ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರಿಗೆ ಹೆದರಿ ಓಡಿ ಹೋಯ್ತಾ ಅಮೆರಿಕ? ರಕ್ಕಸ ತಾಲಿಬಾನ್ ಗ್ಯಾಂಗ್‌ಗೆ ಮತ್ತಷ್ಟು ಬಲ!

|
Google Oneindia Kannada News

ಖಾಲಿ ಖುರ್ಚಿಗಳು, ಹರಿದ ಸ್ಕ್ರೀನ್, ಸಣ್ಣಗೆ ಒಳ ನುಸುಳುತ್ತಿರುವ ಸೂರ್ಯನ ಬೆಳಕು. ಅರೆರೆ ಇದ್ಯಾವುದೋ ಹಳೇ ಟೆಂಟ್‌ನ ಪರಿಸ್ಥಿತಿಯಲ್ಲ. ಬದಲಾಗಿ ಅಮೆರಿಕ ಇಷ್ಟು ದಿನ ತನ್ನ ಉಪಯೋಗಕ್ಕೆ ಬಳಸಿಕೊಂಡಿದ್ದ ಏರ್ ಬೇಸ್ ಒಂದರ ಕಥೆ! ಹೌದು ಅಮೆರಿಕ ತಪ್ಪು ನಿರ್ಧಾರ ಕೈಗೊಂಡಿದೆ ಎಂಬ ಆಕ್ರೋಶ ಜಗತ್ತಿನಾದ್ಯಂತ ಈಗ ವ್ಯಕ್ತವಾಗುತ್ತಿದೆ. ಅಫ್ಘಾನಿಸ್ತಾನದ ನೆಲದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳುತ್ತಿರುವ ಅಮೆರಿಕ ನಿರ್ಧಾರಕ್ಕೆ ಬೇಸರ ವ್ಯಕ್ತವಾಗುತ್ತಿದೆ. ಅದರಲ್ಲೂ ಅಫ್ಘಾನಿಸ್ತಾನ ಅಧ್ಯಕ್ಷರೂ ಸೇರಿದಂತೆ ಸೇನಾಧಿಕಾರಿಗಳು ಅಮೆರಿಕ ಮಿಲಿಟರಿಯ ವಿರುದ್ಧ ರೊಚ್ಚಿಗೆದ್ದಿದ್ದಾರೆ.

Recommended Video

ಉಗ್ರರಿಗೆ ಹೆದರಿ ಆಫ್ಘಾನಿಸ್ತಾನದಿಂದ ಓಡಿಹೋದ ಅಮೆರಿಕ ಸೇನೆ..!? | Oneindia Kannada

ಈಗಲೂ ಅಂತಹದ್ದೇ ಆರೋಪ ಕೇಳಿಬಂದಿದ್ದು, ಕೆಲ ದಿನಗಳ ಹಿಂದೆಷ್ಟೇ ಅಮೆರಿಕ ಸೇನೆ ಬಗ್ರಾಮ್ ವಾಯು ನೆಲೆಯಿಂದ ಹೊರ ನಡೆದಿತ್ತು. ಆದರೆ ಹೀಗೆ ಹೊರ ಹೋಗುವ ಮೊದಲು ಜಗತ್ತಿನ ದೊಡ್ಡಣ್ಣ ಯಾವುದೇ ಸುಳಿವು ನೀಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಮೆರಿಕ ರಾತ್ರೋರಾತ್ರಿ ಇಲ್ಲಿಂದ ಎಸ್ಕೇಪ್ ಆಗಿದೆ ಎಂದು ಅಫ್ಘಾನ್ ಸೇನಾಧಿಕಾರಿಗಳು ಆರೋಪಿಸಿದ್ದಾರೆ.

ಇದಪ್ಪಾ ವರಸೆ.. ಕೊಟ್ಟ ಮಾತಿಗೆ ತಪ್ಪುತ್ತಿದೆಯಾ 'ವಿಶ್ವದ ದೊಡ್ಡಣ್ಣ' ಅಮೆರಿಕ?ಇದಪ್ಪಾ ವರಸೆ.. ಕೊಟ್ಟ ಮಾತಿಗೆ ತಪ್ಪುತ್ತಿದೆಯಾ 'ವಿಶ್ವದ ದೊಡ್ಡಣ್ಣ' ಅಮೆರಿಕ?

ಅಷ್ಟಕ್ಕೂ ಅತಿಸೂಕ್ಷ್ಮ ಪ್ರದೇಶವಾದ ಈ ಬಗ್ರಾಮ್ ಏರ್ ಬೇಸ್‌ ಮೇಲೆ ಅಮೆರಿಕ 20 ವರ್ಷಗಳ ಹಿಂದೆ ಹಿಡಿತ ಸಾಧಿಸಿತ್ತು. ಆದರೆ ಹೋಗುವಾಗ ಮಾತ್ರ ಯಾವುದೇ ಸುಳಿವು ನೀಡಿದೆ ಗಂಟುಮೂಟೆ ಕಟ್ಟಿದ್ದು ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ.

