ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಿ ಅಲ್ಲ ಎಂದರೆ ಬೆಂಕಿ ಹಚ್ಚಿ ಬಿಡುತ್ತಾರೆ ಎಚ್ಚರ!

|
Google Oneindia Kannada News

ಹಾಂಗ್ ಕಾಂಗ್, ನವೆಂಬರ್.12: ಸರ್ಕಾರದ ವಿರುದ್ಧ ಹೋರಾಟದ ಕಿಚ್ಚು ದಿನೇ ದಿನೆ ಹೆಚ್ಚುತ್ತಲೇ ಇದೆ. ಹಾಂಗ್ ಕಾಂಗ್ ನಲ್ಲಿ ಪ್ರತಿಭಟನಾಕಾರರ ಕೋಪ ನೆತ್ತಿಗೇರುತ್ತಿದೆ. ಅದಕ್ಕೆ ತಕ್ಕಂದೆ ಹಿಂಸಾಚಾರವೂ ಮಿತಿ ಮೀರಿ ಹೋಗಿದೆ.

ನಿನ್ನೆಯಷ್ಟೇ ಪ್ರತಿಭಟನಾಕಾರರ ಮೇಲೆ ಪೊಲೀಸರೇ ಗುಂಡು ಹಾರಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇಂದು ಅದಕ್ಕಿಂತ ಭಯಾನಕವಾದಂತಾ ಘಟನೆಯೊಂದು ಹಾಂಗ್ ಕಾಂಗ್ ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಇಲ್ಲಿ ಪ್ರತಿಭಟನೆ ಮಾಡಿದ್ರೆ ಗುಂಡೇಟು ಪಕ್ಕಾ!ಇಲ್ಲಿ ಪ್ರತಿಭಟನೆ ಮಾಡಿದ್ರೆ ಗುಂಡೇಟು ಪಕ್ಕಾ!

ಹಾಂಗ್ ಕಾಂಗ್ ನ ಮಾ ಆನ್ ಶಾನ್ ಪ್ಲಾಜಾದಲ್ಲಿ ವ್ಯಕ್ತಿಯೊಬ್ಬನ ಮೇಲೆ ಪ್ರತಿಭಟನಾಕಾರರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ದೃಶ್ಯ ಹೋಟೆಲ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಚೀನಿಗನಲ್ಲ ಎಂದು ಬೆಂಕಿ ಹಚ್ಚಿ ಬಿಟ್ಟರಲ್ಲ!

ಚೀನಿಗನಲ್ಲ ಎಂದು ಬೆಂಕಿ ಹಚ್ಚಿ ಬಿಟ್ಟರಲ್ಲ!

ಚೀನಿಗನಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಇಲ್ಲಿ ವ್ಯಕ್ತಿಯೇ ಪ್ರಾಣ ಬಿಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಹೋಟೆಲ್ ನಲ್ಲಿ ತಂಗಿದ್ದ ವ್ಯಕ್ತಿಯ ಚೀನಾದವನಲ್ಲ ಎಂಬ ಕಾರಣಕ್ಕೆ ಪ್ರತಿಭಟನಾಕಾರರು ವ್ಯಕ್ತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ವ್ಯಕ್ತಿಯ ದೇಹ ಬಹುಪಾಲು ಸುಟ್ಟಹೋಗಿದ್ದು, ವ್ಯಕ್ತಿ ಕೋಮಾ ಸ್ಥಿತಿಗೆ ಹೋಗಿದ್ದಾನೆ ಎನ್ನಲಾಗಿದೆ.

ಪ್ರತಿಭಟನೆ ನಡೆಸಿದ್ದಕ್ಕೆ ಖಾಕಿ ಕೊಟ್ಟಿತ್ತು ಗುಂಡೇಟು!

ಪ್ರತಿಭಟನೆ ನಡೆಸಿದ್ದಕ್ಕೆ ಖಾಕಿ ಕೊಟ್ಟಿತ್ತು ಗುಂಡೇಟು!

ಕಳೆದ ನವೆಂಬರ್.08ರಂದು ಪ್ರತಿಭಟನಾನಿರತ ವಿದ್ಯಾರ್ಥಿ ಚೌ ಎಂಬಾತ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು. ವಿದ್ಯಾರ್ಥಿ ಆತ್ಮಹತ್ಯೆಯಿಂದ ಕೆರಳಿದ ವಿದ್ಯಾರ್ಥಿ ಸಮೂಹ, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತ್ತು. ಈ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿ ಮೇಲೆ ಪೊಲೀಸರೇ ಗುಂಡಿನ ದಾಳಿ ನಡೆಸಿದ್ದರು.

ಹಸ್ತಾಂತರ ಕಾಯ್ದೆ ವಿರೋಧಿಸಿ ಮುಂದುವರಿದ ಹೋರಾಟ

ಹಸ್ತಾಂತರ ಕಾಯ್ದೆ ವಿರೋಧಿಸಿ ಮುಂದುವರಿದ ಹೋರಾಟ

ಹಾಂಗ್ ಕಾಂಗ್ ಸರ್ಕಾರದ ವಿರುದ್ಧ ಪ್ರಜೆಗಳೆಲ್ಲ ಬೀದಿಗೆ ಇಳಿದಿದ್ದಾರೆ. ಕ್ಯಾರಿ ಲ್ಯಾಮ್ಸ್ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಹಸ್ತಾಂತರ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ದಿನೇ ದಿನೆ ಹಿಂಸಾರೂಪಕ್ಕೆ ತಿರುಗುತ್ತಿದೆ.

ವಿಶ್ವಮಟ್ಟದಲ್ಲಿ ಡ್ರ್ಯಾಗನ್ ದೇಶಕ್ಕೆ ಇರಿಸು-ಮುರಿಸು!

ವಿಶ್ವಮಟ್ಟದಲ್ಲಿ ಡ್ರ್ಯಾಗನ್ ದೇಶಕ್ಕೆ ಇರಿಸು-ಮುರಿಸು!

ಹಾಂಗ್ ಕಾಂಗ್ ನ ದೈತ್ಯ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಇದು ಜಾಗತಿಕ ನಾಯಕತ್ವ ವಹಿಸಲು ಹೊರಟಿರುವ ಚೀನಾಗೆ ಇರಿಸು-ಮುರಿಸು ಉಂಟು ಮಾಡಿದೆ. ಪ್ರತಿಭಟನೆಯಿಂದ ಸಂಭವಿಸಿರುವ ಹಣಕಾಸು ಮತ್ತು ಮನೋವೈಜ್ಞಾನಿಕ ನಷ್ಟಗಳು ನಿರ್ಲಕ್ಷಿಸಲಾರದಷ್ಟು ಎಂದು ಹೇಳಲಾಗುತ್ತಿದೆ. ಈ ನಡುವೆ ಅಮೆರಿಕಾದೊಂದಿಗೆ ನಡೆದಿರುವ ವಾಣಿಜ್ಯ-ವ್ಯಾಪಾರ ಸಮರವು ರಗಳೆಯಾಗಿ ಪರಿಣಮಿಸಿದೆ.

English summary
Fire The Guy For Not Being A Chinese. Hong Kong Protests Turned Into Violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X