ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮನುಷ್ಯನ ಮಾಂಸ ಮೆದುಳಿಗೆ ಮದ್ದು'- ಅಮೆರಿಕದಲ್ಲಿ ನರಭಕ್ಷಕ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 21: ಅಮೆರಿಕದಲ್ಲಿ ಬಂಧಿಯಾಗಿದ್ದ ಆರೋಪಿ ನರಭಕ್ಷಕತೆಯ ಹಿಂದಿರುವ ಭಯಾನಕ ಸತ್ಯವನ್ನು ಹೊರಹಾಕಿದ್ದಾನೆ. ಕೊಲೆ ಹಿಂದಿನ ಕಾರಣ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ. ಆರೋಪಿಯನ್ನು ಇದಾಹೊ ರಾಜ್ಯದ ಜೇಮ್ಸ್ ಡೇವಿಡ್ ರಸ್ಸೆಲ್ (39) ಎಂದು ಗುರುತಿಸಲಾದೆ. ಈತ ಡೇವಿಡ್ ಫ್ಲಾಗೆಟ್ ಎಂಬ 70 ವರ್ಷದ ವ್ಯಕ್ತಿಯನ್ನು ಕೊಂದಿದ್ದನು. ಹೀಗಾಗಿ ಸೆಪ್ಟೆಂಬರ್‌ನಲ್ಲಿ ರಸ್ಸೆಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ಈತನಿಂದ ಹಲವಾರು ಕಹಿ ಸತ್ಯಗಳು ಹೊರಬಂದಿವೆ.

ಮಾಂಸದ ಭಾಗಗಳನ್ನು ಕತ್ತರಿಸಿ ತಿನ್ನುವ ಮೂಲಕ ತನ್ನನ್ನು ತಾನು ಗುಣಪಡಿಸಿಕೊಳ್ಳಬಹುದು ಎಂದು ನಂಬಿದ್ದ ರಸ್ಸೆಲ್, ಫ್ಲಾಗೆಟ್ ಅವರ ಅಂಗಾಂಗಗಳನ್ನು ಕತ್ತಿರಿ ತಿಂದಿದ್ದಾನೆ. ಪೊಲೀಸರು ಆರೋಪಿ ರಸ್ಸೆಲ್ ಮನೆಗೆ ಹೋದಾಗ ಈ ಭಯಾನಕ ಸತ್ಯ ಹೊರಬಂದಿದೆ. ಈ ಭಯಾನಕ ನರಭಕ್ಷಕನ ಕೃತ್ಯ ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

18 ವರ್ಷಗಳಲ್ಲಿ 30 ಮನುಷ್ಯರನ್ನು ತಿಂದು ತೇಗಿದ್ದ ರಷ್ಯಾ ದಂಪತಿ! 18 ವರ್ಷಗಳಲ್ಲಿ 30 ಮನುಷ್ಯರನ್ನು ತಿಂದು ತೇಗಿದ್ದ ರಷ್ಯಾ ದಂಪತಿ!

ಪೊಲೀಸ್ ಅಧಿಕಾರಿಗಳು ರಸ್ಸೆಲ್‌ನ ಮನೆಯ ಹೊರಗೆ ವಾಹನದಲ್ಲಿ ಫ್ಲಾಗೆಟ್‌ನ ಅವಶೇಷಗಳನ್ನು ಕಂಡುಕೊಂಡ ನಂತರ ರಸ್ಸೆಲ್‌ನ ಮೇಲೆ ಪ್ರಥಮ ಹಂತದ ಕೊಲೆಯ ಆರೋಪ ಹೊರಿಸಿದರು. ಮೃತನ ಕೈಗಳನ್ನು ಟೇಪ್‌ನಿಂದ ಕಟ್ಟಲಾಗಿತ್ತು ಮತ್ತು ಆತನ ದೇಹದ ಕೆಲವು ಭಾಗಗಳು ಕಾಣೆಯಾಗಿದ್ದವು.

A horror story told by a cannibal in America

ಪೊಲೀಸರು ರಸ್ಸೆಲ್ ಅವರ ಮನೆಗೆ ಬಂದಾಗ, ರಸ್ಸೆಲ್ ಅವರೊಂದಿಗೆ ಸ್ವಲ್ಪ ವಾಗ್ವಾದ ನಡೆಸಿದರು. ನಂತರ ರಸ್ಸೆಲ್ ಅವರು ಶರಣಾಗಿದ್ದಾರೆ. "ಇದು ಖಾಸಗಿ ಆಸ್ತಿ ಮತ್ತು ನಾವು ಅದರಲ್ಲಿ ಕೆಲ ವಿಚಾರಗಳನ್ನು ಬಹಿರಂಗಗೊಳಿಸಲು ಇಷ್ಟಪಡುವುದಿಲ್ಲ" ಎಂದು ಹೇಳಿಕೊಂಡಿದ್ದಾನೆ. ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಪೊಲೀಸರು ರಸ್ಸೆಲ್ ಅವರ ಮನೆಯ ಹುಡುಕಾಟದ ಸಮಯದಲ್ಲಿ 'ರಕ್ತದಲ್ಲಿ ನೆನೆಸಿದ ಮೈಕ್ರೋವೇವ್, ಗಾಜಿನ ಬೌಲ್, ಡಫಲ್ ಬ್ಯಾಗ್ ಮತ್ತು ಚಾಕು'ವನ್ನು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ.

