ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ: ಜೀವನ ವೆಚ್ಚ ಅಧಿಕ, 3 ಮಕ್ಕಳು ಬೇಡವೇ ಬೇಡ ಎನ್ನುತ್ತಿದೆ ಯುವ ಪೀಳಿಗೆ

|
Google Oneindia Kannada News

ಬೀಜಿಂಗ್, ಜೂನ್ 02: ಕುಟುಂಬದ ಬಗ್ಗೆ ಬದಲಾಗುತ್ತಿರುವ ಮನಸ್ಥಿತಿ ಹಾಗೂ ಅಧಿಕ ವೆಚ್ಚದಿಂದಾಗಿ ನಮಗೆ 3 ಮಕ್ಕಳು ಬೇಡ ಎಂದು ಚೀನಾದ ಯುವ ಪೀಳಿಗೆ ಹೇಳುತ್ತಿದೆ.

ಚೀನಾವು ತನ್ನ ನಾಗರಿಕರಿಗೆ ಗರಿಷ್ಠ 3 ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿದೆ. ಕಳೆದ ವರ್ಷ ಚೀನಾದಲ್ಲಿ 1.2 ಕೋಟಿ ಮಕ್ಕಳು ಜನಿಸಿದ್ದು, ಇಲ್ಲಿಯವರೆಗಿನ ಅತಿ ಕಡಿಮೆ ಜನನ ಪ್ರಮಾಣ ಇದಾಗಿದೆ.

ಚೀನಾದಲ್ಲಿ ಪ್ರತಿ ದಂಪತಿ 3 ಮಕ್ಕಳನ್ನು ಹೊಂದಲು ಅವಕಾಶಚೀನಾದಲ್ಲಿ ಪ್ರತಿ ದಂಪತಿ 3 ಮಕ್ಕಳನ್ನು ಹೊಂದಲು ಅವಕಾಶ

ಈ ಕಾರಣದಿಂದಾಗಿ ಚೀನಾವು ದಂಪತಿಗೆ ಮೂರು ಮಕ್ಕಳನ್ನು ಹೊಂದಲು ಅನುಮತಿ ನೀಡಿದೆ, ಆದರೆ ಹೆಚ್ಚಿದ ಜೀವನ ವೆಚ್ಚ ಹಾಗೂ ಮಾನದಂಡಗಳಿಂದಾಗಿ ಕುಟುಂಬದ ಗಾತ್ರವನ್ನು ಸೀಮಿತಗೊಳಿಸಲು ಯುವ ಜನತೆ ಮುಂದಾಗಿದೆ.

A Third Child? No Thanks Say Young Chinese As Countrys Population Greys

ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು, ಮಕ್ಕಳ ಶಿಕ್ಷಣಕ್ಕಾಗಿ ತೀವ್ರ ಹೂಡಿಕೆ, ಮಹಿಳೆಯರಲ್ಲಿ ಹೆಚ್ಚುತ್ತಿರುವ ವೃತ್ತಿ ಜೀವನದ ಆಶಯದಿಂದಾಗಿ ದಂಪತಿ ಹೆಚ್ಚಿನ ಮಕ್ಕಳನ್ನು ಹೊಂದಲು ಹಿಂಜರಿಯುತ್ತಿದ್ದಾರೆ.

ಸಾಕಷ್ಟು ಮಹಿಳೆಯರು ಮಕ್ಕಳನ್ನು ಹೊಂದಲು ಹಿಂದೇಟು ಹಾಕುತ್ತಿದ್ದಾರೆ, ಹೀಗಿರುವಾಗ ಮೂರು ಮಕ್ಕಳ ಬಗ್ಗೆ ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.
ಚೀನಾವು ಸುಮಾರು ವರ್ಷಗಳ ಕಾಲ ಒಂದೇ ಮಗು ನೀತಿಯನ್ನು ಅನುಸರಿಸುತ್ತಾ ಬಂದಿತ್ತು, ಇದು ವಿಶ್ವದ ಕಟುವಾದ ಕುಟುಂಬ ಯೋಜನೆ ನಿಯಮಗಳಲ್ಲಿ ಒಂದು ಎನಿಸಿಕೊಂಡಿತ್ತು.

ಆದರೆ, ಜನರಿಗೆ ವಯಸ್ಸಾಗುತ್ತಿರುವುದರಿಂದ ಅದು ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಹೀಗಾಗಿ 2016ರಲ್ಲಿ ಈ ಕಠಿಣ ಕಾನೂನು ತೆಗೆದುಹಾಕಿ ಎರಡು ಮಕ್ಕಳಿಗೆ ಅವಕಾಶ ನೀಡಲಾಯಿತು.

English summary
China wants its women to have more children but for many young people, the government's big promises of support mean little because of soaring living costs and changing mindsets about families.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X