• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೌರಮಂಡಲದಿಂದ ಓಡಿ ಹೋಗಿದ್ದ ನಕ್ಷತ್ರ ವಾಪಸ್ ಬಂತು!

By Kiran B Hegde
|

ನವದೆಹಲಿ, ಫೆ. 18: ಬ್ರಹ್ಮಾಂಡದ ಸೌರ ವ್ಯವಸ್ಥೆಯಲ್ಲಿ ಹಲವು ನಕ್ಷತ್ರಗಳು ಹಾಗೂ ಗ್ರಹಗಳು ನಿಗದಿತ ಕಕ್ಷೆಯಲ್ಲಿ ನಿರ್ಲಿಪ್ತವಾಗಿ ಸುತ್ತುತ್ತವೆ. ಆದರೆ, ಇಲ್ಲಿಯೂ ಅಂಕೆ ಮೀರಿ ಕೆಲವು ನಕ್ಷತ್ರಗಳು ದಾರಿ ತಪ್ಪಿ ಕಣ್ಮರೆಯಾಗುತ್ತವೆ.

ಹೀಗೆಯೇ ಸೌರಮಂಡಲದಿಂದ ಸುಮಾರು 70,000 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ನಕ್ಷತ್ರವೊಂದು ಮತ್ತೆ ವಾಪಸ್ ಬಂದಿದೆ ಎಂದು ಅಂತಾರಾಷ್ಟ್ರೀಯ ಖಗೋಳಶಾಸ್ತ್ರಜ್ಞರ ತಂಡವೊಂದು ತಿಳಿಸಿದೆ. "Scholz's star" ಎಂದು ಹೆಸರಿಸಲಾಗಿದೆ. [ಮಂಗಳಗ್ರಹದಲ್ಲಿ ವಾಸಕ್ಕೆ ತಯಾರಿ]

ಇದು ಸೌರಮಂಡಲದ ಅತ್ಯಂತ ಹೊರಪದರವಾದ ಊರ್ಟ್ ಕ್ಲೌಡ್ ಎಂಬಲ್ಲಿ ಒಳಕ್ಕೆ ತೂರಿಕೊಂಡಿದೆ. ಧೂಮಕೇತುಗಳ ಉಗಮವಾಗುವುದು ಕೂಡ ಇದೇ ಸ್ಥಳದಲ್ಲಿ ಎಂಬುದು ಗಣನೀಯ ಅಂಶ. ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ರೊಚೆಸ್ಟರ್ ವಿಶ್ವವಿದ್ಯಾಲಯದ ಪ್ರೊ. ಎರಿಕ್ ಮಾಮಾಜೆಕ್ ನೇತೃತ್ವದ ಖಗೋಳ ಶಾಸ್ತ್ರಜ್ಞರ ತಂಡ ಈ ನಕ್ಷತ್ರವನ್ನು ಪತ್ತೆ ಹಚ್ಚಿದೆ. [ಮಂಗಳನ ಅಂಗಳಕ್ಕೆ 3 ಭಾರತೀಯರು]

ಸುಮಾರು 70 ಸಾವಿರ ವರ್ಷಗಳ ಹಿಂದೆ 0.8 ಜ್ಯೋತಿರ್ವರ್ಷ (8 ಲಕ್ಷ ಕಿ.ಮೀ.) ಗಳಷ್ಟು ದೂರ ಓಡಿ ಹೋಗಿತ್ತು. ನಮ್ಮ ಸೌರ ಮಂಡಲಕ್ಕೆ ಅತ್ಯಂತ ಹತ್ತಿರದಲ್ಲಿ ಅಂದರೆ 4.2 ಜ್ಯೋತಿರ್ವರ್ಷಗಳಷ್ಟು ದೂರವಿರುವ ಮತ್ತೊಂದು ನಕ್ಷತ್ರ Proxima Centauri ಗೆ ಅತ್ಯಂತ ಹತ್ತಿರದಲ್ಲಿದೆ. [ಮಂಗಳನಲ್ಲಿ ಮೋಡವಿದೆಯಂತೆ]

ಸೌರಮಂಡಲದೊಳಕ್ಕೆ ಬಂದ ನಂತರ Scholz's ನಕ್ಷತ್ರವು ಮತ್ತೆ ತನ್ನ ನಿಯಮಿತ ಪಯಣ ಆರಂಭಿಸಿದೆ. ಸುಮಾರು 70 ಸಾವಿರ ವರ್ಷಗಳ ಹಿಂದೆ ಬದುಕಿದ್ದ ನಮ್ಮ ಪೂರ್ವಜರಿಗೆ ಈ ನಕ್ಷತ್ರ ಬರಿಗಣ್ಣಿಂದ ಕಾಣುತ್ತಿತ್ತು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

English summary
A runaway star about 70 thousands years ago wandered into our solar system's backyard. A team of astronomers led by Eric Mamajek from the University of Rochester in New York have found this star.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X