ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕೊರಿಯಾದಲ್ಲಿ ನಡೆಯುತ್ತೆ ಬದುಕಿದ್ದವರಿಗೆ ಅಂತ್ಯ ಸಂಸ್ಕಾರ!

|
Google Oneindia Kannada News

ದಕ್ಷಿಣ ಕೊರಿಯಾ, ನವೆಂಬರ್ 6: ಇಲ್ಲಿ ಬದುಕಿದ್ದವರಿಗೆ ಅಂತ್ಯ ಸಂಸ್ಕಾರ ನಡೆಯುತ್ತದೆ. ಹೆಣದ ಬಟ್ಟೆಯನ್ನೂ ಹಾಕಲಾಗುತ್ತೆ, ಶವದ ಪೆಟ್ಟಿಗೆಯಲ್ಲೂ ಇರಿಸಲಾಗುತ್ತೆ.

ಇದೆಂಥಾ ಆಚರಣೆ ಅಂತೀರಾ, ಇದನ್ನು ಆಚರಣೆ ಎನ್ನುವುದಕ್ಕಿಂತ ಆತ್ಮಹತ್ಯೆಯಿಂದ ಜನರನ್ನು ದೂರವಿಡಲು ಒಂದು ಮಾರ್ಗ ಎಂದೇ ಹೇಳಬಹುದು. ದಕ್ಷಿಣ ಕೊರಿಯಾ ಹೇಳುತ್ತೆ, ಉಚಿತವಾಗಿ ಅಂತ್ಯಸಂಸ್ಕಾರವನ್ನು ಮಾಡಿಕೊಡಲಾಗುತ್ತೆ, ಆದರೆ ಬದುಕಿದ್ದವರಿಗೆ ಮಾತ್ರ!

ದಕ್ಷಿಣ ಕೊರಿಯಾದಲ್ಲಿ ಆತ್ಮಹತ್ಯೆ ಸಂಖ್ಯೆ ಹೆಚ್ಚಳವಾದ ಸಂದರ್ಭದಲ್ಲಿ ಅದನ್ನು ಹಿಡಿತಕ್ಕೆ ತರುವುದು ಹೇಗೆ ಎನ್ನುವ ಚಿಂತೆ ಎದುರಾಯಿತು. ಆಗ ಈ ಯೋಚನೆ ಬಂದು ಸಾವಿನ ನಂತರ ಎಲ್ಲವೂ ಶೂನ್ಯ. ಸಾವಿನಾಚೆಗೆ ಏನೂ ಇಲ್ಲ. ಆತ್ಮಹತ್ಯೆಯೊಂದೇ ಕಷ್ಟಕ್ಕೆ ಪರಿಹಾರವಲ್ಲ. ಸಾವು ಎಷ್ಟು ಭಯಂಕರವಾಗಿರುತ್ತದೆ ಎಂದು ತೋರಿಸುವ ನಿಟ್ಟಿನಲ್ಲಿ 'ಲಿವಿಂಗ್ ಫುನರಲ್' ಎನ್ನುವ ಹೊಸ ಕಾನ್ಸೆಪ್ಟ್‌ ಹುಟ್ಟುಹಾಕಲಾಯಿತು.

A South Korean Service Is Offering Free Funerals But Only To The Living

ಸಾಯುವುದಾದರೆ ಒಳ್ಳೆಯ ಕೆಲಸಕ್ಕಾಗಿ ದೇಶದ ರಕ್ಷಣೆಗಾಗಿ ಹೋರಾಡಿ ಸಾಯಿರಿ ಆದರೆ ಆತ್ಮಹತ್ಯೆ ಮಾತ್ರ ಬೇಡ ಎಂದು ಸಾರಲಾಯಿತು.

ದಕ್ಷಿಣ ಕೊರಿಯಾದ ಹ್ಯೋವನ್ ಎಂಬಲ್ಲಿರುವ ಹೀಲಿಂಗ್ ಸೆಂಟರ್ ಒಂದರಲ್ಲಿ ಈ ಲಿವಿಂಗ್ ಫ್ಯುನೆರಲ್ 2012ರಲ್ಲಿ ಆರಂಭಿಸಲಾಯಿತು. ಪ್ರತಿ ವರ್ಷವು ಸುಮಾರು 25 ಸಾವಿರ ಮಂದಿ ಈ ಸಜೀವ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ.

'' ಒಮ್ಮೆ ನೀವು ಸಾವಿನ ಬಗ್ಗೆ ಜಾಗೃತರಾದ ನಂತರ ಮತ್ತು ಅದನ್ನು ಅನುಭವಿಸಿದ ನಂತರ, ನೀವು ಜೀವನಕ್ಕೆ ಹೊಸ ವಿಧಾನವನ್ನು ಕಂಡುಕೊಳ್ಳುತ್ತೀರಿ' ಎಂದು 75 ವರ್ಷದ ಚೋ-ಜೇ-ಹೀ ಹೇಳುತ್ತಾರೆ.

ಹದಿಹರೆಯದವರಿಂದ ಹಿಡಿದು ನಿವೃತ್ತರಾದವರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಹೆಣದ ಬಟ್ಟೆಗಳನ್ನು ಧರಿಸುವುದು, ಅಂತ್ಯಕ್ರಿಯೆಯ ಭಾವಚಿತ್ರಗಳನ್ನು ತೆಗೆದುಕೊಳ್ಳುವುದು, ಅವರ ಕೊನೆಯ ಒಡಂಬಡಿಕೆಗಳನ್ನು ಬರೆಯುವುದು ಮತ್ತು ಮುಚ್ಚಿದ ಶವಪೆಟ್ಟಿಗೆಯಲ್ಲಿ ಸುಮಾರು 10 ನಿಮಿಷಗಳ ಕಾಲ ಮಲಗಿಸಲಾಗುತ್ತದೆ

ಚಿಕ್ಕ ವಯಸ್ಸಿನಿಂದಲೇ ಸಾವಿನ ಬಗ್ಗೆ ಅರಿಯುವುದು ಅದಕ್ಕೆ ಸಿದ್ಧವಾಗುವುದು ಮುಖ್ಯ ಎಂದು ಪ್ರೊ. ಯು ಇಯೂನ್ ಸಿಲ್ ಹೇಳಿದ್ದಾರೆ.

ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಾನು ನಿಜವಾಗಲೂ ಆತ್ಮಹತ್ಯೆ ಮಾಡಿಕೊಳ್ಳಬೇಕೆ ಅಥವಾ ಈ ನಿರ್ಧಾರದಿಂದ ಒಮ್ಮೆ ಹಿಂದೆ ಸರಿದು ನೋಡಲೇ ಎನ್ನುವ ಮನಸ್ಥಿತಿಯನ್ನು ಈ ಕಾರ್ಯಕ್ರಮ ಹುಟ್ಟುಹಾಕುತ್ತದೆ.

English summary
In South Korea More than 25,000 people have participated in mass “living funeral” services at Hyowon Healing Center since it opened in 2012, hoping to improve their lives by simulating their deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X