• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಷ್ಟೇ ಉಗ್ರರು ಬರಲಿ ಅವರನ್ನೂ ಕೊಲ್ಲುತ್ತೇನೆ: ಬಾಲಕಿಯ ದಿಟ್ಟ ಮಾತು

|

ಅಫ್ಘಾನಿಸ್ತಾನ, ಜುಲೈ 23: ಕ್ಷುಲ್ಲಕ ಕಾರಣಕ್ಕೆ ತಂದೆ-ತಾಯಿಯನ್ನು ಕೊಂದಿದ್ದ ಉಗ್ರರನ್ನು ಹತ್ಯೆ ಮಾಡಿದ್ದ ಬಾಲಕಿ ಇದೀಗ ಮತ್ತೊಂದು ಸವಾಲು ಎದುರಿಸಲು ಸಿದ್ಧಳಿದ್ದಾಳೆ.

   ಅಭಿಮಾನಿಗಳೊಂದಿಗೆ ಖುಷಿ ವಿಚಾರ ಹಂಚಿಕೊಂಡ ಸುಮಲತಾ | Oneindia Kannada

   ಮತ್ತಷ್ಟು ಉಗ್ರರು ಬಂದರೂ ಅವರನ್ನು ಹತ್ಯೆಗೈಯಲು ಸಿದ್ಧಳಿದ್ದೇನೆ ಎಂದು ಆಕೆ ಹೇಳಿದ್ದಾಳೆ.

   ಕಳೆದ ವಾರ ಅಫ್ಘಾನಿಸ್ತಾನದ ಘೋರ್​ ಪ್ರಾಂತ್ಯದಲ್ಲಿರುವ ಬಾಲಕಿಯ ಮನೆಗೆ ನುಗ್ಗಿದ ಒಂದಷ್ಟು ಉಗ್ರರು, ಸರ್ಕಾರದ ಬೆಂಬಲಿಗರಾಗಿದ್ದ, ಹಳ್ಳಿಯ ಮುಖ್ಯಸ್ಥರಾಗಿದ್ದ ಅವಳ ತಂದೆಯನ್ನು ಹತ್ಯೆ ಮಾಡಿದ್ದರು. ಹಾಗೇ ತಡೆಯಲು ಹೋದ ತಾಯಿಯನ್ನೂ ಕೊಂದಿದ್ದರು.

   ಕಣ್ಣೆದುರಲ್ಲೇ ಅಪ್ಪ ಅಮ್ಮನನ್ನು ಕೊಂದ ತಾಲಿಬಾನ್ ಉಗ್ರರಿಗೆ, ಮಗಳ ಬೆಚ್ಚಿಬೀಳಿಸುವ ಪ್ರತೀಕಾರ

   ಆಗ 15 ವರ್ಷದ ಬಾಲಕಿ ಕಮರ್​ ಗುಲ್​, ಮನೆಯೊಳಗೆ ಇದ್ದ ಬಂದೂಕಿನಿಂದ ಉಗ್ರರೆಡೆಗೆ ಗುಂಡು ಹಾರಿಸಿದ್ದರು. ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದರು. ಬಾಲಕಿಯ ಸಾಹಸಗಾಥೆ ಭರ್ಜರಿ ಸುದ್ದಿಯಾಗಿತ್ತು. ಆಕೆ ಬಂದೂಕು ಹಿಡಿದುಕೊಂಡಿದ್ದ ಫೋಟೋಗಳೂ ವೈರಲ್ ಆಗಿತ್ತು.

   ತನ್ನ ತಂದೆ-ತಾಯಿಯ ಹತ್ಯೆ ಆಗಿರುವ ದಿನ ಏನಾಯಿತು ಎಂಬುದನ್ನು ವಿವರಿಸಿದ್ದಾಳೆ. ನಾನು ಅಂದು ನನ್ನ 12 ವರ್ಷದ ಸೋದರನೊಂದಿಗೆ ಒಂದು ಕೋಣೆಯಲ್ಲಿ ಮಲಗಿದ್ದೆ. ಆಗ ನಮ್ಮ ಮನೆಯ ಬಾಗಿಲನ್ನು ಯಾರೋ ಜೋರಾಗಿ ತಳ್ಳಿದ ಶಬ್ದವಾಯಿತು.

