ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು: ಉಗ್ರರ ಅಟ್ಟಹಾಸಕ್ಕೆ ನಲುಗಿದ ಸಂಬಂಧಿಕರ ರೋದನ

By Vanitha
|
Google Oneindia Kannada News

ಬೆಂಗಳೂರು, ನವೆಂಬರ್, 16 : ಉಗ್ರರ ಅಟ್ಟಹಾಸಕ್ಕೆ ಫ್ರೆಂಚ್ ರಾಜಧಾನಿ ಪ್ಯಾರಿಸ್ ರಕ್ತದ ಮಡುವಿನಲ್ಲಿದ್ದು, ಕೆಲವರ ಬದುಕು ಅತಂತ್ರವಾಗಿದೆ. ಇವರ ಪೈಶಾಚಿಕ ವರ್ತನೆಯಿಂದ ಹಲವಾರು ಮಂದಿ ಅನಾಥರಾಗಿದ್ದಾರೆ. ಅಕ್ಕ, ಅಮ್ಮ, ಅಣ್ಣ ಇನ್ನಿತರ ಸಂಬಂಧಿಕರನ್ನು ಕಳೆದುಕೊಂಡ ಮಂದಿ ಕಣ್ಣೀರು ಸುರಿಸುತ್ತಿದ್ದು, ಇವರ ರೋದನ ಮುಗಿಲುಮುಟ್ಟಿದೆ.

ಪ್ಯಾರಿಸ್ ಮಂದಿಯ ಅಳುವಿಗೆ ಇಡೀ ಪ್ರಪಂಚವೇ ಸೂತಕ ಛಾಯೆಯ ಭಾವ ಅನುಭವಿಸುತ್ತಿದೆ. ಜಾತಿ, ಧರ್ಮ. ವಯಸ್ಸಿನ ಅಂತರ ಇಲ್ಲದೇ ಪ್ರತಿಯೊಬ್ಬರು ಶೋಕತಪ್ತರಾಗಿದ್ದಾರೆ. ಏಕಾಏಕಿ ಸಂಭವಿಸಿದ ಈ ಘಟನೆಯಿಂದ ಜನರು ಹಿಂದುರಗಲು ಸಾಧ್ಯವಾಗುತ್ತಿಲ್ಲ.[ಪ್ಯಾರಿಸ್ ಉಗ್ರರ ದಾಳಿಯ ಹೊಣೆಹೊತ್ತ ಐಎಸ್ಐಎಸ್]

ಉಗ್ರ ಉಪಟಳದಿಂದ ತತ್ತರಗೊಂಡ ಪ್ಯಾರೀಸ್ ಗಾಗಿ ಇಡೀ ಪ್ರಪಂಚವೇ ದೀಪಗಳನ್ನು ಬೆಳಗಿ ಮೃತಪಟ್ಟವರಿಗೆ ಶಾಂತಿ ಕೋರುತ್ತಿದ್ದಾರೆ. ಇನ್ನು ಮಂದೆ ಈ ರೀತಿಯ ಅವಘಟಗಳು ಸಂಭವಿಸದಂತೆ ಯಜ್ಞಾಯಾಗದಿಗಳನ್ನು ಮಾಡುತ್ತಿದ್ದಾರೆ.

ಇನ್ನೊಂದೆಡೆ, ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತಿ ದೇಶದ ಜನರ ಸ್ವಾತಂತ್ರ್ಯಕ್ಕಾಗಿ, ಸಾಮಾನ್ಯ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಆಂಗ್ ಸಾನ್ ಸೂಕಿ ಮಯನ್ಮಾರ್ ನಲ್ಲಿ ಕಳೆದ ಭಾನುವಾರ ನಡೆದ ಉಪಚುನಾವಣೆಯಲ್ಲಿ 44 ಸ್ಥಾನಗಳಲ್ಲಿ 43 ಸ್ಥಾನಗಳನ್ನು ಪಡೆದು ಜಯಗಳಿಸಿತು. ರಾಂಚಿಯಲ್ಲಿ ಝಾರ್ಖಂಡ್ ಪ್ರತಿಷ್ಠಾಪನಾ ದಿನ ಆಚರಿಸಲಾಯಿತು.

