ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ತಿಂಗಳ ಬಳಿಕ ಮತ್ತೆ ಸಂಬಂಧಿಕರನ್ನು ಸೇರಿದ ಕಾಬೂಲ್‌ನಲ್ಲಿ ನಾಪತ್ತೆಯಾಗಿದ್ದ ಮಗು

|
Google Oneindia Kannada News

ಕಾಬೂಲ್‌, ಜನವರಿ 10: ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ಬಳಿಕ ಅಮೆರಿಕದ ಸ್ಥಳಾಂತರಿಸುವಿಕೆಯ ಪ್ರಕ್ರಿಯೆಯ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಒಂಟಿಯಾಗಿ ಪತ್ತೆಯಾಗಿದ್ದ ಬಾಲಕನೊಬ್ಬ ಮರಳಿ ಸಂಬಂಧಿಕರನ್ನು ಸೇರಿದ್ದಾನೆ. ಸೊಹೈಲ್ ಅಹ್ಮದಿ ಎಂಬ ಮಗು ಆಗಸ್ಟ್ 19 ರಂದು ನಾಪತ್ತೆಯಾದಾಗ ಕೇವಲ ಎರಡು ತಿಂಗಳಾಗಿತ್ತು.

ಈ ಮಗುವು ಕಾಬೂಲ್‌ನಲ್ಲಿ ನೆಲೆಸಿದೆ. ಹಮೀದ್ ಸಫಿ ಎಂಬ 29 ವರ್ಷದ ಟ್ಯಾಕ್ಸಿ ಡ್ರೈವರ್ ವಿಮಾನ ನಿಲ್ದಾಣದಲ್ಲಿ ಈ ಅನಾಥ ಮಗುವನ್ನು ಕಂಡು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಏಳು ವಾರಗಳ ಕಾಲ ಸತತವಾಗಿ ಈ ಮಗುವಿನ ತಂದೆ ತಾಯಿಗಾಗಿ ಹುಡುಕಾಟ ನಡೆಸಿದ್ದು, ತಾಲಿಬಾನ್‌ ಹಮೀದ್ ಸಫಿಯನ್ನು ಬಂಧನ ಮಾಡಿದ ಬಳಿಕ, ಸಫಿ ಅಂತಿಮವಾಗಿ ಈ ಮಗುವನ್ನು ಆ ಮಗುವಿನ ಅಜ್ಜ, ಕಾಬೂಲ್‌ನಲ್ಲಿರುವ ಸಂಬಂಧಿಕರಿಗೆ ಹಿಂತಿರುಗಿಸಿದ್ದಾನೆ.

ಅಫ್ಘಾನಿಸ್ತಾನದಲ್ಲಿ ಕೆಲಸ ಕಳೆದುಕೊಂಡ ಪತ್ರಕರ್ತರೆಷ್ಟು ಗೊತ್ತೇ?ಅಫ್ಘಾನಿಸ್ತಾನದಲ್ಲಿ ಕೆಲಸ ಕಳೆದುಕೊಂಡ ಪತ್ರಕರ್ತರೆಷ್ಟು ಗೊತ್ತೇ?

ಇನ್ನು ತಿಂಗಳುಗಳ ಹಿಂದೆ ಯುನೈಟೆಡ್ ಸ್ಟೇಟ್ಸ್‌ಗೆ ಸ್ಥಳಾಂತರ ಮಾಡಲ್ಪಟ್ಟ ಆ ಮಗುವಿನ ಹೆತ್ತವರೊಂದಿಗೆ ಸೇರಿಸಲು ಈಗ ಪ್ರಯತ್ನ ನಡೆಯುತ್ತಿದೆ ಎಂದು ಈ ಮಗುವಿನ ಸಂಬಂಧಿಕರು ಹೇಳಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ಬಳಿಕ ಉಂಟಾದ ಗೊಂದಲಮಯ ವಾತಾವರಣದಲ್ಲಿ ಈ ಘಟನೆ ನಡೆದಿದೆ.