ಆತಂಕಕ್ಕೆ ಕಾರಣ ಏನು..?

ಆತಂಕಕ್ಕೆ ಕಾರಣ ಏನು..?

ಅಮೆರಿಕ ತೊರೆದು ಹೋಗಿರುವ ಬಗ್ರಾಮ್ ಏರ್ ಬೇಸ್‌ ಕೇವಲ ಸೇನಾ ನೆಲೆಯಾಗಿಲ್ಲ. ಬದಲಾಗಿ ಉಗ್ರರಿಗೆ ಅಂತಾ ನಿರ್ಮಿಸಿರುವ ಜೈಲು ಕೂಡ ಇಲ್ಲೇ ಇದೆ. ಹಾಗೇ ಸುಮಾರು 5 ಸಾವಿರ ತಾಲಿಬಾನ್ ಉಗ್ರರು ಜೈಲಿನ ಒಳಗಿದ್ದಾರೆ. ಆದರೆ ಏಕಾಏಕಿ ಅಮೆರಿಕ ಸೇನೆ ಯಾವುದೇ ಸುಳಿವನ್ನ ನೀಡದೆ ಬಗ್ರಾಮ್ ಬೇಸ್‌ ಬಿಟ್ಟೋಗಿದೆ. ಇದು ಸಹಜವಾಗಿ ಅಫ್ಘಾನಿಸ್ತಾನ ಸೇನೆ ಹಾಗೂ ಸರ್ಕಾರದ ಕಣ್ಣು ಕೆಂಪಗಾಗಿಸಿದೆ. ಅವರು ಓಡಿ ಹೋಗಿದ್ದಾರೆ ಅಂತಾ ಅಫ್ಘಾನ್ ಸೇನಾಧಿಕಾರಿಗಳು ಅಮೆರಿಕ ಸೇನೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಸೈನಿಕರನ್ನು ಕೊಲ್ಲುತ್ತಿದ್ದಾರೆ

ಸೈನಿಕರನ್ನು ಕೊಲ್ಲುತ್ತಿದ್ದಾರೆ

ಒಂದು ಕಡೆ ಸಂಧಾನ ಸೂತ್ರದ ನಾಟಕವಾಡುತ್ತಿರುವ ತಾಲಿಬಾನಿ ಉಗ್ರರು, ಮತ್ತೊಂದು ಕಡೆ ಅಫ್ಘಾನ್‌ನಲ್ಲಿ ಹಿಂಸಾಚಾರ ಮುಂದುವರಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕಳೆದ ಕೆಲವು ತಿಂಗಳಿಂದ, ಅಂದರೆ ಅಮೆರಿಕ ಮಿಲಿಟರಿ ಹೊರ ಹೋಗಲು ತೀರ್ಮಾನಿಸಿದ ಬಳಿಕ, ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ತಾಲಿಬಾನ್‌ನ ಸಶಸ್ತ್ರದಳ ಅನೇಕ ಪ್ರದೇಶಗಳಿಗೆ ನುಗ್ಗಿ ಹಿಂಸೆ ನಡೆಸುತ್ತಿದೆ. ಅದರಲ್ಲೂ ಅಫ್ಘಾನಿಸ್ತಾನದ ಸೈನಿಕರು ಹಾಗೂ ಪೊಲೀಸರನ್ನ ಕಂಡರೆ ಸಾಕು ಅಲ್ಲೇ ಗುಂಡಿಕ್ಕಿ ಸಾಯಿಸುತ್ತಿದ್ದಾರೆ. ವಿಕೃತ ಮನೋಭಾವದ ತಾಲಿಬಾನಿಗಳು, ಮಹಿಳೆ ಅಥವಾ ಮಕ್ಕಳು ಎನ್ನದೆ ದೌರ್ಜನ್ಯ ನಡೆಸುತಿದ್ದಾರೆ. ಹೀಗಾಗಿಯೇ ಭಯಗೊಂಡ ಅಫ್ಘಾನ್ ಸೈನಿಕರು, ದೇಶಬಿಟ್ಟು ಹೋಡಿ ಹೋಗುತ್ತಿದ್ದಾರೆ.

