ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ: 60 ಮಿಲಿಯನ್ ಹಿಂದಿನ ಡೈನೊಸಾರ್ ಭ್ರೂಣ ಪತ್ತೆ

|
Google Oneindia Kannada News

ಬೀಜಿಂಗ್, ಡಿಸೆಂಬರ್ 22: ಅಚ್ಚರಿಯಾದರೂ ಸತ್ಯ, 60 ಮಿಲಿಯನ್ ವರ್ಷಗಳ ಹಿಂದಿನ ಡೈನೊಸಾರ್ ಭ್ರೂಣವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ವಿಶ್ವದ ಇತಿಹಾಸದಲ್ಲೇ ಇದುವರೆಗೆ ಕಂಡು ಬಂದ ಅತ್ಯುತ್ತಮ ಡೈನೋಸಾರ್ ಭ್ರೂಣ ಇದು ಎಂದು ಹೇಳಲಾಗಿದೆ. ದಕ್ಷಿಣ ಚೀನಾದ ಗಂಝೋದಲ್ಲಿ ಈ ಡೈನೋಸಾರ್ ಭ್ರೂಣವನ್ನು ಪತ್ತೆಹಚ್ಚಲಾಗಿದ್ದು, ಮಣ್ಣಿನಡಿ ಹೂತು ಸಂರಕ್ಷಿಸಿಡಲಾಗಿದ್ದ ಡೈನೋಸಾರ್ ಭ್ರೂಣವನ್ನು ಹೊರಗೆ ತೆಗೆಯಲಾಗಿದೆ.

"ಇತಿಹಾಸದಲ್ಲಿ ಇದುವರೆಗೆ ಕಂಡು ಬಂದ ಅತ್ಯುತ್ತಮ ಡೈನೋಸಾರ್ ಭ್ರೂಣ ಇದಾಗಿದೆ" ಎಂದು ಸಂಶೋಧಕ ಡಾ. ಫಿಯಾನ್ ವೈಸಮ್ ಮಾ ಹೇಳಿದ್ದಾರೆ. ಈ ಭ್ರೂಣದ ಸಂಶೋಧನೆಯು ಡೈನೋಸಾರ್‌ಗಳು ಮತ್ತು ಆಧುನಿಕ ಪಕ್ಷಿಗಳ ನಡುವಿನ ಸಂಬಂಧದ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಸಂಶೋಧಕರಿಗೆ ನೀಡಿದೆ. ಪಳೆಯುಳಿಕೆಯು ಭ್ರೂಣವು ಟಕಿಂಗ್ ಎಂದು ಹೇಳುವಂತೆ ಸುರುಳಿಯ ಸ್ಥಿತಿಯಲ್ಲಿದೆ.

ಈ ಡೈನೋಸಾರ್ ಭ್ರೂಣ ಕನಿಷ್ಠ 66 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಕೋಳಿ ಮೊಟ್ಟೆಯ ರೂಪದಲ್ಲಿಯೇ ಇರುವ ಮೊಟ್ಟೆಯೊಳಗೆ ಈ ಭ್ರೂಣವಿದೆ. ಇದು ಹಲ್ಲಿಲ್ಲದ ಥೆರೋಪಾಡ್ ಡೈನೋಸಾರ್ ಅಥವಾ ಓವಿರಾಪ್ಟೊರೊಸಾರ್ ಎನ್ನಲಾಗಿದ್ದು, ಇದಕ್ಕೆ ಬೇಬಿ ಯಿಂಗ್ಲಿಯಾಂಗ್ ಎಂದು ಹೆಸರಿಸಲಾಗಿದೆ.

A perfectly Preserved, Rare Baby Dinosaur Embryo Discovered In China

ಇದು ಮೊಟ್ಟೆಯೊಡೆಯುವ ಸ್ವಲ್ಪ ಸಮಯದ ಮೊದಲು ಪಕ್ಷಿಗಳಲ್ಲಿ ಕಂಡುಬರುವ ನಡವಳಿಕೆಯಾಗಿದೆ. ಇನ್ನೇನು ಮೊಟ್ಟೆಯೊಡೆದು ಡೈನೋಸಾರ್​ನ ಮರಿ ಹೊರಗೆ ಬರಬೇಕು ಎನ್ನುವಷ್ಟರಲ್ಲಿ ಆ ಮೊಟ್ಟೆಯನ್ನು ಸಂರಕ್ಷಿಸಿಡಲಾಗಿದೆ.

ಚೀನಾದ ಯಿಂಗ್ಲಿಯಾಂಗ್ ಸ್ಟೋನ್ ನೇಚರ್ ಹಿಸ್ಟರಿ ಮ್ಯೂಸಿಯಂನಲ್ಲಿ 6.7 ಇಂಚು ಉದ್ದದ ಮೊಟ್ಟೆಯೊಳಗೆ ಈ ಭ್ರೂಣವನ್ನು ಇರಿಸಲಾಗಿದೆ.. ಈ ಮೊಟ್ಟೆಯನ್ನು ಮೊದಲು 2000ರಲ್ಲಿ ಹೊರಗೆ ತೆಗೆಯಲಾಯಿತು. ಆದರೆ 10 ವರ್ಷಗಳ ಕಾಲ ಶೇಖರಣೆಯಲ್ಲಿ ಇರಿಸಲಾಯಿತು.

ಈ ಬೇಬಿ ಯಿಂಗ್ಲಿಯಾಂಗ್ ಡೈನೊಸಾರ್ ತಲೆಯಿಂದ ಬಾಲದವರೆಗೆ 10.6 ಇಂಚು ಉದ್ದವಿದೆ. ವಸ್ತುಸಂಗ್ರಹಾಲಯದಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾದಾಗ ಮತ್ತು ಹಳೆಯ ಪಳೆಯುಳಿಕೆಗಳನ್ನು ವಿಂಗಡಿಸುವಾಗ ಸಂಶೋಧಕರು ಈ ಮೊಟ್ಟೆಯನ್ನು ಗಮನಿಸಿದರು. ಆ ಮೊಟ್ಟೆಯೊಳಗೆ ಭ್ರೂಣವಿರುವುದು ನಂತರದಲ್ಲಿ ತಿಳಿಯಿತು.

Recommended Video

South Africa ನಾಯಕ ಪ್ರಕಾರ India ಗೆಲ್ಲೋದು ಸುಲಭವಲ್ಲ | Oneindia Kannada

English summary
The embryo was discovered in Ganzhou in southern China and researchers estimate it is at least 66 million years old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X