Afghan baby lost in Kabul airlift chaos reunited with relatives after 5 months

ಯುಎಸ್ ರಾಯಭಾರ ಕಚೇರಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಗುವಿನ ತಂದೆ ಮಿರ್ಜಾ ಅಲಿ ಅಹ್ಮದಿ ಮತ್ತು ಅವರ ಪತ್ನಿ ಸುರಯಾ ವಿಮಾನ ನಿಲ್ದಾಣದ ಗೇಟ್‌ಗಳನ್ನು ಸಮೀಪಿಸುತ್ತಿದ್ದಂತೆ ಗುಂಪಿನಲ್ಲಿ ಮಗುವಿಗೆ ಏಟಾಗಬಹುದು ಎಂದು ಭಾವಿಸಿದ್ದರು. ಈ ಹಿನ್ನೆಲೆ ಬೇರೊಬ್ಬರ ಕೈಯಲ್ಲಿ ಮಗು ಕೊಟ್ಟಿದ್ದರು ಎಂದು ಹೇಳಲಾಗಿದೆ.

Afghan baby lost in Kabul airlift chaos reunited with relatives after 5 months

ನಡೆದಿದ್ದು ಏನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಗುವಿನ ತಂದೆ ಮಿರ್ಜಾ ಅಲಿ ಅಹ್ಮದಿ, "ನಾನು ವಿಮಾನ ನಿಲ್ದಾಣದಲ್ಲಿ ಮಗುವಿಗೆ ಏಟಾಗಬಹುದು ಎಂದು ಅಮೆರಿಕನ್ ಎಂದು ಕೊಂಡು ಓರ್ವ ಸಮವಸ್ತ್ರಧಾರಿ ಸೈನಿಕನಿಗೆ ಮಗುವ ನ್ನು ಕೊಟ್ಟೆ. ಆ ಸಂದರ್ಭದಲ್ಲಿ ತಾಲಿಬಾನ್‌ ಪಡೆಗಳು ಗುಂಪನ್ನು ಹಿಂದಕ್ಕೆ ತಳ್ಳಿದ್ದು, ಈ ವೇಳೆ ಮಗು ನಾಪತ್ತೆಯಾಗಿದೆ," ಎಂದು ತಿಳಿಸಿದ್ದಾರೆ. "ನಾನು ವಿಮಾನ ನಿಲ್ದಾಣದೊಳಗೆ ಮಗುವಿಗಾಗಿ ಹುಡುಕಾಟ ನಡೆಸಿದೆ. ಆದರೆ ಆತನನ್ನು ಅದಾಗಲೇ ಇಲ್ಲಿಂದ ಕೊಂಡೊಯ್ಯಲಾಗಿದೆ. ಮತ್ತೆ ನೀವು ಮಗುವನ್ನು ಸೇರುತ್ತೀರಿ ಎಂದು ಅಧಿಕಾರಿಗಳು ಹೇಳಿದರು. ನಾವು ಅಮೆರಿಕಕ್ಕೆ ತಲುಪಿದ ಬಳಿಕವೂ ನಮಗೆ ನಮ್ಮ ಮಗು ಸಿಕ್ಕಿಲ್ಲ," ಎಂದು ವಿವರಿಸಿದ್ದಾರೆ.

ಮಹಿಳೆಯರೇ ಎಚ್ಚರ: ಈ ದೇಶದಲ್ಲಿ ನೀವು 72 ಕೀ.ಮೀಗಿಂತ ದೂರ ಒಂಟಿಯಾಗಿ ಪ್ರಯಾಣಿಸುವಂತಿಲ್ಲ! ಮಹಿಳೆಯರೇ ಎಚ್ಚರ: ಈ ದೇಶದಲ್ಲಿ ನೀವು 72 ಕೀ.ಮೀಗಿಂತ ದೂರ ಒಂಟಿಯಾಗಿ ಪ್ರಯಾಣಿಸುವಂತಿಲ್ಲ!

ಹಮೀದ್ ಸಫಿ ಎಂಬ ಟ್ಯಾಕ್ಸಿ ಡ್ರೈವರ್‌ಗೆ ಮಗು ಲಭಿಸಿದ್ದು ಹೇಗೆ?

