ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಬಿಗಿಯಾದ ಬಟ್ಟೆ ಧರಿಸಿದ್ದಕ್ಕೆ ಯುವತಿ ಕೊಲೆ!

|
Google Oneindia Kannada News

ನವದೆಹಲಿ, ಆಗಸ್ಟ್ 9: ಅಫ್ಘಾನಿಸ್ತಾನದ ಉತ್ತರ ಬಾಲ್ಖ್ ಪ್ರಾಂತ್ಯದಲ್ಲಿ ಬಿಗಿಯಾದ ಬಟ್ಟೆ ಧರಿಸಿದರು ಹಾಗೂ ಒಬ್ಬರೇ ಒಬ್ಬ ಪುರುಷರು ನಂಟು ಹೊಂದಿರಲಿಲ್ಲ ಎಂಬ ಕಾರಣಕ್ಕೆ ಯುವತಿಯೊಬ್ಬಳನ್ನು ತಾಲಿಬಾನ್ ಅಮಾನುಷವಾಗಿ ಕೊಂದು ಹಾಕಿದೆ.

"ತಾಲಿಬಾನ್ ಉಗ್ರ ಸಂಘಟನೆಯ ಸ್ವಾಧೀನದಲ್ಲಿ ಇರುವ ಸಮರ್ ಕ್ವಾಂದ್ ಗ್ರಾಮದಲ್ಲಿ ಮಹಿಳೆಯನ್ನು ಹತ್ಯೆಗೈಯ್ಯಲಾಗಿದೆ," ಎಂದು ಅಫ್ಘಾನಿಸ್ತಾನದ ರೆಡಿಯೋ ಅಜಾದಿ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ತಾಲಿಬಾನ್ ಉಗ್ರರ ಕೈಗೆ ಸಿಕ್ಕು ಹತ್ಯೆಯಾದ 21 ವರ್ಷದ ಯುವತಿಯನ್ನು ನಜಾನಿನ್ ಎಂದು ಗುರುತಿಸಲಾಗಿದೆ. ಮಜರ್-ಇ-ಶರೀಫ್ ತಲುಪುವುದಕ್ಕಾಗಿ ಮನೆಯಿಂದ ಹೊರಟ ಸಂದರ್ಭದಲ್ಲಿ ಯುವತಿ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ಸಮಯದಲ್ಲಿ ನಜಾನಿನ್ ಬುರ್ಖಾ (ಮುಖ ಮತ್ತು ದೇಹವನ್ನು ಆವರಿಸುವ ಮುಸುಕು) ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಯುಎಸ್‌ ಸೈನ್ಯ ಹಿಂಪಡೆದ ಕೂಡಲೇ ಅಫ್ಘಾನ್‌ ಪ್ರಾಂತೀಯ ರಾಜಧಾನಿಯನ್ನು ವಶಕ್ಕೆ ಪಡೆದ ತಾಲಿಬಾನ್‌ಯುಎಸ್‌ ಸೈನ್ಯ ಹಿಂಪಡೆದ ಕೂಡಲೇ ಅಫ್ಘಾನ್‌ ಪ್ರಾಂತೀಯ ರಾಜಧಾನಿಯನ್ನು ವಶಕ್ಕೆ ಪಡೆದ ತಾಲಿಬಾನ್‌

ತಾಲಿಬಾನ್ ಉಗ್ರ ಸಂಘಟನೆಯ ಅಧೀನದಲ್ಲಿ ಇರುವ ಅಫ್ಘಾನಿಸ್ತಾನದ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಯುವತಿಯನ್ನು ಸಾರ್ವಜನಿಕವಾಗಿ ಉದ್ಯೋಗಕ್ಕೆ ಹೋಗುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಇದರ ಮಧ್ಯೆ ಕೆಲಸಕ್ಕಾಗಿ ಹೊರಟ ಮಹಿಳೆಯ ಮೇಲೆ ದಾಳಿ ನಡೆಸಿ ಹತ್ಯೆಗೈದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

A Women Killed by Taliban for wearing tight clothes in Afghanistans Balkh province

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ:

Recommended Video

ತನ್ನದೇ ದೇಶದ ಬಗ್ಗೆ ಪಾಕ್ ಮೀಡಿಯಾ ಮಾಡಿದ ಅಪಹಾಸ್ಯದ ವಿಡಿಯೋ ವೈರಲ್ | Oneindia Kannada

ಯುನೈಟೆಡ್ ಸ್ಟೇಟ್ಸ್ ಸೇನಾಪಡೆಗಳು ವಾಪಸ್ಸಾಗುತ್ತಿದ್ದಂತೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆ ಹಾವಳಿ ಮಿತಿ ಮೀರಿ ಬೆಳೆಯುತ್ತಿದೆ. ಅಫ್ಘಾನಿಸ್ತಾನದ ಹಲವು ಪ್ರದೇಶಗಳನ್ನು ಮತ್ತೆ ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ತಾಲಿಬಾನ್ ಸಂಘಟನೆ ಪ್ರಯತ್ನಿಸುತ್ತಿದೆ. ಭಾನುವಾರವಷ್ಟೇ ಅಫ್ಘಾನಿಸ್ತಾನದ ಉತ್ತರ ಭಾಗದಲ್ಲಿರುವ ಕುಂದುಜ್ ಪ್ರದೇಶವನ್ನು ತಾಲಿಬಾನ್ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ತಾಲಿಬಾನ್ ಉಗ್ರ ಸಂಘಟನೆಗಳು ನಿಯಂತ್ರಣ ಸಾಧಿಸಿರುವ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಯಮ ಮತ್ತು ನಿರ್ಬಂಧಗಳನ್ನು ಹೇರಲಾಗುತ್ತಿದೆ. ತಾಲಿಬಾನ್ ವಿಧಿಸುವ ನಿಯಮಗಳನ್ನು ಮುರಿದರೆ ನಿರ್ದಯವಾಗಿ ಹತ್ಯೆ ಮಾಡಲಾಗುತ್ತಿದೆ.

English summary
A Women Killed by Taliban for wearing tight clothes in Afghanistan's Balkh province.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X