ಬೊನ್ನರ್ ಕೌಂಟಿ ಡಿಟೆಕ್ಟಿವ್ ಫಿಲಿಪ್ ಸ್ಟೆಲ್ಲಾ ಅವರ ಹೇಳಿಕೆ ಪ್ರಕಾರ, "ಕೊಲೆಯಾದ ವ್ಯಕ್ತಿಯನ್ನು ಪತ್ತೆ ಮಾಡುವ ಸಮಯದಲ್ಲಿ ನಮಗೆ ನಿಜಕ್ಕೂ ಅಘಾತವಾಯಿತು. ಈ ರೀತಿಯ ಹತ್ಯಾಕಾಂಡ ತುಂಬಾ ವಿರಳ. ರಸ್ಸೆಲ್‌ನ ನರಭಕ್ಷಕತೆಯ ಆರೋಪವು ಇಡಾಹೊ ರಾಜ್ಯದಲ್ಲಿ ಮೊದಲನೆಯದು'' ಎಂದು ಸ್ಟೆಲ್ಲಾ ಹೇಳಿದ್ದಾರೆ.

"ಇದು ರಕ್ತಸಿಕ್ತ ಅಪರಾಧದ ದೃಶ್ಯವಲ್ಲ. ಆದರೆ ಇಲ್ಲಿ ಬೇರೆ ಏನೋ ನಡೆಯುತ್ತಿದೆ. ಮಾನಸಿಕವಾಗಿ ಈ ವ್ಯಕ್ತಿ ಸರಿ ಇದ್ದಾನಾ?' ಕೊಲೆಯಾದ ವ್ಯಕ್ತಿಯ ತುಂಡುಗಳನ್ನು ಎತ್ತಿಕೊಳ್ಳುತ್ತಿರುವಾಗ ನಮಗೆ ಈ ಪ್ರಶ್ನೆಗಳು ಎದುರಾದವು. ಇದು ನಾವು ನೋಡದ ಕತ್ತಲೆಯ ಹಾದಿಯ ನಡಿಗೆಯಾಗಿತ್ತು'' ಎಂದು ಸ್ಟೆಲ್ಲಾ ಹೇಳಿದರು.

"ಮಾಂಸದ ಭಾಗಗಳನ್ನು ಕತ್ತರಿಸುವ ಮೂಲಕ ತನ್ನನ್ನು ತಾನು ಗುಣಪಡಿಸಿಕೊಳ್ಳಬಹುದು" ಎಂದು ರಸ್ಸೆಲ್ ನಂಬಿದ್ದರು ಎಂದು ಅಧಿಕಾರಿಗಳು ಮತ್ತು ನ್ಯಾಯಾಲಯದ ದಾಖಲೆಗಳು ಹೇಳಿವೆ.

ಕೊಲೆಯಾದ ಮೂರು ದಿನಗಳ ನಂತರ ಸೆಪ್ಟೆಂಬರ್ 13ರಂದು ಪೂರ್ಣಗೊಂಡ ಶವಪರೀಕ್ಷೆಯಲ್ಲಿ ರಸ್ಸೆಲ್‌ನ ಮನೆಯಲ್ಲಿ ಕಂಡುಬಂದ ಅಂಗಾಂಶಗಳು ಫ್ಲಾಗೆಟ್‌ನದೇ ಎಂದು ದೃಢಪಡಿಸಲಾಯಿತು. ರಸೆಲ್‌ನ ಮನೆಯಲ್ಲಿ ಕಂಡುಬಂದ ಅಂಗಾಂಶಗಳು ಫ್ಲಾಗೆಟ್‌ಗೆ ಸೇರಿದ್ದು ಎಂದು ದೃಢಪಡಿಸಿತು. ಅದಾಗ್ಯೂ 70 ವರ್ಷ ಫ್ಲಾಗೆಟ್‌ನ ಕೆಲವು ಅಂಗಾಂಶಗಳು ಇನ್ನೂ ಪತ್ತೆಯಾಗಿಲ್ಲ.

"ಫ್ಲಾಗೆಟ್ ರಸ್ಸೆಲ್ ಅವರೊಂದಿಗೆ ಹಲವಾರು ಸಂಘರ್ಷಗಳನ್ನು ಹೊಂದಿದ್ದರು. ರಸ್ಸೆಲ್ ಅವರ ಬಗ್ಗೆ ಫ್ಲಾಗೆಟ್ ಕುಟುಂಬಕ್ಕೆ ತಿಳಿಸಿದರು" ಎಂದು ಸ್ಟೆಲ್ಲಾ ಹೇಳಿದರು. "ರಸ್ಸೆಲ್ ತನಗೆ ಅಥವಾ ಇತರರಿಗೆ ಅಪಾಯಕಾರಿ ಎಂದು ಕುಟುಂಬಕ್ಕೆ ಸಾಕಷ್ಟು ಎಚ್ಚರಿಕೆಯ ಚಿಹ್ನೆಗಳನ್ನು ಫ್ಲಾಗೆಟ್ ನೀಡಿದ್ದರು" ಎನ್ನಲಾಗುತ್ತಿದೆ. ರಸೆಲ್ ಡಿಸೆಂಬರ್ 28 ರಂದು ಮರುಪರಿಶೀಲನಾ ವಿಚಾರಣೆಗೆ ನಿಗದಿಪಡಿಸಲಾಗಿದೆ.

English summary
A 39-year-old man arrested in the United States for a murder allegedly believed that eating his victim would “cure his brain”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X