ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್‌ ರಾಯಭಾರಿ ಪುತ್ರಿಯನ್ನು ಇಸ್ಲಾಮಾಬಾದ್‌ನಲ್ಲಿ ಅಪಹರಿಸಿ ಹಿಂಸೆ ಆರೋಪ

|
Google Oneindia Kannada News

ಕಾಬೂಲ್‌, ಜು.18: ಪಾಕಿಸ್ತಾನದ ಅಫ್ಘಾನ್‌ ರಾಯಭಾರಿ ನಜೀಬುಲ್ಲಾ ಅಲಿಖಿಲ್‌ರ ಪುತ್ರಿಯನ್ನು ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಅಪಹರಿಸಿ ತೀವ್ರವಾಗಿ ಹಿಂಸಿಸಿದ್ದಾರೆ ಎಂದು ಅಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಘಟನೆಯ ಬಗ್ಗೆ ಅಫ್ಘಾನಿಸ್ತಾನ ಸರ್ಕಾರವು ತೀವ್ರ ಪ್ರತಿಭಟನೆ ಹಾಗೂ ಕಳವಳವನ್ನು ವ್ಯಕ್ತಪಡಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಅಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, "ಈ ಅಪರಾಧದ ದುಷ್ಕರ್ಮಿಗಳನ್ನು ಗುರುತಿಸಲು ಮತ್ತು ಶಿಕ್ಷಿಸಲು ತ್ವರಿತ ಕ್ರಮ ಕೈಗೊಳ್ಳಬೇಕು. ಅಫ್ಘಾನ್‌ ರಾಜತಾಂತ್ರಿಕರು ಮತ್ತು ಕುಟುಂಬಕ್ಕೆ ಸಂಪೂರ್ಣ ಭದ್ರತೆ ನೀಡಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ವಿದೇಶಾಂಗ ಸಚಿವಾಲಯ ಪಾಕಿಸ್ತಾನ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ," ಎಂದು ಹೇಳಿದೆ.

ತಾಲಿಬಾನ್‌ ದಾಳಿಗೆ ತತ್ತರಿಸಿದ ಅಫ್ಘಾನ್‌ ಮೇಲೆ ಭಾರತದ ಹೂಡಿಕೆ ಎಷ್ಟು?: ಇಲ್ಲಿದೆ ಸಂಪೂರ್ಣ ವಿವರತಾಲಿಬಾನ್‌ ದಾಳಿಗೆ ತತ್ತರಿಸಿದ ಅಫ್ಘಾನ್‌ ಮೇಲೆ ಭಾರತದ ಹೂಡಿಕೆ ಎಷ್ಟು?: ಇಲ್ಲಿದೆ ಸಂಪೂರ್ಣ ವಿವರ

2021 ರ ಜುಲೈ 16 ರಂದು ಇಸ್ಲಾಮಾಬಾದ್‌ನಲ್ಲಿ ಅಫ್ಘಾನ್‌ ರಾಯಭಾರಿಯ ಪುತ್ರಿ ಸಿಲ್ಸಿಲಾ ಅಲಿಖಿಲ್‌ ಮನೆಗೆ ತೆರಳುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಗಳು ಕೆಲ ಗಂಟೆಗಳ ಕಾಲ ಅಪಹರಿಸಿದ್ದಾರೆ. ಹಾಗೆಯೇ ಈ ಅಪರಿಚಿತ ವ್ಯಕ್ತಿಗಳು ತೀವ್ರವಾಗಿ ಹಿಂಸೆ ನೀಡಿದ್ದಾರೆ ಎಂದು ಅಫ್ಘಾನಿಸ್ತಾನ ತೀವ್ರ ವಿಷಾದ ವ್ಯಕ್ತಪಡಿಸಿದೆ. ಅಪಹರಣಕಾರರಿಂದ ಬಿಡುಗಡೆಯಾದ ಬಳಿಕ ಸಿಲ್ಸಿಲಾರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

 Afghan envoys daughter abducted, tortured in Islamabad alleges Afghanistan Foreign Ministry

ಇನ್ನು ಈ ಬೆನ್ನಲ್ಲೇ ಪಾಕಿಸ್ತಾನದ ಸಚಿವಾಲಯವು, ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಾಯಭಾರಿ ಹಾಗೂ ಕುಟುಂಬಕ್ಕೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯವು ತಿಳಿಸಿದೆ.

