• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯೂಜಿಲೆಂಡ್‌ನಲ್ಲಿ ಧೂಮಪಾನ ಮುಕ್ತ ಕ್ರಿಯಾ ಯೋಜನೆ ಜಾರಿ

|
Google Oneindia Kannada News

ವೆಲ್ಲಿಂಗ್ಟನ್, ಡಿಸೆಂಬರ್ 09: ನ್ಯೂಜಿಲೆಂಡ್‌ನ ಸರ್ಕಾರವು ತಂಬಾಕು, ಧೂಮಪಾನವನ್ನು ಕೊನೆಗೊಳಿಸಲು ಒಂದು ಮಹತ್ವದ ಯೋಜನೆಯನ್ನು ತಂದಿದೆ. ಈ ಯೋಜನೆಯು 2025 ರ ವೇಳೆಗೆ ನ್ಯೂಜಿಲೆಂಡ್‌ನಲ್ಲಿ ಧೂಮಪಾನವನ್ನು 5% ಕ್ಕಿಂತ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಮುಂದಿನ ಪೀಳಿಗೆಯಲ್ಲಿ ಧೂಮಪಾನದ ಹರಡುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ನ್ಯೂಜಿಲೆಂಡ್ ಗುರುವಾರ ಧೂಮಪಾನ ಮುಕ್ತ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿದೆ. ಇದು ಯುವ ಜನರು ತಮ್ಮ ಜೀವಿತಾವಧಿಯಲ್ಲಿ ಸಿಗರೇಟ್ ಖರೀದಿಸುವುದನ್ನು ನಿಷೇಧಿಸುತ್ತದೆ. ಈ ಯೋಜನೆಯ ಪ್ರಕಾರ ನ್ಯೂಜಿಲೆಂಡ್‌ನಲ್ಲಿ ಸಿಗರೇಟ್ ಖರೀದಿಸಲು ಕನಿಷ್ಠ ವಯಸ್ಸು 18 ದಾಟಿರಬೇಕು.

ಅಸೋಸಿಯೇಟ್ ಆರೋಗ್ಯ ಸಚಿವೆ ಡಾ. ಆಯೇಶಾ ವೆರಾಲ್, "ನ್ಯೂಜಿಲೆಂಡ್‌ನಲ್ಲಿ ಜನರ ಸಾವಿಗೆ ಧೂಮಪಾನವು ಪ್ರಮುಖ ಕಾರಣವಾಗಿದೆ ಮತ್ತು ನಾಲ್ಕು ಕ್ಯಾನ್ಸರ್‌ ರೋಗಿಗಳಲ್ಲಿ ಒಬ್ಬರು ತಂಬಾಕು ಸೇವಿಸುವವರಾಗಿದ್ದಾರೆ. ಧೂಮಪಾನ-ಸಂಬಂಧಿತ ಹಾನಿ ವಿಶೇಷವಾಗಿ ಪ್ರಚಲಿತವಾಗಿದೆ. ಇದು (ಧೂಮಪಾನ) ದೇಶದಲ್ಲಿ ಪ್ರತಿ ವರ್ಷ ಸರಿಸುಮಾರು 4,500 ರಿಂದ 5,000 ಜನರನ್ನು ಕೊಲ್ಲುತ್ತದೆ. ಪ್ರತಿದಿನ ಧೂಮಪಾನ ಅಥವಾ ಸೆಕೆಂಡ್ ಹ್ಯಾಂಡ್ ಹೊಗೆಗೆ ಒಡ್ಡಿಕೊಳ್ಳುವುದರಿಂದ 2 ತಿಂಗಳಲ್ಲಿ ಸುಮಾರು 12 ರಿಂದ 13 ಸಾವುಗಳು ಸಂಭವಿಸುತ್ತವೆ" ಎಂದು ಆತಂಕ ವ್ಯಕ್ತಪಡಿಸಿದರು.

ಧೂಮಪಾನ ತಡೆಗಟ್ಟಲು ಸ್ಮೋಕ್‌ಫ್ರೀ Aotearoa(ಮಾವೊರಿ ಭಾಷೆಯಲ್ಲಿ ನ್ಯೂಜಿಲೆಂಡ್ ಕರೆಯುವುದು ಹೀಗೆ) 2025 ಕ್ರಿಯಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಅತ್ಯಂತ ಕಡಿಮೆ ನಿಕೋಟಿನ್ ಮಟ್ಟವನ್ನು ಹೊಂದಿರುವ ತಂಬಾಕು ಉತ್ಪನ್ನಗಳ ಮಾರಾಟವನ್ನು ಮಾತ್ರ ಅನುಮತಿಸುವುದು ಮತ್ತು ಅವುಗಳನ್ನು ಮಾರಾಟ ಮಾಡಬಹುದಾದ ಮಳಿಗೆಗಳ ಸಂಖ್ಯೆಯನ್ನು ಕಡಿತಗೊಳಿಸುವುದು. ಚಿಲ್ಲರೆ ವ್ಯಾಪಾರಿಗಳಿಗೆ ಸಹಾಯ ಮಾಡುವ ಮೂಲಕ ಕಾಲಾನಂತರದಲ್ಲಿ ಬದಲಾವಣೆಗಳನ್ನು ತರಲಾಗುತ್ತದೆ. ಇದು ವಿಶೇಷವಾಗಿ ಯುವಕರಿಗೆ ಸಹಾಯ ಮಾಡುತ್ತದೆ.

