ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BMW ಕಾರಿಗೆ ಪೆಟ್ರೋಲ್ ಕೊಳ್ಳಲು ಕೋಳಿ ಕದಿಯುತ್ತಿದ್ದ!

|
Google Oneindia Kannada News

ಬೀಜಿಂಗ್, ಜೂನ್ 10: ಆಸೆ ಪಟ್ಟು ಬಿಎಂಡಬ್ಲು ಕಾರು ಕೊಂಡು ಅದಕ್ಕೆ ಪೆಟ್ರೋಲ್ ಹಾಕಿಸಲು ಕಷ್ಟವಾಗಿ ಅದಕ್ಕಾಗಿ ಕೋಳಿ ಕಳ್ಳತನಕ್ಕೆ ಇಳಿದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚೀನಾದ ಸಿಚುವಾನ್ ಪ್ರದೇಶದಲ್ಲಿ ಶ್ರೀಮಂತ ರೈತನೊಬ್ಬ ಕೋಳಿ ಮತ್ತು ಬಾತುಕೋಳಿಗಳನ್ನು ಕದ್ದು ಬಂಧಿತನಾಗಿದ್ದಾನೆ. ಆತನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನಕ್ಕೆ ಅಸಲಿ ಕಾರಣ ಬಿಟ್ಟಿದ್ದಾನೆ.

ಭಾರತದ ಕೆಲ ನಗರಗಳಲ್ಲಿ ಉಸಿರಾಡಿಸಲೂ ಸಾಧ್ಯವಿಲ್ಲ : ಡೊನಾಲ್ಡ್ ಟ್ರಂಪ್ ವ್ಯಂಗ್ಯ ಭಾರತದ ಕೆಲ ನಗರಗಳಲ್ಲಿ ಉಸಿರಾಡಿಸಲೂ ಸಾಧ್ಯವಿಲ್ಲ : ಡೊನಾಲ್ಡ್ ಟ್ರಂಪ್ ವ್ಯಂಗ್ಯ

ಕ್ವಿಂಗ್ ಎಂದು ಕರೆಯಲ್ಪಡುವ ಈತ ಏಪ್ರಿಲ್ ತಿಂಗಳಿನಿಂದಲೂ ಈತ ಕೋಳಿ ಮತ್ತು ಬಾತುಕೋಳಿಗಳನ್ನು ಕದಿಯುತ್ತಿದ್ದನಂತೆ. ಹಾಗೆಂದು ಈತ ಬಡವನೇನಲ್ಲ, ಉತ್ತಮ ಮನೆ ಹೊಂದಿದ ಸ್ಥಿತಿವಂತನೇ, ಐಶಾರಾಮಿ ಬಿಎಂಡಬ್ಲು ಕಾರುಕೊಳ್ಳಬೇಕೆಂಬುದು ಆತನ ಆಸೆಯಾಗಿತ್ತಂತೆ. ಆದರೆ ಕಾರು ಕೊಂಡ ಮೇಲೆ ಅದರ ಹೊಟ್ಟೆ ತುಂಬಿಸಲಾಗದೆ, ಪೆಟ್ರೋಲ್‌ಗಾಗಿ ಕೋಳಿ-ಬಾತುಕೋಳಿ ಕಳ್ಳತನಕ್ಕೆ ಕೈ ಹಾಕಿದ್ದಾನೆ.

A wealthy farmer steals chicken to buy petrol to his BMW car

ಮೊದಲಿಗೆ ಈತ ಹಣ ಸಂಪಾದನೆಗೆ ಬೇರೆ ಸಣ್ಣ ಪುಟ್ಟ ಅಪರಾಧ ಚಟುವಟಿಕೆಗಳನ್ನೂ ಮಾಡಿದನಂತೆ ಆದರೆ ಅದ್ಯಾವುದೂ ಕೈ ಹಿಡಿಯದಿದ್ದಾಗ ಕೊನೆಗೆ ಕೋಳಿ ಕದ್ದು ಮಾರುವ ಕೆಲಸ ಆರಿಸಿಕೊಂಡಿದ್ದಾನೆ. ಸುತ್ತ-ಮುತ್ತಲ ಹಳ್ಳಿಗಳಲ್ಲಿ ಹಲವು ಕೋಳಿಗಳನ್ನು ಈತ ಕದ್ದಿದ್ದಾನೆ.

ಚೀನಾ ಗಡಿ ಭಾಗದಲ್ಲಿ ಭಾರತೀಯ ವಾಯುಪಡೆಯ ಏರ್ ಕ್ರಾಫ್ಟ್ ನಾಪತ್ತೆ ಚೀನಾ ಗಡಿ ಭಾಗದಲ್ಲಿ ಭಾರತೀಯ ವಾಯುಪಡೆಯ ಏರ್ ಕ್ರಾಫ್ಟ್ ನಾಪತ್ತೆ

ಲಿನ್ಸುಶಿ ಸೇರಿದಂತೆ ಇನ್ನೂ ಹಲವು ಹಳ್ಳಿಗಳಲ್ಲಿ ಈತ ಕಳ್ಳತನ ಮಾಡಿದ್ದ, ವ್ಯಕ್ತಿಯೊಬ್ಬ ಮೊಟರ್‌ಬೈಕ್‌ನಲ್ಲಿ ಬದು ಕೋಳಿಗಳನ್ನು ಕದಿಯುತ್ತಿದ್ದುದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದರ ಆಧಾರದ ಮೇಲೆಯೇ ಆತನನ್ನು ಪ್ರಶ್ನೆಗೆ ಒಳಪಡಿಸಲು ಪ್ರಯತ್ನಿಸಲಾಗಿದೆ. ಆದರೆ ಆತ ಪೊಲೀಸರ ಕೈಗೆ ಸಿಕ್ಕದೆ ತಲೆ ಮರೆಸಿಕೊಂಡಿದ್ದ, ಆತನ ಮನೆಯ ಮೇಲೆ ದಾಳಿ ಮಾಡಿದಾಗ ಕೆಲವು ಮೊಟರ್‌ ಬೈಕ್‌ಗಳು ಮತ್ತು ಕೋಳಿ, ಬಾತುಕೊಳಿಗಳು ಸಿಕ್ಕಿವೆ.

ಪಾಕಿಸ್ತಾನಿ ಕಾರ್ಮಿಕನನ್ನು ಉರಿಯುತ್ತಿದ್ದ ಕುಲುಮೆಗೆ ದೂಡಿದ ಚೀನಿ ಸೂಪರ್ ವೈಸರ್ಪಾಕಿಸ್ತಾನಿ ಕಾರ್ಮಿಕನನ್ನು ಉರಿಯುತ್ತಿದ್ದ ಕುಲುಮೆಗೆ ದೂಡಿದ ಚೀನಿ ಸೂಪರ್ ವೈಸರ್

ಪ್ರಸ್ತುತ ಕ್ವಿಂಗ್ ಸಹ ಪೊಲೀಸರ ವಶದಲ್ಲಿದ್ದು, ಕಳ್ಳತನ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

English summary
A wealthy farmer in China steals chickens and ducks to buy petrol to his BMW car. He is now arrested by China police, he admitted his crimes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X