ನಮ್ಮ ನಾಡಿನಲ್ಲಿ ದೀಪಾವಳಿ ಸಂಭ್ರಮದ ನೆನಪಿನಲ್ಲಿಯೇ ಇದ್ದರೆ, ಪಾಟ್ನಾದ ಮಂದಿ ಛತ್ತ್ ಪೂಜೆಯಲ್ಲಿ ನಿರತರಾಗಿದ್ದಾರೆ. ಸೂರ್ಯನಿಗೆ ಮಾಡುವ ಈ ಪೂಜೆಯು ಬಿಹಾರ, ಉತ್ತರ ಪ್ರದೇಶ ಇನ್ನಿತರ ಕಡೆ ಬಹಳ ಪ್ರಸಿದ್ದಿ ಪಡೆದಿದೆ. ಈ ಎಲ್ಲಾ ಘಟನೆಗಳಿಗೂ ಪಿಟಿಐ ಫೋಟೋಗಳು ಸಾಕ್ಷಿಯಾಗಿವೆ.

ಸಂಬಂಧಿಕರನ್ನು ಕಳೆದುಕೊಂಡ ಮಹಿಳೆಯ ರೋಧನ

ಸಂಬಂಧಿಕರನ್ನು ಕಳೆದುಕೊಂಡ ಮಹಿಳೆಯ ರೋಧನ

ಉಗ್ರರ ಅಟ್ಟಹಾಸಕ್ಕೆ ಪ್ಯಾರೀಸ್ ಸಂಪೂರ್ಣ ನಲುಗಿದ್ದು, ಅಲ್ಲಿನ ಜನತೆ ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಮುಂಬೈ ದಾಳಿಯ ರೀತಿಯಲ್ಲಿಯೇ ಒಂದೇ ಬಾರಿಗೆ ಫ್ರೆಂವ್ ನ ೮ ಕಡೆ ಉಗ್ರರು ದಾಳಿ ನಡೆಸಿದ್ದಾರೆ. ಇದರಿಂದ ನೂರಾರು ಮಕ್ಕಳು ತಬ್ಬಲಿಗಳಾಗಿದ್ದಾರೆ. ತಮ್ಮವರನ್ನು ಕಳೆದುಕೊಂಡ ಮಹಿಳೆ ಸಣ್ಣ ಮಗುವಿನಂತೆ ಅತ್ತಿದ್ದು ಹೀಗೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ

ಮೃತರ ಆತ್ಮಕ್ಕೆ ಶಾಂತಿ ಸಿಗಲಿ

ಪ್ಯಾರಿಸ್ ನಲ್ಲಿ ಉಗ್ರರು ದಾಳಿ ನಡೆಸಿದ ಪರಿಣಾಮ ನೂರಾರು ಮಂದಿ ಮೃತಪಟ್ಟಿದ್ದು, ಪ್ರಾಣತೆತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾಕಿಸ್ತಾನಿ ಸಿವಿಲ್ ಸೊಸೈಟಿಯ ಸದಸ್ಯರು ದೀಪ ಬೆಳಗುವುದರ ಮೂಲಕ ಶಾಂತಿ ಕೋರಿದರು.

ಮುಂದೆದೂ ಉಗ್ರರ ಅಟ್ಟಹಾಸ ಕಾಣಿಸದಿರಲಿ

ಮುಂದೆದೂ ಉಗ್ರರ ಅಟ್ಟಹಾಸ ಕಾಣಿಸದಿರಲಿ

ರಕ್ತದ ಹೊಳೆ ಹರಿಸಿದ ಉಗ್ರರ ಪೈಶಾಚಿಕ ವರ್ತನೆ ಮುಂದುವರೆಯದಿರಲಿ, ಪ್ರಪಂಚದಲ್ಲಿ ನಿರಂತರವಾಗಿ ಶಾಂತಿ, ನೆಮ್ಮದಿ ನೆಲೆಸಲಿ ಎಂದು ಹಲವಾರು ಜನರು 1008 ಮಹಾಕುಂಡ ಯಜ್ಞ ನೆರವೇರಿಸಿದರು.

ಮಕ್ಕಳಿಂದ ಗುಲಾಬಿ ಸ್ವೀಕರಿಸಿದ ಆಂಗ್ ಸಾನ್ ಸೂಕಿ

ಮಕ್ಕಳಿಂದ ಗುಲಾಬಿ ಸ್ವೀಕರಿಸಿದ ಆಂಗ್ ಸಾನ್ ಸೂಕಿ

ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತಿ ದೇಶದ ಜನರ ಸ್ವಾತಂತ್ರ್ಯಕ್ಕಾಗಿ, ಸಾಮಾನ್ಯ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಆಂಗ್ ಸಾನ್ ಸೂಕಿ ಮಯನ್ಮಾರ್ ನಲ್ಲಿ ಕಳೆದ ಭಾನುವಾರ ನಡೆದ ಉಪಚುನಾವಣೆಯಲ್ಲಿ ೪೪ ಸ್ಥಾನಗಳಲ್ಲಿ ೪೩ ಸ್ಥಾನಗಳಳನ್ನು ಪಡೆದು ಜಯಗಳಿಸಿತು. ಈ ನಿಮಿತ್ತ ಸಂಸತ್ತಿಗೆ ಆಗಮಿಸಿದ ಆಂಗ್ ಸಾನ್ ಸೂಕಿ ಮಕ್ಕಳಿಗೆ ನಗೆ ಬೀರಿದ್ದು ಹೀಗೆ