Smokefree Aotearoa 2025 ಆಕ್ಷನ್ ಪ್ಲಾನ್ ಎಂಬ ಯೋಜನೆಯು ಹೊಗೆಯಾಡುವ ತಂಬಾಕು ಉತ್ಪನ್ನಗಳ "ಲಭ್ಯತೆ, ವ್ಯಸನ ಮತ್ತು ಆಕರ್ಷಣೆಯನ್ನು" ಆಮೂಲಾಗ್ರವಾಗಿ ಕಡಿಮೆ ಮಾಡಲು ಯೋಜಿಸಿದೆ. ಇದು ಹೊಗೆಯಾಡುವ ತಂಬಾಕು ಉತ್ಪನ್ನಗಳನ್ನು ಜನರು ವ್ಯಸನಿಯಾಗಿಸುವ ರೀತಿಯಲ್ಲಿ ವಿನ್ಯಾಸಗೊಳಿಸುವುದನ್ನು ತಡೆಯುತ್ತದೆ ಮತ್ತು ನಿರ್ದಿಷ್ಟ ದಿನಾಂಕದ ನಂತರ ಜನಿಸಿದ ಜನರಿಗೆ ಹೊಗೆಯಾಡಿಸಿದ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಅಥವಾ ಸರಬರಾಜು ಮಾಡುವುದು ಅಪರಾಧವಾಗಿಸುವ ಮೂಲಕ ಧೂಮಪಾನ ಮುಕ್ತ ಪೀಳಿಗೆಯನ್ನು ಕಿಕ್‌ಸ್ಟಾರ್ಟ್ ಮಾಡುತ್ತದೆ ಎಂದು ಅವರು ಹೇಳಿದರು.

ನ್ಯೂಜಿಲೆಂಡ್‌ನಲ್ಲಿ ಧೂಮಪಾನದ ಪ್ರಮಾಣವು ವರ್ಷಗಳಿಂದ ಸ್ಥಿರವಾಗಿ ಕುಸಿದಿದೆ. ಕೇವಲ ಶೇ.11ರಷ್ಟು ವಯಸ್ಕರು ಈಗ ಧೂಮಪಾನ ಮಾಡುತ್ತಾರೆ ಮತ್ತು ಶೇ.9ರಷ್ಟು ಜನ ಪ್ರತಿ ದಿನ ಧೂಮಪಾನ ಮಾಡುತ್ತಾರೆ. ಸ್ಥಳೀಯ ಮಾವೊರಿಗಳ ದೈನಂದಿನ ದರವು ಶೇ.22ರಷ್ಟು ಹೆಚ್ಚಾಗಿರುತ್ತದೆ. ಸರ್ಕಾರದ ಯೋಜನೆಯಡಿಯಲ್ಲಿ, ಮಾವೋರಿಗಳಲ್ಲಿ ಧೂಮಪಾನವನ್ನು ಕಡಿಮೆ ಮಾಡಲು ಸಹಾಯಕ ಕಾರ್ಯಪಡೆಯನ್ನು ರಚಿಸಲಾಗುವುದು. ಇತ್ತೀಚಿನ ವರ್ಷಗಳಲ್ಲಿ ಸಿಗರೇಟ್‌ಗಳ ಮೇಲೆ ಈಗಾಗಲೇ ದೊಡ್ಡ ತೆರಿಗೆ ಹೆಚ್ಚಳವನ್ನು ವಿಧಿಸಲಾಗಿದೆ. ತೆರಿಗೆ ಹೆಚ್ಚಳವು ಯಾವುದೇ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಎಂದು ನಾವು ಭಾವಿಸುವುದಿಲ್ಲ ಎಂದು ವೆರಾಲ್ ಹೇಳಿದರು. "ಇದು ಬಿಡುವುದು ನಿಜವಾಗಿಯೂ ಕಷ್ಟ ಮತ್ತು ನಾವು ಅದನ್ನು ಮಾಡಿದರೆ, ನಾವು ಸಿಗರೇಟ್‌ಗೆ ವ್ಯಸನಿಯಾಗಿರುವ ಜನರನ್ನು ಇನ್ನಷ್ಟು ಶಿಕ್ಷಿಸುತ್ತೇವೆ ಮತ್ತು ತೆರಿಗೆ ಕ್ರಮಗಳು ಕಡಿಮೆ ಆದಾಯದ ಜನರ ಮೇಲೆ ಹೆಚ್ಚಿನ ಹೊರೆಯನ್ನು ಉಂಟುಮಾಡುತ್ತವೆ. ಜೊತೆಗೆ ಅವರು ಧೂಮಪಾನ ಮಾಡುವ ಸಾಧ್ಯತೆಯಿದೆ" ಎಂದು ವೆರಾಲ್ ಅವರು ಹೇಳಿದರು.