ಹಮೀದ್ ಸಫಿ ಎಂಬ ಟ್ಯಾಕ್ಸಿ ಡ್ರೈವರ್‌ ಕಾಬೂಲ್ ವಿಮಾನ ನಿಲ್ದಾಣದ ಗೇಟ್‌ಗಳ ಮೂಲಕ ತನ್ನ ಸಹೋದರನ ಕುಟುಂಬವನ್ನು ಬಿಟ್ಟು ತೆರಳಲು ಮುಂದಾಗಿದ್ದರು. "ಆ ಸಂದರ್ಭದಲ್ಲಿ ಮಗು ಒಂಟಿಯಾಗಿ ನೆಲದ ಮೇಲೆ ಅಳುತ್ತಿದ್ದುದನ್ನು ಕಂಡೆ. ಮಗುವಿನ ಪೋಷಕರನ್ನು ಪತ್ತೆ ಮಾಡಲು ವಿಫಲವಾದ ನಂತರ ನಾನು ಹಾಗೂ ನನ್ನ ಪತ್ನಿ ಮಗುವನ್ನು ಕರೆದುಕೊಂಡು ಹೋದೆವು," ಎಂದಿದ್ದಾರೆ. "ನಾನು ಯುಎಸ್‌ಗೆ ಹೋಗಬೇಕು ಎಂದು ಬಯಸಿದ್ದೆ. ಆದ್ದರಿಂದ ನಾನು ನನ್ನ ಸಹೋದರನೊಂದಿಗೆ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಮಗುವನ್ನು ನೋಡಿದ ಪೋಷಕರಿಗೆ ಹುಡುಕಾಡಿದೆ. ಬಳಿಕ ಮಗುವನ್ನು ತೆಗೆದುಕೊಂಡು ಮನೆಗೆ ಕರೆದುಕೊಂಡು ಹೋದೆ," ಎಂದು ಹಮೀದ್ ಸಫಿ ಹೇಳಿದ್ದಾರೆ.

"ನನಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಆದರೆ ಸಾಯುವ ಮುನ್ನ ಒಂದು ನನ್ನ ಒಂದು ಗಂಡು ಮಗುವನ್ನು ನೋಡಬೇಕು ಎಂಬುವುದು ನನ್ನ ತಾಯಿಯ ಬಯಕೆ. ಆದ್ದರಿಂದಾಗಿ ನಾನು ಅನಾಥವಾಗಿದ್ದ ಈ ಮಗುವನ್ನು ನನ್ನ ಜೊತೆಯಲ್ಲೇ ಇರಿಸಿಕೊಂಡೆ. ಅವನ ಮನೆಯನ್ನು ಸಿಕ್ಕರೆ ಮಗುವನ್ನು ವಾಪಾಸ್‌ ಕೊಡುತ್ತೇನೆ. ಇಲ್ಲವಾದರೆ ನಾನೇ ಮಗುವನ್ನು ಬೆಳೆಸುತ್ತೇನೆ," ನವೆಂಬರ್‌ನಲ್ಲಿ ಹಮೀದ್ ಸಫಿ ತಿಳಿಸಿದ್ದರು. ಇನ್ನು ಈ ಮಗುವಿಗೆ ಈ ದಂಪತಿಗಳು ಮೊಹಮ್ಮದ್ ಅಬೇದ್ ಎಂದು ಹೆಸರಿಟ್ಟಿದ್ದರು. ಎಲ್ಲಾ ಮಕ್ಕಳ ಜೊತೆ ಫೇಸ್‌ಬುಕ್‌ನಲ್ಲಿ ಪೋಟೋ ಪೋಸ್ಟ್‌ ಮಾಡಿದ್ದರು. "ಐದು ತಿಂಗಳು ಅವನನ್ನು ನನ್ನವನಂತೆ ನೋಡಿಕೊಂಡೆ. ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ," ಎಂದು ಹಮೀದ್ ಸಫಿ ಹೇಳಿದ್ದಾರೆ. ಇನ್ನು ಸಫಿ ಮಗುವನ್ನು ಕರೆದುಕೊಂಡು ಬಂದಿರುವುದನ್ನು ನೋಡಿದ್ದ ನೆರೆಹೊರೆಯವರು ಮಗು ನಾಪತ್ತೆಯ ಸುದ್ದಿ ತಿಳಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ಮಗು ಸಂಬಂಧಿಕರೊಂದಿಗೆ ಸೇರಿದೆ. (ಒನ್‌ಇಂಡಿಯಾ ಸುದ್ದಿ)

English summary
Afghan baby lost in Kabul airlift chaos reunited with relatives after 5 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X