ಹಳ್ಳಿಗಳು ಉಗ್ರರ ವಶಕ್ಕೆ

ಹಳ್ಳಿಗಳು ಉಗ್ರರ ವಶಕ್ಕೆ

ತಾಲಿಬಾನ್ ಉಗ್ರರು ಅದೆಷ್ಟು ಕಿರಾತಕರು ಎಂಬುದನ್ನು ಬಿಡಿಸಿ ಹೇಳಬೇಕಾದ ಅಗತ್ಯತೆ ಇಲ್ಲ. ಒಂದು ಕಾಲದ ಸ್ವರ್ಗದಂತಹ ಜಾಗ ಅಫ್ಘಾನಿಸ್ತಾನ ಇಂದು ನರಕವಾಗಿ ಬದಲಾಗಲು ತಾಲಿಬಾನ್ ಗ್ಯಾಂಗ್ ಕಾರಣವಾಯಿತು. ಆದರೆ 20 ವರ್ಷಗಳ ಹಿಂದೆ ಅಮೆರಿಕ ಸೇನೆ ಭಾರಿ ಪ್ರಮಾಣದಲ್ಲಿ ತನ್ನ ಗ್ಯಾಂಗ್ ಕರೆದುಕೊಂಡು ಬಂದಿತ್ತು. ಆ ಬಳಿಕ ಪರಿಸ್ಥಿತಿ ಒಂದಷ್ಟು ಹಿಡಿತಕ್ಕೆ ಸಿಕ್ಕಿತ್ತು ಎನ್ನಬಹುದಾದರೂ ಉಗ್ರರ ದಾಳಿ ನಿಂತಿರಲಿಲ್ಲ. ಈಗ ದಿಢೀರ್ ಅಮೆರಿಕ ಸೇನೆ ಜಾಗ ಖಾಲಿ ಮಾಡುತ್ತಿದ್ದು, ತಾಲಿಬಾನ್ ಕಿರಾತಕರು ಒಂದೊಂದೇ ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ. ಜನರನ್ನ ಮನಸ್ಸಿಗೆ ಬಂದಂತೆ ಹಿಂಸಿಸುತ್ತಿದ್ದಾರೆ.

ಭಾರತವೇ ನಮ್ಮನ್ನು ಕಾಪಾಡಬೇಕು..!

ಭಾರತವೇ ನಮ್ಮನ್ನು ಕಾಪಾಡಬೇಕು..!

ಅಮೆರಿಕ ಸಂಪೂರ್ಣ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದು, ಸದ್ಯದ ಸ್ಥಿತಿಯಲ್ಲಿ ಇಡೀ ಅಫ್ಘಾನಿಸ್ತಾನ ಬೂದಿ ಮುಚ್ಚಿದ ಕೆಂಡವಾಗಿದೆ. ಒಂದು ಕಡೆ ತಾಲಿಬಾನ್ ಉಗ್ರರು ಮತ್ತೊಂದು ಕಡೆ ನಾಗರಿಕರು ದಂಗೆ ಏಳಬಹುದು ಎಂಬ ಆಂತರಿಕ ವರದಿ. ಇದೆಲ್ಲದರ ಮಧ್ಯೆ ಅಫ್ಘಾನಿಸ್ತಾನ ಅಧ್ಯಕ್ಷ ಘನಿ ನಡುಗಿ ಹೋಗಿದ್ದಾರೆ. ಹೆಂಗಪ್ಪ ನಮ್ಮ ಪರಿಸ್ಥಿತಿ ಎನ್ನುತ್ತಿದೆ ಅಲ್ಲಿನ ಸರ್ಕಾರ. ಆದ್ರೆ ಇದೇ ಹೊತ್ತಲ್ಲೇ ಅಮೆರಿಕ ನಾಯಕರಿಗೆ ಬಿಸಿ ಮುಟ್ಟಿಸಿರುವ ಘನಿ, ನಮ್ಮ ಸಂಕಷ್ಟದಲ್ಲಿ ಭಾರತ ಸಹಾಯ ಮಾಡಿದೆ. ಈಗಿನ ಸ್ಥಿತಿಯಲ್ಲಿ ಆಂತರಿಕ ಭದ್ರತೆ ಕಾಪಾಡಲು ಭಾರತವೂ ಸೇರಿದಂತೆ ಚೀನಾ, ರಷ್ಯಾ, ಇರಾನ್ ಸಹಾಯ ಬೇಕಿದೆ ಎಂದಿದ್ದಾರೆ. ಈ ಮೂಲಕ ಭಾರತ ನಮ್ಮ ಗೆಳೆಯ ಎಂಬ ವಿಚಾರವನ್ನ ಮತ್ತೊಮ್ಮೆ ಮನದಟ್ಟು ಮಾಡಿದೆ. ಅಮೆರಿಕದ ಶತ್ರು ರಾಷ್ಟ್ರಗಳನ್ನೂ ಹೊಗಳಿದ್ದಾರೆ ಘನಿ.

English summary
Afghan alleged that American military escaped from Bagram airfield without any information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X