘಾನಿಸ್ತಾನದ ಭಾರತೀಯ ರಾಯಭಾರಿ ಕಚೇರಿ ಮೇಲಿನ ಉಗ್ರರ ದಾಳಿಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದ್ದು, ಭಯೋತ್ಪಾದಕರ ದಾಳಿ ದುರದೃಷ್ಟಕರ ಎಂದು ಹೇಳಿದೆ.

English summary
Afghan Indian consulate office attacked by muslim gunmen staff safe. Indian consulate in in western Afghanistan's Herat province was attacked on Friday morning by unidentified gunmen armed with machine guns and rocket-propelled grenades. Reportedly, all the consulate staff are safe. According to police, the three attackers opened fire on the consulate from a nearby home. Two of them was killed by police, while the third gunman continued the assault.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X