ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದಲ್ಲಿ ಬ್ಯಾಗೇಜ್ ಭಾರ ಕಡಿಮೆ ಮಾಡಲು ಈ ಮಹಿಳೆ ತೊಟ್ಟಿದ್ದು 2.5 ಕೆಜಿ ಬಟ್ಟೆ!

|
Google Oneindia Kannada News

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಮಿತಿಗಿಂತ ಹೆಚ್ಚಿನ ಬ್ಯಾಗೇಜ್ ತೂಕ ಹೊಂದಿದ್ದರಿಂದ ಹೆಚ್ಚುವರಿ ಶುಲ್ಕ ನೀಡುವುದನ್ನು ತಪ್ಪಿಸಿಕೊಳ್ಳಲು ಮಾದಿದ ಉಪಾಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ.

ಕ್ಯಾಬಿನ್ ಬ್ಯಾಗೇಜ್ ಅನ್ನು 7 ಕೆಜಿಗಿಂತ ಹೆಚ್ಚು ಕೊಂಡೊಯ್ಯುವುದಕ್ಕೆ ಅನುಮತಿ ಇಲ್ಲದ ಕಾರಣ, ತಮ್ಮ ಬ್ಯಾಗಿನಲ್ಲಿದ್ದ 9 ಕೆಜಿ ವಸ್ತುಗಳಲ್ಲಿ, 2.5 ಕೆಜಿಯಷ್ಟು ಬಟ್ಟೆಯನ್ನು ತೆಗೆದು, ಅದನ್ನು ಒಂದರ ಮೇಲೊಂದು ಧರಿಸಿ, ಬ್ಯಾಗೇಜ್ ತೂಕವನ್ನು 6.5 ಕೆಜಿಗೆ ಇಳಿಸಿದ್ದರು!

ವಿಮಾನದಲ್ಲಿ ಸೆಕೆಯಾಗುತ್ತಿತ್ತೆಂದು ಈಕೆ ಮಾಡಿದ್ದೇನು ಗೊತ್ತಾ?ವಿಮಾನದಲ್ಲಿ ಸೆಕೆಯಾಗುತ್ತಿತ್ತೆಂದು ಈಕೆ ಮಾಡಿದ್ದೇನು ಗೊತ್ತಾ?

ಈ ಕುರಿತು ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಒಂದರಮೇಲೊಂದು ಬಟ್ಟೆ ತೊಟ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ. #ExcessBaggageChallengeAcceptedಎಂದು ಬರೆದಿರುವ ಅವರು ಅದರಿಂದ ತಾವು ಪತ್ಟ ಪಡಿಪಾಟಲನ್ನು ಹಂಚಿಕೊಂಡಿದ್ದಾರೆ.

A Woman Passenger In An Airline Wears 2.5 KG Of Cloths To Avoid Extra Baggage Fees

ಆಕೆಯ ಈ ಪೋಸ್ಟ್ ಗೆ 5.7 ಸಾವಿರಕ್ಕೂ ಹೆಚ್ಚು ಲೈಕ್ ಗಳು ಬಂದಿದ್ದು, 20 ಸಾವಿರಕ್ಕೂ ಹೆಚ್ಚು ಜನ ಇದನ್ನು ಶೇರ್ ಮಾಡಿದ್ದಾರೆ.

"ನನಗೆ ಎರಡೇ ಎರಡು ಕೆಜಿಗಾಗಿ ಹೆಚ್ಚುವರಿ ಶುಲ್ಕ ನೀಡುವುದಕ್ಕೆ ಇಷ್ಟವಿಲ್ಲ. ಅದಕ್ಕೆಂದೇ ಹೀಗೆ ಮಾಡಿದೆ. ಆದರೆ ನನ್ನ ಪೋಸ್ಟ್ ಇಷ್ಟೆಲ್ಲ ವೈರಲ್ ಆಗುತ್ತದೆ ಎಂದು ಗೊತ್ತಿದ್ದರೆ ಇದಕ್ಕಿಂತ ಚೆನ್ನಾಗಿ ಪೋಸ್ ಕೊಡುತ್ತಿದ್ದೆ" ಎಂದು ಅವರು ಹೇಳಿಕೊಂಡಿದ್ದಾರೆ.

English summary
A woman passenger in An airline Wears 2.5 KG of cloths to avoid extra baggage fees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X