ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರಿಗೆ ಗರ್ಭಪಾತದ ಹಕ್ಕು: ಅಮೆರಿಕದ ಸುಪ್ರೀಂಕೋರ್ಟ್ ಯೂಟರ್ನ್?

|
Google Oneindia Kannada News

ವಾಷಿಂಗ್ಟನ್, ಮೇ 03: ಅಮೆರಿಕದಲ್ಲಿ ಮಹಿಳೆಯರಿಗೆ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಅಲ್ಲಿನ ಸುಪ್ರೀಂ ಕೋರ್ಟ್‌ನ ಕರಡು ತೀರ್ಪಿನ ಪ್ರತಿ ಸೋರಿಕೆಯಾಗಿದ್ದು ಗರ್ಭಪಾತವನ್ನು ಕಾನೂನುಬದ್ಧಗೊಳಿಸಲಾಗಿದ್ದ ಕ್ರಮವನ್ನು ರದ್ದುಗೊಳಿಸುವ ಆದೇಶ ಅಡಕವಾಗಿರುವುದು ತಿಳಿದುಬಂದಿದೆ. ಈ ಹಿಂದೆ ರೋ ವಿ ವೇಡ್ ಅವರು ಅಬಾರ್ಷನ್‌ಗೆ ಅನುಮತಿಸಿ ನೀಡಿದ್ದ ಆದೇಶವನ್ನು ರದ್ದುಗೊಳಿಸುವ ಸಾಧ್ಯತೆ ಇದೆ.

ಸುಪ್ರೀಂಕೋರ್ಟ್‌ನಿಂದ ಈ ಆದೇಶ ಜಾರಿಗೆ ಬಂದರೆ ಅಮೆರಿಕದಲ್ಲಿ ಗರ್ಭಪಾತ ಅಕ್ರಮವಾಗಬಹುದು. ಇದರಿಂದ ಗರ್ಭಿಣಿಯರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ಅಲ್ಲಿನ ಉದಾರವಾದಿಗಳ ಆತಂಕ.

ಭಾರತದ ಹೊಸ ಗರ್ಭಪಾತ ಕಾನೂನು ಎಷ್ಟು ಪ್ರಗತಿಪರವಾಗಿದೆ?ಭಾರತದ ಹೊಸ ಗರ್ಭಪಾತ ಕಾನೂನು ಎಷ್ಟು ಪ್ರಗತಿಪರವಾಗಿದೆ?

1973ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ರೋ ವಿ ವೇಡ್ ತಮ್ಮ ತೀರ್ಪಿನಲ್ಲಿ ಸಾಂವಿಧಾನಿಕವಾಗಿ ಅಬಾರ್ಷನ್ ಹಕ್ಕು ಕೊಟ್ಟಿದ್ದರು. 1992ರಲ್ಲಿ ಮತ್ತೊಮ್ಮೆ ಈ ತೀರ್ಪನ್ನು ಎತ್ತಿಹಿಡಿಯಲಾಗಿತ್ತು.

Abortion: Supreme Court shows disregard for womens lives

ಇದೀಗ ನ್ಯಾ. ಸ್ಯಾಮುಯೆಲ್ ಅಲಿಟೊ ಇರುವ ನ್ಯಾಯಪೀಠವು ಈ ಹಿಂದಿನ ತೀರ್ಪುಗಳನ್ನು ರದ್ದುಮಾಡಿ, ಅಬಾರ್ಷನ್ ಹಕ್ಕನ್ನು ಜನರ ತೀರ್ಪಿಗೆ ಬಿಡಲು ಅನುವು ಮಾಡಿಕೊಡಬಹುದು ಎಂದು ಹೇಳಲಾಗುತ್ತಿದೆ.