A smoke-free action plan implemented in New Zealand

ನ್ಯೂಜಿಲೆಂಡ್‌ನಲ್ಲಿ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ವ್ಯಾಪಿಂಗ್ ಉತ್ಪನ್ನಗಳ ಮಾರಾಟವನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಶಾಲೆಗಳಲ್ಲಿ ವ್ಯಾಪಿಂಗ್ ಅನ್ನು ನಿಷೇಧಿಸಲಾಗಿದೆ. ತಂಬಾಕು ಸೇವನೆಯಿಂದ ಮುಂದಿನ ಪೀಳಿಗೆಯನ್ನು ನಿಷೇಧಿಸುವ ನ್ಯೂಜಿಲೆಂಡ್‌ನ ವಿಧಾನವನ್ನು ಬೇರೆಡೆ ಪ್ರಯತ್ನಿಸಲಾಗಿಲ್ಲ. ಯುಎಸ್‌ನಲ್ಲಿ ತಂಬಾಕು ಉತ್ಪನ್ನಗಳನ್ನು ಖರೀದಿಸಲು ಫೆಡರಲ್ ಕನಿಷ್ಠ ವಯಸ್ಸನ್ನು ಎರಡು ವರ್ಷಗಳ ಹಿಂದೆ 18 ರಿಂದ 21 ಕ್ಕೆ ಹೆಚ್ಚಿಸಲಾಯಿತು ಎಂದು ಅವರು ಹೇಳಿದರು.

ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಪ್ರಸ್ತಾವನೆಯನ್ನು ಸ್ವಾಗತಿಸುತ್ತವೆ. ಹಲವಾರು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಕಾರ್ಯಕರ್ತರು ಈ ಪ್ರಸ್ತಾವನೆಗಳನ್ನು ಸ್ವಾಗತಿಸಿದರು. ಕ್ಯಾನ್ಸರ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಲೂಸಿ ಎಲ್ವುಡ್, "ಈ ಪ್ರಸ್ತಾಪವು ಜನರನ್ನು ಧೂಮಪಾನವನ್ನು ತೊರೆಯಲು ಸಹಾಯ ಮಾಡುವುದನ್ನು ಮೀರಿದೆ. ಕಡಿಮೆ-ಆದಾಯದ ಸಮುದಾಯಗಳಲ್ಲಿ ತಂಬಾಕು ಚಿಲ್ಲರೆ ವ್ಯಾಪಾರಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಅಲ್ಲಿ ಧೂಮಪಾನದ ದರಗಳು ಅತ್ಯಧಿಕವಾಗಿವೆ" ಎನ್ನುತ್ತಾರೆ.

"ಹೀಗೆ ಎದ್ದು ಕಾಣುವ ಅಸಮಾನತೆಗಳಿಂದ ಮತ್ತು ತಂಬಾಕಿನ ಹಾನಿಗಳಿಂದ ನಾವು ಭವಿಷ್ಯದ ಪೀಳಿಗೆಯನ್ನು ರಕ್ಷಿಸಬೇಕಾಗಿದೆ. ಇದು ಇತಿಹಾಸದಲ್ಲಿ ಅತ್ಯಂತ ಹಾನಿಕಾರಕ ಗ್ರಾಹಕ ಉತ್ಪನ್ನವಾಗಿದೆ ಮತ್ತು ಇದನ್ನು ಹಂತಹಂತವಾಗಿ ತೆಗೆದುಹಾಕಬೇಕಾಗಿದೆ" ಎಂದು ದಿ ಗಾರ್ಡಿಯನ್ ತನ್ನ ಹೇಳಿಕೆಯನ್ನು ಉಲ್ಲೇಖಿಸಿದೆ.

   ಅಷ್ಟೊಂದು ರಿಸ್ಕ್ ಇದ್ರೂ ಟೀಂ ಇಂಡಿಯಾಗಾಗಿ ಸೌತ್ ಆಫ್ರಿಕಾ ಮಾಡಿರೋ ಮಾಸ್ಟರ್ ಪ್ಲ್ಯಾನ್ ನೋಡಿ | Oneindia Kannada
   English summary
   In a bid to reduce the prevalence of smoking among the next generation, New Zealand on Thursday launched a smoke-free action plan which will prohibit younger people from buying cigarettes in their lifetime.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X