ಇತ್ತೀಚಿಗೆ ತಾಲಿಬಾನ್ ಅಫ್ಘಾನಿಸ್ತಾನದ ಹಲವಾರು ಜಿಲ್ಲೆಗಳನ್ನು ವಶಪಡಿಸಿಕೊಂಡಿದ್ದು, ಪ್ರಸ್ತುತ ದೇಶದ ಮೂರನೇ ಒಂದು ಭಾಗವನ್ನು ನಿಯಂತ್ರಿಸುತ್ತಿದೆ ಎಂದು ಹೇಳಿಕೊಂಡಿದೆ. ಆದರೆ ಪಾಕಿಸ್ತಾನವು ತಾಲಿಬಾನ್ ಅನ್ನು ಬೆಂಬಲಿಸುತ್ತಿದೆ ಎಂದು ಅಫ್ಘಾನ್ ಸರ್ಕಾರ ಪದೇ ಪದೇ ಆರೋಪಿಸುತ್ತಿದೆ. ಪಾಕಿಸ್ತಾನ ವಾಯುಪಡೆಯು ತಾಲಿಬಾನ್‌ಗೆ ವಾಯು ಬೆಂಬಲ ನೀಡುತ್ತಿದೆ ಎಂದು ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಗುರುವಾರ ಆರೋಪಿಸಿದ್ದಾರೆ. ಈ ನಡುವೆ ಅಫ್ಘಾನಿಸ್ತಾನದ ರಾಯಭಾರಿ ಪುತ್ರಿಯನ್ನು ಇಸ್ಲಾಮಾಬಾದ್‌ನಲ್ಲಿ ಅಪಹರಣ ಮಾಡಿರುವ ವರದಿಯಾಗಿದೆ.

ಗಡಿ ಸಮೀಪದ ಪ್ರದೇಶ ತಾಲಿಬಾನ್‌ ವಶಕ್ಕೆ ಪಡೆದ ಬಳಿಕ ಅಫ್ಘಾನ್‌ನ ಪ್ರಮುಖ ಗಡಿ ಮುಚ್ಚಿದ ಪಾಕ್‌ಗಡಿ ಸಮೀಪದ ಪ್ರದೇಶ ತಾಲಿಬಾನ್‌ ವಶಕ್ಕೆ ಪಡೆದ ಬಳಿಕ ಅಫ್ಘಾನ್‌ನ ಪ್ರಮುಖ ಗಡಿ ಮುಚ್ಚಿದ ಪಾಕ್‌

ಶುಕ್ರವಾರ, ಉಜ್ಬೇಕಿಸ್ತಾನ್ ರಾಜಧಾನಿ ತಾಷ್ಕೆಂಟ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ, "ಪಾಕಿಸ್ತಾನ ಸರ್ಕಾರದ ಮೇಲೆ ದಾಳಿ ನಡೆಸಿದರು. ಇಸ್ಲಾಮಾಬಾದ್ ಅಫ್ಘಾನಿಸ್ತಾನದಲ್ಲಿ ಹಿಂಸಾಚಾರವನ್ನು ಹೆಚ್ಚಿಸುತ್ತಿದೆ. ಕಳೆದ ತಿಂಗಳಲ್ಲಿ 10,000 ಕ್ಕೂ ಹೆಚ್ಚು ಜಿಹಾದಿ ಯೋಧರು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಬಂದಿದ್ದಾರೆ. ಅಫ್ಘಾನ್ ಸೈನಿಕರೊಂದಿಗಿನ ಘರ್ಷಣೆಯ ನಂತರ ತಾಲಿಬಾನ್ ಉಗ್ರರು ಪಾಕಿಸ್ತಾನದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ," ಎಂದು ಆರೋಪಿಸಿದ್ದಾರೆ.

ಏತನ್ಮಧ್ಯೆ, ಪಾಕಿಸ್ತಾನ ವಿದೇಶಾಂಗ ಕಚೇರಿ ಆರೋಪಗಳನ್ನು ನಿರಾಕರಿಸಿದೆ. "ನಾವು ಅಫ್ಘಾನಿಸ್ತಾನದಲ್ಲಿ ಶಾಂತಿಗಾಗಿ ಬದ್ಧರಾಗಿದ್ದೇವೆ ಮತ್ತು ವಿರೋಧಿಗಳೆಂದು ಲೆಕ್ಕಿಸದೆ ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರಿಸುತ್ತೇವೆ," ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ತಿಳಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
Afghan envoy's daughter abducted, tortured in Islamabad alleges Afghanistan Foreign Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X