ಮಡಿಕೆ ಹೊತ್ತ ಬುಡಕಟ್ಟು ಸುಂದರಿಯರು

ಮಡಿಕೆ ಹೊತ್ತ ಬುಡಕಟ್ಟು ಸುಂದರಿಯರು

ರಾಂಚಿಯಲ್ಲಿ ಆದಿವಾಸಿ, ಬುಡಕಟ್ಟು ಜನಾಂಗದವರು ಜಾರ್ಕಂಡ್ ಪ್ರತಿಪ್ಠಾನ ದಿನದ ನೆನಪಿನಾರ್ಥ ಬಿರ್ಸಾ ಮುಂದ ಫುಟ್ ಬಾಲ್ ಕ್ರೀಡಾಂಗಣದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಆ ಸಮಾರಂಭದಲ್ಲಿ ಭಾಗವಹಿಸಿದ್ದ ಮಹಿಳೆಯರು ಮಡಿಕೆ ಹೊತ್ತು ಕಾಣಿಸಿದ್ದು ಹೀಗೆ.

ಏನಿದು ಛಾತ ಪೂಜೆ?

ಏನಿದು ಛಾತ ಪೂಜೆ?

ಇದು ನೇಪಾಳಿಯರ ಮತ್ತು ಭಾರತೀಯ ಹಿಂದೂಗಳ ಪವಿತ್ರ ಹಬ್ಬವಾಗಿದ್ದು, ಈ ಹಬ್ಬದಲ್ಲಿ ಭೂಮಿಯನ್ನು ಕಾಯುತ್ತಿರುವ ಸೂರ್ಯನಿಗೆ ಧನ್ಯವಾದಗಳನ್ನು ಸಲ್ಲಿಸಲು ಆಚರಿಸಲಾಗುತ್ತದೆ. ಈ ಹಬ್ಬವನ್ನು ಮುಖ್ಯವಾಗಿ ಬಿಹಾರ್ ಹಾಗೂ ಉತ್ತರ ಪ್ರದೇಶದ ಮಂದಿ ಆಚರಿಸುತ್ತಾರೆ.

ಮುಸ್ಲಿಂ ಬಾಂಧವರಿಂದ ಶಾಂತಿ ಹೋರಾಟ

ಮುಸ್ಲಿಂ ಬಾಂಧವರಿಂದ ಶಾಂತಿ ಹೋರಾಟ

ಹಲವು ವರ್ಷಗಳ ಕಾಲ ಸೂತಕದ ಛಾಯೆ ಆವರಿಸುವಂತೆ ಮಾಡಿದ ಐಎಸ್ಐಎಸ್ ಉಗ್ರರ ವಿರುದ್ಧ ಮುಸಲ್ಮಾನ ಬಾಂಧವರು ದನಿ ಎತ್ತಿದ್ದು, ಇವರ ದುಷ್ಕೃತ್ಯವನ್ನು ಖಂಡಿಸಿದ್ದಾರೆ

ಮಕ್ಕಳಿಂದ ಪ್ರಾರ್ಥನೆ

ಮಕ್ಕಳಿಂದ ಪ್ರಾರ್ಥನೆ

ಉಗ್ರರ ಅಟ್ಟಹಾಸಕ್ಕೆ ಶಾಲಾ, ಕಾಲೇಜು, ಸರ್ಕಾರಿ ನೌಕರರು ಮಡಿದವರಿಗಾಗಿ ಶಾಂತಿ ಕೋರಿದ್ದು, ಜಮ್ಮು-ಕಾಶ್ಮೀರ ಮಕ್ಕಳು ಶಾಂತಿ ಮಂತ್ರ ಜಪಿಸಿದ್ದು ಹೀಗೆ.

English summary
A woman cries outside the restaurant on Rue de Charonne, Paris, 1008 Mahakundiya Yagya being performed for the world peace and the victims of Paris terror attack in Faridabad, Devotees carry holy Ganga water ahead of Chhath Puja, in Patna
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X