   ಅವರನ್ನು ತಡೆಯಲು ನನ್ನ ಅಮ್ಮ ಪ್ರಯತ್ನ ಮಾಡುತ್ತಿದ್ದರು. ಕೂಗಾಟ ಕೇಳುತ್ತಿತ್ತು. ಆದರೆ ಉಗ್ರರು ಬಾಗಿಲನ್ನು ಅರ್ಧ ಮುರಿದು ಆಗಿತ್ತು. ನಂತರ ಅಪ್ಪನನ್ನು ಎಳೆದುಕೊಂಡು ಹೋದರು. ತಡೆಯಲು ಹೋದ ಅಮ್ಮನನ್ನು ಹೊರಗೆ ಎಳೆದರು. ನನಗೆ ತುಂಬ ಭಯವಾಗಿತ್ತು. ಆದರೆ ಬರುಬರುತ್ತ ನನಗೂ ಸಿಕ್ಕಾಪಟೆ ಸಿಟ್ಟು ಬಂತು.

   ಒಂದು ಕ್ಷಣವೂ ತಡ ಮಾಡದೆ ನಮ್ಮ ಮನೆಯೊಳಗೆ ಇದ್ದ ಗನ್​ ತೆಗೆದುಕೊಂಡು ಬಂದು ಒಂದೇ ಸಮ ಗುಂಡು ಹಾರಿಸಿದೆ. ಎಕೆ 47 ಗನ್​ನಲ್ಲಿ ಹೇಗೆ ಶೂಟ್​ ಮಾಡಬೇಕು ಎಂಬುದನ್ನು ಅಪ್ಪನಿಂದಲೇ ಕಲಿತಿದ್ದೆ ಎಂದಿದ್ದಾಳೆ.

   ಅಷ್ಟರಲ್ಲಿ ಇನ್ನೋರ್ವ ಉಗ್ರ ನನ್ನ ತಮ್ಮನೆಡೆಗೆ ಹೋಗುತ್ತಿದ್ದ. ಆಗ ನನ್ನ ಸೋದರ ನನ್ನಿಂದ ಗನ್​ ಕಸಿದುಕೊಂಡು ಗುಂಡು ಹಾರಿಸಿದ. ಆ ಉಗ್ರ ಗಾಯಗೊಂಡು ಓಡಲು ಶುರು ಮಾಡಿದ ಎಂದು ಕಮರ್​ ಘಟನೆಯನ್ನು ವಿವರಿಸಿದ್ದಾರೆ.

   ನನ್ನ ತಂದೆ-ತಾಯಿಯನ್ನು ಕೊಂದವರನ್ನು ನಾನು ಹತ್ಯೆ ಮಾಡಿದ್ದರ ಬಗ್ಗೆ ನನಗೆ ಹೆಮ್ಮೆಯಿದೆ. ನನಗೆ ಗೊತ್ತು, ಉಗ್ರರು ನನ್ನ ಮತ್ತು ಸೋದರನನ್ನು ಕೊಲ್ಲಲು ಮತ್ತೆ ಬರುತ್ತಾರೆ. ಆದರೆ ಖಂಡಿತ ಭಯವಿಲ್ಲ. ಯಾರೇ ಬಂದರೂ ಅವರೊಂದಿಗೆ ಹೋರಾಡಲು ಸಿದ್ಧನಿದ್ದೇನೆ ಎಂದಿದ್ದಾಳೆ.

   English summary
   An Afghan girl who shot dead two Taliban fighters after they gunned down her parents said she was ready to confront any other insurgents who might try to attack her.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X