ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಉಡುಗೆಯಲ್ಲಿ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಬ್ಯಾನರ್ಜಿ!

|
Google Oneindia Kannada News

Recommended Video

ಭಾರತೀಯ ಉಡುಗೆಯಲ್ಲಿ ನೊಬೆಲ್ ಪ್ರಶಸ್ತಿ ಸ್ವೀಕರಿಸಿ ಬ್ಯಾನರ್ಜಿ! | Oneindia Kannada

ಸ್ಟಾಕ್‌ಹೋಂ, ಡಿಸೆಂಬರ್ 11: ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರು ಇಂದು ಸ್ವಿಡನ್ ದೇಶದ ಸ್ಟಾಕ್‌ಹೋಂ ನಗರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಅವರ ಜೊತೆ ಅವರ ಪತ್ನಿ ಎಸ್ತರ್ ಡೆಪ್ಲೊ ಹಾಗೂ ಹಾರ್ವರ್ಡ ವಿವಿ ಅರ್ಥಶಾಸ್ತ್ರಜ್ಞ ಮೈಕಲ್ ಅವರಿಗೂ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 2019 ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಈ ಮೂವರಿಗೂ ಹಂಚಲಾಗಿತ್ತು.

ಸ್ಟಾಕ್‌ಹೋಂನಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಭಿಜಿತ್ ಬ್ಯಾನರ್ಜಿ ಅವರು ಭಾರತೀಯ ಶೈಲಿಯ ಉಡುಪಾದ ದೋತಿ ಹಾಗೂ ಕುರ್ತಾ ಧರಿಸಿ ಪ್ರಶಸ್ತಿ ಸ್ವೀಕರಿಸಿ ಗಮನ ಸೆಳೆದರು. ಅವರ ಪತ್ನಿ ಎಸ್ತರ್ ಕೂಡ ಸೀರೆ ಧರಿಸಿದ್ದು ವಿಶೇಷವಾಗಿತ್ತು. ಜಾಗತಿಕ ಮಟ್ಟದಲ್ಲಿ ಬಡತನ ನಿರ್ಮೂಲನೆಗೆ ಸರ್ಕಾರಗಳು ಏನು ಮಾಡಬೇಕು? ಎಂಬುದನ್ನು ಇವರು ತಮ್ಮ ಸಿದ್ದಾಂತದಲ್ಲಿ ತೋರಿಸಿ ಕೊಟ್ಟಿದ್ದಕ್ಕೆ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪ್ರಶಸ್ತಿ ಮೊತ್ತವು ಒಟ್ಟು 6 ಕೋಟಿ ರುಪಾಯಿ ಒಳಗೊಂಡಿದೆ.

ಅಭಿಜಿತ್ ಬ್ಯಾನರ್ಜಿ ಸಾಧನೆಗಳ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ: ಮೋದಿಅಭಿಜಿತ್ ಬ್ಯಾನರ್ಜಿ ಸಾಧನೆಗಳ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ: ಮೋದಿ

Abhijit Banerjee Rreceives Nobel Prize For Eeconomics

ಕಲ್ಕತ್ತದವರಾದ ಅಭಿಜಿತ್ ಬ್ಯಾನರ್ಜಿ ಅವರು ಅಮೆರಿಕದ ಮೆಸ್ಸಾಚುಯೆಟ್ಸ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಈ ಹಿಂದೆ ದೆಹಲಿಯ ಜವಾಹರಲಾಲ್ ನೆಹರು ವಿವಿಯಿಂದ ಪದವಿ ಪಡೆದು ವಿದೇಶದಲ್ಲಿ ಸಾಕಷ್ಟು ಸಂಶೋಧನೆ ನಡೆಸಿ, ಒಬ್ಬ ಪ್ರಖರ ಅರ್ಥಶಾಸ್ತ್ರಜ್ಞ ಎಂದು ಹೆಸರು ಮಾಡಿದ್ದಾರೆ.

English summary
Economist Abhijit Banerjee Rreceives Nobel Prize For Eeconomics in Sweedan, on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X