ಜನರ ತೀರ್ಪು ಎಂದರೆ?; ಅಬಾರ್ಷನ್‌ಗೆ ಅನುಮತಿ ಕೊಡುವುದು ಬಿಡುವುದು ಅಮೆರಿಕದ ಬೇರೆ ಬೇರೆ ರಾಜ್ಯಗಳ ನಿರ್ಧಾರಕ್ಕೆ ಬಿಡಲಾಗುತ್ತದೆ. ಇಲ್ಲಿ ರಿಪಬ್ಲಿಕ್ ಪಕ್ಷದವರು ಅಬಾರ್ಷನ್‌ಗೆ ವಿರೋಧವಾಗಿದ್ದಾರೆ. ಡೆಮಾಕ್ರಾಟ್ ಪಕ್ಷದವರು ಅಬಾರ್ಷನ್ ಹಕ್ಕಿನ ಪರ ಇದ್ದಾರೆ. ರಿಪಬ್ಲಿಕನ್ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿ ಅಬಾರ್ಷನ್ ಅನ್ನು ಅಕ್ರಮವೆಂದು ಘೋಷಿಸಬಹುದು. ಡೆಮಾಕ್ರಟಿಕ್ ಪಕ್ಷದ ಅಡಳಿತ ಇರುವ ರಾಜ್ಯಗಳು ಅಬಾರ್ಷನ್ ಹಕ್ಕು ಮುಂದುವರಿಸಬಹುದು.

 ಆನ್‌ಲೈನ್‌ನಲ್ಲಿ ಅಬಾರ್ಷನ್ ಔಷಧ ಸೇಲ್: ಅಮೆಜಾನ್ ವಿರುದ್ಧ ಎಫ್‌ಐಆರ್ ದಾಖಲು ಆನ್‌ಲೈನ್‌ನಲ್ಲಿ ಅಬಾರ್ಷನ್ ಔಷಧ ಸೇಲ್: ಅಮೆಜಾನ್ ವಿರುದ್ಧ ಎಫ್‌ಐಆರ್ ದಾಖಲು

ರಾಜ್ಯಗಳೇನಾದರೂ ಅಬಾರ್ಷನ್ ನಿಷೇಧ ಮಾಡಿದರೆ ಅದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಏನೂ ಪ್ರಯೋಜನವಾಗದ ಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ಇಲ್ಲಿನ ಪ್ರಗತಿಪರರ ಅಸಮಾಧಾನ. ಗರ್ಭಪಾತವನ್ನು ನಿಷೇಧಿಸಿದರೆ ಗರ್ಭಿಣಿಯರು ತಮಗೆ ಬೇಡವಾದ ಗರ್ಭವನ್ನು ತೆಗೆಸಲು ಅಕ್ರಮ ದಾರಿ ಹಿಡಿಯಬೇಕಾಗುತ್ತದೆ. ಆಗ ಸಮಸ್ಯೆ ಇನ್ನೂ ಬಿಗಡಾಯಿಸುವ ಅಪಾಯ ಇರುತ್ತದೆ.

ಗರ್ಭದಲ್ಲಿರುವ ಮಗುವಿಗೆ ಬದುಕಿನ ಹಕ್ಕು ಇರುತ್ತದೆ. ಗರ್ಭಪಾತ ಮಾಡಿಸಿದರೆ ಮಗುವಿನ ಬದುಕಿನ ಹಕ್ಕು ಕಿತ್ತುಕೊಂಡಂತಾಗುತ್ತದೆ. ಸಾಯುತ್ತೇನೆಂದು ಗೊತ್ತಿಲ್ಲದ ಒಂದು ಜೀವವನ್ನು ನಿರ್ದಯವಾಗಿ ತೆಗೆಯುವುದು ಎಷ್ಟು ಸರಿ? ಎಲ್ಲರಿಗೂ ಬದುಕಿನ ಹಕ್ಕು ಇರಬೇಕು ಎಂಬುದು ಅಬಾರ್ಷನ್ ನಿಷೇಧದ ಪರವಾಗಿ ಇರುವವರ ವಾದವಾಗಿದೆ.

ಹಕ್ಕು ಪರವಾಗಿರುವವರ ವಾದವೇನು?; ಗರ್ಭದಲ್ಲಿರುವ ಮಗುವಿನ ಹಕ್ಕಿನ ಬಗ್ಗೆ ಮಾತನಾಡುವವರು, ಗರ್ಭಿಣಿಯರ ಮನಃಸ್ಥಿತಿ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳುವುದಿಲ್ಲ?. ಯಾರೋ ರೇಪ್ ಮಾಡಿದ ಕಾರಣಕ್ಕೆ ಪ್ರೆಗ್ನೆಂಟ್ ಆಗಿ ಆ ಅನಗತ್ಯ ಗರ್ಭವನ್ನು ಹೊತ್ತುಕೊಳ್ಳುವ ಮಹಿಳೆಗೆ ಅದೆಷ್ಟು ಮಾನಸಿಕ ಹಿಂಸೆ ಆಗಬೇಡ?. ಆಕಸ್ಮಿಕವಾಗಿ ಗರ್ಭಿಣಿಯಾದ ಮಹಿಳೆ ತನಗೆ ಅದು ಅನಗತ್ಯ ಗರ್ಭ ಎಂದನಿಸಿದರೆ ಅದರಿಂದ ಮುಕ್ತವಾಗುವ ಹಕ್ಕು ಇರಬೇಕು. ಹಾಗೆಯೇ, ಗರ್ಭಿಣಿ ಮಹಿಳೆಯರು ಅನಾರೋಗ್ಯಕ್ಕೊಳಗಾಗಿ ಅಬಾರ್ಷನ್ ಮಾಡಿಸಿಕೊಳ್ಳಬೇಕಾದಾಗೂ ಆಕೆಗೆ ಅದರ ಹಕ್ಕು ಇರಬೇಕು ಎಂಬುದು ಗರ್ಭಪಾತ ಹಕ್ಕಿನ ಪರವಾಗಿರುವವರ ವಾದವಾಗಿದೆ.

ಗರ್ಭಪಾತ ನಿಷೇಧ ಜಾರಿಯಾದರೆ ಮುಂದೇನು?; ಗರ್ಭಪಾತ ವಿಚಾರದಲ್ಲಿ ಅಮೆರಿಕದ ಎರಡು ಪ್ರಮುಖ ಪಕ್ಷಗಳ ಮಧ್ಯೆ ಭಿನ್ನಾಭಿಪ್ರಾಯಗಳಿವೆ. ರಿಪಬ್ಲಿಕನ್ ಪಕ್ಷದ ಆಡಳಿತದ ರಾಜ್ಯಗಳಲ್ಲಿರುವ ಗರ್ಭಿಣಿಯರು ತಮ್ಮ ಗರ್ಭ ತೆಗೆಸಬೇಕೆಂದರೆ ಡೆಮಾಕ್ರಾಟ್ ಪಕ್ಷದ ಆಡಳಿತ ಇರುವ ರಾಜ್ಯಗಳಿಗೆ ಹೋಗಬೇಕಾಗಬಹುದು.

ಸಾಮಾಜಿಕವಾಗಿ ಅಮೆರಿಕ ಬಹಳ ಪ್ರಗತಿಪರ ಎಂದು ಜನಜನಿತವಾಗಿದೆ. ಇಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಬಹಳ ಗಮನ ಕೊಡಲಾಗುತ್ತದೆ ಎಂದು ನಾವು ಬಹಳ ಮಾತುಗಳನ್ನ ಕೇಳಿರುತ್ತೇವೆ. ಅಲ್ಲಿ ಕಪ್ಪು ವರ್ಣೀಯರ ಮೇಲೆ ಹಲ್ಲೆ ಘಟನೆ ಅಲ್ಲಲ್ಲಿ ನಡೆಯುವುದು ಬಿಟ್ಟರೆ ಉಳಿದಂತೆ ಅಮೆರಿಕದಲ್ಲಿ ಪ್ರಗತಿಪರ ಸಮಾಜ ಇದೆ ಎಂದು ನಂಬಿದ್ದೇವೆ. ಇದೀಗ ಅಲ್ಲಿ ಮಹಿಳೆಯರಿಗೆ ಗರ್ಭಪಾತದ ಹಕ್ಕು ನಿರಾಕರಿಸಲಾಗುತ್ತಿರುವ ವಿಚಾರ ಬಹಳ ಮಂದಿಗೆ ಇರಿಸುಮುರುಸು ತರಬಹುದು.

(ಒನ್ಇಂಡಿಯಾ ಸುದ್ದಿ)

English summary
A draft opinion reveals that the top US court plans to get rid of federal abortion rights, according to a report. Taking women's agency away like this is appalling and will lead to fatalities, writes DW's Carla Bleiker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X